Amazon: ಅಮೆಜಾನ್ ಇಂಡಿಯಾ 'ಮೆಗಾ ಎಲೆಕ್ಟ್ರಾನಿಕ್ಸ್ ಡೇಸ್' ಸೇಲ್: ಈ ಡಿವೈಸ್‌ಗಳಿಗೆ ಅಗ್ಗದ ಬೆಲೆ
ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್ (Amazon) ತನ್ನ ಪ್ರತಿಸ್ಪರ್ಧಿ ಫ್ಲಿಪ್‌ಕಾರ್ಟ್ ನೊಂದಿಗೆ ಯಾವಾಗಲೂ ಸ್ಪರ್ಧೆ ಮಾಡುತ್ತಲೇ ಇರುತ್ತದೆ. ಅದರಂತೆ ಈಗ ಎರಡೂ ಪ್ಲಾಟ್ ಫಾರ್ಮ್‌ಗಳಲ್ಲೂ ವಿಶೇಷ ಸೇಲ್ ಆಯೋಜನೆ ಮಾಡಲಾಗಿದ್ದು, ಈ ಮೂಲಕ ಗ್ರಾಹಕರು ಆಫರ್ ಬೆಲೆಗೆ ಇಷ್ಟದ ಡಿವೈಸ್‌ಗಳನ್ನು ಖರೀದಿ ಮಾಡಲು ಅನುವು ಮಾಡಿಕೊಟ್ಟಿವೆ.
ಹೌದು, ಅಮೆಜಾನ್ ಇದೀಗ ಮೆಗಾ ಎಲೆಕ್ಟ್ರಾನಿಕ್ಸ್ ಡೇಸ್ (Amazon Mega Electronics Days) ಅನ್ನು ಘೋಷಣೆ ಮಾಡಿದೆ. ಈ ಸೇಲ್ ಫೆಬ್ರವರಿ 12 ರಿಂದ 19 ರ ವರೆಗೆ ನಡೆಯಲಿದ್ದು, ಈ ಸೇಲ್‌ನಲ್ಲಿ ಸ್ಮಾರ್ಟ್‌ವಾಚ್‌ಗಳು, ಹೆಡ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಸೇರಿದಂತೆ ಅನೇಕ ಗ್ರಾಹಕ ಎಲೆಕ್ಟ್ರಾನಿಕ್ಸ್‌ಗಳ ಮೇಲೆ ಶೇಕಡಾ 8 ರವರೆಗೆ ರಿಯಾಯಿತಿ ಇದೆ. ಅಲ್ಲದೆ ಎಸ್‌ಬಿಐ ಕಾರ್ಡ್‌ಗಳು ಮತ್ತು ಇಎಮ್‌ಐ ವಹಿವಾಟುಗಳನ್ನು ಬಳಸಿಕೊಂಡು ಮಾಡಿದ ಖರೀದಿಗಳ ಮೇಲೆ 10 ಪ್ರತಿಶತ ತ್ವರಿತ ರಿಯಾಯಿತಿ ಪ್ರಯೋಜನ ಸಹ ಇದೆ. ಹಾಗಿದ್ರೆ, ತಡಯಾಕೆ ಬನ್ನಿ ಯಾವೆಲ್ಲಾ ಡಿವೈಸ್‌ಗಳಿಗೆ ಏನೆಲ್ಲಾ ಆಫರ್ ಇದೆ ಗಮನಿಸೋಣ.

ಅಮೆಜಾನ್ ಮೆಗಾ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್: ಈ ಸೇಲ್‌ನಲ್ಲಿ 12,999 ರೂ.ಗಳಿಗೆ ನೀವು ಅಮಾಜ್‌ಫಿಟ್ ಆಕ್ಟಿವ್ ಸ್ಮಾರ್ಟ್ ವಾಚ್ ಅನ್ನು ಖರೀದಿ ಮಾಡಬಹುದಾಗಿದೆ ಈ ಸ್ಮಾರ್ಟ್‌ವಾಚ್ 1.75 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ದರ ಜೊತೆಗೆ ಎಐ ಫಿಟ್ನೆಸ್ ವ್ಯಾಯಾಮ ತರಬೇತುದಾರನಾಗಿಯೂ ವಿವಿಧ ಪ್ರಯೋಜನ ನೀಡಲಿದ್ದು, ಜಿಪಿಎಸ್ ಟ್ರ್ಯಾಕಿಂಗ್, ಬ್ಲೂಟೂತ್ ಕರೆ, 14-ದಿನದ ಬ್ಯಾಟರಿ ಬ್ಯಾಕಪ್ ಮತ್ತು ಅಲೆಕ್ಸಾ ಸೇರಿದಂತೆ ಪ್ರೀಮಿಯಂ ಸೌಲಭ್ಯ ಪಡೆದಿದೆ.
ಇದರೊಂದಿಗೆ ಬೋಟ್ ವೇವ್ ಸಿಗ್ಮಾ ಸ್ಮಾರ್ಟ್‌ವಾಚ್ ಅನ್ನು 1,399 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ವಾಚ್ 2.01 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 5 ದಿನಗಳ ಬ್ಯಾಟರಿ ಬ್ಯಾಕಪ್ ನೀಡಲಿದೆ. ಇದರೊಂದಿಗೆ ಬೋಟ್ ಏರ್‌ಡೋಪ್ಸ್ 141 ANC TWS ಇಯರ್‌ಬಡ್ಸ್ ಅನ್ನು ಈ ವಿಶೇಷ ಸೇಲ್‌ನಲ್ಲಿ 1,599ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದು ಬೀಸ್ಟ್ ಮೋಡ್, ENx ತಂತ್ರಜ್ಞಾನ ಪಡೆದಿದೆ.

ಇಷ್ಟೇ ಅಲ್ಲದೆ 1,399 ರೂ.ಗಳಿಗೆ ಬೋಲ್ಟ್ ಆಡಿಯೋ Z40 ಇಯರ್‌ಬಡ್ಸ್ ಅನ್ನು ಕೊಂಡುಕೊಳ್ಳಬಹುದಾಗಿದೆ. ಈ ಡಿವೈಸ್ 60 ಗಂಟೆಗಳ ಪ್ಲೇಟೈಮ್, 10mm ಟೆಕ್ ಡ್ರೈವರ್‌ಗಳು, ವೇಗದ ಚಾರ್ಜಿಂಗ್ ಮತ್ತು ಇಎನ್‌ಸಿ ಮೈಕ್ ಆಯ್ಕೆಯನ್ನು ಪಡೆದಿವೆ. ಅಲ್ಲದೆ ಇದೇ ವೇಳೆ ನೀವು ಫೈರ್‌ಬೋಲ್ಟ್ ಫೀನಿಕ್ಸ್ ಸ್ಮಾರ್ಟ್‌ವಾಚ್ ಅನ್ನು 1,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ವಾಚ್ 1.43 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 700 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ.
ಸ್ಮಾರ್ಟ್‌ವಾಚ್ ಅಥವಾ ಇಯರ್‌ಬಡ್ಸ್ ಮಾತ್ರವಲ್ಲದೆ ಲ್ಯಾಪ್‌ಟಾಪ್ ಅನ್ನೂ ಸಹ ಕಡಿಮೆ ದರದಲ್ಲಿ ಖರೀದಿ ಮಾಡಬಹುದಾಗಿದೆ. ಅಂದರೆ ಡೆಲ್ 14 ಲ್ಯಾಪ್‌ಟಾಪ್ (12th ಜನ್ ಇಂಟೆಲ್ ಕೋರ್ i3) ಅನ್ನು ಈ ಸೇಲ್‌ನಲ್ಲಿ 36,990 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು FHD ಡಿಸ್‌ಪ್ಲೆ ಆಯ್ಕೆ ಪಡೆದಿದ್ದು, ಕಂಫರ್ಟ್ ವ್ಯೂ ಕಡಿಮೆ ನೀಲಿ ಬೆಳಕಿನ ಫಿಚರ್ಸ್‌ನೊಂದಿಗೆ ಲಭ್ಯ ಇದೆ.

ಇದರ ಜೊತೆಗೆ 51,990 ರೂ.ಗಳಿಗೆ ಹೆಚ್‌ಪಿ 15s ಲ್ಯಾಪ್‌ಟಾಪ್ ಅನ್ನು ಖರೀದಿ ಮಾಡಬಹುದಾಗಿದೆ. ಅಲ್ಲದೆ ಲೆನೊವೊ ಐಡಿಯಾ ಪ್ಯಾಡ್‌ಗೂ ಆಫರ್ ನೀಡಲಾಗಿದ್ದು, ಇದನ್ನು 33,490 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಡಿವೈಸ್ 11 ನೇ ಜನ್ ಇಂಟೆಲ್ ಕೋರ್ i3 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 45W ಬ್ಯಾಟರಿ, 720p ಹೆಚ್‌ಡಿ ಕ್ಯಾಮೆರಾ ಮತ್ತು 15.6 ಇಂಚಿನ FHD ಆಂಟಿ-ಗ್ಲೇರ್ ಡಿಸ್‌ಪ್ಲೇ ಹೊಂದಿದೆ.
ಇನ್ನು ಜೆಬಿಎಲ್ ಟ್ಯೂನ್ 235NC ಇಯರ್‌ಬಡ್ಸ್ ಸಹ ಈ ಆಫರ್ ಪಡೆದಿದೆ. 4,299 ರೂ.ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದ್ದು, ವರ್ಧಿತ ಸಂಗೀತದ ಅನುಭವಕ್ಕಾಗಿ 40 ಗಂಟೆಗಳ ಪ್ಲೇಟೈಮ್, ಸಕ್ರಿಯ ಶಬ್ದ-ರದ್ದುಗೊಳಿಸುವ ತಂತ್ರಜ್ಞಾನ ಮತ್ತು ಟಾಕ್ ಥ್ರೂ ಮೋಡ್ ಆಯ್ಕೆ ಪಡೆದಿದೆ ಮತ್ತು 1,799 ರೂ.ಗಳಿಗೆ ನೀವು ನಾಯ್ಸ್ VS 104 ಮ್ಯಾಕ್ಸ್ ಇಯರ್‌ಬಡ್ಸ್ ಅನ್ನು ಖರೀದಿ ಮಾಡಬಹುದಾಗಿದೆ. ಇದು ಸಕ್ರಿಯ ಶಬ್ದ ರದ್ದತಿ, ಟ್ರಾನ್ಫರೆಂಟ್ ಮೋಡ್, ಕ್ವಾಡ್ ಮೈಕ್ ಸೇರಿದಂತೆ ಆಕರ್ಷಕ ಫೀಚರ್ಸ್ ಪಡೆದಿದೆ.
ಇವಿಷ್ಟೇ ಅಲ್ಲದೆ ನಾಯ್ಸ್ ಪಲ್ಸ್ 2 ಮ್ಯಾಕ್ಸ್ ಸ್ಮಾರ್ಟ್‌ವಾಚ್ ಅನ್ನೂ ಸಹ ಆಫರ್ ಬೆಲೆಗೆ ಖರೀದಿ ಮಾಡಬಹುದು. ಅದರಂತೆ ಈ ವಾಚ್ 1,199 ರೂ.ಗಳ ಆಫರ್ ಬೆಲೆ ಹೊಂದಿದ್ದು, ಇದು 1.85 ಇಂಚಿನ ಅಮೋಲೆಡ್ ಡಿಸ್‌ಪ್ಲೇ, 10 ದಿನಗಳ ಬ್ಯಾಟರಿ ಬ್ಯಾಕಪ್, IP68 ವಾಟರ್ ರೆಸಿಸ್ಟೆಂಟ್, 100 ಸ್ಪೋರ್ಟ್ಸ್ ಮೋಡ್‌ಗಳು, ಸ್ಮಾರ್ಟ್ ಡಿಎನ್‌ಡಿ ಸೇರಿದಂತೆ ಇನ್ನೂ ಅನೇಕ ಆಕರ್ಷಕ ಫೀಚರ್ಸ್ ಪಡೆದಿದೆ.

ಟ್ಯಾಬ್ ವಿಚಾರಕ್ಕೆ ಬಂದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S6 ಲೈಟ್ ಅನ್ನು ಈ ವೇಳೆ 21,999ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು ಡಾಲ್ಬಿ ಅಟ್ಮಾಸ್ 3D ಸರೌಂಡ್ ಸೌಂಡ್, ಎಸ್ ಪೆನ್ ಹೊಂದಿದೆ ಇದರ ಜೊತೆಗೆ ನೀವು ಸ್ಯಾಮ್‌ಸಂಗ್ ಗ್ಯಾಲಕ್ಸಿ 4 ಅನ್ನು 10,999ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು ವರ್ಧಿತ ಫಿಟ್‌ನೆಸ್ ಟ್ರ್ಯಾಕಿಂಗ್ ಮತ್ತು ಬ್ಲೂಟೂತ್ ಕರೆಗಾಗಿ ಬಯೋ ಆಕ್ಟಿವ್ ಸೆನ್ಸರ್ ಹೊಂದಿದೆ.


Click it and Unblock the Notifications








