48 ಗಂಟೆಗಳ 'ಅಮೆಜಾನ್ ಪ್ರೈಮ್‌ ಡೇ' ಸೇಲ್ ಶುರು!..ಈ ಫೋನ್‌ಗಳಿಗೆ ಬೆಸ್ಟ್‌ ಆಫರ್‌!

|

ಗ್ರಾಹಕರು ಉತ್ಪನ್ನಗಳನ್ನು ಖರೀದಿಸಲು ಇ ಕಾಮರ್ಸ್‌ಗಳತ್ತ ಹೆಚ್ಚು ಗಮನ ನೀಡುತ್ತಿದ್ದು, ಅದರಲ್ಲೂ ಗ್ಯಾಜೆಟ್‌ ಉತ್ಪನ್ನಗಳನ್ನು ಕೊಳ್ಳುವವರು ಫ್ಲಿಪ್‌ಕಾರ್ಟ್‌ ಅಥವಾ ಅಮೆಜಾನ್ ತಾಣಗಳನ್ನು ಜಾಲಾಡುತ್ತಿರುತ್ತಾರೆ. ನಿವೇನಾದ್ರು ಆನ್‌ಲೈನ್‌ ಮೂಲಕ ಸ್ಮಾರ್ಟ್‌ಫೋನ್‌ ಖರೀದಿಸುವ ಆಸಕ್ತಿ ಹೊಂದಿದ್ದರೇ ಈ ಕೂಡಲೇ ಅಮೆಜಾನ್ ತಾಣಕ್ಕೆ ಭೇಟಿ ನೀಡಿ. ಏಕೆಂದರೇ ಅಮೆಜಾನ್ ಭರ್ಜರಿ ಡಿಸ್ಕೌಂಟ್‌ ನೀಡುತ್ತಿದೆ.

48 ಗಂಟೆಗಳ 'ಅಮೆಜಾನ್ ಪ್ರೈಮ್‌ ಡೇ' ಸೇಲ್ ಶುರು!..ಈ ಫೋನ್‌ಗಳಿಗೆ ಬೆಸ್ಟ್‌ ಆಫರ್‌!

ಹೌದು, ಇ ಕಾಮರ್ಸ್‌ ಅಮೆಜಾನ್‌ನ ತಾಣವು ಎರಡು ದಿನಗಳ 'ಅಮೆಜಾನ್ ಪ್ರೈಮ್‌ ಡೇ' ಆಯೋಜಿಸಿದೆ. ಈ ಮೇಳವು ಇದೇ ಜುಲೈ 15ರಂದು (12AM) ಆರಂಭವಾಗಿದ್ದು, ಇದೇ ಜುಲೈ 16ರ ವರೆಗೂ ನಡೆಯಲಿದೆ. ಕೇವಲ 48 ಗಂಟೆಗಳ ಈ ಎಕ್ಸ್‌ಕ್ಲ್ಯೂಸಿವ್‌ ಮೇಳದಲ್ಲಿ ಎಲ್ಲ ಬಗೆಯ ಉತ್ಪನ್ನಗಳಿಗೆ ಡಿಸ್ಕೌಂಟ್‌ ಲಭವಿದ್ದು, ಹಾಗೆಯೇ ಭಾರಿ ದೊಡ್ಡ ರಿಯಾಯಿತಿಯಲ್ಲಿ ಸ್ಮಾರ್ಟ್‌ಫೋನ್‌ಗಳು ದೊರೆಯಲಿವೆ.

48 ಗಂಟೆಗಳ 'ಅಮೆಜಾನ್ ಪ್ರೈಮ್‌ ಡೇ' ಸೇಲ್ ಶುರು!..ಈ ಫೋನ್‌ಗಳಿಗೆ ಬೆಸ್ಟ್‌ ಆಫರ್‌!

ಈಗಾಗಲೇ ಆರಂಭವಾಗಿರುವ 'ಅಮೆಜಾನ್‌ ಪ್ರೈಮ್‌' ಮೇಳದಲ್ಲಿ ಸ್ಯಾಮ್‌ಸಂಗ್‌, ನೋಕಿಯಾ, ಹುವಾವೆ, ಒನ್‌ಪ್ಲಸ್ ಮತ್ತು ಶಿಯೋಮಿ ಕಂಪನಿಗಳ ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ಡಿಸ್ಕೌಂಟ್‌ ದೊರೆಯಲಿದೆ. ಅಮೆಜಾನ್‌ ಪ್ರೈಮ್‌ ಸದಸ್ಯರು ಈ ಕೊಡುಗೆಯ ಪ್ರಯೋಜನ ಪಡೆದುಕೊಳ್ಳಲು ಇದೊಂದು ಒಳ್ಳೆಯ ಅವಕಾಶ. ಹಾಗಾದರೇ ಅಮೆಜಾನ್ ಪ್ರೈಮ್‌ ಮೇಳದಲ್ಲಿ ಬೆಸ್ಟ್‌ ಡೀಲ್‌ನಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಓದಿರಿ : BSNL ಬಿಗ್‌ ಆಫರ್‌!..ಬ್ರಾಡ್‌ಬ್ಯಾಂಡ್‌ ಜೊತೆ ಅಮೆಜಾನ್ ಪ್ರೈಮ್‌ ಸದಸ್ಯತ್ವ ಉಚಿತ!ಓದಿರಿ : BSNL ಬಿಗ್‌ ಆಫರ್‌!..ಬ್ರಾಡ್‌ಬ್ಯಾಂಡ್‌ ಜೊತೆ ಅಮೆಜಾನ್ ಪ್ರೈಮ್‌ ಸದಸ್ಯತ್ವ ಉಚಿತ!

ಹುವಾವೆ ಪಿ30 ಪ್ರೊ

ಹುವಾವೆ ಪಿ30 ಪ್ರೊ

ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್‌ ಹೆಗ್ಗಳಕೆಯ ಹುವಾವೆ ಹುವಾವೆ ಪಿ30 ಪ್ರೊ ಬೆಲೆಯು 79,990ರೂ.ಗಳು ಆಗಿದ್ದು, ಆದರೆ ಈ ಮೇಳದಲ್ಲಿ 63,990ರೂ.ಗಳಿಗೆ ಲಭ್ಯವಾಗಲಿದೆ. ಇದರೊಂದಿಗೆ 22,990ರೂ.ಗಳ ಹುವಾವೆ GT ಸ್ಮಾರ್ಟ್‌ವಾಚ್‌ ಉಚಿತವಾಗಿ ದೊರೆಯಲಿದೆ. 8GB RAM ಮತ್ತು 256GB ಸ್ಟೋರೇಜ್‌ ಆಯ್ಕೆ ಹೊಂದಿದ್ದು, 6.47 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ OLED ಡಿಸ್‌ಪ್ಲೇ ಒಳಗೊಂಡಿದೆ.

ಒನ್‌ಪ್ಲಸ್‌ 6T

ಒನ್‌ಪ್ಲಸ್‌ 6T

ಫ್ಲ್ಯಾಗ್‌ಶಿಪ್‌ ಮಾದರಿಯಲ್ಲಿ ಬೆಸ್ಟ್‌ ಸ್ಮಾರ್ಟ್‌ಫೋನ್‌ ಎಂದೆನಿಸಿಕೊಂಡಿರುವ ಒನ್‌ಪ್ಲಸ್‌ 6T ಫೋನ್‌ 6.41 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, 6GB/8GB RAM, ಮತ್ತು 128GB/256GB ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಅವುಗಳಲ್ಲಿ 8GB/128GB ವೇರಿಯಂಟ್‌ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಬೆಲೆಯು 41,999ರೂ ಆಗಿದ್ದು, ಮೇಳದಲ್ಲಿ 27,999ರೂ.ಗಳಿಗೆ ದೊರೆಯಲಿದೆ.

ಓದಿರಿ : ಫೇಸ್‌ಬುಕ್‌ಗೆ ಆಘಾತ ನೀಡಿದ ಗೂಗಲ್‌ನ ಹೊಸ 'ಶೂಲೆಸ್'‌ ಆಪ್‌! ಓದಿರಿ : ಫೇಸ್‌ಬುಕ್‌ಗೆ ಆಘಾತ ನೀಡಿದ ಗೂಗಲ್‌ನ ಹೊಸ 'ಶೂಲೆಸ್'‌ ಆಪ್‌!

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ50

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ50

ಸ್ಮಾರ್ಟ್‌ಫೋನ್‌ ಪ್ರಿಯರ ಮನಗೆದ್ದಿರುವ 'ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ50' ಫೋನ್ 6.4 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ AMOLED ಇನ್‌ಫಿನಿಟಿ-U ಡಿಸ್‌ಪ್ಲೇಯನ್ನು ಹೊಂದಿದ್ದು, 4,000mAh ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿದೆ. 21,490ರೂ.ಗಳಿಗೆ ಮೇಳದಲ್ಲಿ ಈ ಫೋನ್‌ ದೊರೆಯಲಿದ್ದು, ಜೊತೆಗೆ 4GB/6GB RAM ಮತ್ತು 64GB ಸ್ಟೋರೇಜ್‌ ವೇರಿಯಂಟ್‌ಗಳಿಗೆ ಮೇಳದಲ್ಲಿ 2,500ರೂ.ಗಳ ಬೆಸ್ಟ್‌ ಎಕ್ಸ್‌ಚೇಂಜ್ ಆಫರ್‌ ಇದೆ.

ಶಿಯೋಮಿ ಮಿ ಎ2

ಶಿಯೋಮಿ ಮಿ ಎ2

ಜನಪ್ರಿಯ 'ಶಿಯೋಮಿ ಮಿ ಎ2' ಸ್ಮಾರ್ಟ್‌ಫೋನಿನ 6GB/128GB ವೇರಿಯಂಟ್ 20,500ರೂ.ಗಳ ಪ್ರೈಸ್‌ಟ್ಯಾಗ್‌ ಹೊಂದಿದ್ದು, ಆಫರ್‌ನಲ್ಲಿ 15,999ರೂ.ಗಳಿಗೆ ಲಭ್ಯವಾಗಲಿದೆ. ಜೊತೆಗೆ ಎಕ್ಸ್‌ಚೇಂಜ್ ರಿಯಾಯಿತಿ ಸಹ ದೊರೆಯಲಿದೆ. 5.99 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಓದಿರಿ : ಜೈಲು ಊಟ ಸವಿಯಬೇಕೆ?..ಹಾಗಿದ್ರೆ ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಿ! ಓದಿರಿ : ಜೈಲು ಊಟ ಸವಿಯಬೇಕೆ?..ಹಾಗಿದ್ರೆ ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಿ!

ನೋಕಿಯಾ 6.1 ಪ್ಲಸ್‌

ನೋಕಿಯಾ 6.1 ಪ್ಲಸ್‌

ಪ್ರೀಮಿಯಮ್ ಬೆಸ್ಟ್‌ ಬಜೆಟ್‌ ಸ್ಮಾರ್ಟ್‌ಫೋನ್ ಆಗಿರುವ ನೋಕಿಯಾ 6.1 ಪ್ಲಸ್‌, 6GB/64GB ವೇರಿಯಂಟ್ 20,499ರೂ.ಗಳ ದರವನ್ನು ಹೊಂದಿದ್ದು, ಈ ಮೇಳದಲ್ಲಿ 11,999ರೂ.ಗಳಿಗೆ ಲಭ್ಯವಾಗಲಿದೆ. ಸ್ನ್ಯಾಪ್‌ಡ್ರಾಗನ್ 636 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್ 5.8 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಹಾಗೆಯೇ 3,060mAh ಬ್ಯಾಟರಿ ಇದೆ.

ಓದಿರಿ : ಮೊದಲು ಖರೀದಿಸಿ, ಆಮೇಲೆ ಪಾವತಿಸಿ ಇದು ಪೇಟಿಎಮ್‌ನ 'ಪೋಸ್ಟ್‌ಪೇಡ್' ಸೇವೆ!ಓದಿರಿ : ಮೊದಲು ಖರೀದಿಸಿ, ಆಮೇಲೆ ಪಾವತಿಸಿ ಇದು ಪೇಟಿಎಮ್‌ನ 'ಪೋಸ್ಟ್‌ಪೇಡ್' ಸೇವೆ!

Best Mobiles in India

English summary
Amazon has kicked-off its 2019 Prime Day sale with attractive deals on offer across all product categories. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X