Subscribe to Gizbot

ಗೂಗಲ್ ಫೋನ್ ಬುಕ್ ಮಾಡಿದವನಿಗೆ ಖಾಲಿ ಬಾಕ್ಸ್ ಕಳುಹಿಸಿದ ಅಮೆಜಾನ್..!

Written By:

ಭಾರತೀಯ ಮಾರುಕಟ್ಟೆಯಲ್ಲಿ ಆನ್‌ಲೈನ್ ಸ್ಟೋರ್‌ಗಳ ಆರ್ಭಟವು ಜೋರಾಗಿದೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳು ಗ್ರಾಹಕರನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲು ಸೇಲ್‌ ಗಳನ್ನು ಆಯೋಜಿಸುವುದರೊಂದಿಗೆ ಕ್ಯಾಷ್ ಬ್ಯಾಕ್ ಸೇರಿದಂತೆ ವಿವಿಧ ಆಫರ್ ಗಳನ್ನು ನೀಡಿ ಗ್ರಾಹಕರನ್ನು ಮರಳು ಮಾಡುತ್ತಿವೆ. ಇದೇ ಮಾದರಿಯಲ್ಲಿ ಆನ್‌ಲೈನ್ ಮಾರುಕಟ್ಟೆಯಲ್ಲಿ ವಂಚನೆಗಳು ಅಧಿಕವಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದು, ಅದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ.

ಗೂಗಲ್ ಫೋನ್ ಬುಕ್ ಮಾಡಿದವನಿಗೆ ಖಾಲಿ ಬಾಕ್ಸ್ ಕಳುಹಿಸಿದ ಅಮೆಜಾನ್..!

ಮೊನ್ನೇ ತಾನೇ ಫ್ಲಿಪ್‌ಕಾರ್ಟ್ ಐಫೋನ್ ಬುಕ್ ಮಾಡಿದವರಿಗೆ ಫೋನಿನ ಬದಲಿಗೆ ಬಟ್ಟೆ ತೊಳೆಯುವ ಸಾಬೂನು ನೀಡಿದ ಮಾದರಿಯಲ್ಲಿ ಈ ಬಾರಿ ಅಮೆಜಾನ್ ಗೂಗಲ್ ಪಿಕ್ಸಲ್ ಫೋನ್ ಬುಕ್ ಮಾಡಿದವರಿಗೆ ಖಾಲಿ ಬಾಕ್ಸ್ ಅನ್ನು ಕಳುಹಿಸಿದೆ. ಈ ಮೂಲಕ ಸಾವಿರಾರು ರೂಪಾಯಿ ಹಣವನ್ನು ನೀಡಿ ಫೋನ್ ಬುಕ್ ಮಾಡಿದವರಿಗೆ ಶಾಕ್ ಆಗಿದ್ದು, ಅಮೆಜಾನ್ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಖಾಲಿ ಬಾಕ್ಸ್

ಖಾಲಿ ಬಾಕ್ಸ್

ಅಮೆಜಾನ್ ಕಳುಹಿಸಿದ್ದ ಬಾಕ್ಸ್ ಅನ್ನು ಒಪನ್ ಮಾಡಿದ ಸಂದರ್ಭದಲ್ಲಿ ಫೋನ್ ಇಲ್ಲದಿರುವುದು ತಿಳಿಸಿದೆ. ಸುಮಾರು ರೂ.50000ಕ್ಕೂ ಹೆಚ್ಚಿನ ಮೌಲ್ಯದ ಫೋನ್ ಇದಾಗಿತ್ತು ಎನ್ನಲಾಗಿದೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಜನರು ವಸ್ತುಗಳನ್ನು ಖರೀದಿಸದೆ ಇರಲು ಇದು ಸಹ ಒಂದು ಕಾರಣವಾಗಿದೆ.

ವಿಡಿಯೋ ಮಾಡಿದ್ದರು

ವಿಡಿಯೋ ಮಾಡಿದ್ದರು

ಟೋನಿ ಚಾರ್ಜ್ ಎನ್ನುವವರು ಅಮೆಜಾನ್ ಕಳುಹಿಸಿದ್ದ ಬಾಕ್ಸ್ ಒಪನ್ ಮಾಡುವ ಸಂದರ್ಭದಲ್ಲಿ ಅದನ್ನು ವಿಡಿಯೋ ಮಾಡಿಕೊಂಡಿದ್ದು, ಈ ಹಿಂದಿನ ಘಟನೆಗಳನ್ನ ನೆನಪಿಸಿಕೊಂಡು ಈ ರೀತಿಯಲ್ಲಿ ಮಾಡಿದ್ದರು ಎನ್ನಲಾಗಿದೆ. ಈ ವಿಡಿಯೋದಲ್ಲಿ ಅಮೆಜಾನ್ ಪಾರ್ಸಲ್ ನಲ್ಲಿ ಖಾಲಿ ಬಾಕ್ಸ್ ಇರುವುದು ಪತ್ತೆಯಾಗಿದೆ.

ಎಚ್ಚರ:

ಎಚ್ಚರ:

ದಿನದಿಂದ ದಿನಕ್ಕೆ ಆನ್‌ಲೈನಿನಲ್ಲಿ ಖರೀದಿಸಿದ ಸಂದರ್ಭದಲ್ಲಿ ವಂಚನೆಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪಾರ್ಸಲ್ ಸ್ವೀಕರಿಸಿದ ಸಂದರ್ಭದಲ್ಲಿಯೇ ಅದನ್ನು ಸೂಕ್ತವಾಗಿ ಪರಿಶೀಲನೆ ಮಾಡುವುದು ಉತ್ತಮ ಎನ್ನಲಾಗಿದೆ. ಇಲ್ಲವಾದರೆ ತೊಂದರೆಗೆ ಸಿಲುಕಬೇಕಾಗುತ್ತದೆ.

ವಿಡಿಯೋ ನೋಡಿ:

ಅಮೆಜಾನ್ ಕಳುಹಿಸಿದ್ದ ಪಾರ್ಸಲ್ ಅನ್ನು ಓಪನ್ ಮಾಡುವ ಸಂದರ್ಭದಲ್ಲಿಯೇ ವಿಡಿಯೋವನ್ನು ಮಾಡಿದ್ದು, ಒಮ್ಮೆ ನೀವು ಅದನ್ನು ನೋಡಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ವಿಶ್ವದ ಮೊದಲ 5G ಸ್ಮಾರ್ಟ್‌ಫೋನ್: ಬೆಚ್ಚಿ ಬಿಳಿಸುವ ಡೌನ್‌ಲೋಡ್ ಸ್ಪೀಡ್..!

English summary
Amazon India sends empty box. to know more visit kannada.gibot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot