ಅಮೆಜಾನ್ ಪ್ರೈಡ್‌ ಡೇ ಸೇಲ್‌: ಈ ಹೊಸ ಫೋನ್‌ಗಳಿಗೆ ಆಕರ್ಷಕ ಡಿಸ್ಕೌಂಟ್!

|

ಶಾಪಿಂಗ್ ಪ್ರಿಯರ ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ಭರ್ಜರಿ ರಿಯಾಯಿತಿ ಸೇಲ್‌ಗಳನ್ನು ಆಯೋಜಿಸಿ ಸೈ ಎನಿಸಿಕೊಂಡಿದೆ. ಇದೀಗ ಅಮೆಜಾನ್ ತಾಣದಲ್ಲಿ ಪ್ರೈಮ್‌ ಡೇ ಸೇಲ್‌ ಚಾಲ್ತಿ ಇದ್ದು, ಎರಡು ದಿನಗಳ ಈ ಸೇಲ್ (ಜು.27) ಇಂದು ಮುಕ್ತಾಯವಾಗಲಿದೆ. ಈ ಸೇಲ್ ನಲ್ಲಿ ಗ್ಯಾಡ್ಜೆಟ್ಸ್‌ ಉತ್ಪನ್ನಗಳಿಗೆ ಹೆಚ್ಚಿನ ಆಫರ್‌ಗಳನ್ನು ತಿಳಿಸಿಲಾಗಿದೆ. ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳಿಗೆ ಅಟ್ರ್ಯಾಕ್ಟಿವ್ ಡಿಸ್ಕೌಂಟ್‌ಗಳು ಲಭ್ಯ ಇವೆ.

ಅಮೆಜಾನ್ ಪ್ರೈಡ್‌ ಡೇ ಸೇಲ್‌: ಈ ಹೊಸ ಫೋನ್‌ಗಳಿಗೆ ಆಕರ್ಷಕ ಡಿಸ್ಕೌಂಟ್!

ಹೌದು, ಅಮೆಜಾನ್ ಪ್ಲಾಟ್‌ಫರ್ಮ್ ಆಯೋಜಿಸಿರುವ ಅಮೆಜಾನ್ ಪ್ರೈಮ್‌ ಡೇ ಸೇಲ್‌ ಪ್ರಸ್ತುತ ಚಾಲ್ತಿ ಇದೆ. ಈ ವಿಶೇಷ ಸೇಲ್‌ನಲ್ಲಿ ಇತ್ತೀಚಿಗೆ ಬಿಡುಗಡೆ ಆಗಿರುವ ಕೆಲವು ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಕೊಡುಗೆಗಳಲ್ಲಿ ಕಾಣಿಸಿಕೊಂಡಿವೆ. ರಿಯಾಯಿತಿ ಪಡೆದ ಫೋನ್‌ಗಳ ಲಿಸ್ಟ್‌ನಲ್ಲಿ ಸ್ಯಾಮ್‌ಸಂಗ್, ಶಿಯೋಮಿ, ಒಪ್ಪೋ ಸೇರಿದಂತೆ ಇನ್ನಷ್ಟು ಬ್ರ್ಯಾಂಡ್‌ಗಳ ಫೋನ್‌ಗಳು ಇವೆ. ಹಾಗಾದರೇ ಅಮೆಜಾನ್‌ ಸೇಲ್‌ನಲ್ಲಿ ಡಿಸ್ಕೌಂಟ್‌ ಪಡೆದ ಆಯ್ದ ಕೆಲ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M42 5G
ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ M42 5G ಅಮೆಜಾನ್‌ ತಾಣದಲ್ಲಿ ಆಫರ್‌ನಲ್ಲಿ ಕಾಣಿಸಿಕೊಂಡಿದೆ. ಈ ಫೋನ್ ಕ್ರಮವಾಗಿ 48 ಎಂಪಿ + 8 ಎಂಪಿ + 5 ಎಂಪಿ + 5 ಎಂಪಿ ಸೆನ್ಸಾರ್‌ನ ಕ್ವಾಡ್ ಕ್ಯಾಮೆರಾ ಸೆಟ್‌ಅಪ್‌ ಪಡೆದಿದೆ. ಇದರೊಂದಿಗೆ 5000mAH ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಅಮೆಜಾನ್‌ ಪ್ರೈಡ್‌ ಡೇ ಸೇಲ್‌ನಲ್ಲಿ ಈ ಫೋನ್ ಆಫರ್‌ ಬೆಲೆಯು 20,999ರೂ. ಆಗಿದೆ.

ಶಿಯೋಮಿ ಮಿ 1oi 5G
ಶಿಯೋಮಿಯ ಕಂಪನಿಯ ನೂತನ ಮಿ 1oi 5G ಸ್ಮಾರ್ಟ್‌ಫೋನ್ ಸಹ ಅಮೆಜಾನ್ ಸೇಲ್‌ನಲ್ಲಿ ಆಕರ್ಷಕ ರಿಯಾಯಿತಿ ಪಡೆದಿದ್ದು, 21,999ರೂ. ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 750 ಪ್ರೊಸೆಸರ್‌ ಬಲದಲ್ಲಿ ಕಾರ್ಯನಿರ್ವಹಿಸುವ ಈ ಫೋನ್ 108ಎಂಪಿ ಸೆನ್ಸಾರ್ ಕ್ಯಾಮೆರಾ ರಚನೆಯನ್ನು ಪಡೆದಿದೆ. ಹಾಗೆಯೇ ಈ ಫೋನ್ ಡಿಸ್‌ಪ್ಲೇಯು 120Hz ರೀಫ್ರೇಶ್ ರೇಟ್ ಹೊಂದಿದೆ.

ಒಪ್ಪೋ F17 ಫೋನ್
ಒಪ್ಪೋ ಕಂಪನಿಯ ಒಪ್ಪೋ F17 ಸ್ಮಾರ್ಟ್‌ಫೋನ್ ಸಹ ಅಮೆಜಾನ್ ತಾಣದಲ್ಲಿ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಈ ಫೋನ್ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 16 ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಹಾಗೆಯೇ ಈ ಫೋನ್ 30W VOOC ಚಾರ್ಜಿಂಗ್ ಸಪೋರ್ಟ್‌ ನೊಂದಿಗೆ 4015mAH ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದಿದೆ.

Most Read Articles
Best Mobiles in India

English summary
Amazon Prime Day Sale 2021: Great Deal On These Samsung, Oppo And Mi Phones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X