Home
ಸುದ್ದಿಜಾಲ

ಜಿಯೋ ಸೆಟ್‌ಅಪ್‌ ಬಾಕ್ಸ್‌ನಲ್ಲಿ ಈಗ ಅಮೆಜಾನ್‌ ಪ್ರೈಮ್‌ ವಿಡಿಯೊ ಲಭ್ಯ!

ರಿಲಾಯನ್ಸ್‌ ಜಿಯೋ ಸಂಸ್ಥೆಯು ತನ್ನ ಗ್ರಾಹಕರಗೆ ಈಗಾಗಲೆ ಜಿಯೋ ಫೈಬರ್‌ನಲ್ಲಿ ಹಲವು ಸೇವೆಗಳನ್ನು ಲಭ್ಯ ಮಾಡಿದೆ. ಆ ಪೈಕಿ ಇದೀಗ ಜಿಯೋ ಫೈಬರ್ STB ಬಳಕೆದಾರರು ಈಗ ಜನಪ್ರಿಯ ಅಮೆಜಾನ್ ಪ್ರೈಮ್ ವಿಡಿಯೋದ ಪ್ರೀಮಿಯಂ ಕಂಟೆಂಟ್ ಲೈಬ್ರರಿಯನ್ನು ಆನಂದಿಸಬಹುದಾಗಿದೆ. ಆದರೆ ಅಮೆಜಾನ್‌ ಪ್ರೈಮ್‌ ವಿಡಿಯೊ ಉಚಿತವಾಗಿ ಲಭ್ಯವಾಗುವುದಿಲ್ಲ. ಇದೊಂದಿಗೆ ಜಿಯೋ ಪ್ಲಾಟ್‌ಫಾರ್ಮ್‌ನಲ್ಲಿ ಇನ್ನಷ್ಟು ಹೆಚ್ಚಿನ ಮನರಂಜನೆಯ ಅಪ್ಲಿಕೇಶನ್‌ಗಳು ಸಹ ಲಭ್ಯ ಇವೆ.

ಜಿಯೋ ಫೈಬರ್‌

ಹೌದು, ಜಿಯೋ ಫೈಬರ್‌ ಸೆಟ್‌ಟಾಪ್‌ ಬಾಕ್ಸ್‌-STB ಬಳಕೆದಾರರಿಗೆ ಈಗ ಅಮೆಜಾನ್ ಪ್ರೈಮ್ ವಿಡಿಯೊ ಸೇವೆಯು ಲಭ್ಯವಾಗುತ್ತದೆ. ಆದರೆ ಈ ಸೇವೆಯು ಉಚಿತ ಇರುವುದಿಲ್ಲ ಎನ್ನಲಾಗಿದೆ. ಬಳಕೆದಾರರು ಸೂಕ್ತ ಅಮೆಜಾನ್‌ ಪ್ರೈಮ್ ಚಂದಾದಾರಿಕೆ ಪಡೆದು ಸೇವೆಯನ್ನು ಬಳಕೆ ಮಾಡಬಹುದಾಗಿದೆ. ಇನ್ನು ಜಿಯೀ ಫೈಬರ್‌ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ಇತರೆ ವಿಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳ ಸೌಲಭ್ಯ ಲಭ್ಯ ಇದೆ. ಆ ಬಗ್ಗೆ ಯಿಳಿಯಲು ಮುಂದೆ ಓದಿರಿ.

ಜಿಯೋ ಸಿನೆಮಾ

ಜಿಯೋ ಫೈಬರ್ ಸೆಟ್‌ಟಾಪ್‌ ಬಾಕ್ಸ್‌ ತನ್ನ ಬಳಕೆದಾರರಿಗೆ ಈಗಾಗಲೇ ಅನೇಕ OTT ವಿಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಲಭ್ಯವಾಗಿಸಿದೆ. ಅವುಗಳಲ್ಲಿ ಸೋನಿ ಎಲ್‌ಐವಿ, ಜೀ5, ವೂಟ್, ಜಿಯೋ ಸಿನೆಮಾ, ಡಿಸ್ನಿ ಪ್ಲಸ್‌, ಆಲ್ಟ್ ಬಾಲಾಜಿ ಮತ್ತು ಸನ್ ಎನ್‌ಎಕ್ಸ್‌ಟಿ ಸೇರಿದಂತೆ ಹಲವು ಜನಪ್ರಿಯ OTT ಆಪ್ಸ್‌ ಸೇರಿಸಿದೆ. ಆ ಲಿಸ್ಟಿಗೆ ಈಗ ಅಮೆಜಾನ್ ಪ್ರೈಮ್ ವಿಡಿಯೋ ಹೊಸ ಸೇರ್ಪಡೆ ಆಗಿದೆ.

ಆಂಡ್ರಾಯ್ಡ್ 9 ಓಎಸ್

ಇನ್ನು ಜಿಯೋ ಫೈಬರ್ ಸೆಟ್‌ಟಾಪ್‌ ಬಾಕ್ಸ್ ಆಂಡ್ರಾಯ್ಡ್ ಟಿವಿ ಆಧಾರಿತವಾಗಿದ್ದು, ಪ್ರಸ್ತುತ ಆಂಡ್ರಾಯ್ಡ್ 9 ಓಎಸ್‌ ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸೆಟ್-ಟಾಪ್ ಬಾಕ್ಸ್ ವಿವಿಧ ಒಟಿಟಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಿದ್ದು, ಬಳಕೆದಾರರಿಗೆ ಪ್ರೀಮಿಯಂ ಕಂಟೆಂಟ್‌ ಅನ್ನು ಸ್ಟ್ರೀಮ್ ಮಾಡಲು ಅನುವು ಮಾಡಿಕೊಡುತ್ತದೆ. ಜಿಯೋ ಫೈಬರ್ ಎಸ್‌ಟಿಬಿ ಟಿವಿ ಪ್ಲಸ್ ಆಪ್‌ ಬಳಸುವ ಮೂಲಕ ವೆಬ್‌ನಲ್ಲಿ ಲೈವ್ ಟಿವಿ ಚಾನೆಲ್‌ಗಳನ್ನು ವೀಕ್ಷಿಸುವ ಅವಕಾಶ ಲಭ್ಯ ಮಾಡಿದೆ.

ವಾಯಿಸ್‌ ನಿಯಂತ್ರಣ

ಜಿಯೋ ತನ್ನ ಚಂದಾದಾರರಿಗೆ ಹಲವು ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಪ್ರಯೋಜನಗಳನ್ನು ನಿರಂತರವಾಗಿ ನೀಡುತ್ತಿದೆ. ಜಿಯೋಫೈಬರ್ ಎಸ್‌ಟಿಬಿಯನ್ನು ಬಳಸುತ್ತಿರುವ ಚಂದಾದಾರರಿಗೆ ಕಂಟೆಂಟ್‌ ಅನ್ನು ಪ್ರವೇಶಿಸಲು ಇತರ ಮಾಧ್ಯಮ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಂತೆ ಸಕ್ರಿಯ ಇಂಟರ್ನೆಟ್ ಸಂಪರ್ಕದ ಅಗತ್ಯವಿದೆ. ಅಲ್ಲದೆ, ಹೆಚ್ಚು ಆರಾಮದಾಯಕ ಅನುಭವವನ್ನು ನೀಡುವ ಉದ್ದೇಶದಿಂದ, ಜಿಯೋಫೈಬರ್ ಎಸ್‌ಟಿಬಿ ರಿಮೋಟ್ ವಾಯಿಸ್‌ ನಿಯಂತ್ರಣ ಬೆಂಬಲದೊಂದಿಗೆ ಒದಗಿಸಿದೆ.

Best Mobiles in India

English summary
Jio has finally brought Amazon Prime Video support to its JioFiber set-top-box (STB).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+