Home
ಸುದ್ದಿಜಾಲ

ಅಮೆಜಾನ್‌ ಮತ್ತೆ ಹೀಗೆ ಮಾಡುತ್ತೆ ಅಂತಾ ಯಾರೂ ಅಂದುಕೊಂಡಿರಲಿಲ್ಲ!

ಜನಪ್ರಿಯ ಅಮೆಜಾನ್‌ ಸಂಸ್ಥೆಯು ಇ ಕಾಮರ್ಸ್‌ ಜೊತೆಗೆ ಅಮೆಜಾನ್‌ ಪ್ರೈಮ್‌ ಮೂಲಕ ಓಟಿಟಿ ಸೇವೆಯನ್ನು ನೀಡುತ್ತಿದೆ. ಬಳಕೆದಾರರು ಅಮೆಜಾನ್‌ ಪ್ರೈಮ್‌ ವೀಕ್ಷಿಸಬೇಕಿದ್ದರೆ, ಚಂದಾದಾರಿಕೆ ಅಗತ್ಯ ಇದೆ. ಇನ್ನು ಅಮೆಜಾನ್ ಇತ್ತೀಚಿಗಷ್ಟೆ ತನ್ನ ಚಂದಾದಾರಿಕೆಯಲ್ಲಿ ರಿಯಾಯಿತಿ ಬೆಲೆಗಳನ್ನು ಘೋಷಿಸಿ ಗಮನ ಸೆಳೆದಿತ್ತು. ಆದ್ರೆ, ಈಗ ಮತ್ತೆ ಚಂದಾದಾರಿಕೆ ಶುಲ್ಕದಲ್ಲಿ ಏರಿಕೆ ಮಾಡಿದ್ದು, ಬಳಕೆದಾರರಿಗೆ ಭಾರೀ ದೊಡ್ಡ ಶಾಕ್ ನೀಡಿದೆ.

ಹೌದು, ಅಮೆಜಾನ್‌ ತನ್ನ ಅಮೆಜಾನ್ ಪ್ರೈಮ್‌ ಚಂದಾದಾರಿಕೆಯ ಶುಲ್ಕದಲ್ಲಿ ಹೆಚ್ಚಳ ತಿಳಿಸಿದ್ದು, ಹಳೆಯ ಬೆಲೆಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಬೆಲೆಗಳನ್ನು ಹೆಚ್ಚಿಸಲಾಗಿದೆ. ಹೀಗಾಗಿ ನೀವೇನಾದರೂ ಸದ್ಯ ಹೊಸದಾಗಿ ಅಮೆಜಾನ್‌ ಪ್ರೈಮ್‌ ಸದಸ್ಯತ್ವವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಈಗ ನೀವು ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಪ್ರಸ್ತುತ ಹೊಸ ಆರಂಭಿಕ ದರವು 299ರೂ. ರಿಂದ ಪ್ರಾರಂಭ.

ಅಮೆಜಾನ್‌ ಮತ್ತೆ ಹೀಗೆ ಮಾಡುತ್ತೆ ಅಂತಾ ಯಾರೂ ಅಂದುಕೊಂಡಿರಲಿಲ್ಲ!

ಭಾರತದಲ್ಲಿ ಅಮೆಜಾನ್ ಪ್ರೈಮ್ ಚಂದಾದಾರಿಕೆ ಬೆಲೆ ಏರಿಕೆಯಿಂದಾಗಿ ಒಂದು ತಿಂಗಳ ಆರಂಭಿಕ ಯೋಜನೆಯ ಬೆಲೆ ಈಗ 299ರೂ. ರಿಂದ ಪ್ರಾರಂಭವಾಗುತ್ತದೆ. ಒಂದು ತಿಂಗಳ ಆರಂಭಿ ಯೋಜನೆಯ ಈ ಹಿಂದಿನ ಶುಲ್ಕ 179ರೂ. ಆಗಿತ್ತು. ಅದೇ ರೀತಿ ತ್ರೈಮಾಸಿಕ ಅಮೆಜಾನ್ ಪ್ರೈಮ್ ಯೋಜನೆಯ ಬೆಲೆ ಈಗ 599ರೂ. ಶುಲ್ಕವಾಗಲಿದೆ. ತ್ರೈಮಾಸಿಕ ಯೋಜನೆಯ ಈ ಹಿಂದಿನ ದರ 459ರೂ. ಆಗಿತ್ತು.

ಹಾಗೆಯೇ ಅಮೆಜಾನ್‌ ವಾರ್ಷಿಕ ಹಾಗೂ ವಾರ್ಷಿಕ ಪ್ರೈಮ್ ಲೈಟ್ ಯೋಜನೆಗಳ ದರದಲ್ಲಿಯೂ ಏರಿಕೆ ಮಾಡಿದೆ. ಹೀಗಾಗಿ ವಾರ್ಷಿಕ ಅವಧಿಯ ಅಮೆಜಾನ್ ಪ್ರೈಮ್ ಸದಸ್ಯತ್ವದ ಬೆಲೆ 1,499 ರೂ, ಮತ್ತು ವಾರ್ಷಿಕ ಪ್ರೈಮ್ ಲೈಟ್ ಯೋಜನೆಯ ಬೆಲೆ 999ರೂ. ಆಗಿದೆ. ಈ ಬಗ್ಗೆ ಅಧಿಕೃತ ಸೈಟ್‌ನಲ್ಲಿ ತಿಳಿಸಲಾಗಿದೆ.

ಅಮೆಜಾನ್‌ ಮತ್ತೆ ಹೀಗೆ ಮಾಡುತ್ತೆ ಅಂತಾ ಯಾರೂ ಅಂದುಕೊಂಡಿರಲಿಲ್ಲ!

ಅಮೆಜಾನ್ ಪ್ರೈಮ್ ಸದಸ್ಯತ್ವದ ಪ್ರಯೋಜನಗಳು : ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಹೊಂದಿರುವ ಬಳಕೆದಾರರು ಪ್ರಧಾನ ಶಿಪ್ಪಿಂಗ್‌ಗೆ ಬೆಂಬಲವನ್ನು ಪಡೆಯುತ್ತಾರೆ. ಇದರಿಂದ ಇತರ ಬಳಕೆದಾರರಿಗಿಂತ ಅಮೆಜಾನ್ ಪ್ರೈಮ್‌ ಸದಸ್ಯರು ಹೆಚ್ಚು ತ್ವರಿತವಾಗಿ ವಿತರಣೆಯಾಗಿದೆ. ಜನರು ಪ್ರೈಮ್ ವಿಡಿಯೋ, ಪ್ರೈಮ್ ಮ್ಯೂಸಿಕ್, ಪ್ರೈಮ್ ಡೀಲ್‌ಗಳು, ಪ್ರೈಮ್ ರೀಡಿಂಗ್, ಪ್ರೈಮ್ ಗೇಮಿಂಗ್ ಮತ್ತು ಅಮೆಜಾನ್ ಫ್ಯಾಮಿಲಿಗೆ ಸಹ ಪ್ರವೇಶವನ್ನು ಪಡೆಯುತ್ತಾರೆ.

ನೆಟ್‌ಫ್ಲಿಕ್ಸ್ ಚಂದಾದಾರಿಕೆ : ನೆಟ್‌ಫ್ಲಿಕ್ಸ್‌ ಒಟ್ಟು ನಾಲ್ಕು ಯೋಜನೆಗಳ ಆಯ್ಕೆ ಪಡೆದಿದ್ದು, ಅವೆಲ್ಲವೂ ಅನಿಯಮಿತ ಕಂಟೆಂಟ್‌ ಪ್ರವೇಶವನ್ನು ನೀಡುತ್ತವೆ. ಭಾರತದಲ್ಲಿ ನೆಟ್‌ಫ್ಲಿಕ್ಸ್‌ನ ಮೂಲ ಯೋಜನೆ 'ಮೊಬೈಲ್' ಆಗಿದ್ದು, ಈ ಯೋಜನೆಯು ತಿಂಗಳಿಗೆ ಕೇವಲ 149 ರೂ. ಶುಲ್ಕ ಪಡೆದಿದೆ. ಒಂದು ಸಮಯದಲ್ಲಿ ಒಂದು ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಕಂಟೆಂಟ್‌ ಅನ್ನು ವೀಕ್ಷಿಸಲು ಈ ಯೋಜನೆಯು ಅನುಮತಿಸುತ್ತದೆ.

ಅಮೆಜಾನ್‌ ಮತ್ತೆ ಹೀಗೆ ಮಾಡುತ್ತೆ ಅಂತಾ ಯಾರೂ ಅಂದುಕೊಂಡಿರಲಿಲ್ಲ!

ಹಾಗೆಯೇ ನೆಟ್‌ಫ್ಲಿಕ್ಸ್ (Netflix) ನ ಮೂಲ ಯೋಜನೆಯು ತಿಂಗಳಿಗೆ 199 ರೂ. ಆಗಿದ್ದು, ಈ ಯೋಜನೆಯು 1 ಬೆಂಬಲಿತ ಡಿವೈಸ್‌ನಲ್ಲಿ ಒಂದು ಸಮಯದಲ್ಲಿ ಹೆಚ್‌ಡಿ ಗುಣಮಟ್ಟದಲ್ಲಿ ಕಂಟೆಂಟ್‌ ಅನ್ನು ವೀಕ್ಷಿಸಲು ಬಳಕೆದಾರರಿಗೆ ಅನುಮತಿಸುತ್ತದೆ. ಆದರೆ, ಇದನ್ನು ಟಿವಿ, ಲ್ಯಾಪ್‌ಟಾಪ್, ಫೋನ್ ಮತ್ತು ಟ್ಯಾಬ್ಲೆಟ್‌ನಲ್ಲಿಯೂ ಬಳಸಬಹುದು.

ಇದಲ್ಲದೇ ನೆಟ್‌ಫ್ಲಿಕ್ಸ್‌ ಸ್ಟ್ಯಾಂಡರ್ಡ್ ಪ್ಲಾನ್ ಯೋಜನೆಯು, ತಿಂಗಳಿಗೆ 499 ರೂ. ಶುಲ್ಕ ಇದ್ದು, ಇದು ಪೂರ್ಣ HD ರೆಸಲ್ಯೂಶನ್‌ನಲ್ಲಿ ಒಂದು ಸಮಯದಲ್ಲಿ 2 ಡಿವೈಸ್‌ಗಳಲ್ಲಿ ವೀಕ್ಷಣೆ ಸಮಯವನ್ನು ಬೆಂಬಲಿಸುತ್ತದೆ. ಅದೇ ರೀತಿ ಕೊನೆಯದಾಗಿ, ಉನ್ನತ-ಮಟ್ಟದ ಪ್ರೀಮಿಯಂ ನೆಟ್‌ಫ್ಲಿಕ್ಸ್ ಯೋಜನೆಯು ತಿಂಗಳಿಗೆ 649 ರೂ. ಆಗಿದ್ದು, ಇದು ಅಲ್ಟ್ರಾ HD ರೆಸಲ್ಯೂಶನ್‌ನಲ್ಲಿ ಒಂದು ಸಮಯದಲ್ಲಿ 4 ಡಿವೈಸ್‌ಗಳಲ್ಲಿ ವೀಕ್ಷಿಸುವ ಸಮಯವನ್ನು ಅನುಮತಿಸುತ್ತದೆ.

Best Mobiles in India

English summary
Amazon Prime membership price hiked in India: Check New Price and Other details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+