ಗ್ರಾಹಕರೇ ಗಮನಿಸಿ!...ಈ ಸೋನಿ ಹೆಡ್‌ಫೋನಿಗೆ ಭಾರೀ ರಿಯಾಯಿತಿ!
ಗ್ರಾಹಕರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಅಮೆಜಾನ್ ಪ್ರೈಮ್ ಡೇ ಸೇಲ್ ಈಗ ಲೈವ್ ಆಗಿದೆ. ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ಈ ಮಾರಾಟ ಮೇಳ ಆಯೋಜಿಸಿದ್ದು, ಗ್ಯಾಡ್ಜೆಟ್ಸ್ ಉತ್ಪನ್ನಗಳಿಗೆ ದೊಡ್ಡ ರಿಯಾಯಿತಿ ಆಫರ್‌ಗಳನ್ನು ಘೋಷಿಸಿದೆ. ಅದರಲ್ಲಿ ಆಡಿಯೋ ಉತ್ಪನ್ನಗಳು ಸೇರಿದ್ದು, ಸೋನಿ ಸಂಸ್ಥೆಯು ಹೆಡ್‌ಫೋನ್ ಒಂದಕ್ಕೆ ಸಖತ್ ಡಿಸ್ಕೌಂಟ್ ಲಭ್ಯ ಮಾಡಿದೆ.
ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ಚಾಲ್ತಿ ಇರುವ ಅಮೆಜಾನ್ ಪ್ರೈಮ್ ಡೇ ಸೇಲ್ ಕೊಡುಗೆಗಳಿಂದ ಭರ್ತಿ ಆಗಿದೆ. ಈ ಮಾರಾಟ ಮೇಳದಲ್ಲಿ ಸೋನಿ ಸಂಸ್ಥೆಯ ಸೋನಿ WH-1000XM4 (Sony WH-1000XM4) ಹೆಡ್‌ಫೋನ್ ಭರ್ಜರಿ ರಿಯಾಯಿತಿ ಪಡೆದಿದ್ದು, ಮ್ಯೂಸಿಕ್ ಪ್ರಿಯ ಗ್ರಾಹಕರನ್ನು ತನ್ನತ್ತ ಸೆಳೆಯುವಂತೆ ಮಾಡಿದೆ.

ಇನ್ನು ಸೋನಿ WH-1000XM4 (Sony WH-1000XM4) ಹೆಡ್‌ಫೋನ್ ಬೆಲೆಯು 29,999ರೂ. ಬೆಲೆಯನ್ನು ಪಡೆದಿದ್ದು, ಅಮೆಜಾನ್ ಪ್ರೈಮ್ ಡೇ ಆಫರ್‌ನಲ್ಲಿ 22,990 ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ಕ್ಯಾಶ್‌ಬ್ಯಾಕ್ ಹಾಗೂ ಕೆಲವು ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ರಿಯಾಯಿತಿ ಸಹ ಸಿಗಲಿದೆ. ಹಾಗಾದರೆ ಸೋನಿ WH-1000XM4 ಹೆಡ್‌ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಸೋನಿ WH-1000XM4 ಹೆಡ್‌ಫೋನ್ ಪ್ರಮುಖ ಫೀಚರ್ಸ್ : ಸೋನಿ WH-1000XM4 ಹೆಡ್‌ಫೋನ್ ಡಿವೈಸ್ ಈ ಹಿಂದಿನ ಹೆಡ್‌ಫೋನ್ ಡಿವೈಸ್‌ಗಳ ವಿನ್ಯಾಸವನ್ನು ಮತ್ತೆ ಮುಂದುವರಿಸಿಕೊಂಡಿದೆ. ಸೋನಿ WH-1000XM4 ಹೆಡ್‌ಫೋನ್ QN1 ನಾಯ್ಸ್ ಕ್ಯಾನ್ಸಲೇಶನ್ ಪ್ರೊಸೆಸರ್ ಸಪೋರ್ಟ್ ಪಡೆದಿದೆ.
ಇನ್ನು ಈ ಹೆಡ್‌ಫೋನ್‌ನಲ್ಲಿ ಅಡಾಪ್ಟಿವ್ ಸೌಂಡ್ ಕಂಟ್ರೋಲ್ಸ್, ಫೈಂಡ್ ದಿ ಡ್ರೆಸ್ ಮತ್ತು ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಸೌಲಭ್ಯ ಅನ್ನು ಹೊಂದಿದೆ. ಇದಲ್ಲದೆ ಪ್ರತಿ ಚಾರ್ಜ್‌ಗೆ 30 ಗಂಟೆಗಳಿಗಿಂತ ಹೆಚ್ಚು ಕಾಲ ಬ್ಯಾಟರಿ ಬಾಳಿಕೆ ಬರಲಿದೆ. ಅಲ್ಲದೆ ಈ ಹೆಡ್‌ಫೋನ್‌ಗಳ ಹೊರ ಭಾಗದಲ್ಲಿ ಗೆಸ್ಚರ್ ಕಂಟ್ರೋಲ್ ಅನ್ನು ನೀಡಲಾಗಿದೆ. ಜೊತೆಗೆ ಗೂಗಲ್ ಅಸಿಸ್ಟೆಂಟ್ ಮತ್ತು ಅಲೆಕ್ಸಾಗಳಿಗೆ ಇದು ಸಪೋರ್ಟ್ ಮಾಡಲಿದೆ.
ಇನ್ನು ಆಂಡ್ರಾಯ್ಡ್ ಮತ್ತು ಐಓಎಸ್ ಗೆ ಲಭ್ಯವಿರುವ ಸೋನಿ ಹೆಡ್‌ಫೋನ್ಸ್ ಕನೆಕ್ಟ್ ಆಪ್ ಮೂಲಕ ಬಳಕೆದಾರರು ಸೋನಿ WH-1000XM4 ಅನ್ನು ಕಂಟ್ರೋಲ್ ಮಾಡಬಹುದಾಗಿದೆ. ಇದರ ಜೊತೆಗೆ ಕಸ್ಟಮೈಸ್ ಮಾಡಬಹುದ ಆಯ್ಕೆ ಸಹ ಪಡೆದುಕೊಂಡಿದೆ. ಇನ್ನು ಬಳಕೆದಾರರು ನಾಯ್ಸ್ ಕ್ಯಾನ್ಸಕೇಶನ್ ಅನ್ನು ಕಸ್ಟಮೈಸ್ ಮಾಡಲು, ಹೊಂದಾಣಿಕೆಯ ವಾಯ್ಸ್ ಕಂಟ್ರೋಲ್ ಅನ್ನು ಸೆಟ್ ಮಾಡಲು ಸಹ ಅವಕಾಶ ನೀಡಲಾಗಿದೆ.
ಕನೆಕ್ಟಿವಿ ಆಯ್ಕೆಗಳ ಮಾಹಿತಿ : ಇದಲ್ಲದೆ ಈಕ್ವಲೈಜರ್ ಮತ್ತು ಸೌಂಡ್ ಮೋಡ್‌ಗಳಂತಹ ಇತರ ಸೆಟ್ಟಿಂಗ್ ಆಯ್ಕೆಗಳನ್ನು ಸೆಟ್ ಮಾಡಲು ಆಪ್ ಬಳಕೆದಾರರಿಗೆ ಇದು ಅವಕಾಶವನ್ನು ಒದಗಿಸಲಿದೆ. ಹಾಗೆಯೇ ಸೋನಿ WH-1000XM4 ಹೆಡ್‌ಫೋನ್ ನಲ್ಲಿ ಮಲ್ಟಿ ಪಾಯಿಂಟ್ ಕನೆಕ್ಟಿವಿಟಿ ಆಯ್ಕೆ ಸಹ ನೀಡಲಾಗಿದೆ. ಈ ಆಯ್ಕೆಯು ಬಳಕೆದಾರರು ಹೆಡ್‌ಫೋನ್‌ಗಳನ್ನು ಏಕ್‌ಕಾಲದಲ್ಲಿ ಎರಡು ಡಿವೈಸ್ ಕನೆಕ್ಟ್ ಮಾಡಲು ಅವಕಾಶ ಒದಗಿಸಲಿದೆ.
ಆಫರ್ ಮತ್ತು ಲಭ್ಯತೆ : ಹಾಗೆಯೇ ಲೋಕಲ್ ವಾಯ್ಸ್‌ಗಾಗಿ ಸೋನಿ WH-1000XM4 ಹೆಡ್‌ಫೋನ್ ಸೋನಿಯ ಸ್ವಂತ 360 ರಿಯಾಲಿಟಿ ಆಡಿಯೊ ಸ್ವರೂಪವನ್ನು ಸಹ ಸಪೋರ್ಟ್ ಮಾಡುತ್ತದೆ. ಅಂದಹಾಗೆ ಸೋನಿ WH-1000XM4 ಬೆಲೆ 29,990ರೂ. ಆಗಿದೆ. ಆದರೆ ಇ ಕಾಮರ್ಸ್ ದೈತ್ಯ ಅಮೆಜಾನ್ ಆಯೋಜಿಸಿರುವ ಅಮೆಜಾನ್ ಪ್ರೈಮ್ ಡೇ ಮಾರಾಟ ಮೇಳದಲ್ಲಿ ಸಖತ್ ಕೊಡುಗೆ ಪಡೆದಿದೆ. ಇದನ್ನು ಆಫರ್‌ನಲ್ಲಿ 22,990ರೂ. ಗಳ ಬೆಲೆಗೆ ಖರೀದಿಸಬಹುದು.


Click it and Unblock the Notifications








