Home
ಸುದ್ದಿಜಾಲ

ಅಮೆಜಾನ್‌ ಹೋಳಿ ಸ್ಟೋರ್‌: ಟೆಕ್ನೋ ಪೋವಾ 5 ಪ್ರೊ ಫೋನಿಗೆ ಬಿಗ್ ಡಿಸ್ಕೌಂಟ್‌!

ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಒಂದಿಲ್ಲೊಂದು ಸೇಲ್‌ ಆಯೋಜಿಸುತ್ತ ಇರುತ್ತದೆ. ಇದೀಗ ಹೋಳಿ ಅಂಗವಾಗಿ ಸ್ಮಾರ್ಟ್‌ಫೋನ್ಸ್‌ ಹೋಳಿ ಸ್ಟೋರ್‌ ಹೆಸರಿನಲ್ಲಿ ಟೆಕ್ನೋ ಫೋನ್‌ಗಳನ್ನು ಶೇ. 40% ವರೆಗಿನ ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಆ ಪೈಕಿ ಟೆಕ್ನೋ ಪೋವಾ 5 ಪ್ರೊ ಫೋನ್‌ ಕೂಡಾ ಬೊಂಬಾಟ್‌ ಡಿಸ್ಕೌಂಟ್‌ ಪಡೆದಿದೆ.

ಹೌದು, ಅಮೆಜಾನ್‌ ತಾಣದ ಸ್ಮಾರ್ಟ್‌ಫೋನ್ಸ್‌ ಹೋಳಿ ಸ್ಟೋರ್‌ ಸೇಲ್‌ನಲ್ಲಿ ಟೆಕ್ನೋ ಪೋವಾ 5 ಪ್ರೊ ಮೊಬೈಲ್‌ ಶೇ 14% ರಷ್ಟು ರಿಯಾಯಿತಿ ಪಡೆದಿದೆ. ಈ ಫೋನಿನ 16GB* + 128GB ಸ್ಟೋರೇಜ್‌ ವೇರಿಯಂಟ್‌ ಅನ್ನು 14,999ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದರ ಜೊತೆಗೆ ಅಮೆಜಾನ್‌ ತಾಣದಲ್ಲಿ ಲಭ್ಯ ಇರುವ ಇತರೆ ಕೊಡುಗೆಗಳನ್ನು ಪಡೆದುಕೊಂಡರೆ, ಈ ಫೋನ್‌ ಅನ್ನು 9,999ರೂ. ಗಳಿಗೆ ಖರೀದಿಸಲು ಅವಕಾಶ ಇದೆ.

ಅಮೆಜಾನ್‌ ಹೋಳಿ ಸ್ಟೋರ್‌: ಟೆಕ್ನೋ ಪೋವಾ 5 ಪ್ರೊ ಫೋನಿಗೆ ಬಿಗ್ ಡಿಸ್ಕೌಂಟ್‌!

ಇನ್ನು ಈ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಪ್ರೊಸೆಸರ್‌ ಪವರ್‌ ಅನ್ನು ಒಳಗೊಂಡಿದ್ದು, 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಪ್ರಾಥಮಿಕ ಕ್ಯಾಮೆರಾ ಅನ್ನು ಪಡೆದುಕೊಂಡಿದೆ. ಇದರ ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಹಾಗಾದರೇ ಟೆಕ್ನೋ ಪೋವಾ 5 ಪ್ರೊ ಸ್ಮಾರ್ಟ್‌ಫೋನ್‌ ಇತರೆ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಟೆಕ್ನೋ ಪೋವಾ 5 ಪ್ರೊ ಫೀಚರ್ಸ್‌ ಹೀಗಿವೆ

ಟೆಕ್ನೋ ಸಂಸ್ಥೆಯ ಈ ಮೊಬೈಲ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 1080 x 2460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 84.7% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ. ಇದಲ್ಲದೆ ಡಿಸ್‌ಪ್ಲೇ 396 ಪಿಪಿಐ ಸಾಂದ್ರತೆಯನ್ನು ಹೊಂದಿದ್ದು, 120Hz ರಿಫ್ರೆಶ್‌ ರೇಟ್‌ ಅನ್ನು ಸಪೋರ್ಟ್ ಮಾಡುತ್ತದೆ.

ಟೆಕ್ನೋ ಕಂಪನಿಯ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಪ್ರೊಸೆಸರ್‌ ಪವರ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಆಧಾರಿತ HiOS 13 ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಅಮೆಜಾನ್‌ ಹೋಳಿ ಸ್ಟೋರ್‌: ಟೆಕ್ನೋ ಪೋವಾ 5 ಪ್ರೊ ಫೋನಿಗೆ ಬಿಗ್ ಡಿಸ್ಕೌಂಟ್‌!

ಟೆಕ್ನೋ ಪೋವಾ 5 ಪ್ರೊ ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ದ್ವಿತೀಯ ಕ್ಯಾಮೆರಾ AI ಸಪೋರ್ಟ್ ನಲ್ಲಿ ಇದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಹಾಗೆಯೇ ಸ್ಮಾರ್ಟ್‌ಫೋನ್‌ನ ರಿಯರ್‌ ಪ್ಯಾನಲ್‌ನಲ್ಲಿ ಅಧಿಸೂಚನೆಗಳಿಗಾಗಿ RGB LED ಲೈಟ್‌ ಒಳಗೊಂಡಿರುವ ಹೊಸ 'ಆರ್ಕ್ ಇಂಟರ್ಫೇಸ್' ಅನ್ನು ಪಡೆದಿದೆ.

ಟೆಕ್ನೋ ಪೋವಾ 5 ಪ್ರೊ ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಅನ್ನು ಹೊಂದಿದ್ದು, ಇದು 68W ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲ ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, 4G LTE, Wi-Fi, ಬ್ಲೂಟೂತ್, NFC, GPS ಮತ್ತು A-GPS ಅನ್ನು ಒಳಗೊಂಡಿದೆ. ಇದಲ್ಲದೆ 3.5mm ಆಡಿಯೋ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಅನ್ನು ಸಹ ಪಡೆದಿದೆ. ಡಾರ್ಕ್‌ ಇಲ್ಯೂಷನ್‌ ಹಾಗೂ ಸಿಲ್ವರ್‌ ಕಲರ್‌ ಆಯ್ಕೆ ಅನ್ನು ಪಡೆದುಕೊಂಡಿದೆ.

Best Mobiles in India

English summary
Amazon Holi Sale: Best Deal on Tecno Pova 5 Pro 5G Phone. check other details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+