Home
ಸುದ್ದಿಜಾಲ

Amazonನಲ್ಲಿ ಭರ್ಜರಿ ಕಿಕ್‌ಸ್ಟಾರ್ಟರ್ ಡೀಲ್‌ಗಳು: ಕೆಲ ಡಿವೈಸ್‌ಗಳ ಮೇಲೆ ಭಾರೀ ಡಿಸ್ಕೌಂಟ್‌

ಜನಪ್ರಿಯ ಅಮೆಜಾನ್‌ನ ಈ ವರ್ಷದ ಅತಿ ದೊಡ್ಡ ಮಾರಾಟಕ್ಕೆ ಕೆಲವು ದಿನಗಳು ಬಾಕಿ ಇರುವಾಗಲೇ ದೊಡ್ಡ ಆಫರ್‌ ನೀಡಿದೆ. ಬಿಗ್‌ ಫೆಸ್ಟಿವಲ್‌ ಭಾಗವಾಗಿ ಕಿಕ್‌ಸ್ಟಾರ್ಟರ್ ಡೀಲ್‌ಗಳನ್ನು ನೀಡಿದ್ದು, ಇದರಲ್ಲಿ ಕಂಪ್ಯೂಟರ್ ಪರಿಕರಗಳು ಸೇರಿದಂತೆ ಇತರೆ ಸ್ಮಾರ್ಟ್‌ ಡಿವೈಸ್‌ಗಳ ಮೇಲೆ ಭರ್ಜರಿ ರಿಯಾಯಿತಿ ನೀಡಿದೆ.

ಕಂಪ್ಯೂಟರ್‌

ಹೌದು, ಕಂಪ್ಯೂಟರ್‌ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಈ ಸಮಯ ಅತ್ಯಂತ ಸೂಕ್ತವಾಗಿದೆ. ಹಾಗೆಯೇ ಅಮೆಜಾನ್‌ ಕಿಕ್‌ಸ್ಟಾರ್ಟರ್ ಡೀಲ್‌ ನಲ್ಲಿ ಕಂಪ್ಯೂಟರ್‌ ಪರಿಕರಗಳ ಮೇಲೆ ಡಿಸ್ಕೌಂಟ್ ಘೋಷಿಸಿದೆ. ಈ ಸೇಲ್‌ನಲ್ಲಿ ಮೌಸ್‌, ಕೀಬೋರ್ಡ್‌, ಗೇಮ್‌ ಪಾಡ್‌ ಮತ್ತು ಸ್ಪೀಕರ್‌ ಸೇರಿದಂತೆ ಇನ್ನೂ ಹತ್ತು ಹಲವು ಸಾಧನಗಳನ್ನು ರಿಯಾಯಿತಿ ದರದಲ್ಲಿ ಕೊಂಡುಕೊಳ್ಳಬಹುದಾಗಿದೆ.

ಹೆಚ್‌ಪಿ X1000 USB ಮೌಸ್‌

ಹೆಚ್‌ಪಿ X1000 USB ಮೌಸ್‌

ಮೂರು ಬಟನ್‌ಗಳ ಆಯ್ಕೆ ಹೊಂದಿರುವ ಈ ಮೌಸ್‌ ಉತ್ತಮವಾಗಿ ಕಾರ್ಯನಿರ್ವಹಿಸುವ ಉದ್ದೇಶದಿಂದ ಆಪ್ಟಿಕಲ್ ಸೆನ್ಸಾರ್‌ ನೀಡಲಾಗಿದೆ. ಈ ಮೌಸ್ ಕಪ್ಪು ಮತ್ತು ಮೆಟಾಲಿಕ್‌ ಬೂದು ಬಣ್ಣದಲ್ಲಿದೆ. ಇದರ ಬೆಲೆ 130 ರೂ. ಗಳ ರಿಯಾಯಿತಿ ಪಡೆದಿದ್ದು, 269 ರೂ.ಗಳಿಗೆ ಲಭ್ಯವಾಗಲಿದೆ.

ಹೆಚ್‌ಪಿ  X200 ವೈರ್‌ಲೆಸ್ ಮೌಸ್

ಹೆಚ್‌ಪಿ X200 ವೈರ್‌ಲೆಸ್ ಮೌಸ್

ಈ ಹೆಚ್‌ಪಿ X200 ವೈರ್‌ಲೆಸ್ ಮೌಸ್ 2.4 GHz ವೈರ್‌ಲೆಸ್ ಸಂಪರ್ಕದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ವಿಂಡೋಸ್‌ 10, ವಿಂಡೋಸ್‌ 8, ವಿಂಡೋಸ್‌ 7, ಮತ್ತು MacOS 10.1 ಅಥವಾ ಇನ್ನಿತರ ಡಿವೈಸ್‌ಗಳಿಗೆ ಬೆಂಬಲ ನೀಡಲಿದೆ. ಇದಕ್ಕೆ ಬರೋಬ್ಬರಿ 410 ರೂ.ಗಳ ರಿಯಾಯಿತಿ ನೀಡಲಾಗಿದ್ದು, 489 ರೂ.ಗಳಿಗೆ ಲಭ್ಯವಾಗಲಿದೆ.

ಹೆಚ್‌ಪಿ ಕೀಬೋರ್ಡ್‌

ಹೆಚ್‌ಪಿ ಕೀಬೋರ್ಡ್‌

ಹೆಚ್‌ಪಿ GK100 ವೈರ್ಡ್ RGM ಬ್ಯಾಕ್‌ಲಿಟ್ ಮೆಕ್ಯಾನಿಕಲ್ ಗೇಮಿಂಗ್ ಕೀಬೋರ್ಡ್ ಮೆಕ್ಯಾನಿಕಲ್ ಸ್ವಿಚ್‌ಗಳನ್ನು ಒಳಗೊಂಡಿದೆ. ಹಾಗೆಯೇ ಆರ್ಕ್-ಫಾರ್ಮ್ ಕೀಬೋರ್ಡ್ ವಿನ್ಯಾಸ ಇದರಲ್ಲಿದ್ದು, 4 LED ಸೂಚಕಗಳು, ಆರ್‌ಜಿಬಿ ಲೈಟಿಂಗ್ ಮತ್ತು ಡಬಲ್ ಇಂಜೆಕ್ಷನ್ ಕೀಕ್ಯಾಪ್‌ಗಳ ಆಯ್ಕೆ ಪಡೆದಿದೆ. ಇದು 820 ರೂ. ಗಳ ರಿಯಾಯಿತಿ ಪಡೆದಿದ್ದು, 2,879 ರೂ.ಗಳ ಬೆಲೆಯಲ್ಲಿ ಲಭ್ಯವಿದೆ.

ಹೆಚ್‌ಪಿ Z3700 ವೈರ್‌ಲೆಸ್ ಆಪ್ಟಿಕಲ್ ಮೌಸ್

ಹೆಚ್‌ಪಿ Z3700 ವೈರ್‌ಲೆಸ್ ಆಪ್ಟಿಕಲ್ ಮೌಸ್

ಯುಎಸ್‌ಬಿ ರಿಸೀವರ್‌ನೊಂದಿಗೆ ಹೆಚ್‌ಪಿ Z3700 ವೈರ್‌ಲೆಸ್ ಆಪ್ಟಿಕಲ್ ಮೌಸ್ 2.4GHz ವೈರ್‌ಲೆಸ್ ಸಂಪರ್ಕದೊಂದಿಗೆ ಕೆಲಸ ಮಾಡುತ್ತದೆ. ಇದು ಒಂದು AA ಬ್ಯಾಟರಿ 16 ತಿಂಗಳವರೆಗೆ ಬಾಳಿಕೆ ಬರಲಿದೆ. 600 ರೂ.ಗಳ ರಿಯಾಯಿತಿ ಪಡೆದಿದ್ದು, 899 ರೂ. ಗಳ ಬೆಲೆಯಲ್ಲಿ ಇದು ಲಭ್ಯವಿದೆ.

ರೆಡ್ಜಿಯರ್ ಎಲೈಟ್ ಗೇಮ್‌ಪ್ಯಾಡ್

ರೆಡ್ಜಿಯರ್ ಎಲೈಟ್ ಗೇಮ್‌ಪ್ಯಾಡ್

ರೆಡ್ಜಿಯರ್ ಎಲೈಟ್ ವೈರ್‌ಲೆಸ್ ಗೇಮ್‌ಪ್ಯಾಡ್ ಪಿಸಿಗೆ ಸಂಪರ್ಕಿಸಲು ಒಂದು ಯುಎಸ್‌ಬಿ ಡಾಂಗಲ್ ಆಯ್ಕೆ ಪಡೆದಿದೆ. 10 ಮೀಟರ್‌ಗಳ ಕಾರ್ಯಾಚರಣೆಯ ವ್ಯಾಪ್ತಿಯನ್ನು ಹೊಂದಿರುವ ಇದು 2 ಅನಲಾಗ್ ಟ್ರಿಗ್ಗರ್‌ಗಳು, 2 ಅನಲಾಗ್ ಸ್ಟಿಕ್‌ಗಳು, 11 ಡಿಜಿಟಲ್ ಕೀಗಳು, X ಇನ್‌ಪುಟ್ ಮತ್ತು ಡೈರೆಕ್ಟ್ ಇನ್‌ಪುಟ್ ಅನ್ನು ಬೆಂಬಲಿಸುತ್ತದೆ. 10 ಗಂಟೆಗಳ ಬ್ಯಾಟರಿ ಬ್ಯಾಪ್‌ಅಪ್‌ ಇದರಲ್ಲಿದೆ. 550 ರೂ. ಗಳ ರಿಯಾಯಿತಿ ಪಡೆದಿದ್ದು, 749 ರೂ. ಗಳಿಗೆ ಇದನ್ನು ಮಾರಾಟ ಮಾಡಲಾಗುತ್ತಿದೆ.

ಹೆಚ್‌ಪಿ 150 ವೈರ್ಡ್ ಕೀಬೋರ್ಡ್ ಮತ್ತು ಮೌಸ್

ಹೆಚ್‌ಪಿ 150 ವೈರ್ಡ್ ಕೀಬೋರ್ಡ್ ಮತ್ತು ಮೌಸ್

ಹೆಚ್‌ಪಿ 150 ವೈರ್ಡ್ ಕೀಬೋರ್ಡ್‌ ಜೊತೆಗೆ ಮೌಸ್‌ನ್ನು ಸಹ ರಿಯಾಯಿತಿ ದರದಲ್ಲಿ ಕೊಂಡುಕೊಳ್ಳಬಹುದಾಗಿದೆ. ಯುಎಸ್‌ಬಿ ಪ್ಲಗ್-ಅಂಡ್-ಪ್ಲೇ ಸೆಟಪ್, 12 ಶಾರ್ಟ್‌ಕಟ್ ಕೀಗಳು ಈ ಕೀಬೋರ್ಡ್‌ನಲ್ಲಿವೆ. ಹಾಗೆಯೇ ಮೌಸ್‌ 1600 DPI ಆಪ್ಟಿಕಲ್ ಸೆನ್ಸರ್‌ನಲ್ಲಿ ಕೆಲಸ ಮಾಡಲಿದೆ. 550 ರೂ. ಗಳ ರಿಯಾಯಿತಿ ಪಡೆದಿದ್ದು, 849 ರೂ. ಗಳಲ್ಲಿ ಇವು ಲಭ್ಯ ಇವೆ.

ಜಿಂಕ್ ಟೆಕ್ನಾಲಜೀಸ್ ಬೀಸ್ಟ್ ಸ್ಪೀಕರ್

ಜಿಂಕ್ ಟೆಕ್ನಾಲಜೀಸ್ ಬೀಸ್ಟ್ ಸ್ಪೀಕರ್

ಈ ಜಿಂಕ್ ಟೆಕ್ನಾಲಜೀಸ್ ಬೀಸ್ಟ್ ಪೋರ್ಟಬಲ್ ಮಲ್ಟಿಮೀಡಿಯಾ ಸ್ಪೀಕರ್‌ 2 ಇಂಚಿನ ಸ್ಪೀಕರ್‌ ಆಯ್ಕೆ ಪಡೆದಿದೆ. ಇದು 90Hz-20KHz ನಡುವಿನ ಶಬ್ದದ ಆವರ್ತನವನ್ನು ನೀಡುತ್ತದೆ. ಸ್ಪೀಕರ್ ಅನ್ನು ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್ ಅಥವಾ ಟಿವಿಗೆ ಸಂಪರ್ಕಿಸಿಕೊಳ್ಳಬಹುದು. ಇದು 3.5 mm ಆಡಿಯೊ ಇನ್‌ಪುಟ್ ಹಾಗೂ ಯುಎಸ್‌ಬಿ ಕೇಬಲ್‌ ಆಯ್ಕೆಯನ್ನು ಒಳಗೊಂಡಿದೆ. 600 ರೂ.ಗಳ ರಿಯಾಯಿತಿ ಪಡೆದಿದ್ದು, ಕೇವಲ 299 ರೂ.ಗಳಲ್ಲಿ ಲಭ್ಯವಿದೆ.

ಅಮೆಜಾನ್‌ ಬೇಸಿಕ್ಸ್‌ ಗೇಮಿಂಗ್ ಮೌಸ್

ಅಮೆಜಾನ್‌ ಬೇಸಿಕ್ಸ್‌ ಗೇಮಿಂಗ್ ಮೌಸ್

ಈ ಅಮೆಜಾನ್‌ ಬೇಸಿಕ್ಸ್‌ ವೈರ್ಡ್ ಗೇಮಿಂಗ್ ಮೌಸ್ 8 ಪ್ರೊಗ್ರಾಮೆಬಲ್ ಬಟನ್‌ಗಳ ಆಯ್ಕೆಯನ್ನು ಪಡೆದಿದೆ. ಈ ಮೌಸ್ 1.6 ಮೀಟರ್ ಉದ್ದದ ಯುಎಸ್‌ಬಿ ಕೇಬಲ್ ಅನ್ನು ಹೊಂದಿದ್ದು, ಗೇಮಿಂಗ್ ಪಿಸಿ, ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳಿಗೆ ಹೊಂದಿಕೊಳ್ಳುತ್ತದೆ. 2,020 ರೂ.ಗಳ ರಿಯಾಯಿತಿ ಪಡೆದಿದ್ದು, 979 ರೂ. ಗಳಲ್ಲಿ ಈ ಮೌಸ್‌ ಲಭ್ಯವಿದೆ.

ಟಿಪಿ-ಲಿಂಕ್‌ ಯುಎಸ್‌ಬಿ ಬ್ಲೂಟೂತ್ ಅಡಾಪ್ಟರ್

ಟಿಪಿ-ಲಿಂಕ್‌ ಯುಎಸ್‌ಬಿ ಬ್ಲೂಟೂತ್ ಅಡಾಪ್ಟರ್

ಈ ಟಿಪಿ-ಲಿಂಕ್‌ ಯುಎಸ್‌ಬಿ ಬ್ಲೂಟೂತ್ ಡಾಂಗಲ್ ರಿಸೀವರ್ ಡೆಸ್ಕ್‌ಟಾಪ್ ಹಾಗೂ ಲ್ಯಾಪ್‌ಟಾಪ್, ಮೌಸ್, ಕೀಬೋರ್ಡ್, ಪ್ರಿಂಟರ್‌ಗಳು, ಹೆಡ್‌ಸೆಟ್‌ಗಳು ಮತ್ತು ಸ್ಪೀಕರ್‌ಗಳಿಗೆ ಬೆಂಬಲ ನೀಡುತ್ತದೆ. 300 ರೂ.ಗಳ ರಿಯಾಯಿತಿಯನ್ನು ಪಡೆದಿದ್ದು, 399 ರೂ. ಗಳಿಗೆ ಇದು ಲಭ್ಯ ಇದೆ.

ಮೊಬೈಲ್, ಟ್ಯಾಬ್ಲೆಟ್ ಹೋಲ್ಡರ್

ಮೊಬೈಲ್, ಟ್ಯಾಬ್ಲೆಟ್ ಹೋಲ್ಡರ್

ಈ ಅಮೆಜಾನ್‌ ಬೇಸಿಕ್ಸ್‌ ಯುನಿವರ್ಸಲ್ ಮೊಬೈಲ್ ಮತ್ತು ಟ್ಯಾಬ್ಲೆಟ್ ಹೋಲ್ಡರ್ 360-ಡಿಗ್ರಿ ತಿರುಗುವ ಸ್ವಿವೆಲ್ ಬಾಲ್ ಹೆಡ್ ಆಯ್ಕೆ ಪಡೆದಿದ್ದು, ಬಳಕೆ ಮಾಡಲು ತುಂಬಾ ಸುಲಭವಾಗಿದೆ. ಇದನ್ನು ಎಲ್ಲಿ ಬೇಕೆಂದರೂ ಬಳಕೆ ಮಾಡಿಕೊಳ್ಳುವ ಹಾಗೆ ರಚಿಸಲಾಗಿದೆ. 650 ರೂ.ಗಳ ರಿಯಾಯಿತಿ ಪಡೆದಿದ್ದು, 649 ರೂ. ಗಳಲ್ಲಿ ಈ ಸಾಧನ ಲಭ್ಯವಿದೆ.

Best Mobiles in India

English summary
Amazon has offered Kickstarter deals as part of the Big Festival. Offer computer offer on accessories.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+