ಕ್ರಿಕೆಟ್ ಅಭಿಮಾನಿಗಳಿಗೆ ಏರ್‌ಟೆಲ್‌ನಿಂದ ಭರ್ಜರಿ ಆಫರ್; ಈ ರೀಚಾರ್ಜ್ ಪ್ಲ್ಯಾನ್ ಗಮನಿಸಿ
ಟೆಲಿಕಾಂ ವಲಯದಲ್ಲಿ ಜಿಯೋ, ಏರ್ ಟೆಲ್ ಹಾಗೂ ವಿ ಒಂದಕ್ಕೊಂದು ಪೈಪೋಟಿಯಲ್ಲಿ ಆಫರ್ ಮೇಲೆ ಆಫರ್ ನೀಡಿ ಗ್ರಾಹಕರನ್ನು ಸೆಳೆಯುತ್ತಿದೆ. ಅದರಲ್ಲೂ ಜಿಯೋ ಕಡಿಮೆ ದರದ ಪ್ಲ್ಯಾನ್‌ನಲ್ಲಿ ಹೆಚ್ಚು ಸೇವೆಗಳನ್ನು ನೀಡುತ್ತಾ ಬರುತ್ತಿದ್ದು, ಇದಕ್ಕೆ ಪೈಪೋಟಿ ನೀಡಲೆಂದೇ ಏರ್‌ಟೆಲ್ ಈಗ ತನ್ನ ರೀಚಾರ್ಜ್ ಪ್ಲ್ಯಾನ್‌ಗಳ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ.

ಹೌದು, ಏರ್‌ಟೆಲ್ ಕೆಲವು ದಿನಗಳ ಹಿಂದೆಯಷ್ಟೇ ಏರ್‌ಟೆಲ್ ಬ್ಲಾಕ್ ಪ್ಲಾನ್ 699 ರೂ. ಮೂಲಕ ಟಿವಿ ಮತ್ತು ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಬಯಸುವ ಗ್ರಾಹಕರಿಗೆ ಉತ್ತಮ ಸೌಲಭ್ಯ ನೀಡಿತ್ತು. ಇದೀಗ ಕ್ರಿಕೆಟ್ ಅಭಿಮಾನಿಗಳಿಗೆ ಸಂತೋಷವಾಗುವ ವಿಷಯದ ಬಗ್ಗೆ ಮಾಹಿತಿ ನೀಡಿದೆ. ಪ್ರಸ್ತುತ ಏರ್‌ಟೆಲ್ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆಗಾಗಿ 699 ರೂ, ರೂ 999 ರೂ, 2999 ಹಾಗೂ 3,359 ರೂ. ನಾಲ್ಕು ಕ್ರಿಕೆಟ್ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತಿದೆ. ಈ ಪ್ಲ್ಯಾನ್‌ಗಳು ಕ್ರೀಡಾ ಅಭಿಮಾನಿಗಳಿಗೆ ಉಪಯೋಗ ಆಗಲಿದೆ.

699 ರೂ.ಗಳ ಕ್ರಿಕೆಟ್ ಪ್ರಿಪೇಯ್ಡ್ ಯೋಜನೆ
ಏರ್‌ಟೆಲ್‌ನ 699 ರೂ. ಗಳ ಕ್ರಿಕೆಟ್ ಪ್ರಿಪೇಯ್ಡ್ ಪ್ಲ್ಯಾನ್ 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಪ್ರತಿದಿನವೂ 3GB ಡೇಟಾವನ್ನು ಪಡೆಯಬಹುದು. ಅದೇ ರೀತಿ ಅನಿಯಮಿತ ಕರೆ ಸೌಲಭ್ಯದ ಜೊತೆಗೆ ಅಮೆಜಾನ್ ಪ್ರೈಮ್ ವೀಡಿಯೊ ಚಂದಾದಾರಿಕೆ ಆಯ್ಕೆ ನೀಡಲಾಗಿದೆ. ಈ ಮೂಲಕ ನೀವು ಕ್ರಿಕೆಟ್ ವೀಕ್ಷಿಸಬಹುದಾಗಿದೆ.

ಏರ್‌ಟೆಲ್‌ನ 999 ರೂ. ಗಳ ಕ್ರಿಕೆಟ್ ಪ್ರಿಪೇಯ್ಡ್ ಪ್ಯಾಕ್
ಏರ್‌ಟೆಲ್‌ನ 999 ರೂ. ಗಳ ಕ್ರಿಕೆಟ್ ಪ್ರಿಪೇಯ್ಡ್ ಪ್ಲ್ಯಾನ್ 84 ದಿನಗಳ ಮಾನ್ಯತೆಯೊಂದಿಗೆ ಪ್ರತಿದಿನ 2.5GB ಡೇಟಾ ಬಳಕೆ ಮಾಡಲು ಅನುಮತಿಸುತ್ತದೆ. ಹಾಗೆಯೇ ಅನಿಯಮಿತ ಕರೆ ಪ್ರಯೋಜದ ಜೊತೆಗೆ 100 ದೈನಂದಿನ ಎಸ್‌ಎಮ್‌ಎಸ್ ಪ್ರಯೋಜನ ಲಭ್ಯವಾಗಲಿದೆ. ಇನ್ನುಳಿದಂತೆ. ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆ ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಲೈಬ್ರರಿಗೆ ಈ ಪ್ಲ್ಯಾನ್ ಪ್ರವೇಶ ನೀಡುತ್ತದೆ.

ಏರ್‌ಟೆಲ್‌ನ 2,999 ರೂ. ಕ್ರಿಕೆಟ್ ಪ್ರಿಪೇಯ್ಡ್ ಪ್ಲ್ಯಾನ್
ಏರ್‌ಟೆಲ್ 2,999ರೂ. ಗಳ ಕ್ರಿಕೆಟ್ ಪ್ರಿಪೇಯ್ಡ್ ಪ್ಲ್ಯಾನ್ ಮೂಲಕ ಒಂದು ವರ್ಷದ ಮಾನ್ಯತೆಯನ್ನು ಪಡೆದುಕೊಂಡಿದೆ. ಹಾಗೆಯೇ ದಿನವೂ ನಿಮಗೆ 2GB ಡೇಟಾ ಲಬ್ಯವಾಗಲಿದ್ದು, ಅನಿಯಮಿತ ಕರೆ ಹಾಗೂ ಪ್ರತಿದಿನ 100 ಎಸ್‌ಎಮ್ಎಸ್ ಕಳುಹಿಸಬಹುದಾಗಿದೆ. ಈ ಪ್ಲ್ಯಾನ್ ಮೂಲಕ ಒಂದು ವರ್ಷದ ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಚಂದಾದಾರಿಕೆ ಪಡೆಯಬಹುದಾಗಿದ್ದು, ಕ್ರಿಕೆಟ್ ಅಭಿಮಾನಿಗಳು ವರ್ಷಪೂರ್ತಿ ತಮ್ಮ ನೆಚ್ಚಿನ ಆಟವನ್ನು ವೀಕ್ಷಣೆ ಮಾಡಬಹುದಾಗಿದೆ.

3,359 ರೂ. ಗಳ ಕ್ರಿಕೆಟ್ ಪ್ರಿಪೇಯ್ಡ್ ಯೋಜನೆ
ಏರ್‌ಟೆಲ್‌ನ 3,359 ರೂ. ಗಳ ಕ್ರಿಕೆಟ್ ಪ್ರಿಪೇಯ್ಡ್ ಪ್ಲ್ಯಾನ್ ಒಂದು ವರ್ಷದ ವರೆಗೆ ಮಾನ್ಯವಾಗಲಿದ್ದು, ನೀವು ಈ ಮೂಲಕ ಪ್ರತಿದಿನ 2.5GB ಡೇಟಾ ಪ್ರಯೋಜನ ಹಾಗೂ ಅನಿಯಮಿತ ಕರೆ ಪ್ರಯೋಜನಗಳ ಜೊತೆಗೆ ದಿನವೂ 100 ಎಸ್‌ಎಮ್‌ಎಸ್ ಸೌಲಭ್ಯ ನೀಡಲಾಗಿದೆ. ಹಾಗೆಯೇ ಈ ಪ್ಲ್ಯಾನ್‌ನಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ವಿಡಿಯೋಗೆ ಒಂದು ವರ್ಷದ ಚಂದಾದಾರಿಕೆ ಪಡೆದುಕೊಳ್ಳಬಹುದು.

ವೈ-ಫೈ, ಟಿವಿ, ಓಟಿಟಿ ಲಭ್ಯ!
ಇದಿಷ್ಟೇ ಅಲ್ಲದೆ ನೀವು ಏರ್‌ಟೆಲ್ ಬ್ಲ್ಯಾಕ್ 699ರೂ. ಗಳ ಪ್ಲ್ಯಾನ್‌ನಲ್ಲಿ 40 Mbps ವೇಗದೊಂದಿಗೆ ಎಕ್ಸ್‌ಸ್ಟ್ರೀಮ್ ಫೈಬರ್ ಕನೆಕ್ಷನ್ ಪಡೆಯಬಹುದಾಗಿದೆ. ಇದರಲ್ಲಿ ತಿಂಗಳಿಗೆ 3.33TB ಡೇಟಾ ಸೌಲಭ್ಯ ಲಭ್ಯವಾಗಲಿದ್ದು. ಇದರೊಂದಿಗೆ ಅನಿಯಮಿತ ಕರೆಗಳ ಆಯ್ಕೆ ಸಹ ನೀಡಲಾಗಿದೆ. ಇದರೊಂದಿಗೆ ಗ್ರಾಹಕರು 300ರೂ. ಮೌಲ್ಯದ ಟಿವಿ ಚಾನೆಲ್‌ಗಳೊಂದಿಗೆ ಡಿಟಿಎಚ್ ಸಂಪರ್ಕವನ್ನು ಸಹ ಪಡೆಯಬಹುದಾಗಿದೆ.


Click it and Unblock the Notifications








