Home
ಸುದ್ದಿಜಾಲ

Amazon Prime Day 2023: ಈ ಸ್ಮಾರ್ಟ್‌ಟಿವಿಗಳಿಗೆ ಭರ್ಜರಿ ಆಫರ್‌!

ನೀವೇನಾದರೂ ಸ್ಮಾರ್ಟ್‌ಟಿವಿ ಖರೀದಿ ಮಾಡಲು ಮುಂದಾಗಿದ್ರೆ ಇದು ಅತ್ಯುತ್ತಮ ಸಮಯವಾಗಿದೆ. ಯಾಕೆಂದರೆ ಅಮೆಜಾನ್ ಪ್ರೈಮ್ ಡೇ 2023 ಆರಂಭ ಆಗಿದ್ದು, ಇದರಲ್ಲಿ ಇತರೆ ಸ್ಮಾರ್ಟ್‌ ಡಿವೈಸ್‌ಗಳಂತೆ ಸ್ಮಾರ್ಟ್‌ಟಿವಿಗಳಿಗೂ ಸಹ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ.

ಹೌದು, ಅಮೆಜಾನ್‌ನ ವಾರ್ಷಿಕ ಪ್ರೈಮ್ ಡೇ 2023 ಸೇಲ್‌ ಇದೀಗ ಲೈವ್ ಆಗಿದ್ದು, ಇದರಲ್ಲಿ ಈ ಸ್ಮಾರ್ಟ್‌ಟಿವಿಗಳ ಮೇಲೆ 65% ವರೆಗೂ‌ ಡಿಸ್ಕೌಂಟ್ ನೀಡಲಾಗಿದೆ. ಇದರೊಂದಿಗೆ ಮೊಬೈಲ್ ಫೋನ್‌ಗಳ ಮೇಲೆ 40%, ಲ್ಯಾಪ್‌ಟಾಪ್‌ ಮೇಲೆ 40,000 ರೂಪಾಯಿಗಳವರೆಗೆ ಮತ್ತು ಹೆಡ್‌ಫೋನ್‌ಗಳು ಮತ್ತು ಸ್ಪೀಕರ್‌ಗಳ ಮೇಲೆ ಶೇಕಡಾ 80% ಡಿಸ್ಕೌಂಟ್‌ ನೀಡಲಾಗುತ್ತಿದೆ. ಇದರೊಂದಿಗೆ ಇತರೆ ಬ್ಯಾಂಕ್‌ ಕಾರ್ಡ್‌ಗಳ ಮೇಲೆ 10% ರಿಯಾಯಿತಿ ನೀಡಲಾಗುತ್ತದೆ.

Amazon Prime Day 2023: ಈ ಸ್ಮಾರ್ಟ್‌ಟಿವಿಗಳಿಗೆ ಭರ್ಜರಿ ಆಫರ್‌!

ರೆಡ್ಮಿ ಸ್ಮಾರ್ಟ್‌ಟಿವಿ: ರೆಡ್ಮಿಯ 43 ಇಂಚಿನ 4K ಅಲ್ಟ್ರಾ ಹೆಚ್‌ಡಿ ಆಂಡ್ರಾಯ್ಡ್ ಸ್ಮಾರ್ಟ್ LED TV X43 ಟಿವಿ ಇನ್‌ಬಿಲ್ಟ್‌ ಕ್ರೋಮಾಕಾಸ್ಟ್‌, ಡಾಲ್ಬಿ ವಿಷನ್‌ಗೆ ಬೆಂಬಲ ಹೊಂದಿದ್ದು, ಡ್ಯುಯಲ್-ಬ್ಯಾಂಡ್ ವೈ ಫೈ ಮತ್ತು ಸಂಪರ್ಕಕ್ಕಾಗಿ ಬ್ಲೂಟೂತ್ ಆವೃತ್ತಿ 5.0 ನೊಂದಿಗೆ HDR10 ಗೆ ಬೆಂಬಲದಂತಹ ಆಸಕ್ತಿದಾಯಕ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ವಿನಿಮಯ ಆಫರ್‌ ಸಹ ಲಭ್ಯ ಇದ್ದು, ನೋ-ಕಾಸ್ಟ್-ಇಎಂಐ ಆಯ್ಕೆ ಸಹ ಲಭ್ಯ.

ಒನ್‌ಪ್ಲಸ್ ಸ್ಮಾರ್ಟ್‌ಟಿವಿ: ಒನ್‌ಪ್ಲಸ್‌ 50 ಇಂಚಿನ Y ಸರಣಿ 4K ಅಲ್ಟ್ರಾ HD ಸ್ಮಾರ್ಟ್ ಆಂಡ್ರಾಯ್ಡ್ LED ಟಿವಿ ಸಹ ಈ ಸೇಲ್‌ನಲ್ಲಿ ಭರ್ಜರಿ ಆಫರ್‌ ನೀಡಲಾಗಿದ್ದು, ಈ ಫೋನ್‌ ಗೂಗಲ್ ಅಸಿಸ್ಟೆಂಟ್‌, ಇನ್‌ಬಿಲ್ಟ್‌ ಕ್ರೋಮಾಕಾಸ್ಟ್‌, ಮಿರಕಾಸ್ಟ್‌ ಬೆಂಬಲ ಹಾಗೂ ಆಟೋ ಲೋ ಲೇಟೆನ್ಸಿ ಮೋಡ್‌ನಂತಹ ಆಕರ್ಷಕ ಫೀಚರ್ಸ್‌ ಅನ್ನು ಈ ಸ್ಮಾರ್ಟ್‌ಟಿವಿ ಹೊಂದಿದೆ. ಇದರೊಂದಿಗೆ HDR10+ ಮತ್ತು HDR10 ಡಿಸ್‌ಪ್ಲೇ ಅಲ್ಗಾರಿದಮ್‌ಗಳನ್ನು ಸಹ ಈ ಟಿವಿ ಬೆಂಬಲಿಸಲಿದೆ. ಐಸಿಐಸಿಐ, ಎಸ್‌ಬಿಐ ಬ್ಯಾಂಕ್ ಕಾರ್ಡ್‌ ಮೇಲೆ 10 ರಿಯಾಯಿತಿ ಲಭ್ಯ ಇದೆ.

ಸೋನಿ ಬ್ರಾವಿಯಾ: ಸೋನಿಯ 55 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ LED ಗೂಗಲ್‌ ಟಿವಿಗೂ ವಿಶೇಷ ಆಫರ್‌ ಇದ್ದು, ಈ ಟಿವಿ ವಾಯ್ಸ್‌ ಸರ್ಚ್‌, ಗೂಗಲ್ ಪ್ಲೇ, ಕ್ರೋಮ್‌ಕಾಸ್ಟ್, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಆಪಲ್ ಏರ್‌ಪ್ಲೇ ಮತ್ತು ಅಲೆಕ್ಸಾದಂತಹ ವಿವಿಧ ಫೀಚರ್ಸ್‌ನೊಂದಿಗೆ ಪ್ಯಾಕ್‌ ಆಗಿದೆ. ಅದರಲ್ಲೂ ವಿನಿಮಯ ಆಫರ್‌ ಸಹ ಲಭ್ಯ ಇದ್ದು, 18 ತಿಂಗಳವರೆಗೆ ನೋ ಕಾಸ್ಟ್‌ ಇಎಮ್‌ಐ ಆಯ್ಕೆ ಸಹ ಇದೆ.

ರೆಡ್ಮಿ ಸ್ಮಾರ್ಟ್‌ಟಿವಿ: ರೆಡ್ಮಿಯ ಮತ್ತೊಂದು ಸ್ಮಾರ್ಟ್‌ಟಿವಿಯಾದ 32 ಇಂಚಿನ HD ರೆಡಿ ಸ್ಮಾರ್ಟ್ LED ಫೈರ್ ಟಿವಿ ಡಾಲ್ಬಿ ಆಡಿಯೋ, ಡಿಟಿಎಸ್‌ ವರ್ಚುವಲ್: ಎಕ್ಸ್‌ ಮತ್ತು ಡಿಟಿಎಸ್‌ ಹೆಚ್‌ಡಿ ಆಡಿಯೋ, ಬಿಲ್ಟ್-ಇನ್ ಫೈರ್ ಟಿವಿ ಮತ್ತು ಅಲೆಕ್ಸಾ ಜೊತೆಗೆ ವಾಯ್ಸ್ ರಿಮೋಟ್‌ ಸೇರಿದಂತೆ ವಿವಿಧ ಫೀಚರ್ಸ್‌ನಿಂದ ಪ್ಯಾಕ್‌ ಆಗಿದೆ. ಈ ಟಿವಿ ಮೇಲೆ ವಿನಿಮಯ ಕೊಡುಗೆಗಳ ಜೊತೆಗೆ ನೋ-ಕಾಸ್ಟ್ ಇಎಮ್‌ಐ ಅನ್ನು ಆಯ್ಕೆ ಸಹ ಇದೆ.

ಏಸರ್‌ ಸ್ಮಾರ್ಟ್‌ಟಿವಿ: ಈ ಸ್ಮಾರ್ಟ್‌ಟಿವಿ 55 ಇಂಚಿನ ಸುಧಾರಿತ I ಸರಣಿ 4K ಅಲ್ಟ್ರಾ HD ಸ್ಮಾರ್ಟ್ LED ಗೂಗಲ್‌ ಟಿವಿ ಇನ್‌ಬಿಲ್ಟ್‌ ಕ್ರೋಮ್‌ಕಾಸ್ಟ್‌, ಗೂಗಲ್‌ಟಿವಿ ಬೆಂಬಲ ಮತ್ತು ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಯೂಟ್ಯೂಬ್ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ಗೆ ತ್ವರಿತ ಪ್ರವೇಶ ನೀಡುತ್ತದೆ. ಉಳಿದಂತೆ ರಿಯಾಯಿತಿ ಬೆಲೆ ಮತ್ತು ವಿನಿಮಯ ಕೊಡುಗೆಗಳೊಂದಿಗೆ ನಾಲ್ಕು ವರ್ಷಗಳ ವಾರಂಟಿಯನ್ನು ನೀಡಲಾಗುತ್ತದೆ.

Amazon Prime Day 2023: ಈ ಸ್ಮಾರ್ಟ್‌ಟಿವಿಗಳಿಗೆ ಭರ್ಜರಿ ಆಫರ್‌!

ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿ: ಸ್ಯಾಮ್‌ಸಂಗ್‌ನ 55 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ ಎಲ್‌ಇಡಿ ಟಿವಿ ಕ್ಯೂ-ಸಿಂಫನಿ ಸ್ಪೀಕರ್‌ಗಳು ಮತ್ತು ಆಡಿಯೊ ಮತ್ತು 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಎಲ್‌ಇಡಿ ಪ್ಯಾನಲ್, ಕ್ರಿಸ್ಟಲ್ ಪ್ರೊಸೆಸರ್ 4K, ಡೈನಾಮಿಕ್ ಕ್ರಿಸ್ಟಲ್ ಕಲರ್, ಹೆಚ್‌ಡಿಆರ್‌ 10+ ಮತ್ತು ಪ್ರದರ್ಶನಕ್ಕಾಗಿ ಮೋಷನ್ ಎಕ್ಸ್‌ಸಲೇಟರ್‌ಗಾಗಿ ಅಡಾಪ್ಟಿವ್ ಸೌಂಡ್ ಫೀಚರ್ಸ್‌ ಪಡೆದಿದೆ. ಈ ಟಿವಿಯ ವಿನಿಮಯ ಆಫರ್‌ನಲ್ಲಿ 10,000 ಹೆಚ್ಚುವರಿ ರಿಯಾಯಿತಿ ಸಹ ಲಭ್ಯ.

Best Mobiles in India

English summary
Amazon's annual Prime Day 2023 sale is now live, offering discounts of up to 65% on these smart TVs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+