Home
ಸುದ್ದಿಜಾಲ

OnePlus: ಒನ್‌ಪ್ಲಸ್ 11R ಫೋನ್‌ 30,000 ದೊಳಗೆ ಸಿಗುತ್ತದೆಯೇ?, ಎಲ್ಲಿ ಈ ಆಫರ್?

ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳಿಗೆ (OnePlus smartphones) ಸಾಮಾನ್ಯವಾಗಿ ಹೆಚ್ಚಿನ ಆಫರ್ ಘೋಷಣೆ ಮಾಡಲಾಗುವುದಿಲ್ಲ. ಆದರೆ ಈಗ ಬಹುಬೇಡಿಕೆ ಇರುವ ಒನ್‌ಪ್ಲಸ್ 11R ಸ್ಮಾರ್ಟ್‌ಫೋನ್‌ (OnePlus 11R smartphone) ವಿಶೇಷ ಆಫರ್ ನೊಂದಿಗೆ ಕಾಣಿಸಿಕೊಂಡಿದೆ. ಈ ಮೂಲಕ ಗ್ರಾಹಕರು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.

ಹೌದು, ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಹೆಚ್ಚು ಸೇಲ್‌ ಆಗುತ್ತಿರುವ ಒನ್‌ಪ್ಲಸ್ 11R ಫೋನ್‌ ಅನ್ನು ಇದೀಗ ನೀವು ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ಬೆಲೆ ಎಷ್ಟು?, ಈ ಆಫರ್ ಅನ್ನು ಎಲ್ಲಿ ಘೋಷಣೆ ಮಾಡಲಾಗಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಒನ್‌ಪ್ಲಸ್ 11R ಫೋನ್‌ 30,000 ದೊಳಗೆ ಸಿಗುತ್ತದೆಯೇ?, ಎಲ್ಲಿ ಈ ಆಫರ್?

ಒನ್‌ಪ್ಲಸ್ 11R ಸ್ಮಾರ್ಟ್‌ಫೋನ್‌: ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ (Amazon Great Summer Sale) ಮೇ 2 ರಂದು ಪ್ರೈಮ್ ಸದಸ್ಯರಿಗೆ ಆರಂಭ ಆಗಲಿದ್ದು, ಮೇ 3 ರಿಂದ ಎಲ್ಲಾ ಬಳಕೆದಾರರು ಸಹ ಈ ಪ್ರಯೋಜನ ಪಡೆಯಬಹುದಾಗಿದೆ. ಅದರಂತೆ ಈ ವಿಶೇಷ ಸೇಲ್‌ ನಲ್ಲಿ ಒನ್‌ಪ್ಲಸ್‌ 11R ಸ್ಮಾರ್ಟ್‌ಫೋನ್‌ 30,000 ರೂ. ಗಳಲ್ಲಿ ಖರೀದಿ ಮಾಡಬಹುದಾಗಿದೆ. ಅಮೆಜಾನ್‌ ಗ್ರೇಟ್‌ ಸಮ್ಮರ್ ಸೇಲ್‌ ಸಮಯದಲ್ಲಿ ವಿನಿಮಯ ಕೊಡುಗೆಗಳನ್ನು ಕ್ಲೈಮ್ ಮಾಡಿದರೆ, 29,999 ರೂಪಾಯಿಗಳ ಪರಿಣಾಮಕಾರಿ ಬೆಲೆಯಲ್ಲಿ ಲಭ್ಯವಿರುತ್ತದೆ ಎಂದು ಸೈಟ್ ಬಹಿರಂಗಪಡಿಸಿದೆ.

ಇನ್ನು ಈ ಫೋನ್‌ನ ಮೂಲ ಬೆಲೆ 39,999 ರೂ.ಗಳಾಗಿದೆ. ಅದರಂತೆ ಅಮೆಜಾನ್‌ ಈಗ 10,000 ರೂ. ವರೆಗೆ ರಿಯಾಯಿತಿಯನ್ನು ನೀಡಲಿದ್ದು, ಪಟ್ಟಿಯ ಪ್ರಕಾರ, ಕೊಡುಗೆಯು ಬ್ಯಾಂಕ್ ಕಾರ್ಡ್‌ಗಳು ಮತ್ತು ಕೂಪನ್‌ಗಳನ್ನು ಆಧರಿಸಿದೆ. ಹೊಸ ಒನ್‌ಪ್ಲಸ್ 12R ಫೋನ್ ಸುಮಾರು 40,000 ರೂಪಾಯಿ ಇದ್ದು, ಇಷ್ಟು ಹಣ ಖರ್ಚು ಮಾಡಲು ಸಾಧ್ಯವಾಗದ ಜನರು ಒನ್‌ಪ್ಲಸ್‌ 11R ಅನ್ನು 30,000 ರೂ.ಗಳ ವಿಭಾಗದ ಅಡಿಯಲ್ಲಿ ಖರೀದಿ ಮಾಡಬಹುದಾಗಿದೆ.

ಒನ್‌ಪ್ಲಸ್ 11R ಫೋನ್‌ 30,000 ದೊಳಗೆ ಸಿಗುತ್ತದೆಯೇ?, ಎಲ್ಲಿ ಈ ಆಫರ್?

ಒನ್‌ಪ್ಲಸ್‌ 11R ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.74 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 1B ಬಣ್ಣಗಳು, 120Hz ರಿಫ್ರೆಶ್ ರೇಟ್‌, HDR10+, 1450 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 1240 x 2772 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, 451 ppi ಸಾಂದ್ರತೆ ಪಡೆದಿದೆ.

ಒನ್‌ಪ್ಲಸ್‌ 11R ಸ್ಮಾರ್ಟ್‌ಫೋನ್ ಪ್ರೊಸೆಸರ್‌ ವಿವರ: ಈ ಫೋನ್ ಆಂಡ್ರಾಯ್ಡ್ 13, ಆಕ್ಸಿಜನ್ ಓಎಸ್ 13 ಅನ್ನು ರನ್‌ ಮಾಡಲಿದ್ದು, ಕ್ವಾಲ್ಕಾಮ್ SM8475 ಸ್ನಾಪ್ಡ್ರಾಗನ್ 8+ ಜನ್ 1 (4 nm) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ಅಡ್ರಿನೊ 730 ಜಿಪಿಯು ಬಲ ಪಡೆದುಕೊಂಡಿದ್ದು, 128GB + 8GB RAM, 256GB + 16GB RAM, 512GB + 18GB RAM ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ ಇದೆ.

ಒನ್‌ಪ್ಲಸ್‌ 11R ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಟ್ರಿಪಲ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್‌ಅಲ್ಟ್ರಾವೈಡ್ ಸೆನ್ಸರ್ ಹಾಗೂ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಸೆನ್ಸರ್‌ ಅನ್ನು ಹೊಂದಿದೆ. ಇದರ ಜೊತೆಗೆ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

ಒನ್‌ಪ್ಲಸ್ 11R ಫೋನ್‌ 30,000 ದೊಳಗೆ ಸಿಗುತ್ತದೆಯೇ?, ಎಲ್ಲಿ ಈ ಆಫರ್?

ಒನ್‌ಪ್ಲಸ್‌ 11R ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 100W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರೊಂದಿಗೆ ಸ್ಟೀರಿಯೋ ಸ್ಪೀಕರ್‌, 24-ಬಿಟ್/192kHz ಹೈ-ರೆಸ್ ಆಡಿಯೋ, ವೈ ಫೈ 802.11 a/b/g/n/ac/6, ಡ್ಯುಯಲ್-ಬ್ಯಾಂಡ್, ಬ್ಲೂಟೂತ್ ಆವೃತ್ತಿ 5.3, A2DP, LE, aptX HD, ಯುಎಸ್‌ಬಿ ಟೈಪ್-ಸಿ 2.0 ಸೇರಿದಂತೆ ಅನೇಕ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ.

Best Mobiles in India

English summary
Now you can buy OnePlus 11R phone, which is the most selling phone in the OnePlus smartphone segment, at an offer price. The smartphone will be powered by Qualcomm Snapdragon 8+ Gen 1 processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+