ಮೊಬೈಲ್ ಕಳೆದರೂ 'ಕಾಂಟ್ಯಾಕ್ಸ್ಟ್'ಗಳನ್ನು ಉಳಿಸಿಕೊಳ್ಳುವುದು ಹೇಗೆ?

|

ಇತ್ತೀಚಿನ ಯಾವುದೇ ಫೋನಿನಲ್ಲಿ ಸಂಪರ್ಕ ಸಂಖ್ಯೆಯೊಂದನ್ನು ಹೊಸದಾಗಿ ಸೇರಿಸುವಾಗ, ಎಲ್ಲಿ ಸೇವ್ ಮಾಡಬೇಕೆಂದು ಆಂಡ್ರಾಯ್ಡ್ ಫೋನ್‌ಗಳು ಯಾವತ್ತೂ ಕೇಳುತ್ತವೆ. ಆಗ ಗೂಗಲ್ ಖಾತೆ ಎಂಬುದನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಸಂಪರ್ಕ ಸಂಖ್ಯೆಗಳು ಯಾವಾಗಲೂ ಆನ್‌ಲೈನಿನಲ್ಲಿ ದೊರೆಯುತ್ತವೆ. ಇದರಿಂದ ನಿಮ್ಮ ಮೊಬೈಲ್ ಮೆಮೊರಿ ಡಿಲೀಟ್ ಆದರೂ ಅಥವಾ ನಿಮ್ಮ ಮೊಬೈಲ್ ಕಳೆದರೂ ಸಂಪರ್ಕ ಸಂಖ್ಯೆಗಳು ಅಳಿಸಿಹೋದವು ಎಂದು ಕೊರಗಬೇಕಿಲ್ಲ.

ಏಕೆಂದರೆ, ಸಂಪರ್ಕ ಸಂಖ್ಯೆಯನ್ನು ಗೂಗಲ್ ಖಾತೆಯಲ್ಲಿ ಶೇಖರಿಸಿಟ್ಟರೆ ನಿಮ್ಮ ಮೊಬೈಲ್ ಮೆಮೊರಿ ಡಿಲೀಟ್ ಆದರೂ ಅಥವಾ ನಿಮ್ಮ ಮೊಬೈಲ್ ಕಳೆದರೂ ಸಂಪರ್ಕ ಸಂಖ್ಯೆಗಳು ಆನ್‌ಲೈನಿನಲ್ಲಿ ಉಳಿದುಕೊಂಡಿರುತ್ತವೆ. ನೀವು ಮತ್ತೊಂದು ಹೊಸ ಮೊಬೈಲ್ ಖರೀದಿಸಿದಾಗಲೂ ಅಥವಾ ನಿಮ್ಮ ಫೋನ್ ಮೆಮೊರಿಗೆ ಸಂಪರ್ಕ ಸಂಖ್ಯೆಗಳನ್ನು ಮತ್ತೊಮ್ಮೆ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಈ ಮೊದಲು ಫೋನ್‌ ಲಾಗಿನ್‌ಗೆ ಬಳಸಿದ್ದ ಖಾತೆ ಬಗ್ಗೆ ತಿಳಿದಿರಬೇಕು.

ಮೊಬೈಲ್ ಕಳೆದರೂ 'ಕಾಂಟ್ಯಾಕ್ಸ್ಟ್'ಗಳನ್ನು ಉಳಿಸಿಕೊಳ್ಳುವುದು ಹೇಗೆ?

ಇತ್ತೀಚಿನ ಯಾವುದೇ ಆಂಡ್ರಾಯ್ಡ್ ಫೋನ್‌ನಲ್ಲಿ ಸಂಪರ್ಕ ಸಂಖ್ಯೆಗಳು ಆ ಫೋನ್‌ಗೆ ಲಿಂಕ್ ಆಗಿರುವ ಜಿಮೇಲ್ (ಗೂಗಲ್) ಖಾತೆಯೊಂದಿಗೆ ಸಿಂಕ್ರನೈಸ್ (ಬ್ಯಾಕಪ್) ಆಗಿರುತ್ತವೆ. ಪ್ರತೀ ಬಾರಿ ನಿಮ್ಮ ಕಾಂಟ್ಯಾಕ್ಸ್ಟ್ ಅಪ್‌ಡೇಟ್ ಆದಾಗಲೂ ಅದು ಇಂಟರ್‌ನೆಟ್ ಆನ್ ಇದ್ದರೆ ಕೆಲವೇ ಕ್ಷಣಗಳಲ್ಲಿ ಗೂಗಲ್ ಡ್ರೈವ್‌ಗೆ ಸಿಂಕ್ರನೈಸ್ ಆಗುತ್ತದೆ. ಇದರಿಂದ ನೀವು ನಿಮ್ಮ ಫೋನ್ ಅನ್ನು ಬದಲಾಯಿಸುವಾಗಲೂ ಸಹ ಸಂಪರ್ಕ ಸಂಖ್ಯೆಗಳನ್ನು ತನ್ನಿಂತಾನೇ ವರ್ಗಾಯಿಸಿಕೊಳ್ಳುವಲ್ಲಿ ನೆರವಾಗುತ್ತದೆ.

ಒಂದು ವೇಳೆ ನಿಮ್ಮ ಫೋನ್ ಹಳೆದಾಗಿದ್ದರೆ, ಹಳೆಯ ಫೋನ್‌ನಲ್ಲಿ ಮೊದಲೇ ಸಿಂಕ್ರನೈಸ್ ಆಗುವುದಿಲ್ಲ. ಹಾಗಾಗಿ, ಅದರ ಸೆಟ್ಟಿಂಗ್ಸ್‌ನಲ್ಲಿ ಗೂಗಲ್ ಎಂಬಲ್ಲಿಗೆ ಹೋಗಿ, ಬ್ಯಾಕಪ್ ಎಂಬುದನ್ನು ಸರ್ಚ್ ಮಾಡಿ. ಅಲ್ಲಿ, ಕಾಂಟ್ಯಾಕ್ಟ್ಸ್ ಬ್ಯಾಕಪ್ ಆಯ್ಕೆಯು ಎನೇಬಲ್ ಆಗಿರುವಂತೆ ನೋಡಿಕೊಳ್ಳಿ. ನಂತರ ಸ್ವಲ್ಪ ಸಮಯದ ಬಳಿಕ ಕಾಂಟ್ಯಾಕ್ಟ್ಸ್ ಸಿಂಕ್ ಆಗುತ್ತವೆ. ಇದರಿಂದ ನಿಮ್ಮ ಹಳೆಯ ಫೋನ್‌ನಲ್ಲಿ ಸಹ ಸಂಪರ್ಕ ಸಂಖ್ಯೆಗಳನ್ನು ತನ್ನಿಂತಾನೇ ವರ್ಗಾಯಿಸಿಕೊಳ್ಳುವಂತೆ ಮಾಡಬಹುದು.

ಮೊಬೈಲ್ ಕಳೆದರೂ 'ಕಾಂಟ್ಯಾಕ್ಸ್ಟ್'ಗಳನ್ನು ಉಳಿಸಿಕೊಳ್ಳುವುದು ಹೇಗೆ?

ಈ ಕಾರ್ಯವೂ ಸರಾಗವಾಗಿ ನಡೆಯಬೇಕೆಂದರೆ ಕಾಂಟ್ಯಾಕ್ಟ್ಸ್ ಬ್ಯಾಕಪ್ ಆಯ್ಕೆಯಲ್ಲಿ ಬ್ಯಾಕಪ್ ಎನೇಬಲ್ ಆಗಿರಬೇಕಾಗುತ್ತದೆ. ಇದರಿಂದ ಸ್ವಯಂಚಾಲಿತವಾಗಿ, ಅಂದರೆ ನಮಗೆ ಈ ಬಗ್ಗೆ ಅರಿವಿಲ್ಲದಂತೆಯೇ ಮತ್ತು ನಮ್ಮಿಂದ ಯಾವುದೇ ಹಸ್ತಕ್ಷೇಪವಿಲ್ಲದೆಯೂ ಈ ವರ್ಗಾವಣೆ ನಡೆಯುತ್ತದೆ. ಇಂಟರ್ನೆಟ್ ಸಂಪರ್ಕವಿರುವ ಯಾವುದೇ ಆಂಡ್ರಾಯ್ಡ್ ಫೋನ್ವಾಗಿನಲ್ಲಿ ಸಂಪರ್ಕ ಸಂಖ್ಯೆಗಳು ಆ ಫೋನ್‌ಗೆ ಲಿಂಕ್ ಆಗಿರುವ ಜಿಮೇಲ್ ಖಾತೆಯೊಂದಿಗೆ ಸಿಂಕ್ರನೈಸ್ ಆಗಿರುವುದು ಇದಕ್ಕೆ ಕಾರಣ.

ಓದಿರಿ: 77 ಜನರಿಗೆ ವಂಚಿಸಿದ ಆಘಾತಕಾರಿ ಪ್ರಕರಣಕ್ಕೆ ಕಣ್ಣೀರಿಟ್ಟ 'ಸೈಬರ್ ಪೊಲೀಸರು'!

Best Mobiles in India

English summary
How to Sync Contacts for Android . How do I transfer my phone number to a new phone?. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X