ಗ್ರಾಹಕರ ನಿರೀಕ್ಷೆ ಹೆಚ್ಚಿಸಿದ 'ಅಮೆಜಾನ್ ಪ್ರೈಮ್ ಡೇ'!..ಈ ಫೋನ್‌ಗಳಿಗೆ ಆಫರ್!
ಜನಪ್ರಿಯ ಇ ಕಾಮರ್ಸ್ ಜಾಲತಾಣಗಳ ಲಿಸ್ಟಿನಲ್ಲಿ ಮುಂಚೂಣಿಯಲ್ಲಿರುವ ಅಮೆಜಾನ್ ಸಂಸ್ಥೆಯು ಒಂದಿಲ್ಲೊಂದು ಆಫರ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಅದರಲ್ಲೂ ಅಮೆಜಾನ್ ಪ್ರೈಮ್ ಸದಸ್ಯರಿಗೆ ವಿಶೇಷ ಡಿಸ್ಕೌಂಟ್ ನೀಡುತ್ತಲೇ ಸಾಗಿದ್ದು, ಇದೀಗ ಮತ್ತೆ 'ಅಮೆಜಾನ್ ಪ್ರೈಮ್‌ಡೇ' ಮೂಲಕ ಗ್ರಾಹಕರಿಗೆ ದೊಡ್ಡ ರಿಯಾಯಿತಿಯ ಕೊಡುಗೆಗಳನ್ನು ನೀಡಲು ಕಂಪನಿಯು ಸಕಲ ತಯಾರಿ ಮಾಡಿಕೊಂಡಿದೆ.

ಹೌದು, ಜನಪ್ರಿಯ ಅಮೆಜಾನ್ ಇ ಕಾಮರ್ಸ್ ಜಾಲತಾಣವು ಇದೇ ಜುಲೈ 15 ರಂದು (12:01AM)'ಅಮೆಜಾನ್ ಪ್ರೈ ಡೇ' ಮೇಳವನ್ನು ಆರಂಭಿಸಲಿದ್ದು ಈ ಮೇಳವು ಇದೇ ಜುಲೈ 16 ರಂದು(11:59PM) ಕೊನೆಯಾಗಲಿದೆ. ಈ ಮೇಳದಲ್ಲಿ ಆಯ್ದ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿಯ ಪ್ರಯೋಜನಗಳು 'ಪ್ರೈಮ್' ಗ್ರಾಹಕರಿಗೆ ಲಭ್ಯವಾಗಲಿವೆ. ಹಾಗಾದರೇ ಮೇಳದಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಡಿಸ್ಕೌಂಟ್ ಆಫರ್ ಇರಲಿವೆ ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

ಆಪಲ್ ಐಫೋನ್ XR (64GB)
ಇತ್ತೀಚಿಗೆ ಬೆಲೆ ಇಳಿಕೆ ಕಂಡಿರುವ ಆಪಲ್ ಐಫೋನ್ ಎಕ್ಸ್‌ಆರ್ ಸ್ಮಾರ್ಟ್‌ಫೋನ್ ಸದ್ಯ ಇ ಕಾಮರ್ಸ್ ಅಮೆಜಾನ್‌ನಲ್ಲಿ 58,900ರೂ.ಗಳಿಗೆ ಲಭ್ಯವಿದೆ. 64GB ಸ್ಟೋರೇಜ್ ಸ್ಥಳಾವಕಾಶವನ್ನು ಒಳಗೊಂಡಿರುವ ಈ ಐಫೋನ್ ಬರುವ ಅಮೆಜಾನ್ ಪ್ರೈಮ್ ಡೇ ಮೇಳದಲ್ಲಿ ಮತ್ತಷ್ಟು ಡಿಸ್ಕೌಂಟ್ ಬೆಲೆಯಲ್ಲಿ ಅಮೆಜಾನ್ ಪ್ರೈಮ್ ಗ್ರಾಹಕರಿಗೆ ದೊರೆಯುವ ಸಾಧ್ಯತೆಗಳು ಹೆಚ್ಚಿವೆ.

ಆಪಲ್ ಐಫೋನ್ X
ಆಪಲ್ ಸಂಸ್ಥೆಯ ಜನಪ್ರಿಯ ಐಫೋನ್ ಮಾದರಿ OLED ಡಿಸ್‌ಪ್ಲೇಯ 'ಐಫೋನ್ X' ಗೂ ಅಮೆಜಾನ್ ಪ್ರೈಮ್ ಡೇ ಮೇಳದಲ್ಲಿ ಬಾರಿ ಡಿಸ್ಕೌಂಟ್ ದೊರೆಯುವ ನಿರೀಕ್ಷೆಗಳು ಹೆಚ್ಚಿವೆ. ಇ ಕಾಮರ್ಸ್ ದೈತ್ಯ ಅಮೆಜಾನ್ ಜಾಲತಾಣದಲ್ಲಿ ಸದ್ಯ ಐಫೋನ್ X 64GB ವೇರಿಯಂಟ್ ಮಾದರಿಯ ಆರಂಭಿಕ ಬೆಲೆಯು 68,999ರೂ.ಗಳು ಆಗಿದೆ.

ಒನ್‌ಪ್ಲಸ್ 7 ಪ್ರೊ
ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್ ಸಹ ಅಮೆಜಾನ್ ಪ್ರೈಮ್ ಡೇ ಮೇಳದಲ್ಲಿ ಅತ್ಯುತ್ತಮ ಡಿಸ್ಕೌಂಡ್‌ನಲ್ಲಿ ಲಭ್ಯವಾಗುವ ಸಾಧ್ಯತೆಗಳಿವೆ. ಪ್ರಸ್ತುತ ಈ ಸ್ಮಾರ್ಟ್‌ಫೋನ್ 3120x1440 ಪಿಕ್ಸಲ್ ರೆಸಲ್ಯೂಶನ್ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು 6.67 ಇಂಚಿನ ಗಾತ್ರ ಹೊಂದಿದೆ. ಆರಂಭಿಕ ಬೆಲೆಯು 48,999ರೂ.ಗಳು ಆಗಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ50
ಸ್ಯಾಮ್‌ಸಂಗ್ ಇತ್ತೀಚಿಗೆ ಬಿಡುಗಡೆ ಮಾಡಿರುವ ಗ್ಯಾಲ್ಯಾಕ್ಸಿ ಎ50 ಸ್ಮಾರ್ಟ್‌ಫೋನ್ ಸಹ ವಿಶೇಷ ಡಿಸ್ಕೌಂಟ್ ಬೆಲೆಯಲ್ಲಿ ಪ್ರೈಮ್ ಗ್ರಾಹಕರಿಗೆ ಲಭ್ಯವಾಗುವ ನಿರೀಕ್ಷೆಗಳಿವೆ. ಈ ಸ್ಮಾರ್ಟ್‌ಫೋನ್ ತ್ರಿವಳಿ ರಿಯರ್ ಕ್ಯಾಮೆರಾ ಸೆಟ್‌ಅಪ್ ಸೌಲಭ್ಯವನ್ನು ಹೊಂದಿದ್ದು, 4000mAh ಬ್ಯಾಟರಿ ಫೀಚರ್ಸ್ ಹೊಂದಿದೆ. ಆರಂಭಿಕ ಬೆಲೆಯು 19,990ರೂ.ಗಳು ಆಗಿದೆ.

ಒಪ್ಪೊ ಎಫ್11 ಪ್ರೊ
ಒಪ್ಪೊ ಕಂಪನಿಯ ಪಾಪ್‌ಅಪ್ ಸೆಲ್ಫಿ ವಿಶೇಷತೆಯ ಈ ಸ್ಮಾರ್ಟ್‌ಫೋನ್ ಅಮೆಜಾನ್ ಪ್ರೈಮ್ ಡೇ ಮೇಳದಲ್ಲಿ ರಿಯಾಯಿತಿ ದರದಲ್ಲಿ ಗ್ರಾಹಕರ ಕೈ ಸೇರುವ ಸಾಧ್ಯತೆಗಳು ಅಧಿಕವಾಗಿವೆ. ಈ ಫೋನ್ 4000mAh ಬ್ಯಾಟರಿ ಬಾಳಿಕೆಯ ಶಕ್ತಿಯೊಂದಿಗೆ 48ಎಂಪಿ+5ಎಂಪಿ ರಿಯರ್ ಕ್ಯಾಮೆರಾ ಫೀಚರ್ಸ್‌ಗಳಿಂದ ಗಮನಸೆಳೆದಿದ್ದು, ಇದರ ಆರಂಭಿಕ ಬೆಲೆಯು 24,990ರೂ.ಗಳು ಆಗಿದೆ.


Click it and Unblock the Notifications








