Home
ಸುದ್ದಿಜಾಲ

ಬಜೆಟ್‌ ಬೆಲೆಯ ಈ ಫೋನ್‌ಗೆ ಈಗ ಬಿಗ್‌ ಡಿಸ್ಕೌಂಟ್‌!..ಆಫರ್‌ ಬೆಲೆ ಎಷ್ಟು?

ಜನಪ್ರಿಯ ಒಪ್ಪೋ ಮೊಬೈಲ್‌ ಸಂಸ್ಥೆಯು ಹಲವು ಬಜೆಟ್‌ ಫೋನ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಗಮನ ಸೆಳೆದಿದೆ. ಆ ಪೈಕಿ ಒಂದಾದ ಒಪ್ಪೋ A17k ಮೊಬೈಲ್‌ ದರದಲ್ಲಿ ಇದೀಗ ಭರ್ಜರಿ ಇಳಿಕೆ ಆಗಿದೆ. ಹೀಗಾಗಿ ಈ ಸ್ಮಾರ್ಟ್‌ಫೋನ್ ಖರೀದಿಗೆ ಸಕಾಲ. ಅಂದಹಾಗೆ ಈ ಫೋನ್ ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದಿದೆ.

ಹೌದು, ಜನಪ್ರಿಯ ಇ ಕಾಮರ್ಸ್‌ ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ಒಪ್ಪೋ A17k ಮೊಬೈಲ್‌ ಆಕರ್ಷಕ ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್‌ 3GB + 64 GB ಸ್ಟೋರೇಜ್‌ ವೇರಿಯಂಟ್‌ ಪ್ರೈಸ್‌ಟ್ಯಾಗ್‌ ನಲ್ಲಿ ಶೇ. 27% ರಷ್ಟು ಡಿಸ್ಕೌಂಟ್‌ ನೀಡಿದ್ದು, ಕೊಡುಗೆಯಲ್ಲಿ 9,499ರೂ. ಗಳ ದರದಲ್ಲಿ ಖರೀದಿಸಬಹುದು. ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ ಕೆಲವು ಹೆಚ್ಚುವರಿ ಕೊಡುಗೆ ಸಹ ಸಿಗಲಿದೆ.

ಬಜೆಟ್‌ ಬೆಲೆಯ ಈ ಫೋನ್‌ಗೆ ಈಗ ಬಿಗ್‌ ಡಿಸ್ಕೌಂಟ್‌!..ಆಫರ್‌ ಬೆಲೆ ಎಷ್ಟು?

ಇನ್ನು ಈ ಮೊಬೈಲ್‌ ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌, ಹಿಂಭಾಗದಲ್ಲಿ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾ ಪಡೆದಿದೆ. ಹಾಗೆಯೇ ಬಾಹ್ಯ ಸ್ಟೋರೇಜ್‌ ಅನ್ನು 1 TB ವರೆಗೆ ಅಧಿಕ ಮಾಡಿಕೊಳ್ಳಬಹುದಾದ ಆಯ್ಕೆ ನೀಡಲಾಗಿದೆ. ಇನ್ನುಳಿದಂತೆ ಒಪ್ಪೋ A17k ಮೊಬೈಲ್‌ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೋ A17k ಡಿಸ್‌ಪ್ಲೇ ಮತ್ತು ವಿನ್ಯಾಸ ಮಾಹಿತಿ: ಒಪ್ಪೋ A17k ಮೊಬೈಲ್‌ 6.56 ಇಂಚಿನ ಹೆಚ್‌ಡಿ + ರೆಸಲ್ಯೂಶನ್ ಜೊತೆಗೆ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು 720 x 1612 ಪಿಕ್ಸೆಲ್‌ ರೆಸಲ್ಯೂಶನ್‌ ನೀಡಲಿದೆ. ಹಾಗೆಯೇ ಇದು 60Hz ರಿಫ್ರೆಶ್ ರೇಟ್‌, 600nits ಬ್ರೈಟ್‌ನೆಸ್‌ ನೀಡುವ ಫೀಚರ್ಸ್‌ ಪಡೆದಿದೆ.

ಒಪ್ಪೋ A17k ಪ್ರೊಸೆಸರ್‌ ಪವರ್ ಯಾವುದು ಮಾಹಿತಿ : ಒಪ್ಪೋ A17k ಮೊಬೈಲ್‌ ಆಂಡ್ರಾಯ್ಡ್ 12 ಜೊತೆಗೆ ಕಲರ್‌ ಓಎಸ್‌ 12.1 ಅನ್ನು ಪಡೆದಿದ್ದು, ಒಪ್ಪೋ A17k ಮೀಡಿಯಾ ಟೆಕ್‌ ಹಿಲಿಯೋ G35 ಪ್ರೊಸೆಸರ್‌ ನಿಂದ ಕೆಲಸ ಮಾಡಲಿದೆ. ಇದರ ಜೊತೆಗೆ 3GB RAM ಜೊತೆಗೆ 64GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ. ಜೊತೆಗೆ ಇಂಟರ್ನಲ್‌ ಸ್ಟೋರೇಜ್‌ ಅನ್ನು 1 TB ವರೆಗೆ ಹೆಚ್ಚಿಗೆ ಮಾಡಿಕೊಳ್ಳಬಹುದಾದ ಆಯ್ಕೆ ಪಡೆದಿದೆ. ಹೆಚ್ಚುವರಿಯಾಗಿ ಹಾಗೆಯೇ 4GB RAM ಅನ್ನು ವಿಸ್ತರಿಸುವ ಆಯ್ಕೆ ಸಹ ಒಳಗೊಂಡಿದೆ.

ಒಪ್ಪೋ A17k ಸಿಂಗಲ್‌ ಕ್ಯಾಮೆರಾ ಸೆನ್ಸಾರ್ ಮಾಹಿತಿ : ಒಪ್ಪೋ A17k ಮೊಬೈಲ್‌ 8 ಮೆಗಾ ಪಿಕ್ಸೆಲ್‌ ಆಟೋಫೋಕಸ್ ಸೆನ್ಸರ್ ಹಾಗೂ ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಫೀಕ್ಸೆಡ್‌ ಫೋಕಸ್ ಸೆನ್ಸರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದೆ. ಹಾಗೆಯೇ IPX4 ರೇಟಿಂಗ್‌ನೊಂದಿಗೆ ಫ್ಲ್ಯಾಶ್ ರೆಸಿಸ್ಟೆಂಟ್‌ ವಿಶೇಷತೆ ಹೊಂದಿದ್ದು, ಇನ್ನು ಈ ಫೋನ್‌ 189 ಗ್ರಾಂ ತೂಕ ಪಡೆದುಕೊಂಡಿದೆ.

ಒಪ್ಪೋ A17k ಬ್ಯಾಟರಿ ಹಾಗೂ ಇತರೆ ಸೌಲಭ್ಯಗಳು ಮಾಹಿತಿ : ಒಪ್ಪೋ A17k ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಸೈಡ್‌ ಫಿಂಗರ್ ಪ್ರಿಂಟ್‌ ಅನ್‌ಲಾಕ್‌ ಆಯ್ಕೆ ಯೊಂದಿಗೆ ಅಲ್ಟ್ರಾವಾಲ್ಯೂಮ್‌ ಮೋಡ್‌ ಫೀಚರ್ಸ್‌ ಒಳಗೊಂಡಿದೆ. ಇನ್ನು 3.5mm ಹೆಡ್‌ಫೋನ್ ಜ್ಯಾಕ್ ಇದರಲ್ಲಿದೆ.

ಒಪ್ಪೋ A17k ಮೆಮೊರಿ ಹಾಗೂ ಕಲರ್‌ ಆಯ್ಕೆ ಮಾಹಿತಿ : ಒಪ್ಪೋ A17k ಮೊಬೈಲ್‌ 3GB + 64 GB ಸ್ಟೋರೇಜ್‌ ವೇರಿಯಂಟ್‌ ಹಾಗೂ 4GB + 64GB ಸ್ಟೋರೇಜ್‌ ವೇರಿಯಂಟ್‌ ನಲ್ಲಿ ಸಿಗಲಿದೆ. ಈ ಮೊಬೈಲ್‌ ಗೋಲ್ಡ್ ಮತ್ತು ನೇವಿ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
Amazon prime day sale: Amazing deals on Oppo A17k phone. offer price, specifications and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+