Subscribe to Gizbot

GST ಚಿಂತೆ ಬಿಡಿ: ಜುಲೈ 10 ರಿಂದ ಅಮೆಜಾನ್ ಪ್ರೈಮ್ ಡೇ ಸೇಲ್ ಶುರುವಾಗಲಿದೆ..!

Written By:

ಸದ್ಯ ದೇಶದಲ್ಲಿ GST ಕುರಿತಂತೆ ಬಿಸಿ-ಬಿಸಿ ಚರ್ಚೆಯೂ ಶುರುವಾಗಿದ್ದು, ಕೆಲ ವಸ್ತುಗಳ ಬೆಲೆ ಅಧಿಕವಾದರೆ ಇನ್ನು ಕೆಲವು ವಸ್ತುಗಳ ಬೆಲೆಯಲ್ಲಿ ಇಳಿಕೆಯನ್ನು ಕಾಣಬಹುದಾಗಿದೆ. ಒಟ್ಟಿನಲ್ಲಿ ಚರ್ಚೆಗೆ ಗ್ರಾಸವಾಗಿರುವ GST ಯ ಲಾಭವನ್ನು ಪಡೆಯಲು ಮುಂದಾಗಿರುವ ಆನ್‌ಲೈನ್ ಶಾಪಿಂಗ್ ತಾಣ ಅಮೆಜಾನ್ ಜುಲೈ 10 ರಿಂದ ಪ್ರೈಮ್ ಡೇ ಸೇಲ್ ಆರಂಭಿಸಲು ಮುಂದಾಗಿದೆ.

GST ಚಿಂತೆ ಬಿಡಿ: ಜುಲೈ 10 ರಿಂದ ಅಮೆಜಾನ್ ಪ್ರೈಮ್ ಡೇ ಸೇಲ್ ಶುರುವಾಗಲಿದೆ..!

ಓದಿರಿ: ನಿಮ್ಮಲ್ಲಿಯೂ ಬಳಸದಿರುವ ಹಳೇಯ ಸಿಮ್ ಕಾರ್ಡ್ ಇದೆಯೇ..? ಅದನ್ನು ನಿಷ್ಕ್ರಿಯಗೊಳಿಸುವುದು ಹೇಗೆ..?

ಇಷ್ಟು ದಿನ ಪ್ರೀ GST ಸೇಲ್ ನಡೆಸಿದ್ದ ಅಮೆಜಾನ್, ಈ ಬಾರಿ ಪೋಸ್ಟ್ GST ಸೇಲ್ ಆರಂಭಿಸಲು ಮುಂದಾಗಿದೆ. ಈ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಹಲವಾರು ಲಾಭವನ್ನು ಮಾಡಿಕೊಡಲು ಅಮೆಜಾನ್ ಯೋಜನೆ ರೂಪಿಸಿದೆ. ಈ ಹಿನ್ನಲೆಯಲ್ಲಿ ಅಮೆಜಾನ್ ಪ್ರೈಮ್ ಡೇ ಸೇಲ್ ಕುರಿತಾದ ಮಾಹಿತಿಯು ಈ ಮುಂದಿನಂತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೇಲ್ ನಡೆಯುವುದು ಯಾವಾಗ..?

ಸೇಲ್ ನಡೆಯುವುದು ಯಾವಾಗ..?

ಅಮೆಜಾನ್ ಪ್ರೈಮ್ ಡೇ ಸೇಲ್ ಇದೇ ಜುಲೈ 10 ಮತ್ತು 11ರಂದು ನಡೆಯಲಿದೆ. ಇದು ಒಟ್ಟು 30 ಗಂಟೆಗಳ ಸೇಲ್ ಆಗಿದ್ದು, ಕೇವಲ ಅಮೆಜಾನ್ ಪ್ರೈಮ್ ಸದಸ್ಯರಿಗೆ ಮಾತ್ರವೇ ಲಭ್ಯವಿರಲಿದೆ. ಈ ಸೇಲ್ ಜುಲೈ 10ರಂದು ಸಂಜೆ 6ಕ್ಕೆ ಆರಂಭವಾಗಲಿದ್ದು, ಒಟ್ಟು 30 ಗಂಟೆಗಳ ಕಾಲ ನಡೆಯಲಿದೆ.

ಅಮೆಜಾನ್ ಪ್ರೈಮ್ ಡೇ ಸೇಲ್ ವಿಶೇಷತೆ:

ಅಮೆಜಾನ್ ಪ್ರೈಮ್ ಡೇ ಸೇಲ್ ವಿಶೇಷತೆ:

ಈ ಸೇಲ್ ನಲ್ಲಿ ಅಮೆಜಾನ್ ಪ್ರೈಮ್ ಸದಸ್ಯರು ಅತೀ ಹೆಚ್ಚಿನ ಕ್ಯಾಷ್ ಬ್ಯಾಕ್ ಆಫರ್ ಪಡೆಯಬಹುದು. ಇಲ್ಲದೇ ವಿವಿಧ ಲಾಂಚಿಂಗ್ ಆಫರ್ ಗಳನ್ನು ಹಾಗೂ ವಿವಿಧ ವಸ್ತುಗಳ ಮೇಲೆ ಭರ್ಜರಿ ಆಫರ್ ಗಳನ್ನು ಪಡೆಯಬಹುದಾಗಿದೆ. ಇದಲ್ಲದೇ ಪ್ರೈಮ್ ವಿಡಿಯೋಗಳು ದೊರೆಯಲಿದೆ ಎನ್ನಲಾಗಿದೆ.

ಡೀಲ್ ಗಳು..!

ಡೀಲ್ ಗಳು..!

ಈ ಸೇಲ್ ನಲ್ಲಿ ಒಟ್ಟು 30 ಬ್ರಾಂಡ್ ಗಳ ವಸ್ತುಗಳು ಸೇಲ್ ಆಗಲಿದೆ. ಇದರ ಕುರಿತು ಜುಲೈ 5 ರಂದು ಅಮೆಜಾನ್ ಸಂಫೂರ್ಣ ಮಾಹಿತಿಯನ್ನು ನೀಡಲಿದೆ. ಇದಲ್ಲದೇ ಮೈಕ್ ಮೈ ಟ್ರಿಪ್ ನ ವೋಚರ್, HDFC ಕಾರ್ಡ್ ಬಳಕೆದಾರಿಗೆ 20% ಕ್ಯಾಷ್ ಬ್ಯಾಕ್, ಅಲ್ಲದೇ ಇನ್ನು ಅನೇಕ ಡೀಲ್ ಗಳು ಲಭ್ಯವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Everyone has been talking about GST sales since the past few days. Almost every product category was on sale with attractive discounts and offers as the pre-GST sale was going on so long. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot