Home
ಸುದ್ದಿಜಾಲ

ಅಮೆಜಾನ್‌ ಪ್ರೈಮ್‌ ಡೇ 2021 ಸೇಲ್ ಡೇಟ್‌ ಫಿಕ್ಸ್‌!

ಜನಪ್ರಿಯ ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ತನ್ನ ಆನ್‌ಲೈನ್‌ ಗ್ರಾಹಕರಿಗೆ ವಿಶೇಷ ರಿಯಾಯಿತಿ ಸೇಲ್‌ಗಳನ್ನು ನೀಡುತ್ತಲೇ ಬಂದಿದೆ. ಹಬ್ಬ ಹರಿದಿನಗಳು, ವಿಕೆಂಡ್‌, ಮಂತ್‌ಎಂಡ್‌ ಸೇಲ್‌ಗಳನ್ನು ಆಯೋಜಿಸುತ್ತಾ ಬಂದಿದೆ. ಇನ್ನು ಈ ವಿಶೇಷ ಸೇಲ್‌ಗಳಲ್ಲಿ ಗ್ರಾಹಕರು ಭರ್ಜರಿ ಡಿಸ್ಕೌಂಟ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಸದ್ಯ ಇದೀಗ ಅಮೆಜಾನ್‌ ಪ್ರೈಮ್‌ ಡೇ 2021 ಸೇಲ್‌ ಇದೇ ಜುಲೈ 26 ರ ಸೋಮವಾರದಿಂದ ಪ್ರಾರಂಭವಾಗಲಿದೆ. ಇದು ಒಂದು ದಿನದ ನಂತರ ಜುಲೈ 27 ರಂದು ಕೊನೆಗೊಳ್ಳಲಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಪ್ರೈಮ್‌ ಡೇ 2021 ಸೇಲ್‌ ಇದೇ ಜುಲೈ 26 ರಂದು ಆಯೋಜಿಸಲಾಗಿದೆ. ಪ್ರತಿವರ್ಷದಂತೆಯೇ, ಈ ಭಾರಿ ಕೂಡ ಅಮೆಜಾನ್‌ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಬಹಳಷ್ಟು ವಿಶೇಷ ವ್ಯವಹಾರಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ವರ್ಷ, ಗ್ರಾಹಕರು ಸ್ಮಾರ್ಟ್‌ಫೋನ್‌ಗಳು, ಧರಿಸಬಹುದಾದ ಸಾಧನಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಇತರ ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ವಸ್ತುಗಳು ಮುಂತಾದ ವಿಭಾಗಗಳಲ್ಲಿ ರಿಯಾಯಿತಿಯನ್ನು ನಿರೀಕ್ಷಿಸಬಹುದು. ಹಾಗಾದ್ರೆ ಅಮೆಜಾನ್‌ ಪ್ರೈಮ್‌ ಡೇ 2021 ಸೇಲ್‌ನಲ್ಲಿ ಯಾವೆಲ್ಲಾ ಪ್ರಾಡಕ್ಟ್‌ಗಳ ಮೇಲೆ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ರೈಮ್‌

ಕಂಪನಿಯ ಪ್ರೈಮ್‌ ಪ್ಲ್ಯಾನ್‌ ಉತ್ತೇಜಿಸುವ ಮೂಲಕ ಹೆಚ್ಚಿನ ಬಳಕೆದಾರರು ಪಾವತಿಸಿದ ಸೇವೆಗೆ ಸೈನ್ ಅಪ್ ಮಾಡಲು ಪ್ರೋತ್ಸಾಹಿಸಲು ಅಮೆಜಾನ್ ಪ್ರೈಮ್ ಡೇ ಸೇಲ್‌ ಅನ್ನು ಪ್ರತಿವರ್ಷ ನಡೆಸಲಾಗುತ್ತದೆ. ಅಮೆಜಾನ್ ಪ್ರೈಮ್ ಸದಸ್ಯರಿಗೆ ಆಪಲ್, ಸ್ಯಾಮ್‌ಸಂಗ್, ಐಕ್ಯೂಒ, ರೆಡ್‌ಮಿ ಮತ್ತು ಅಮೆಜಾನ್‌ನ ಸ್ವಂತ ಎಕೋ ಡಿವೈಸ್‌ಗಳಾದ ಫೈರ್ ಟಿವಿ ಮತ್ತು ಕಿಂಡಲ್‌ನಿಂದ ಡಿವೈಸ್‌ಗಳಲ್ಲಿ ವಿಶೇಷ ರಿಯಾಯಿತಿಯನ್ನು ಪಡೆಯುವ ಹಕ್ಕನ್ನು ಇದು ಅನುಮತಿಸುತ್ತದೆ.

ಅಮೆಜಾನ್ ಪ್ರೈಮ್ ಡೇ ಸೇಲ್‌

ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ಮಿ 11X, ಮಿ 10 ಐ, ಐಫೋನ್ 12, ಐಫೋನ್ 12 ಪ್ರೊ, ಐಫೋನ್ 11, ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 51 , ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20, ಐಕ್ಯೂಒ 7 ಮತ್ತು ರೆಡ್‌ಮಿ ನೋಟ್ 10 ಪ್ರೊ ಮ್ಯಾಕ್ಸ್ ಪ್ರೈಮ್‌ ಡೇ ದಿನದಂದು ದೊಡ್ಡ ಬೆಲೆ ಕಡಿತವನ್ನು ಪಡೆಯುವ ನಿರೀಕ್ಷೆಯಿದೆ. ಸ್ಮಾರ್ಟ್‌ಫೋನ್‌ ವಿನಿಮಯ ಕೊಡುಗೆಗಳು ಮಾರಾಟದ ಸಮಯದಲ್ಲಿ ಹೆಚ್ಚುವರಿ ರಿಯಾಯಿತಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ. ಸ್ಮಾರ್ಟ್‌ಫೋನ್‌ಗಳ ಹೊರತಾಗಿ, ಲ್ಯಾಪ್‌ಟಾಪ್‌ಗಳು, ಧರಿಸಬಹುದಾದ ಸಾಧನಗಳು ಮತ್ತು ಫಿಟ್‌ನೆಸ್ ಟ್ರ್ಯಾಕರ್‌ಗಳು, ಸ್ಪೀಕರ್‌ಗಳು ಮತ್ತು ಇತರ ಆಡಿಯೊ ಸಾಧನಗಳು ಮತ್ತು ಹೆಚ್ಚಿನವುಗಳಲ್ಲಿ ರಿಯಾಯಿತಿಯನ್ನು ಗ್ರಾಹಕರು ನಿರೀಕ್ಷಿಸಬಹುದು.

ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆದಾರರಿಗೆ ಅನುಕೂಲ

ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆದಾರರಿಗೆ ಅನುಕೂಲ

ನೀವು ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆದಾರರಾಗಿದ್ದರೆ, ಪ್ರೈಮ್ ಡೇ ಸೇಲ್‌ ಸಮಯದಲ್ಲಿ ಮಾಡಿದ ಖರೀದಿಗಳ ಮೇಲೆ ತ್ವರಿತ ಶೇಕಡಾ 10 ರಷ್ಟು ರಿಯಾಯಿತಿ ಪಡೆಯಲು ನಿಮಗೆ ಸಾಧ್ಯವಾಗುತ್ತದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುದಾರರು ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಹೊಂದಿರುವವರೆಗೆ ಈ ಕೊಡುಗೆಯನ್ನು ಪಡೆಯಬಹುದು.

ನಾನ್‌ ಪ್ರೈಮ್‌ ಸದಸ್ಯರಿಗೆ ಆಯ್ಕೆಗಳು

ನಾನ್‌ ಪ್ರೈಮ್‌ ಸದಸ್ಯರಿಗೆ ಆಯ್ಕೆಗಳು

ಅಮೆಜಾನ್ ಪ್ರೈಮ್ ಸದಸ್ಯತ್ವಕ್ಕೆ ಒಂದು ವರ್ಷಕ್ಕೆ 999ರೂ, ಖರ್ಚಾಗುತ್ತದೆ. ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಹೊಂದಿರದ ಅನೇಕ ಬಳಕೆದಾರರು ಮೂರು ತಿಂಗಳವರೆಗೆ ಮಾನ್ಯವಾಗಿರುವ 329ರೂ ಯೋಜನೆಯನ್ನು ಅವರು ಪಡೆಯಬಹುದು. ಇದು ಪ್ರೈಮ್‌ ಡೇ ಸೇಲ್‌ ಸಮಯದಲ್ಲಿ ಒಪ್ಪಂದಗಳನ್ನು ಪ್ರವೇಶಿಸಲು ಮತ್ತು ರಿಯಾಯಿತಿಯ ಲಾಭವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

Best Mobiles in India

English summary
Amazon Prime Day 2021 sale date: The sale will begin on July 26, bringing exclusive discounts for Prime members.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+