Home
ಸುದ್ದಿಜಾಲ

ಐಟೆಲ್‌ P40 ಮೊಬೈಲ್‌ ಈಗ ಅಗ್ಗದ ಬೆಲೆಗೆ ಲಭ್ಯ!..ಈ ಆಫರ್‌ ಗಮನಿಸಿ!

ಐಟೆಲ್‌ ಮೊಬೈಲ್‌ ಸಂಸ್ಥೆಯ P ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾದ 'ಐಟೆಲ್‌ P40' ಸ್ಮಾರ್ಟ್‌ಫೋನ್ ಆಕರ್ಷಕ ರಿಯಾಯಿತಿ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಈ ಫೋನ್‌ ಈಗ ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಭರ್ಜರಿ ರಿಯಾಯಿತಿ ಪಡೆದಿದ್ದು, ಹೀಗಾಗಿ ಸಖತ್ ರಿಯಾಯಿತಿ ಬೆಲೆಗೆ ಗ್ರಾಹಕರು ಈ ಫೋನ್‌ ಖರೀದಿಸಬಹುದಾಗಿದೆ.

ಹೌದು, ಅಮೆಜಾನ್ ಆಯೋಜಿಸಿರುವ ಅಮೆಜಾನ್ ಸಮ್ಮರ್ ಸೇಲ್ ನಲ್ಲಿ ಐಟೆಲ್‌ P40 ಸ್ಮಾರ್ಟ್‌ಫೋನ್‌ ಆಕರ್ಷಕ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್ 2GB RAM + 64GB ಸ್ಟೋರೇಜ್‌ನ ವೇರಿಯಂಟ್‌ 6,299 ರೂ. ಗಳ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಖರೀದಿಸಬಹುದಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಬ್ಯಾಂಕ್‌ ಆಫರ್‌ ಸಹ ಲಭ್ಯವಾಗಲಿದೆ.

ಐಟೆಲ್‌ P40 ಮೊಬೈಲ್‌ ಈಗ ಅಗ್ಗದ ಬೆಲೆಗೆ ಲಭ್ಯ!..ಈ ಆಫರ್‌ ಗಮನಿಸಿ!

ಇನ್ನು ಈ ಫೋನ್‌ ಆಕ್ಟೋ ಕೋರ್ SC9863A ಪ್ರೊಸೆಸರ್‌ ಹೊಂದಿದ್ದು, 6000 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ. ಹಾಗಾದರೆ ಐಟೆಲ್‌ P40 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಟೆಲ್‌ P40 ಡಿಸ್‌ಪ್ಲೇ ರಚನೆ : ಈ ಹೊಸ ಐಟೆಲ್‌ P40 ಸ್ಮಾರ್ಟ್‌ಫೋನ್ 6.6 ಇಂಚಿನ ಹೆಚ್‌ಡಿ + ಐಪಿಎಸ್‌ ವಾಟರ್‌ಡ್ರಾಪ್ ಡಿಸ್‌ಪ್ಲೇ ಹೊಂದಿದ್ದು, 1612 X 720 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೆಯೇ 120 Hz ಟಚ್ ಸ್ಯಾಂಪ್ಲಿಂಗ್ ರೇಟ್‌ನೊಂದಿಗೆ ಕಾಣಿಸಿಕೊಂಡಿದೆ.

ಐಟೆಲ್‌ P40 ಪ್ರೊಸೆಸರ್‌ ಪವರ್ : ಆಕ್ಟೋ ಕೋರ್ SC9863A ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುವ ಈ ಫೋನ್ ಉತ್ತಮ ಕಾರ್ಯಕ್ಷಮತೆಯನ್ನು ನೀಡಲಿದೆ. ಜೊತೆಗೆ ಇದು ಆಂಡ್ರಾಯ್ಡ್ 12 (ಗೋ ಎಡಿಷನ್) ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್‌ ಆಗಲಿದೆ. ಇದರೊಂದಿಗೆ 4GB / 6GB RAM ಮತ್ತು 32GB / 64GB ಇಂಟರ್‌ ಸ್ಟೋರೇಜ್‌ನಲ್ಲಿ ಕಾಣಿಸಿಕೊಂಡಿದ್ದು, ಹೆಚ್ಚಿನ ಇಂಟರ್‌ ಸ್ಟೋರೇಜ್‌ ಗಾಗಿ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ನೀಡಲಾಗಿದೆ.

ಐಟೆಲ್‌ P40 ಮೊಬೈಲ್‌ ಈಗ ಅಗ್ಗದ ಬೆಲೆಗೆ ಲಭ್ಯ!..ಈ ಆಫರ್‌ ಗಮನಿಸಿ!

ಐಟೆಲ್‌ P40 ಕ್ಯಾಮೆರಾ ಸೆನ್ಸಾರ್ : ಈ ಹೊಸ ಸ್ಮಾರ್ಟ್‌ಫೋನ್ ಡ್ಯುಯಲ್‌ ರಿಯರ್ ‌ಕ್ಯಾಮೆರಾ ಹೊಂದಿದ್ದು, ಅದರಲ್ಲಿ 13 ಮೆಗಾ ಪಿಕ್ಸೆಲ್ ವೀಡಿಯೊ ಗ್ರಾಫಿಕ್ಸ್ ಅರೇ (VGA) ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಸೆಲ್ಪಿಗಾಗಿ 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಇದರೊಂದಿಗೆ ಉತ್ತಮ ಚಿತ್ರ ಸೆರೆಹಿಡಿಯಲು ಎಲ್‌ಇಡಿ ಪ್ಲ್ಯಾಶ್‌ ಲೈಟ್‌ ಆಯ್ಕೆ ನೀಡಲಾಗಿದೆ.

ಐಟೆಲ್‌ P40 ಫೋನ್‌ನ ಬ್ಯಾಟರಿ ಸಾಮರ್ಥ್ಯ : ಐಟೆಲ್ P40 ಫೋನ್‌ 6000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದನ್ನು ಆಗಾಗ್ಗೆ ಚಾರ್ಜಿಂಗ್ ಮಾಡುವ ಅವಶ್ಯಕತೆ ಇರುವುದಿಲ್ಲ. ಜೊತೆಗೆ 8 W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದ್ದು, ಈ ಸ್ಮಾರ್ಟ್‌ಫೋನ್ ಅನ್ನು ತ್ವರಿತವಾಗಿ ಚಾರ್ಜ್ ಮಾಡಬಹುದಾಗಿದೆ. ಸ್ಟ್ಯಾಂಡ್‌ಬೈ ಟೈಮ್‌ 57 ದಿನಗಳಾಗಿದ್ದು, ಕರೆಗಾಗಿ 32 ಗಂಟೆಗಳು ಹಾಗೂ ಮ್ಯೂಸಿಕ್‌ ಪ್ಲೇಗಾಗಿ 203 ಗಂಟೆಗಳು ಮತ್ತು ವಿಡಿಯೋಗಾಗಿ 28 ಗಂಟೆಗಳ ಬ್ಯಾಕಪ್‌ ನೀಡಲಿದೆ.

ಐಟೆಲ್‌ P40 ಫೋನ್‌ನ ಕನೆಕ್ಟಿವಿಟಿ ಫೀಚರ್ಸ್‌ : ಇನ್ನುಳಿದಂತೆ ಈ ಫೋನ್‌ ರಿಯರ್‌ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಹಾಗೂ ಫೇಸ್‌ ಅನ್‌ಲಾಕ್‌ ಆಯ್ಕೆ ಹೊಂದಿದ್ದು, ಈ ಮೂಲಕ ಉತ್ತಮ ಭದ್ರತಾ ಫೀಚರ್ಸ್‌ ಅನ್ನು ಪಡೆದುಕೊಂಡಿದೆ. ಹಾಗೆಯೇ ಬ್ಲೂಟೂತ್, ವೈ-ಫೈ, 4G, ಜಿಪಿಎಸ್‌ ಸೇರಿದಂತೆ ಹಲವು ಆಯ್ಕೆ ಪಡೆದುಕೊಂಡಿದೆ.

ಐಟೆಲ್‌ P40 ಫೋನ್‌ ಮೆಮೊರಿ ಹಾಗೂ ಕಲರ್ : ಈ ಫೋನ್‌ 4GB/ 6GB RAM ಮತ್ತು 32GB/ 64GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ.

Best Mobiles in India

English summary
Amazon Great Summer Sale Live: Attractive discount on itel P40. Check offer price, specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+