Home
ಸುದ್ದಿಜಾಲ

ನಾಳೆಯಿಂದ ಅಮೆಜಾನ್ ಪ್ರೈಮ್ ಚಂದಾದಾರಿಕೆ ದರ ಏರಿಕೆ!

ಜನಪ್ರಿಯ ಓಟಿಟಿ ತಾಣಗಳಲ್ಲಿ ಒಂದಾದ ಅಮೆಜಾನ್ ಪ್ರೈಮ್ ನಾಳೆಯಿಂದ (ಡಿಸೆಂಬರ್ 14, 2021) ಚಂದಾದಾರಿಕೆ ಶುಲ್ಕವನ್ನು ಶೇಕಡಾ 50 ರಷ್ಟು ಹೆಚ್ಚಳ ಮಾಡಲಿದೆ. ಈ ಬಗ್ಗೆ ಈಗಾಗಲೇ ಕಂಪನಿಯು ಸುಳಿವು ನೀಡಿತ್ತು. ಜನಪ್ರಿಯ 999 ರೂ.ಗಳ ಅಮೆಜಾನ್ ಪ್ರೈಮ್ ವಾರ್ಷಿಕ ಪ್ರಧಾನ ಸದಸ್ಯತ್ವ ಯೋಜನೆಯು, ಬೆಲೆ ಹೆಚ್ಚಳದಿಂದ 1,499 ರೂ.ಗಳಲ್ಲಿ ಕಾಣಿಸಿಕೊಳ್ಳಲಿದೆ. ಹೀಗಾಗಿ ಹಳೆಯ ಅಮೆಜಾನ್ ಪ್ರೈಮ್ ಸದಸ್ಯತ್ವ ಪಡೆಯಲು ಇಂದೇ ಕಡೆಯ ದಿನವಾಗಿದೆ.

ನಾಳೆಯಿಂದ ಅಮೆಜಾನ್ ಪ್ರೈಮ್ ಚಂದಾದಾರಿಕೆ ದರ ಏರಿಕೆ!

ಹೌದು, ಡಿಸೆಂಬರ್ 14, 2021 ರಿಂದ ಅಮೆಜಾನ್ ಪ್ರೈಮ್ ಚಂದಾದಾರಿಕೆ ಶೇಕಡಾ 50 ರಷ್ಟು ಬೆಲೆ ಏರಿಕೆ ಆಗಲಿದೆ. ಅಮೆಜಾನ್ ಪ್ರೈಮ್ ವಾರ್ಷಿಕ ಸದಸ್ಯತ್ವ ಸೇರಿದಂತೆ ಇತರೆ ಅಲ್ಪಾವಧಿಯ ಯೋಜನೆಗಳ ಬೆಲೆಯಲ್ಲಿ ಹೆಚ್ಚಳ ಕಾಣಿಸಲಿದೆ. ಮೂರು ತಿಂಗಳ ಅಮೆಜಾನ್ ಪ್ರೈಮ್ ಯೋಜನೆಯು 329 ರೂ.ಗೆ ಬದಲಾಗಿ 459 ರೂ. ಗಳಾದರೆ, ಸದ್ಯ 129 ರೂ.ಗಳಿಗೆ ಲಭ್ಯವಿದ್ದ ಒಂದು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಯೋಜನೆಯು 179 ರೂ.ಗಳಿಗೆ ಹೆಚ್ಚಳ ಆಗಲಿದೆ.

ಅಮೆಜಾನ್ ಚಂದಾದಾರಿಕೆ ಬೆಲೆಗಳನ್ನು ಹೆಚ್ಚಿಸಿದರೂ ಸಹ ಅಮೆಜಾನ್ ಪ್ರೈಮ್ ಚಂದಾದಾರಿಕೆ ಪ್ರಯೋಜನಗಳು ಒಂದೇ ಆಗಿರುಲಿವೆ. ಅಮೆಜಾನ್ ಪ್ರೈಮ್ ಭಾರತದಲ್ಲಿ ಆರಂಭದಿಂದಲೂ ಬಳಕೆದಾರರಿಗೆ ಉತ್ತಮ ಸೇವೆಗಳನ್ನು ನೀಡಿದೆ. ಈ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋ, ಅಮೆಜಾನ್ ಪ್ರೈಮ್ ಮ್ಯೂಸಿಕ್ ಸೇರಿದಂತೆ ಹಲವು ಸೇವೆಗಳನ್ನು ಒದಗಿಸಿದೆ.

ನಾಳೆಯಿಂದ ಅಮೆಜಾನ್ ಪ್ರೈಮ್ ಚಂದಾದಾರಿಕೆ ದರ ಏರಿಕೆ!

ಅಮೆಜಾನ್ ಪ್ರೈಮ್ ಭಾರತದಲ್ಲಿ ಶುರುವಾದಾಗಿನಿಂದ ಕಂಪನಿಯು ಬಳಕೆದಾರರಿಗೆ ನೀಡುವ ಮೌಲ್ಯವನ್ನು ಮಾತ್ರ ಹೆಚ್ಚಿಸಿದೆ. ಹಾಗೆಯೇ ಗಮನಿಸಬೇಕಾದ ಸಂಗತಿ ಯೆಂದರೆ ಕೆಲವು ಟೆಲಿಕಾಂಗಳು ತಮ್ಮ ಪ್ರಿಪೇಯ್ಡ್ ಯೋಜನೆಗಳೊಂದಿಗೆ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಗ್ರಾಹಕರಿಗೆ ನೀಡುತ್ತಿವೆ. ಆದರೆ ಇತ್ತೀಚಿಗೆ ಜಿಯೋ, ಏರ್‌ಟೆಲ್, ವಿ ಟೆಲಿಕಾಂಗಳು ತಮ್ಮ ಪ್ರೀಪೇಯ್ಡ್‌ ಯೋಜನೆಗಳ ದರ ಹೆಚ್ಚಳ ಮಾಡಿದ್ದು, ಅಮೆಜಾನ್ ಪ್ರೈಮ್ ಚಂದಾದಾರಿಕೆಯ ಪ್ರಯೋಜನದಲ್ಲಿ ಬದಲಾವಣೆ ಆಗಿವೆ.

ನಾಳೆಯಿಂದ ಅಮೆಜಾನ್ ಪ್ರೈಮ್ ಚಂದಾದಾರಿಕೆ ದರ ಏರಿಕೆ!

ಕೆಲವು ಜನಪ್ರಿಯ ಓಟಿಟಿಗಳ ಬಗ್ಗೆ ಇಲ್ಲಿದೆ ಮಾಹಿತಿ:
ನೆಟ್‌ಫ್ಲಿಕ್ಸ್‌ OTT ಆಪ್‌
ನೆಟ್‌ಫ್ಲಿಕ್ಸ್‌ ತಾಣ ನಿಮಗೆಲ್ಲಾ ತಿಳಿದಿರುವ ಪ್ರಮುಖ ಓಟಿಟಿ ಅಪ್ಲಿಕೇಶನ್ ಆಗಿದೆ. ಈ ತಾಣದಲ್ಲಿ ಚಲನಚಿತ್ರಗಳು ಮತ್ತು ವೆಬ್‌ ಸರಣಿಗಳು, ಸೇಕ್ರೆಡ್ ಗೇಮ್ಸ್, ಸ್ಟ್ರೇಂಜರ್ ಥಿಂಗ್ಸ್, ಡೇರ್‌ಡೆವಿಲ್, ಪನಿಷರ್, ಆರೆಂಜ್ ಈಸ್ ದಿ ನ್ಯೂ ಬ್ಲ್ಯಾಕ್, ನಾರ್ಕೋಸ್, ಹೌಸ್ ಆಫ್ ಕಾರ್ಡ್ಸ್, ಕಾರ್ಯಕ್ರಮಗಳು ಹೆಚ್ಚು ಅಟ್ರ್ಯಾಕ್ಟ್ ಆಗಿವೆ. ಈ ಆಪ್‌ ನಾಲ್ಕು ವಿಭಿನ್ನ ಚಂದಾದಾರಿಕೆ ಯೋಜನೆಗಳನ್ನು ಹೊಂದಿದ್ದು, ಒಂದು ಸಮಯದಲ್ಲಿ 4 ಡಿವೈಸ್‌ಗಳ ಸ್ಕ್ರೀನ್‌ಗಳಲ್ಲಿ ಈ ಆಪ್ ಬಳಸುವ ಚಂದಾದಾರಿಕೆಯ ಪ್ಲ್ಯಾನ್ ಸಹ ಇದೆ.

ಅಮೆಜಾನ್ ಪ್ರೈಮ್‌ ವಿಡಿಯೊ
ನೆಟ್‌ಫ್ಲಿಕ್ಸ್‌ಗೆ ನೇರ ಪೈಪೋಟಿ ನೀಡುತ್ತಿರುವ ಪ್ರಮುಖ ಓಟಿಟಿ ಆಪ್ ಅಂದ್ರೇ ಅದು ಅಮೆಜಾನ್ ಪ್ರೈಮ್‌ ವಿಡಿಯೊ ಆಗಿದೆ. ಈ ತಾಣದಲ್ಲಿ ಬಳಕೆದಾರರು ಚಲನಚಿತ್ರಗಳ ಜೊತೆಗೆ ಭಿನ್ನ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಬಹುದು. ದಿ ಮ್ಯಾನ್ ಇನ್ ದಿ ಹೈ ಕ್ಯಾಸಲ್, ಮೇಡ್ ಇನ್ ಹೆವನ್ ಹಾಗೂ ಹಾಸ್ಯ ಕಾರ್ಯಕ್ರಮಗಳು ಈ ಆಪ್‌ನಲ್ಲಿ ಸೇರಿವೆ. ಅಮೆಜಾನ್ ಪ್ರೈಮ್ ವಿಡಿಯೊ ಎರಡು ಚಂದಾದಾರಿಕೆ ಆಯ್ಕೆಗಳನ್ನು ಹೊಂದಿದ್ದು, ಮಾಸಿಕ ಮತ್ತು ವಾರ್ಷಿಕ.

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ OTT ಆಪ್‌
ಕ್ರೀಡಾ ಅಭಿಮಾನಿಗಳಿಂಗತೂ ಹಾಟ್‌ಸ್ಟಾರ್ ಹಾಟ್‌ ಫೇವರೇಟ್ ಆಗಿದೆ. ಯಾಕಂದ್ರೆ ಈ ಆಪ್ ಕ್ರಿಕೆಟ್, ಐಪಿಎಲ್ ಮ್ಯಾಚ್‌ ಸೇರಿದಂತೆ ಇತರೆ ಕ್ರೀಡೆಗಳ ನೇರ ಪ್ರಸಾರಗಳನ್ನು ಪ್ರದರ್ಶನ ಮಾಡುತ್ತದೆ. ಜೊತೆಗೆ ಸಿನಿಮಾ ಹಾಗೂ ವಿಶೇಷ ಕಾರ್ಯಕ್ರಮಗಳ ಪ್ರಸಾರದ ಆಯ್ಕೆಗಳನ್ನು ಈ ತಾಣವು ಹೊಂದಿದೆ. ಇನ್ನು ಹಾಟ್‌ಸ್ಟಾರ್ ಭಿನ್ನ ಚಂದಾದಾರಿಕೆಯ ಆಯ್ಕೆಗಳನ್ನು ಒಳಗೊಂಡಿದೆ.

ALT ಬಾಲಾಜಿ OTT ಆಪ್‌
ALT ಬಾಲಾಜಿ OTT ಆಪ್‌ ಜನಪ್ರಿಯ ಬಾಲಾಜಿ ಟೆಲಿಫಿಲ್ಮ್ ಸಂಸ್ಥೆಯ ಅಂಗಸಂಸ್ಥೆಯಾಗಿದೆ. ಈ ಆಪ್‌ನಲ್ಲಿ ಬಳಕೆದಾರರು ಚಲನಚಿತ್ರಗಳು, ಭಿನ್ನ ಪ್ರದರ್ಶನಗಳು ಮತ್ತು ಮಕ್ಕಳ ವಿಶೇಷತೆಯ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ಈ ಸಂಸ್ಥೆಯು ಹೆಚ್ಚಿನ ಕಂಟೆಂಟ್ ಸಂಗ್ರಹಗಳನ್ನು ಹೊಂದಿದೆ. ಇನ್ನು ಈ ಆಪ್ ಎರಡು ಪ್ರಮುಖ ಚಂದಾದಾರಿಕೆಯ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಮಾಸಿಕ ಮತ್ತು ವಾರ್ಷಿಕ ಆಗಿವೆ.

Best Mobiles in India

English summary
Amazon Prime Price of Rs 999 Ending Today: Get it Before Price Hike.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+