ಅಮೆಜಾನ್‌ನಿಂದ ಬೈಕ್‌, ಕಾರು ಇನ್ಶೂರೆನ್ಸ್‍ ಸೇವೆ!..10 ನಿಮಿಷದಲ್ಲಿ ವಿಮೆ ರೆಡಿ!

|

ದೇಶದಲ್ಲಿ ಪ್ರಸ್ತುತ ಡಿಜಿಟಲ್ ಪೇಮೆಂಟ್‌ ಆಪ್‌ಗಳು/ಸೇವೆಗಳು ಹೆಚ್ಚಿನ ಬೇಡಿಕೆ ಹೊಂದುತ್ತಿವೆ. ಯುಪಿಐ ಆಪ್‌ಗಳು ಕ್ಯಾಶ್‌ಲೇಸ್‌ ವ್ಯವಹಾರಗಳಿಗೆ ಇವು ಪೂರಕವಾಗಿದ್ದು, ವಿದ್ಯುತ್ ಹಾಗೂ ನೀರಿನ ಬಿಲ್‌ ಸೇರಿದಂತೆ ಹಲವು ಬಿಲ್ ಪೇಮೆಂಟ್‌ ಸೇವೆಗಳನ್ನು ಒದಗಿಸುತ್ತಿವೆ. ಪೇಮೆಂಟ್‌ ಆಪ್ಸ್‌ಗಳಲ್ಲಿ ಅಮೆಜಾನ್‌ ಕಂಪನಿಯ ಅಮೆಜಾನ್‌ ಪೇ ಆಪ್‌ ಸಹ ಗಮನ ಸೆಳೆದಿದ್ದು, ಇದೀಗ ಹೊಸದಾಗಿ ಇನ್ಶೂರೆನ್ಸ್‍ ಸೇವೆ ಪರಿಚಯಿಸಿದೆ.

ಅಕ್ಕೊ ಜನರಲ್ ಇನ್ಶೂರೆನ್ಸ್‍

ಹೌದು, ಅಮೆಜಾನ್ ಪೇ, ಅಕ್ಕೊ ಜನರಲ್ ಇನ್ಶೂರೆನ್ಸ್‍ (Acko General Insurance) ಸಹಯೋಗದೊಂದಿಗೆ, ಈಗ ಭಾರತದಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳಿಗೆ ವಿಮಾ ಯೋಜನೆಗಳನ್ನು ನೀಡುತ್ತಿದೆ. ಈ ಹೊಸ ಸೇವೆಯೊಂದಿಗೆ ಅಮೆಜಾನ್ ದೇಶದಲ್ಲಿ ವಾಹನ ವಿಮಾ ವಲಯದಲ್ಲಿಯೂ ತನ್ನನ್ನು ಗುರುತಿಸಿಕೊಂಡಿದೆ. ಗ್ರಾಹಕರು ಪೇಪರ್‌ವರ್ಕ್ ಇಲ್ಲದೇ ಕೇವಲ ಎರಡು ನಿಮಿಷದಲ್ಲಿ ಕಾರು ಮತ್ತು ಬೈಕ್ ಇನ್ಸೂರೆನ್ಸ್‌ ಪಡೆಯಬಹುದಾಗಿದೆ ಎಂದು ಕಂಪನಿ ಹೇಳಿದೆ.

ವೇಹಿಕಲ್ ಇನ್ಸೂರೆನ್ಸ್‌

ಗ್ರಾಹಕರು ಕಾಗದಪತ್ರ ಮುಕ್ತವಾಗಿ ಅಮೆಜಾನ್ ವೇಹಿಕಲ್ ಇನ್ಸೂರೆನ್ಸ್‌ ಪಡೆಯಬಹುದಾಗಿದೆ. ಒಂದು ಗಂಟೆ ಪಿಕ್ ಅಪ್, ಮೂರು ದಿನಗಳ ಆಶ್ವಾಸಿತ ಕ್ಲೈಮ್ ಸೇವೆ ಮತ್ತು ಆಯ್ದ ನಗರಗಳಲ್ಲಿ ಒಂದು ವರ್ಷದ ದುರಸ್ತಿ ಖಾತರಿಯಂತಹ ಸೇವೆಗಳ ಆಯ್ಕೆ ಇದೆ ಎಂದು ಕಂಪನಿಯು ತಿಳಿಸಿದೆ. ಅಮೆಜಾನ್ ಪ್ರೈಮ್ ಸದಸ್ಯರು ಹೆಚ್ಚುವರಿ ರಿಯಾಯಿತಿಗಳು ಮತ್ತು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು. ಯಾವುದೇ ವಿಮಾ ಯೋಜನೆಯನ್ನು ಖರೀದಿಸುವ ಮೊದಲು ಪ್ರತಿಯೊಬ್ಬರೂ ನಿಯಮಗಳು ಮತ್ತು ಷರತ್ತುಗಳನ್ನು ಓದಲು ಸೂಚಿಸಲಾಗುತ್ತದೆ.

ಕಾರು ಮತ್ತು ಬೈಕು

ಇನ್ನು ಬಳಕೆದಾರರು ಅಮೆಜಾನ್‌ ಇನ್ಸೂರೆನ್ಸ್‌ ಅನ್ನು ಅಮೆಜಾನ್ ಪೇ ಪೇಜ್‌ನಲ್ಲಿ ಕಾಣಬಹುದು ಅಥವಾ ಸರ್ಚ್ ಬಾರ್‌ನಲ್ಲಿ ಕಾರು ಮತ್ತು ಬೈಕು ವಿಮೆಯನ್ನು ಸರ್ಚ್ ಮಾಡುವ ಮೂಲಕ ಸಹ ಕಾಣಬಹುದು. ಆಂಡ್ರಾಯ್ಡ್ ಮತ್ತು ಐಒಎಸ್ ಅಥವಾ ಮೊಬೈಲ್ ವೆಬ್‌ಸೈಟ್‌ಗಾಗಿ ಅಮೆಜಾನ್ ಮೊಬೈಲ್ ಅಪ್ಲಿಕೇಶನ್‌ಗೆ ಮಾತ್ರ ಸೇವೆ ಲಭ್ಯವಿದೆ ಎಂಬುದನ್ನು ಗಮನಿಸುವುದು ಮುಖ್ಯ.

ರಿಯಾಯಿತಿ

ವಿಶೇಷವೆಂದರೆ, ಅಮೆಜಾನ್ ಪ್ರೈಮ್ ಸದಸ್ಯರು 5,000ರೂ. ಪ್ರೀಮಿಯಂ ಮೊತ್ತದ ಇನ್ಸೂರೆನ್ಸ್ ಯೋಜನೆಗಳಲ್ಲಿ 249ರೂ. ರಿಯಾಯಿತಿ ಪಡೆಯಲಿದ್ದಾರೆ. ಇನ್ನು 5,000ರೂ. ದಿಂದ 10,000ರೂ. ವರೆಗಿನ ಇನ್ಸೂರೆನ್ಸ್‌ನಲ್ಲಿ ಪ್ರೈಮ್ ಗ್ರಾಹಕರು 499 ರೂ. ರಿಯಾಯಿತಿ ಲಭ್ಯ. ಅಂತೆಯೇ, 10,001 ರಿಂದ ರೂ. 15,000ರೂ ಮತ್ತು 15,000ರೂ, ಮೇಲ್ಪಟ್ಟ ವಿಮೆಗಳಿಗೆ ಪ್ರೈಮ್‌ ಗ್ರಾಹಕರಿಗೆ ಕ್ರಮವಾಗಿ 749ರೂ. ಮತ್ತು 999ರೂ, ಡಿಸ್ಕೌಂಟ್‌ ದೊರೆಯಲಿದೆ.

Most Read Articles
Best Mobiles in India

English summary
Amazon Introduces Auto Insurance in India. Amazon Prime members can get additional discount on premiums.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X