Subscribe to Gizbot

ವಿಶ್ವದ ಮೊದಲ 5G ಸ್ಮಾರ್ಟ್‌ಫೋನ್: ಬೆಚ್ಚಿ ಬಿಳಿಸುವ ಡೌನ್‌ಲೋಡ್ ಸ್ಪೀಡ್..!

Written By:

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹಾಗೂ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಗಳು ಮತ್ತು ಅಭಿವೃದ್ಧಿಗಳು ಸಾಗುತ್ತಿದೆ. ಇದೇ ಮಾದರಿಯಲ್ಲಿ ಸದ್ಯ ಮಾರುಕಟ್ಟೆಯಲ್ಲಿ 4G ನೆಟ್‌ವರ್ಕ್ ಟ್ರೆಂಡ್ ಆಗಿದ್ದು, ಶೀಘ್ರವೇ 5G ಸೇವೆಯೂ ವಿಶ್ವ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

ವಿಶ್ವದ ಮೊದಲ 5G ಸ್ಮಾರ್ಟ್‌ಫೋನ್: ಬೆಚ್ಚಿ ಬಿಳಿಸುವ ಡೌನ್‌ಲೋಡ್ ಸ್ಪೀಡ್..!

ಇದಕ್ಕಾಗಿ ಸ್ಮಾರ್ಟ್‌ಫೋನ್ ತಯಾರಕರು ಭರ್ಜರಿ ತಯಾರಿಯನ್ನು ನಡೆಸುತ್ತಿದ್ದಾರೆ. ಇದೇ ಮಾದರಿಯಲ್ಲಿ HTC ವಿಶ್ವದ ಮೊದಲ 5G ಸಪೋರ್ಟ್ ಸ್ಮಾರ್ಟ್‌ಫೋನ್ ಅನ್ನು ಪರಿಚಯ ಮಾಡಿದೆ. ಈ ಮೂಲಕ ಮುಂದಿನ ತಲೆ ಮಾರಿನ ಬದಲಾವಣಗೆ ಈಗಲೇ ತೆರೆದುಕೊಂಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತೈವಾನ್‌ನಲ್ಲಿ:

ತೈವಾನ್‌ನಲ್ಲಿ:

ತೈವಾನ್‌ನಲ್ಲಿ ನಡೆದ 5G ಇಂಡಸ್ಟ್ರಿ ಇವೆಂಟ್ ನಲ್ಲಿ HTC ಕಂಪನಿಯೂ ತನ್ನ ನೂತನ ಫಾಗ್ ಶಿಪ್ HTC U12 ಸ್ಮಾರ್ಟ್‌ಫೋನ್ ಅನ್ನು ಪರಿಚಯ ಮಾಡಿದ್ದು, ಈ ಸ್ಮಾರ್ಟ್‌ಫೋನ್ ಮುಂದಿನ ತಲೆಮಾರಿನ 5Gಗೆ ಸಪೋರ್ಟ್ ಮಾಡಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಇನ್ನು ಮಾರುಕಟ್ಟೆಗೆ ಬಿಡುಗಡೆಯಾಗಿಲ್ಲ.

ಆಲ್ಟ್ರಾ ಥಿನ್ ಬ್ರೈಜಿಲ್ ಲೈಸ್:

ಆಲ್ಟ್ರಾ ಥಿನ್ ಬ್ರೈಜಿಲ್ ಲೈಸ್:

HTC U12 ಸ್ಮಾರ್ಟ್‌ಫೋನ್ ಆಲ್ಟ್ರಾ ಥಿನ್ ಬ್ರೈಜಿಲ್ ಲೈಸ್ ವಿನ್ಯಾಸವನ್ನು ಹೊಂದಿದ್ದು, ನೋಡಲು ಸುಂದರವಾಗಿ ಕಾಣುತ್ತಿದೆ. ಇದು 5G ಸಪೋರ್ಟ್ ಮಾಡಲಿದ್ದು, ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿದೆ.

ಬೆಚ್ಚಿ ಬಿಳುವ ಡೌನ್‌ಲೋಡ್ ಸ್ಪೀಡ್:

ಬೆಚ್ಚಿ ಬಿಳುವ ಡೌನ್‌ಲೋಡ್ ಸ್ಪೀಡ್:

HTC U12 ಸ್ಮಾರ್ಟ್‌ಫೋನ್ 5G ಸಪೋರ್ಟ್ ಮಾಡಲಿದ್ದು, ಅತ್ಯಂತ ವೇಗವಾಗಿ ಡೌನ್‌ಲೋಡ್ ಮಾಡಲಿದೆ. 1GBPS ವೇಗದಲ್ಲಿ ಡೌನ್‌ಲೋಡ್ ಮಾಡುವ ಶಕ್ತಿಯನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ ಎನ್ನಲಾಗಿದೆ.

ರೆಡ್‌ಮಿ ನೋಟ್ 4 ನಲ್ಲಿರೋ ಈ ಫೀಚರ್ಸ್ ಯಾರೂ ಬಳಸುತ್ತಿಲ್ಲ.!!
ಅತೀ ವೇಗ ಪ್ರೋಸೆಸರ್:

ಅತೀ ವೇಗ ಪ್ರೋಸೆಸರ್:

5G ಸಪೋರ್ಟ್ ಮಾಡುವ HTC U12 ಸ್ಮಾರ್ಟ್‌ಫೋನ್ ನಲ್ಲಿ ಸ್ನಾಪ್‌ಡ್ರಾಗನ್ ಬಿಡುಗಡೆ ಮಾಡಿರುವ ಅತೀ ವೇಗದ ಪ್ರೊಸೆಸರ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 845 ಚಿಪ್‌ ಸೆಟ್ ಅನ್ನು ಕಾಣಬಹುದಾಗಿದೆ.

26ರಂದು ಅನಾವರಣ:

26ರಂದು ಅನಾವರಣ:

HTC U12 ಸ್ಮಾರ್ಟ್‌ಫೋನ್ ಅನ್ನು ಕಂಪನಿಯೂ ಇದೇ ಫೆಬ್ರವರಿ 26 ರಂದು ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
HTC U12 with 5G support reportedly showcased in Taiwan. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot