ಅಮೆಜಾನ್ ಫೈರ್ ಟಿವಿ ಸ್ಟಿಕ್ ಲೈಟ್ ಡಿವೈಸ್ ಲಾಂಚ್!..ಬೆಲೆ ಎಷ್ಟು?
ಜನಪ್ರಿಯ ಅಮೆಜಾನ್ ಸಂಸ್ಥೆಯು ಈಗಾಗಲೇ ಹಲವು ಡಿವೈಸ್‌ಗಳನ್ನು ಲಾಂಚ್ ಮಾಡಿ ಗ್ರಾಹಕರಿಂದ ಸೈ ಅನಿಸಿಕೊಂಡಿದೆ. ಅಮೆಜಾನ್ ಈಗ ಮತ್ತೆ ಹೊಸದಾಗಿ ಎಕೋ ಸ್ಪೀಕರ್‌ಗಳು, ರಿಂಗ್ ಕಾರ್ ಅಲಾರ್ಮ್, ಫ್ಲೈಯಿಂಗ್ ಸೆಕ್ಯುರಿಟಿ ಕ್ಯಾಮೆರಾ, ಫೈರ್ ಟಿವಿ ಸ್ಟಿಕ್ ಲೈಟ್‌ನಂತಹ ಡಿವೈಸ್ ಗಳನ್ನು ಅನಾವರಣ ಮಾಡಿದೆ. ಇವುಗಳಲ್ಲಿ ಫೈರ್ ಟಿವಿ ಸ್ಟಿಕ್ ಲೈಟ್ ಡಿವೈಸ್ ಭಾರತದಲ್ಲಿ ಲಾಂಚ್ ಆಗಿದೆ.

ಹೊಸದಾಗಿ ಬಿಡುಗಡೆ ಆಗಿರುವ ಈ ಅಮೆಜಾನ್ ಫೈರ್ ಟಿವಿ ಸ್ಟಿಕ್ ಲೈಟ್ ಡಿವೈಸ್ ಕೆಲವು ಅಪ್‌ಡೇಟ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಡಿವೈಸ್ ಪೂರ್ಣ-ಹೆಚ್‌ಡಿ ಸ್ಟ್ರೀಮಿಂಗ್, ಹೆಚ್‌ಆರ್‌ಡಿ ಬೆಂಬಲ ಮತ್ತು ಡಾಲ್ಬಿ ಅಟ್ಮೋಸ್ ಸೇರಿದಂತೆ ಇನ್ನಷ್ಟು ಹೆಚ್ಚಿನ ಫೀಚರ್ಸ್‌ಗಳೊಂದಿಗೆ ಅನಾವರಣ ಆಗಿದೆ. ಹಾಗೆಯೇ ಈ ಡಿವೈಸ್ 4K ರೆಸಲ್ಯೂಶನ್ ಒಳಗೊಂಡಿದೆ. ಇನ್ನು ಇದರ ಬೆಲೆಯು 2999ರೂ.ಗಳು ಆಗಿದೆ.

ಫೈರ್ ಟಿವಿ ಸ್ಟಿಕ್ 1.7GHz ಕ್ವಾಡ್-ಕೋರ್ ಸಿಪಿಯು ಹೊಂದಿದ್ದು, ಅಪ್ಲಿಕೇಶನ್‌ಗಳಿಗಾಗಿ 8GB ಆನ್‌ಬೋರ್ಡ್ ಸ್ಟೋರೇಜ್ ಸೌಲಭ್ಯವನ್ನು ಒಳಗೊಂಡಿದೆ. ಡಿವೈಸ್‌ಗಳ ಸಂಪರ್ಕಗಳಿಗಾಗಿ ಬ್ಲೂಟೂತ್ 5.1 ಮತ್ತು ಸ್ಟ್ರೀಮಿಂಗ್ ಕಂಟೆಂಟ್‌ಗಾಗಿ ಡ್ಯುಯಲ್-ಬ್ಯಾಂಡ್ ವೈ-ಫೈ ಇದೆ. ಹಾಗೆಯೇ ಈ ಡಿವೈಸ್ ಮೈಕ್ರೋ ಯುಎಸ್‌ಬಿ ಪೋರ್ಟ್ ಮೂಲಕ ಚಲಿಸುತ್ತದೆ ಮತ್ತು ಟಿವಿಗಳಿಗೆ ಸಂಪರ್ಕಕ್ಕಾಗಿ ಹೆಚ್‌ಡಿಎಂಐ ಪೋರ್ಟ್ ಅನ್ನು ಪಡೆದಿದೆ.

ಇನ್ನು ಈ ಡಿವೈಸ್ 1080p ಯಲ್ಲಿ 60fps ವೇಗದಲ್ಲಿ HDR ಹೊಂದಾಣಿಕೆಯೊಂದಿಗೆ ವೇಗವಾಗಿ ಸ್ಟ್ರೀಮಿಂಗ್ ಅನ್ನು ಶಕ್ತಗೊಳಿಸುತ್ತದೆ. ಹೊಂದಾಣಿಕೆಯ ವಿಷಯ ಮತ್ತು ಸ್ಪೀಕರ್‌ಗಳೊಂದಿಗೆ ತಲ್ಲೀನಗೊಳಿಸುವ ಧ್ವನಿಗಾಗಿ ಟಿವಿ ಸ್ಟಿಕ್ ಡಾಲ್ಬಿ ಅಟ್ಮೋಸ್‌ಗೆ ಬೆಂಬಲಿಸಲಿದೆ. ಮತ್ತು ಅಲೆಕ್ಸಾ ವಾಯ್ಸ್ ರಿಮೋಟ್ ಸೌಲಭ್ಯ ಹೊಂದಿದೆ. ಅದರ ಪೂರ್ವವರ್ತಿಗಿಂತ 50 ಪ್ರತಿಶತದಷ್ಟು ಶಕ್ತಿಯುತವಾಗಿರುವುದರ ಹೊರತಾಗಿ, ಇದು ತನ್ನ ಪೂರ್ವವರ್ತಿಗಿಂತ 50 ಪ್ರತಿಶತದಷ್ಟು ಕಡಿಮೆ ಶಕ್ತಿಯನ್ನು ಬಳಸುತ್ತದೆ.

ಹೊಸ ತಲೆಮಾರಿನ ಈ ಫೈರ್ ಟಿವಿ ಸ್ಟಿಕ್ ಡಿವೈಸ್ ಅಮೆಜಾನ್ ಇಂಡಿಯಾ ವೆಬ್‌ಸೈಟ್‌ನಲ್ಲಿ 3,999 ರೂ.ಗಳಿಗೆ ಲಭ್ಯವಿರುತ್ತದೆ. ಬಳಕೆದಾರರು ಇ-ಕಾಮರ್ಸ್ ತಾಣ ಅಮೆಜಾನ್‌ನಲ್ಲಿ ಇಂದಿನಿಂದ ಈ ಡಿವೈಸ್ ಅನ್ನು ಮುಂಗಡ ಆರ್ಡರ್ ಮಾಡಬಹುದು. ಅಂತೆಯೇ, ಫೈರ್ ಟಿವಿ ಸ್ಟಿಕ್ ಲೈಟ್ 2999 ರೂಗಳಿಗೆ ಲಭ್ಯವಿರುತ್ತದೆ.


Click it and Unblock the Notifications




