Home
ಸುದ್ದಿಜಾಲ

ಅಮೆಜಾನ್‌ ಪ್ರೈಮ್‌ vs ಅಮೆಜಾನ್ ಪ್ರೈಮ್‌ ಲೈಟ್‌: ಯಾವುದು ಬೆಸ್ಟ್‌?

ಅಮೆಜಾನ್‌ ಕೇವಲ ಇ-ಕಾಮರ್ಸ್ ಸೇವೆ ಮಾತ್ರ ನೀಡದೆ ಮಾಹಿತಿ ಹಾಗೂ ಮನರಂಜನೆ ಸಹ ನಿಡುತ್ತದೆ. ಇದರ ಭಾಗವಾಗಿಯೇ ಅಮೆಜಾನ್ ಇಂಡಿಯಾ ಇತ್ತೀಚೆಗೆ ಅಮೆಜಾನ್ ಪ್ರೈಮ್ ಲೈಟ್ ಸದಸ್ಯತ್ವ ಯೋಜನೆಯನ್ನು ಭಾರತದಲ್ಲಿ ಪರಿಚಯಿಸಿದ್ದು, ಇದು ಸ್ಟ್ಯಾಂಡರ್ಡ್ ಅಮೆಜಾನ್ ಪ್ರೈಮ್ ಸದಸ್ಯತ್ವದ ಆವೃತ್ತಿಯಾಗಿದೆ. ಈ ನಡುವೆ ಅಮೆಜಾನ್‌ ಪ್ರೈಮ್‌ ಹಾಗೂ ಅಮೆಜಾನ್ ಪ್ರೈಮ್‌ ಲೈಟ್‌ ಬಗ್ಗೆ ಚರ್ಚೆ ಆರಂಭ ಆಗಿವೆ.

ಹೌದು, ಅಮೆಜಾನ್ ಇತ್ತೀಚೆಗೆ ಅಮೆಜಾನ್ ಪ್ರೈಮ್ ಲೈಟ್ ಚಂದಾದಾರಿಕೆಯನ್ನು ಭಾರತದಲ್ಲಿ ಪರಿಚಯಿಸಿದ್ದು, ಇದರ ಬೆಲೆ 999 ರೂ.ಗಳಾಗಿದೆ. ಜೊತೆಗೆ ಸ್ಟ್ಯಾಂಡರ್ಡ್ ಅಮೆಜಾನ್ ಪ್ರೈಮ್ ಚಂದಾದಾರಿಕೆಯ ಬೆಲೆ ಭಾರತದಲ್ಲಿ 1,499 ರೂ. ಗಳಾಗಿದೆ. ಹಾಗಿದ್ರೆ ಅಮೆಜಾನ್‌ ಪ್ರೈಮ್‌ ಹಾಗೂ ಅಮೆಜಾನ್ ಪ್ರೈಮ್‌ ಲೈಟ್‌ (Amazon Prime vs Amazon Prime Lite) ಚಂದಾದಾರಿಕೆಯಲ್ಲಿ ಯಾವುದು ಬೆಸ್ಟ್‌ ಆಯ್ಕೆ ಎಂದು ತಿಳಿದುಕೊಳ್ಳಲು ಈ ಲೇಖನ ಓದಿರಿ.

ಪ್ರೈಮ್ ಲೈಟ್ ಚಂದಾದಾರಿಕೆ ಪ್ಲ್ಯಾನ್‌: ಅಮೆಜಾನ್ ಇತ್ತೀಚೆಗೆ ಅಮೆಜಾನ್ ಪ್ರೈಮ್ ಲೈಟ್ ಚಂದಾದಾರಿಕೆ ಯೋಜನೆಯನ್ನು ಪರಿಚಯಿಸಿದ್ದು, ಮೊದಲೇ ಹೇಳಿದಂತೆ ಇದು ಈಗಾಗಲೇ ಲಭ್ಯ ಇರುವ ಪ್ರೈಮ್‌ನ ಮುಂದುವರೆದ ಆವೃತ್ತಿಯಾಗಿದೆ. ಇದನ್ನು ಸ್ಟ್ಯಾಂಡರ್ಡ್ ಅಮೆಜಾನ್‌ ಪ್ರೈಮ್‌ ಚಂದಾದಾರಿಕೆಗೆ ಹೋಲಿಸಿದರೆ ಚಂದಾದಾರರಿಗೆ ಇದು ತುಂಬಾ ಕಡಿಮೆಬೆಲೆಯಲ್ಲಿ ಲಭ್ಯ ಆಗುತ್ತಿದೆ.

ಅಮೆಜಾನ್‌ ಪ್ರೈಮ್‌ vs ಅಮೆಜಾನ್ ಪ್ರೈಮ್‌ ಲೈಟ್‌: ಯಾವುದು ಬೆಸ್ಟ್‌?

ಇನ್ನುಳಿದಂತೆ ನೀವು ಪ್ರಮಾಣಿತ ಅಮೆಜಾನ್‌ ಪ್ರೈಮ್‌ ಸಬ್‌ಸ್ಕ್ರಿಪ್ಶನ್ ಪ್ಲಾನ್ ಅಥವಾ ಅಮೆಜಾನ್‌ ಪ್ರೈಮ್‌ ಲೈಟ್ ಸಬ್‌ಸ್ಕ್ರಿಪ್ಶನ್ ಪ್ಲಾನ್ ಅನ್ನು ಆರಿಸಿಕೊಳ್ಳಬೇಕೇ ಎಂದು ನಿಮಗೆ ಖಚಿತವಿಲ್ಲದಿದ್ದರೆ. ಸರಿಯಾದ ಚಂದಾದಾರಿಕೆ ಯೋಜನೆಯನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುವ ಕೆಲವು ಮಾರ್ಗದರ್ಶಿಯನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.

ಸ್ಟ್ಯಾಂಡರ್ಡ್ ಅಮೆಜಾನ್‌ ಪ್ರೈಮ್‌ ಚಂದಾದಾರಿಕೆಯ ಬೆಲೆ 1,499 ರೂ. ಗಳಾಗಿದ್ದು, ಇದಕ್ಕೆ ವಿರುದ್ಧವಾಗಿ ಅಮೆಜಾನ್ ಪ್ರೈಮ್ ಲೈಟ್ ಚಂದಾದಾರಿಕೆ ಯೋಜನೆಯು ಭಾರತದಲ್ಲಿ 999 ರೂ.ಗಳಾಗಿದೆ. ಜೊತೆಗೆ ಅಮೆಜಾನ್‌ ಪ್ರೈಮ್‌ ಚಂದಾದಾರಿಕೆಯು ಈ ಕೆಳಗಿನ ಪ್ರಯೋಜನಗಳನ್ನು ನೀಡುತ್ತದೆ.

ಇದರಲ್ಲಿ ಬಳಕೆದಾರರು ಒಂದು ದಿನದ ವಿತರಣೆ, ಎರಡು-ದಿನದ ವಿತರಣೆ, ನಿಗದಿತ ವಿತರಣೆ ಮತ್ತು ಅದೇ ದಿನದ ವಿತರಣಾ ಆಯ್ಕೆಗಳನ್ನು ಪಡೆದುಕೊಳ್ಳಬಹುದು. ಹಾಗೂ ಪ್ರತಿ ಐಟಂಗೆ 50ರೂ. ನಂತೆ ಅರ್ಹ ವಿಳಾಸಗಳಿಗೆ ಸೇವೆ ಪಡೆಯಬಹುದು. ಜೊತೆಗೆ ಆರ್ಡರ್‌ಗೆ ಯಾವುದೇ ಕನಿಷ್ಠ ಮೌಲ್ಯದ ಅಗತ್ಯವಿಲ್ಲದ ಉಚಿತ ಗುಣಮಟ್ಟದ ವಿತರಣೆ ಸೌಲಭ್ಯ ಲಭ್ಯ ಇರುತ್ತದೆ. ಮತ್ತು ಅಮೆಜಾನ್ ಪೇ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಐದು ಪ್ರತಿಶತ ಕ್ಯಾಶ್‌ಬ್ಯಾಕ್ ಸಹ ಲಭ್ಯ.

ಪ್ರೈಮ್ ರೀಡಿಂಗ್ ಪ್ರಯೋಜನಗಳು, ಇದು ಪ್ರೈಮ್ ರೀಡಿಂಗ್ ಕ್ಯಾಟಲಾಗ್‌ನಿಂದ ಇ-ಪುಸ್ತಕಗಳು, ಕಾಮಿಕ್ಸ್ ಮತ್ತು ಹೆಚ್ಚಿನದನ್ನು ಎರವಲು ಪಡೆಯುವ ಸಾಮರ್ಥ್ಯ ಮತ್ತು ಕಿಂಡಲ್ ಇ-ರೀಡರ್‌ನಲ್ಲಿ ಎರವಲು ಪಡೆದ ಪುಸ್ತಕಗಳು ಮತ್ತು ಕಾಮಿಕ್ಸ್‌ಗಳನ್ನು ಓದುವ ಸಾಮರ್ಥ್ಯ ಹಾಗೂ ಆಂಡ್ರಾಯ್ಡ್‌ , ಐಓಎಸ್‌, ಪಿಸಿ ಮತ್ತು ಉಚಿತ ಕಿಂಡಲ್ ಓದುವ ಆಪ್‌ಗಳನ್ನು ಇದು ಹೊಂದಿರುತ್ತದೆ.

ಇಷ್ಟು ಮಾತ್ರವಲ್ಲದೆ ಅಮೆಜಾನ್ ಮ್ಯೂಸಿಕ್ ಪ್ರಯೋಜನಗಳು, ಪ್ಲೇ ಲಿಸ್ಟ್‌ ಆಯ್ಕೆ, ಸ್ಟೇಷನ್‌ಗಳು ಮತ್ತು ಲಕ್ಷಾಂತರ ಹಾಡುಗಳು ಮತ್ತು ಆಲ್ಬಮ್‌ಗಳಿಗೆ ಎಂಟ್ರಿ ಸೇರಿದಂತೆ ಇವೆಲ್ಲಕ್ಕೂ ಜಾಹೀರಾತು-ಮುಕ್ತ ಪ್ರವೇಶವನ್ನು ನೀಡುತ್ತದೆ. ಇದರೊಂದಿಗೆ ಇತ್ತೀಚಿನ ಚಲನಚಿತ್ರಗಳ ಅನಿಯಮಿತ ಜಾಹೀರಾತು-ಮುಕ್ತ ವಿಡಿಯೋ ಸ್ಟ್ರೀಮಿಂಗ್‌ಗೆ ಪ್ರವೇಶವನ್ನು ನೀಡಲಿದ್ದು, ಲೈವ್ ಕ್ರೀಡೆಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಬಹುದು.

ಅಮೆಜಾನ್‌ ಪ್ರೈಮ್‌ ಲೈಟ್‌ ನಲ್ಲಿರುವ ಪ್ರಯೋಜನಗಳು ಏನೇನು?: ಇದರಲ್ಲಿ ಉಚಿತ ಎರಡು ದಿನಗಳ ವಿತರಣೆ ಮತ್ತು ಪ್ರಮಾಣಿತ ವಿತರಣೆ ಲಭ್ಯ ಇದೆ. ಜೊತೆಗೆ ಪ್ರತಿ ಐಟಂಗೆ 175ರೂ. ನಂತೆ ಅರ್ಹ ವಿಳಾಸಗಳಿಗೆ ಬೆಳಿಗ್ಗೆ ವಿತರಣೆ ಮಾಡಲಾಗುತ್ತದೆ. ಹಾಗೂ ಉಚಿತ ಪ್ರಮಾಣಿತ ವಿತರಣೆ, ಅಮೆಜಾನ್‌ ಪೇ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಐದು ಪ್ರತಿಶತ ಕ್ಯಾಶ್‌ಬ್ಯಾಕ್, ವೇಗದ ವ್ಯವಹಾರಗಳಿಗೆ ಆರಂಭಿಕ ಪ್ರವೇಶ, ಇತ್ತೀಚಿನ ಚಲನಚಿತ್ರಗಳ ಅನಿಯಮಿತ ವಿಡಿಯೋ ಸ್ಟ್ರೀಮಿಂಗ್‌ಗೆ ಅವಕಾಶ ನೀಡುತ್ತದೆ.

ಯಾವುದು ಬೆಸ್ಟ್‌? : ಅಮೆಜಾನ್‌ ನಲ್ಲಿ ಶಾಪಿಂಗ್ ಮಾಡಲು ಮಾತ್ರ ನಿಮ್ಮ ಅಮೆಜಾನ್‌ ಪ್ರೈಮ್‌ ಚಂದಾದಾರಿಕೆಯನ್ನು ಬಳಸಲು ನೀವು ಯೋಜಿಸುತ್ತಿದ್ದರೆ, ಅಮೆಜಾನ್‌ ಪ್ರೈಮ್‌ ಲೈಟ್‌ ಚಂದಾದಾರಿಕೆಯು ನಿಮಗೆ ಸರಿಯಾದ ಆಯ್ಕೆಯಾಗಿದೆ. ಆದರೆ ನೀವು ಮ್ಯೂಸಿಕ್‌, ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳ ಕ್ಯಾಟಲಾಗ್ ಮತ್ತು ಪುಸ್ತಕಗಳಿಗೆ ಅನಿಯಮಿತ ಪ್ರವೇಶವನ್ನು ಬಯಸಿದರೆ ಅಮೆಜಾನ್ ಪ್ರೈಮ್‌ ಚಂದಾದಾರಿಕೆ ಉತ್ತಮ ಆಯ್ಕೆಯಾಗಿದೆ.

Best Mobiles in India

English summary
Amazon recently introduced Amazon Prime Lite subscription in India, priced at Rs 999. Also, the standard Amazon Prime subscription costs is Rs 1,499 in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+