Home
ಸುದ್ದಿಜಾಲ

ಅಮೆಜಾನ್ ಪ್ರೈಮ್‌ ಡೇ ಸೇಲ್‌: ಯಾವ ಫೋನಿಗೆ ಎಷ್ಟು ಡಿಸ್ಕೌಂಟ್‌ ಇಲ್ಲಿದೆ ಮಾಹಿತಿ!

ಬಹುನಿರೀಕ್ಷಿತ ಅಮೆಜಾನ್‌ ಪ್ರೈಮ್‌ ಡೇ (Amazon Prime Day) ಸೇಲ್‌ ಇದೇ ಜುಲೈ 15 ರಿಂದ ಪ್ರಾರಂಭವಾಗಲಿದೆ. ಈ ಮಾರಾಟ ಮೇಳದಲ್ಲಿ ಸ್ಮಾರ್ಟ್‌ಫೋನ್‌ಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು, ಆಡಿಯೊ ಡಿವೈಸ್‌ಗಳು, ಟಿವಿಗಳು ಸೇರಿದಂತೆ ಇತರೆ ಹಲವು ಉತ್ಪನ್ನಗಳಿಗೆ ಭರ್ಜರಿ ರಿಯಾಯಿತಿ ಸಿಗುವುದು ಖಚಿತ.

ಹೌದು, ಇ ಕಾಮರ್ಸ್‌ ದೈತ್ಯ ಆಯೋಜಿಸಿರುವ ಅಮೆಜಾನ್ ಪ್ರೈಮ್‌ ಡೇ ಸೇಲ್‌ ನಾಳೆಯಿಂದ ಶುರುವಾಗಲಿದೆ. ಆದರೆ ಅಮೆಜಾನ್‌ ಪ್ರೈಮ್‌ ಸದಸ್ಯರಿಗಾಗಿ ವಿಶೇಷ ಸೇಲ್ ಈಗ ಲೈವ್ ಆಗಿದೆ. ಇನ್ನು ಪ್ರೈಮ್‌ ಡೇ ಮಾರಾಟದಲ್ಲಿ ಮುಖ್ಯವಾಗಿ ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ಫೋನ್‌ಗಳು, ಗ್ಯಾಡ್ಜೆಟ್ಸ್‌ ಉತ್ಪನ್ನಗಳು ಭಾರೀ ಡಿಸ್ಕೌಂಟ್‌ ಬೆಲೆಯಲ್ಲಿ ಮಾರಾಟ ಆಗಲಿವೆ. ಹಾಗಾದರೆ ಸಖತ್ ರಿಯಾಯಿತಿ ಬೆಲೆಗೆ ಲಭ್ಯ ಆಗಲಿರುವ ಕೆಲವು ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಅಮೆಜಾನ್ ಪ್ರೈಮ್‌ ಡೇ ಸೇಲ್‌: ಯಾವ ಫೋನಿಗೆ ಎಷ್ಟು ಡಿಸ್ಕೌಂಟ್‌ ಇಲ್ಲಿದೆ ಮಾಹಿತಿ!

ಟೆಕ್ನೋ ಕ್ಯಾಮನ್‌ 20 ಪ್ರೀಮಿಯರ್ 5G : ಈ ಸ್ಮಾರ್ಟ್‌ಫೋನ್‌ 6.67 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇಯು 1080 x 2400 ಪಿಕ್ಸಲ್‌ ರೆಸಲ್ಯೂಶನ್‌ ಪಡೆದಿದೆ. ಹಾಗೆಯೇ ಇದು ಮೀಡಿಯಾ ಟೆಕ್‌ ಡೈಮೆನ್ಸಿಟಿ 8050 SoC ಪ್ರೊಸೆಸರ್‌ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 108ಎಂಪಿ ಸೆನ್ಸಾರ್‌ ನಲ್ಲಿದೆ. ಅಮೆಜಾನ್‌ ಪ್ರೈಮ್‌ ಡೇ ಸೇಲ್‌ ನಲ್ಲಿ ಇದು 28,999ರೂ. ಗೆ ಖರೀದಿಗೆ ಲಭ್ಯವಾಗಲಿದೆ ಎಂದು ಅಮೆಜಾನ್‌ ಸೈಟ್‌ನಲ್ಲಿ ಕಾಣಿಸಿಕೊಂಡಿದೆ.

ರಿಯಲ್‌ಮಿ ನಾರ್ಜೋ 60 5G : ರಿಯಲ್‌ಮಿಯ ಈ ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.43 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯ ಹೊಂದಿದೆ. ಇನ್ನು ಅಮೆಜಾನ್‌ ಪ್ರೈಮ್‌ ಡೇ ಸೇಲ್‌ ನಲ್ಲಿ ಈ ಫೋನ್‌ 22,499ರೂ. ಗೆ ಲಭ್ಯವಾಗಲಿದೆ ಎಂದು ಅಮೆಜಾನ್‌ ಸೈಟ್‌ನಲ್ಲಿ ಕಾಣಿಸಿಕೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G : ಸ್ಮಾರ್ಟ್‌ಫೋನ್‌ 2,400 x 1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ ಪ್ಲಸ್‌ ಅಮೊಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಹಾಗೆಯೇ ಈ ಫೋನ್ ಆಕ್ಟಾ-ಕೋರ್ Exynos 1280 SoC ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಜೊತೆಗೆ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಪಡೆದಿದೆ. ಅಮೆಜಾನ್‌ ಪ್ರೈಮ್‌ ಡೇ ಸೇಲ್‌ ನಲ್ಲಿ ಈ ಫೋನ್‌ 16,999ರೂ. ಗೆ ಲಭ್ಯವಾಗಲಿದೆ ಎಂದು ಅಮೆಜಾನ್‌ ಸೈಟ್‌ನಲ್ಲಿ ಕಾಣಿಸಿಕೊಂಡಿದೆ.

ಐಕ್ಯೂ ನಿಯೋ 7 ಪ್ರೊ 5G : ಈ ಸ್ಮಾರ್ಟ್‌ಫೋನ್‌ 6.78 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದಿದೆ. ಅಲ್ಲದೇ ಇದು ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 8+ ಜೆನ್‌ 1 SoC ಪ್ರೊಸೆಸರ್‌ ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಆಗಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಇದೆ. ಇನ್ನು ಈ ಫೋನ್ ಅಮೆಜಾನ್‌ ಪ್ರೈಮ್‌ ಡೇ ಮಾರಾಟದಲ್ಲಿ 31,999ರೂ. ಗೆ ಖರೀದಿಸಬಹುದಾಗಿದೆ.

ಐಫೋನ್ 14 : ಈ ಐಫೋನ್ 6.1 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್‌ ಸಪೋರ್ಟ್‌ ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಇನ್ನು ಈ ಫೋನ್ ಅಮೆಜಾನ್‌ ಪ್ರೈಮ್‌ ಡೇ ಮಾರಾಟದಲ್ಲಿ 66,499ರೂ. ಗೆ ಖರೀದಿಸಬಹುದಾಗಿದೆ.

Best Mobiles in India

English summary
Amazon Prime Day Sale starts July 15: best deals for These Mobiles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+