ಅಮೆಜಾನ್ ಪ್ರೈಮ್ ಸದಸ್ಯತ್ವದ ಬೆಲೆ ಏರಿಕೆ!!
ವಾರ್ಷಿಕವಾಗಿ ಹೊಸ ಸದಸ್ಯತ್ವಕ್ಕೆ 999 ರೂ. ನಿಗದಿಪಡಿಸಿದೆ. ಪ್ರೈಮ್ ಸದಸ್ಯರಿಗೆ ಹೆಚ್ಚಿನ ರಿಯಾಯಿತಿಗಳನ್ನು ಅಮೆಜಾನ್ ನೀಡುತ್ತದೆ.!
ಭಾರತದ ಪ್ರಖ್ಯಾತ ಜಾಲತಾಣ ಸಂಸ್ಥೆ ಅಮೆಜಾನ್ ತನ್ನ ಪ್ರೈಮ್ ಸದಸ್ಯತ್ವವನ್ನು ಈಗ 499 ರೂ.ನಿಂದ 999 ರೂ.ಗೆ ಹೆಚ್ಚಿಸಿದೆ.! ನವೆಂಬರ್ 1 ರಿಂದಲೇ ಈ ಪರಿಷ್ಕೃತ ದರ ಅನ್ವಯವಾಗುತ್ತಿದ್ದು, ಅಮೆಜಾನ್ ಸಂಸ್ಥೆಯ ಜನಪ್ರಿಯ ಪ್ರೈಮ್ ಸದಸ್ಯತ್ವ ಇದೀಗ ದುಬಾರಿಯಾಗಿ ಬದಲಾಗಿದೆ.!!
ದೀಪಾವಳಿ ಹಬ್ಬದ ಸಂದರ್ಭದಲ್ಲಿ 499 ರೂ.ಗಳ ಪ್ರೈಮ್ ಸದಸ್ಯತ್ವದ ಆಯ್ಕೆಯನ್ನು ಗ್ರಾಹಕರಿಗೆ ನೀಡಿತ್ತು. ಇದೀಗ ಅದನ್ನು ವಾಪಸ್ ಪಡೆದಿರುವ ಅಮೆಜಾನ್, ವಾರ್ಷಿಕವಾಗಿ ಹೊಸ ಸದಸ್ಯತ್ವಕ್ಕೆ 999 ರೂ. ನಿಗದಿಪಡಿಸಿದೆ. ಪ್ರೈಮ್ ಸದಸ್ಯರಿಗೆ ಹೆಚ್ಚಿನ ರಿಯಾಯಿತಿಗಳನ್ನು ಅಮೆಜಾನ್ ನೀಡುತ್ತದೆ.!

ಪ್ರೈಮ್ ಸದಸ್ಯತ್ವ ಪಡೆದ ಗ್ರಾಹಕರಿಗೆ ಅಮೆಜಾನ್ ಹಲವು ಆಫರ್‌ಗಳನ್ನು ನೀಡಿದ್ದು, ಖರೀದಿಸಿದ ಉತ್ಪನ್ನಗಳನ್ನು ಬಹುಬೇಗ ಡೆಲಿವರಿ, ಫ್ಲಾಶ್‌ಸೇಲ್ ಮಾರಾಟದಲ್ಲಿ ಮೊದಲ ಅವಕಾಶ, ಹೆಚ್ಚು ಡಿಸ್ಕೌಂಟ್ಸ್ ಹಾಗೂ ಮುಖ್ಯವಾಗಿ ಅನಿಯಂತ್ರಿತ ವಿಡಿಯೊ ಸ್ಟ್ರೀಮಿಂಗ್ ಅವಕಾಶವನ್ನು ನೀಡಿದೆ.!!

ಇನ್ನು ಅಮೆಜಾನ್ ಪ್ರೈಮ್ ಸದಸ್ಯತ್ವಕ್ಕೆ ಸಿಕ್ಕಿದ ಪ್ರತಿಕ್ರಿಯೆ ನೋಡಿ ಸಂತೋಷವಾಗಿದೆ ಎಂದು ಅಮೆಜಾನ್ ಇಂಡಿಯಾದ ಉಪಾಧ್ಯಕ್ಷ ಮನಿಶ್ ತಿವಾರಿ ಹೇಳಿದ್ದರು. ಈ ಕಾರಣದಿಂದಲೇ ಅಮೆಜಾನ್ ಪ್ರೈಮ್ ಸದಸ್ಯತ್ವ ದರ ದುಬಾರಿಯಾಗಿರಬಹುದು ಎನ್ನಲಾಗಿದೆ.!!
ಓದಿರಿ: ಮೊಬೈಲ್ ಪ್ರಪಂಚ ನಡುಗಿಸಿದ "ರೆಡ್‌ಮಿ ವೈ1" ಮಾರಾಟ ದಿನಾಂಕ ಫಿಕ್ಸ್!!..ಎಂದು ಗೊತ್ತಾ?


Click it and Unblock the Notifications