ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಸೇವೆ ನೀಡಲು ಮುಂದಾದ ಅಮೆಜಾನ್

Written By:

ಭಾರತದ ಆನ್‌ಲೈನ್ ಶಾಪಿಂಗ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಅಮೇರಿಕಾ ಮೂಲದ ಈ ಕಾರ್ಮಸ್ ಸಂಸ್ಥೆ ಅಮೆಜಾನ್, ಕನ್ನಡ ಭಾಷೆ ಸೇರಿದಂತೆ ದಕ್ಷಿಣ ಭಾರತದ ತಮಿಳು ಮತ್ತು ತೆಲುಗು ಭಾಷೆಯಲ್ಲಿಯೂ ಸೇವೆಯನ್ನು ನೀಡಲು ಮೂಂದಾಗಿದೆ.

ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಸೇವೆ ನೀಡಲು ಮುಂದಾದ ಅಮೆಜಾನ್

ಓದಿರಿ..: ಫೇಸ್‌ಬುಕ್ ಆಕೌಂಟ್ ಡಿಆಕ್ಟೀಟ್ ಆದ್ರೂ ಮೇಸೆಂಜರ್ ಬಳಸುವುದು ಹೇಗೆ..? ಇಲ್ಲಿದೆ ಸಿಂಪಲ್ ಟ್ರಿಕ್ಸ್..!

ಅಮೆಜಾನ್ ಸೇವೆ ಪಡೆಯುವ ಗ್ರಾಹಕರು ಕನ್ನಡದಲ್ಲಿ ವ್ಯವಹರಿಸುವಂತೆ ಅಮೆಜಾನ್ ಸಿಬ್ಬಂದಿಯೊಂದಿಗೆ ಮನವಿ ಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತನ್ನ ಸೇವೆಯನ್ನು ವಿವಿಧ ಭಾಷೆಗಳಲ್ಲಿ ನೀಡಲು ಅಮೆಜಾನ್ ಇಂಡಿಯಾ ಮುಂದಾಗಿದೆ ಎನ್ನಲಾಗಿದೆ.

ಗ್ರಾಹಕರೊಂದಿಗೆ ಉತ್ತಮ ಬಾಂದವ್ಯವನ್ನು ಹೊಂದಲು ಇದು ಸಹಾಯಕಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಅಮೆಜಾನ್ ಈಗಾಗಲೇ ಕನ್ನಡದಲ್ಲಿ ಸೇವೆಯನ್ನು ಆರಂಭಿಸಿದೆ ಎನ್ನಲಾಗಿದೆ. ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಲು ಗ್ರಾಹಕರು ತೊಂದರೆ ಅನುಭವಿಸುತ್ತಿದ್ದ ಕಾರಣಕ್ಕೆ ಈ ಸೇವೆಯನ್ನು ಆರಂಭಿಸಲಾಗಿದೆ ಎನ್ನಲಾಗಿದೆ.

ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಸೇವೆ ನೀಡಲು ಮುಂದಾದ ಅಮೆಜಾನ್

ಓದಿರಿ..:ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ 5 ಮೆಮೊರಿ ಕಾರ್ಡ್‌ಗಳು (64GB)

ಅಲ್ಲದೇ ಅಮೆಜಾನ್‌ನಲ್ಲಿ ಮಾರಾಟ ಮಾಡುವವರು ಕನ್ನಡ ಭಾಷೆಗೆ ಹೆಚ್ಚಿನ ಒತ್ತು ನೀಡಿ ಎಂದು ಒತ್ತಡ ಹಾಕಿದ್ದರ ಫಲವಾಗಿ ಇಂದು ಕನ್ನಡ ಸಹ ಅಮೆಜಾನ್ ಸಿಬ್ಬಂದಿಯ ವ್ಯವಹಾರಿಕ ಭಾಷೆಗಳಲ್ಲಿ ಒಂದಾಗಿ. ಇದು ಉತ್ತಮ ಸಂಗತಿಯಾಗಿದ್ದು, ಬೇರೆ ಕಂಪನಿಗಳು ಇದೇ ಹಾದಿಯಲ್ಲಿ ನಡೆದರೆ ಮುಂದಿನ ದಿನಗಳು ಭಾಷೆ ಅಭಿವೃದ್ಧಿಗೆ ಕಾರಣವಾಗಲಿದೆ.

Read more about:
English summary
assist and guide the sellers in regional languages, Amazon India on Monday launched support services in Kannada, Tamil and Telugu languages. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot