Home
ಸುದ್ದಿಜಾಲ

ಅಮೆಜಾನ್‌ ಮೆಗಾ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್; ಮಿಸ್‌ ಮಾಡಿಕೊಂಡ್ರೆ ನಿಮಗೇ ನಷ್ಟ!

ಪ್ರಮುಖ ಇ-ಕಾಮರ್ಸ್‌ ತಾಣವಾದ ಅಮೆಜಾನ್‌ನಲ್ಲಿ ಈಗಾಗಲೇ ಕೆಲವು ಸ್ಮಾರ್ಟ್‌ ಡಿವೈಸ್‌ ಹಾಗೂ ಸ್ಮಾರ್ಟ್‌ ಗ್ಯಾಜೆಟ್‌ಗಳಿಗೆ ಭಾರೀ ರಿಯಾಯಿತಿ ಘೋಷಣೆ ಮಾಡಲಾಗಿದೆ. ಅದಾಗ್ಯೂ ಈಗ ಅಮೆಜಾನ್‌ ತನ್ನ ವಿಶೇಷ ಮಾರಾಟದ ಭಾಗವಾಗಿ ಮೆಗಾ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್‌ ಅನ್ನು ಘೋಷಿಸಿದ್ದು, ಈ ಮೂಲಕ ಗ್ರಾಹಕರು ತಮಗಿಷ್ಟವಾದ ಡಿವೈಸ್‌ಗಳನ್ನು ಕೈಗೆಟಕುವ ದರದಲ್ಲಿ ಖರೀದಿ ಮಾಡಲು ಅಮೆಜಾನ್‌ ಅವಕಾಶ ಕಲ್ಪಿಸಿದೆ.

ಅಮೆಜಾನ್‌ ಮೆಗಾ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್; ಮಿಸ್‌ ಮಾಡಿಕೊಂಡ್ರೆ ನಿಮಗೇ ನಷ್ಟ!

ಹೌದು, ಅಮೆಜಾನ್ ಇಂಡಿಯಾ ಮೆಗಾ ಎಲೆಕ್ಟ್ರಾನಿಕ್ಸ್ ಡೇಸ್ ಮಾರಾಟವನ್ನು ಘೋಷಿಸಿದ್ದು, ಫೆಬ್ರವರಿ 20 ರವರೆಗೆ ಈ ಸೇಲ್‌ ಇರಲಿದೆ. ಈ ಸೇಲ್‌ನಲ್ಲಿ ಗ್ರಾಹಕರು ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಸ್ಮಾರ್ಟ್‌ವಾಚ್‌ ಸೇರಿದಂತೆ ಇನ್ನಿತರೆ ಪ್ರಮುಖ ಸ್ಮಾರ್ಟ್‌ ಡಿವೈಸ್‌ಗಳನ್ನು ಶೇಕಡಾ 40 ರಷ್ಟು ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದು. ಹಾಗಿದ್ರೆ, ಯಾವೆಲ್ಲಾ ಸ್ಮಾರ್ಟ್‌ ಡಿವೈಸ್‌ಗಳು ಎಷ್ಟು ಡಿಸ್ಕೌಂಟ್‌ ಹೊಂದಿವೆ ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಓದಿರಿ.

ಗೇಮಿಂಗ್‌ ಲ್ಯಾಪ್‌ಟಾಪ್‌ಗಳಿಗೆ ಡಿಸ್ಕೌಂಟ್‌ ಎಷ್ಟು?

ಗೇಮಿಂಗ್ ಉದ್ದೇಶಕ್ಕಾಗಿ ಲ್ಯಾಪ್‌ಟಾಪ್‌ ಖರೀದಿ ಮಾಡುವ ಗ್ರಾಹಕರು ಅಸುಸ್‌ TUF ಗೇಮಿಂಗ್ A15 ಲ್ಯಾಪ್‌ಟಾಪ್‌ ಖರೀದಿ ಮಾಡಬಹುದಾಗಿದೆ. ಈ ಲ್ಯಾಪ್‌ಟಾಪ್‌ AMD ರೈಜೆನ್ 5 4600H ಪ್ರೊಸೆಸರ್‌ ಕಾರ್ಯನಿರ್ವಹಿಸಲಿದ್ದು, ಉತ್ತಮ ಕಾರ್ಯಕ್ಷಮತೆ ಹೊಂದಿದೆ. ಅಂತೆಯೇ ಇದನ್ನು ಈ ವಿಶೇಷ ಸೇಲ್‌ನಲ್ಲಿ 49,990 ರೂ. ಗಳಿಗೆ ಖರೀದಿ ಮಾಡಬಹುದು. ಇದರೊಂದಿಗೆ ಹೆಚ್‌ಪಿ ವಿಕ್ಟಸ್ ಗೇಮಿಂಗ್ ರೈಜೆನ್ 5 ಲ್ಯಾಪ್‌ಟಾಪ್ ಅನ್ನು 53,990 ರೂ. ಗಳ ಆಫರ್‌ ಬೆಲೆಗೆ ಕೊಂಡುಕೊಳ್ಳಬಹುದಾಗಿದೆ.

ಹಾಗೆಯೇ, ಲೆನೊವೊ ಐಡಿಯಾ ಪ್ಯಾಡ್ ಗೇಮಿಂಗ್ i5 ಲ್ಯಾಪ್‌ಟಾಪ್ ಸಹ ಆಕರ್ಷಕ ರಿಯಾಯಿತಿ ಪಡೆದಿಕೊಂಡಿದ್ದು, ಈ ಲ್ಯಾಪ್‌ 67,990 ರೂ. ಗಳ ಆಫರ್‌ ಬೆಲೆಗೆ ಲಭ್ಯವಾಗಲಿದೆ. ಜೊತೆಗೆ ಏಸರ್‌ ನೈಟ್ರೋ ಗೇಮಿಂಗ್ i5 ಲ್ಯಾಪ್‌ಟಾಪ್ ಅನ್ನು ನೀವು 59,990 ರೂ.ಗಳಿಗೆ ಖರೀದಿ ಮಾಡಬಹುದು.

ಈ ಲ್ಯಾಪ್‌ಟಾಪ್‌ ಖರೀದಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್‌ಗಳು ಮತ್ತು ಇಎಮ್‌ಐ ವಹಿವಾಟುಗಳ ಸೌಲಭ್ಯ ಪಡೆದರೆ 10 ಪ್ರತಿಶತದಷ್ಟು ತ್ವರಿತ ಹೆಚ್ಚುವರಿ ರಿಯಾಯಿತಿ ಸಹ ಲಭ್ಯವಾಗಲಿದೆ.

ಅಮೆಜಾನ್‌ ಮೆಗಾ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್; ಮಿಸ್‌ ಮಾಡಿಕೊಂಡ್ರೆ ನಿಮಗೇ ನಷ್ಟ!

ಸ್ಮಾರ್ಟ್‌ವಾಚ್‌ಗಳಿಗೆ ಸಿಗುವ ಆಫರ್‌ ಏನು?

ಸ್ಮಾರ್ಟ್‌ವಾಚ್‌ಗಳು ಇಂದು ಎಲ್ಲಾ ಕಡೆ ಟ್ರೆಂಡ್‌ ಆಗಿವೆ. ಈ ಕಾರಣಕ್ಕೆ ಸಾಕಷ್ಟು ಜನ ಸ್ಮಾರ್ಟ್‌ವಾಚ್‌ಗಳನ್ನು ಖರೀದಿ ಮಾಡಲು ಹಾತೊರೆಯುತ್ತಿರುತ್ತಾರೆ. ಈ ವಿಶೇಷ ಸೇಲ್‌ನಲ್ಲಿ ಗ್ರಾಹಕರು ಆಪಲ್ ವಾಚ್ ಎಸ್‌ಇ ಯನ್ನು 26,400 ರೂ. ಗಳ ಬೆಲೆಗೆ ಖರೀದಿಸಬಹುದಾಗಿದ್ದು, ನಾಯ್ಸ್‌ ಪಲ್ಸ್‌ 2 ವಾಚ್‌ ಅನ್ನು 1,999 ರೂ. ಗಳ ಬಜೆಟ್‌ ಬೆಲೆಗೆ ಖರೀದಿ ಮಾಡಬಹುದು. ಇದರೊಂದಿಗೆ ಬೋಟ್ ವೇವ್ ಎಡ್ಜ್ ಸ್ಮಾರ್ಟ್‌ವಾಚ್ ಗೆ 2,199 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ.

ಇಯರ್‌ಬಡ್ಸ್‌ ಹಾಗೂ ಇತರೆ ಡಿವೈಸ್‌ಗಳಿಗೆ ಮತ್ತಷ್ಟು ಆಫರ್‌!

ಇನ್ನುಳಿದಂತೆ ಈ ವಿಶೇಷ ಸೇಲ್‌ ಮೂಲಕ ಗ್ರಾಹಕರು ಬೋಟ್ 170 ವಾಯರ್‌ಲೆಸ್‌ ಇಯರ್‌ಬಡ್‌ ಅನ್ನು 1,299 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ ನಾಯ್ಸ್ ಬಡ್ಸ್ ಕನೆಕ್ಟ್ ಅನ್ನು 1,499 ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ.

ಅಮೆಜಾನ್‌ ಮೆಗಾ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್; ಮಿಸ್‌ ಮಾಡಿಕೊಂಡ್ರೆ ನಿಮಗೇ ನಷ್ಟ!

ಇದರೊಂದಿಗೆ ಲಾಜಿಟೆಕ್ K480 ವಾಯರ್‌ಲೆಸ್ ಕೀಬೋರ್ಡ್ ಅನ್ನು 2,495 ರೂ. ಗಳ ಆಫರ್‌ ಬೆಲೆಗೆ ಖರೀದಿ ಮಾಡಬಹುಹುದಾಗಿದ್ದು, ಹೆಚ್‌ಪಿ w100 480P 30 FPS ಡಿಜಿಟಲ್ ವೆಬ್‌ಕ್ಯಾಮ್ ಸಹ ಆಕರ್ಷಕ ರಿಯಾಯಿತಿ ಪಡೆದುಕೊಂಡಿದೆ. ಈ ಮೂಲಕ ಗ್ರಾಹಕರು 1,999 ರೂ. ಇರುವ ಈ ಡಿವೈಸ್‌ ಅನ್ನು 399 ರೂ. ಗಳ ಆಫರ್‌ ಬೆಲೆಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ ಲಾಜಿಟೆಕ್ G502 ಹೀರೋ ಹೈ ಪರ್ಫಾರ್ಮೆನ್ಸ್ ವೈರ್ಡ್ ಗೇಮಿಂಗ್ ಮೌಸ್ ಅನ್ನು 3,995 ರೂ. ಗಳ ಬೆಲೆಗೆ ಕೊಂಡುಕೊಳ್ಳಬಹುದು.

Best Mobiles in India

English summary
Amazon announces Mega Electronics Days sale on its platform. it will be live until February 20, 2023.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+