ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್: ಸ್ಯಾಮ್‌ಸಂಗ್ ಫೋನ್‌ಗಳಿಗೆ ಭಾರೀ ಡಿಸ್ಕೌಂಟ್!
ಜನಪ್ರಿಯ ಇ ಕಾಮರ್ಸ್ ತಾಣ ಅಮೆಜಾನ್ ಇದೀಗ ಗ್ರೇಟ್ ಸಮ್ಮರ್ ಸೇಲ್ ಅನ್ನು ಆಯೋಜಿಸಿದೆ. ಈ ಸೇಲ್‌ನಲ್ಲಿ ಮೊಬೈಲ್ ಫೋನ್‌ಗಳು ಸೇರಿದಂತೆ ಹಲವು ಡಿವೈಸ್‌ಗಳಿಗೆ ಭರ್ಜರಿ ರಿಯಾಯಿತಿ ತಿಳಿಸಿದೆ. ಮುಖ್ಯವಾಗಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಿಗೆ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ.
ಹೌದು, ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಮಾರಾಟದಲ್ಲಿ ಗ್ಯಾಲಕ್ಸಿ S ಸರಣಿ, ಗ್ಯಾಲಕ್ಸಿ M ಸರಣಿ ಹಾಗೂ ಗ್ಯಾಲಕ್ಸಿ A ಸರಣಿಯ ಕೆಲವು ಆಯ್ದ ಫೋನ್‌ಗಳು ಭಾರೀ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿವೆ. ಅಂದಹಾಗೆ ಅಮೆಜಾನ್‌ನ ಈ ಸೇಲ್ ಇಂದಿನಿಂದ (ಮೇ 4) ಪ್ರಾರಂಭವಾಗಲಿದ್ದು, ಅಮೆಜಾನ್ ಪ್ರೈಮ್ ಸದಸ್ಯರಿಗೆ ಮೊದಲು ಖರೀದಿಗೆ ಅವಕಾಶ ಇರಲಿದೆ.

ಅಮೆಜಾನ್ ಆಯೋಜಿಸಿರುವ ಗ್ರೇಟ್ ಸಮ್ಮರ್ ಸೇಲ್ ಮಾರಾಟದಲ್ಲಿ ಸ್ಯಾಮ್‌ಸಂಗ್ ಫೋನ್‌ಗಳಿಗೆ ಕೆಲವು ಆಯ್ದ ಬ್ಯಾಂಕ್‌ಗಳಿಂದಲೂ ರಿಯಾಯಿತಿ ದೊರೆಯುತ್ತದೆ. ಹಾಗೆಯೇ ನೋ ಕಾಸ್ಟ್ ಇಎಮ್‌ಐ ಸೇರಿದಂತೆ ಇತರೆ ಕೊಡುಗೆಗಳು ಸಹ ದೊರೆಯುತ್ತವೆ. ಹಾಗಾದರೆ ಈ ಸೇಲ್‌ನಲ್ಲಿ ಭರ್ಜರಿ ರಿಯಾಯಿತಿ ಪಡೆದ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M14 5G : ಸ್ಯಾಮ್‌ಸಂಗ್ ಗ್ಯಾಲಕ್ಸಿ M14 5G ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಎಕ್ಸಿನೋಸ್ 1330 ಆಕ್ಟಾ-ಕೋರ್ SoC ಪ್ರೊಸೆಸರ್ ಪಡೆದಿದೆ. ಇದರೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ.
ಇದು 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಜೊತೆಗೆ 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಈ ಫೋನ್ ಎರಡು ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ 4 GB + 128 GB ಹಾಗೂ 6 GB + 128 GB ಆಗಿವೆ. ಇದರ ಕೊಡುಗೆಯ ಬೆಲೆ 12,490ರೂ. ಆಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 : ಈ ಫೋನ್ ಡೈಮಂಡ್ ಅಮೋಲೆಡ್ ಜೊತೆಗೆ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಅನ್ನು ಪಡೆದಿದೆ. ಇದು ಟ್ರಿಪಲ್ ಕ್ಯಾಮೆರಾ ರಚನೆ ಇದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಇನ್ನು ಈ ಫೋನಿನ ಬ್ಯಾಟರಿ 3,900mAh ಸಾಮರ್ಥ್ಯದಲ್ಲಿದೆ. ಅಮೆಜಾನ್‌ನಲ್ಲಿ ಕೊಡುಗೆ ಬೆಲೆಯು 69,999ರೂ. ಆಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M53 5G : ಈ ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ ಹೆಚ್‌ಡಿ + ಇನ್ಫಿನಿಟಿ O ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್ ಹೊಂದಿದೆ. ಅಲ್ಲದೇ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಇದು 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರೊಂದಿಗೆ 25W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಈ ಫೋನಿನ ಆಫರ್ ಬೆಲೆಯು 23,249ರೂ. ಆಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ : ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ ಫೋನ್ QHD+ ಡೈಮಂಡ್ ಅಮೋಲೆಡ್ ಜೊತೆಗೆ 6.8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಅನ್ನು ಪಡೆದಿದೆ. ಈ ಫೋನ್ ಕ್ವಾಡ್ ಕ್ಯಾಮೆರಾ ರಚನೆ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾ 200 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಇನ್ನು ಈ ಫೋನಿನ ಬ್ಯಾಟರಿ 5,000mAh ಸಾಮರ್ಥ್ಯದಲ್ಲಿದೆ. ಈ ಫೋನಿನ ರಿಯಾಯಿತಿ ದರವು 94,999ರೂ. ಆಗಿದೆ.


Click it and Unblock the Notifications








