'ಅಮೆಜಾನ್‌' ಮೂಲಕ ವಿದೇಶಗಳಲ್ಲಿ ಹವಾ ಎಬ್ಬಿಸಿದ ಭಾರತೀಯರು!

|

ಭಾರತದ ಮಾರಾಟಗಾರರನ್ನು ಜಾಗತಿಕ ಮಾರುಕಟ್ಟೆಗೆ ಕರೆದೊಯ್ಯುವ ಉದ್ದೇಶದಿಂದ 2015ರಲ್ಲಿ ಜಾಗತಿಕ ಮಾರಾಟ ಕಾರ್ಯಕ್ರಮಕ್ಕೆ (ಗ್ಲೋಬಲ್‌ ಸೆಲ್ಲಿಂಗ್ ಪ್ರೊಗ್ರಾಂ) ಚಾಲನೆ ನೀಡಲಾಗಿದ್ದು, ಅಮೆಜಾನ್‌ ಎಕ್ಸ್‌ಪೋರ್ಟ್‌ ಡೈಜೆಸ್ಟ್‌ನ ಎರಡನೇ ಆವೃತ್ತಿಯ ಪ್ರಕಾರ 2018ರಲ್ಲಿ ಒಟ್ಟಾರೆ ಜಾಗತಿಕ ಮಾರಾಟಗಾರರಲ್ಲಿ ಶೇ 56ರಷ್ಟು ಭಾರತದವರಾಗಿದ್ದಾರೆ ಎಂದು ಅಮೆಜಾನ್‌ ಇಂಡಿಯಾದ ಹಿರಿಯ ಉಪಾಧ್ಯಕ್ಷ ಅಮಿತ್‌ ಅಗರ್‌ವಾಲ್‌ ತಿಳಿಸಿದ್ದಾರೆ.

ಆಗ ಮಾರಾಟಗಾರರ ಸಂಖ್ಯೆ ನೂರರ ಲೆಕ್ಕದಲ್ಲಿತ್ತು. ಇಂದು 50 ಸಾವಿರ ಮಾರಾಟಗಾರರು ಕಾರ್ಯಕ್ರಮದ ಭಾಗವಾಗಿದ್ದಾರೆ. ಜಾಗತಿಕ ಮಾರಾಟ ಕಾರ್ಯಕ್ರಮವು ಹೊಸ ಮೈಲುಗಲ್ಲು ಸೃಷ್ಟಿಸಿದೆ. ನಾಲ್ಕು ವರ್ಷಗಳಲ್ಲಿ ಇ-ಕಾಮರ್ಸ್ ರಫ್ತು 7 ಸಾವಿರ ಕೋಟಿಯನ್ನೂ ಮೀರಿದೆ ಎಂದು ತಿಳಿಸಿದ ಅಮೆಜಾನ್‌ ಇಂಡಿಯಾದ ಹಿರಿಯ ಉಪಾಧ್ಯಕ್ಷ ಅಮಿತ್‌ ಅಗರ್‌ವಾಲ್‌ ಅವರು, 2023ರ ವೇಳೆಗೆ 35 ಸಾವಿರ ಕೋಟಿ ಮೌಲ್ಯದ ರಫ್ತು ವಹಿವಾಟು ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.

'ಅಮೆಜಾನ್‌' ಮೂಲಕ ವಿದೇಶಗಳಲ್ಲಿ ಹವಾ ಎಬ್ಬಿಸಿದ ಭಾರತೀಯರು!

ಇದೀಗ ಭಾರತದಲ್ಲಿ ತಯಾರಾಗಿರುವ 14 ಕೋಟಿಗೂ ಅಧಿಕ ಉತ್ಪನ್ನಗಳನ್ನು ಅಮೆಜಾನ್‌ಡಾಟ್‌ಕಾಂ, ಅಮೆಜಾನ್‌ ಡಾಟ್‌ಕೊಡಾಟ್‌ಯುಕೆ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅಮೆಜಾನ್‌ನ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಉತ್ಪನ್ನಗಳನ್ನು ಆಯ್ಕೆ ಮಾಡುವವರ ಪ್ರಮಾಣ ಶೇ 55ರಷ್ಟು ಏರಿಕೆ ಕಂಡಿದ್ದರೆ, ಮಾರಾಟಗಾರರ ಬೆಳವಣಿಗೆ ಶೇ 71ರಷ್ಟಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಸದ್ಯಕ್ಕೆ ಈಗ 50000 ಮಾರಾಟಗಾರರಿಗೆ ವಿದೇಶದಲ್ಲಿ ತನ್ನ ಉತ್ಪನ್ನ ಮಾರಾಟ ಮಾಡುವ ಅವಕಾಶ ಒದಗಿಸಿಸಲಾಗಿದ್ದು, 140 ದಶ ಲಕ್ಷ ಉತ್ಪನ್ನಗಳು ವಿದೇಶಕ್ಕೆ ರಫ್ತಾಗುತ್ತವೆ. ಈಗಾಗಲೇ 1 ಬಿಲಿಯನ್‌ ಡಾಲರ್‌ ವಹಿವಾಟು ದಾಖಲಾಗಿದೆ. ಇನ್ನು 5 ವರ್ಷದಲ್ಲಿ ಲೋಕಲ್‌ ಉತ್ಪನ್ನ ರಫ್ತಿನಲ್ಲಿ 5 ಬಿಲಿಯನ್‌ ಡಾಲರ್‌ ವಹಿವಾಟು ದಾಖಲಿಸುವ ಗುರಿ ಅಮೆಜಾನ್‌ ಹೊಂದಿದೆ. ನಮ್ಮ ಊರಿನಲ್ಲಿ ಇರುವ ಸಣ್ಣ ಕೈಗಾರಿಕೆದಾರರು ಕೂಡ ತಮ್ಮ ಉತ್ಪನ್ನವನ್ನು ಅಮೆಜಾನ್‌ ಮೂಲಕ ವಿದೇಶದಲ್ಲಿ ಮಾರಾಟ ಮಾಡಬಹುದಾಗಿದೆ.

'ಅಮೆಜಾನ್‌' ಮೂಲಕ ವಿದೇಶಗಳಲ್ಲಿ ಹವಾ ಎಬ್ಬಿಸಿದ ಭಾರತೀಯರು!

ಈ ಕುರಿತಂತೆ ಅಮೆಜಾನ್‌ ಸಂಸ್ಥೆ ಅಮೆಜಾನ್‌ ಎಕ್ಸ್‌ಪೋರ್ಟ್‌ ಡೈಜೆಸ್ಟ್‌ ಬಿಡುಗಡೆ ಮಾಡಿದೆ. ಅಮೆಜಾನ್‌ ಇಂಡಿಯಾದ ಸೀನಿಯರ್‌ ವೈಸ್‌ ಪ್ರೆಸಿಡೆಂಟ್‌ ಅಮಿತ್‌ ಅಗರ್‌ವಾಲ್‌ ಮತ್ತು ಅಮೆಜಾನ್‌ ಸೆಲ್ಲರ್‌ ಸವೀರ್‍ಸಸ್‌ನ ಉಪಾಧ್ಯಕ್ಷ ಗೋಪಾಲ್‌ ಪಿಳ್ಳೈ ಅಮೆಜಾನ್‌ ಎಕ್ಸ್‌ಪೋರ್ಟ್‌ ಡೈಜೆಸ್ಟ್‌ ಬಿಡುಗಡೆ ಮಾಡಿದರು. ಜಾಗತಿಕ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಭಾರತದ ಪುಸ್ತಕ, ಚಿನ್ನಾಭರಣ, ಆರೋಗ್ಯ ಮತ್ತು ವೈಯಕ್ತಿಕ ಕಾಳಜಿಯ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದೆ ಎಂದು ಅಮಿತ್‌ ಅಗರ್‌ವಾಲ್‌ ಅವರು ಹೇಳಿದರು.

ಓದಿರಿ: ಮೊಬೈಲ್ ಕಳೆದರೂ 'ಕಾಂಟ್ಯಾಕ್ಸ್ಟ್'ಗಳನ್ನು ಉಳಿಸಿಕೊಳ್ಳುವುದು ಹೇಗೆ?

Best Mobiles in India

English summary
"We believe that growing 'Make in India' exports will be an integral lever for India to grow," quoted Amit Agarwal. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X