Home
ಸುದ್ದಿಜಾಲ

Amazon Bazaar: ಅಮೆಜಾನ್‌ನಲ್ಲಿ ಇನ್ಮುಂದೆ ಭಾರೀ ಅಗ್ಗದ ಬೆಲೆಯಲ್ಲಿ ಇವೆಲ್ಲಾ ಲಭ್ಯ.. ಏನಿದು ಹೊಸ ಸೇವೆ?

ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳಲ್ಲಿ ಅಮೆಜಾನ್‌ (Amazon) ವಿವಿಧ ಸೇಲ್‌ಗಳ ಮೂಲಕ ಸ್ಮಾರ್ಟ್‌ಫೋನ್‌ ಸೇರಿದಂತೆ ಸಾಕಷ್ಟು ಡಿವೈಸ್‌ಗಳನ್ನು ಕೈಗೆಟಕುವ ದರದಲ್ಲಿ ನೀಡುತ್ತದೆ. ಆದರೆ ಈಗ ಕೆಲವು ವಸ್ತುಗಳನ್ನು ಭಾರೀ ಅಗ್ಗದ ಬೆಲೆಯಲ್ಲಿ ಲಭ್ಯವಾಗಿಸಲು ಪ್ರತ್ಯೇಕ ವರ್ಟಿಕಲ್ ಅನ್ನು ಬಿಡುಗಡೆ ಮಾಡಲಿದೆ.

ಹೌದು, ಈಗಾಗಲೇ ಈ ಸೈಟ್‌ನಲ್ಲಿ ಕೆಲವು ವಸ್ತುಗಳು ಭಾರೀ ಅಗ್ಗದ ಬೆಲೆಗೆ ಲಭ್ಯ ಆಗುತ್ತಿವೆ. ಈ ನಡುವೆ ಇನ್ನೂ ಕಡಿಮೆ ಬೆಲೆಗೆ ಲಭ್ಯವಾಗಿಸಲು ಅಮೆಜಾನ್‌ ಮುಂದಾಗಿದೆ ಅಂದರೆ ಖಂಡಿತಾ ಗ್ರಾಹಕರು ಖುಷಿ ಪಡಲೇಬೇಕಾದ ವಿಚಾರ. ಇದರಿಂದ ಎಲ್ಲೆಲ್ಲಿ ಅಗ್ಗದ ಸ್ಟೋರ್‌ಗಳಿವೆಯೋ ಅವುಗಳ ಮುಂದೆ ಜನಜಂಗುಳಿ ಕಡಿಮೆ ಆಗಬಹುದೇನೋ. ಹಾಗಿದ್ರೆ, ಏನಿದು ಹೊಸ ಸೇವೆ?, ಯಾವೆಲ್ಲಾ ವಸ್ತುಗಳು ಈ ವಿಭಾಗದಲ್ಲಿ ಸೇಲ್‌ ಆಗಲಿವೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಅಮೆಜಾನ್‌ನಲ್ಲಿ ಇನ್ಮುಂದೆ ಭಾರೀ ಅಗ್ಗದ ಬೆಲೆಯಲ್ಲಿ ಇವೆಲ್ಲಾ ಲಭ್ಯ..

ಅಮೆಜಾನ್‌ನಲ್ಲಿ ಅಗ್ಗದ ಬೆಲೆಯ ವಸ್ತುಗಳು: ಅಗ್ಗದ ಹಾಗೂ ಬ್ರಾಂಡ್ ಅಲ್ಲದ ಬಟ್ಟೆಗಳು, ವಾಚ್‌ಗಳು ಸೇರಿದಂತೆ ಇತರೆ ಪ್ರಮುಖ ವಸ್ತುಗಳನ್ನು ಅಮೆಜಾನ್‌ ಕಡಿಮೆ ಬೆಲೆಗೆ ಮಾರಾಟ ಮಾಡಲು ಪ್ರತ್ಯೇಕ ವರ್ಟಿಕಲ್ ಅನ್ನು ಬಿಡುಗಡೆ ಮಾಡುತ್ತದೆ. ಈ ಮೂಲಕ ನೀವು ಅಮೆಜಾನ್‌ ಸೈಟ್‌ನಲ್ಲಿ ಫ್ಯಾಷನ್ ಮತ್ತು ಜೀವನಶೈಲಿಯ ವಸ್ತುಗಳಿಗೆ ಮೀಸಲಾಗಿರುವ ಹೊಸ ವಿಭಾಗವನ್ನು ಕಾಣಬಹುದಾಗಿದೆ.

ಅಮೆಜಾನ್‌ ಬಜಾರ್ (Amazon Bazaar) ಎಂದು ಕರೆಯಲ್ಪಡುವ ಈ ಹೊಸ ವಿಭಾಗವು ಮಾರಾಟಗಾರರನ್ನು ಸಕ್ರಿಯವಾಗಿ ನೇಮಿಸಿಕೊಳ್ಳುತ್ತಿದೆ ಮತ್ತು ಬಟ್ಟೆ, ಕೈಗಡಿಯಾರಗಳು, ಶೂಗಳು, ಆಭರಣಗಳು ಮತ್ತು ಇತರೆ ಸಾಮಾನ್ಯ ಸಾಮಾನು ಸರಂಜಾಮುಗಳಂತಹ 600 ರೂ.ಗಳಿಗಿಂತ ಕಡಿಮೆ ಬೆಲೆಗೆ ಲಭ್ಯ ಇರುವ ಬ್ರಾಂಡ್ ಅಲ್ಲದ ಉತ್ಪನ್ನಗಳನ್ನು ಇಲ್ಲಿ ಕಾಣಬಹುದಾಗಿದೆ.

ಮೀಶೋ ಮತ್ತು ಫ್ಲಿಪ್‌ಕಾರ್ಟ್‌ ಈಗಾಗಲೇ ಈ ಸೇವೆ ನೀಡುತ್ತಿದೆ. ಅಂದರೆ ಇದಕ್ಕಾಗಿ ಪ್ರತ್ಯೇಕ ಆಪ್‌ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಅದರಂತೆ ಈಗ ಅಮೆಜಾನ್‌ ಸಹ ಈ ಸೌಲಭ್ಯ ಕಲ್ಪಿಸಿಕೊಡಲಿದೆ. ಗಮನಿಸಬೇಕಾದ ಮಾಹಿತಿ ಏನೆಂದರೆ ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಅಜಿಯೋ ಸ್ಟ್ರೀಟ್ (Reliance Industries Ajio Street) ಎಂಬ ತನ್ನದೇ ಆದ ಬಜೆಟ್ ಸ್ನೇಹಿ ಪ್ಲಾಟ್‌ಫಾರ್ಮ್‌ ಅನ್ನೂ ಸಹ ಅಭಿವೃದ್ಧಿಪಡಿಸುತ್ತಿದೆ.

ಅಮೆಜಾನ್‌ನಲ್ಲಿ ಇನ್ಮುಂದೆ ಭಾರೀ ಅಗ್ಗದ ಬೆಲೆಯಲ್ಲಿ ಇವೆಲ್ಲಾ ಲಭ್ಯ..

ಈ ಸಂಬಂಧ ಅಮೆಜಾನ್‌ ಪ್ರತಿಕ್ರಿಯೆ ನೀಡಿದ್ದು, ಬಜಾರ್ ಅಮೆಜಾನ್‌ನಲ್ಲಿ ಹೊಸ ಸ್ಟೋರ್‌ ಆಗಿದ್ದು, ಅಲ್ಲಿ ನೀವು ನಿಮ್ಮ ಫ್ಯಾಷನ್ ಮತ್ತು ಜೀವನಶೈಲಿ (Fashion and lifestyle) ಉತ್ಪನ್ನಗಳನ್ನು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಆನ್‌ಲೈನ್‌ನಲ್ಲಿ ಸೇಲ್‌ ಮಾಡಬಹುದು, ಹೀಗಾಗಿ ನಿಮ್ಮ ವ್ಯಾಪಾರ ಇನ್ನಷ್ಟು ಲಾಭದಾಯಕವಾಗಿರಲಿದೆ ಎಂದು ತಿಳಿಸಿದೆ. ಜೊತೆಗೆ ಈ ಅಮೆಜಾನ್ ಬಜಾರ್ ಮೂಲಕ ಸೇಲ್‌ ಆಗುವ ಉತ್ಪನ್ನಗಳ ವಿತರಣಾ ವ್ಯವಸ್ಥೆ ಎರಡರಿಂದ ಮೂರು ದಿನಗಳವರೆಗೆ ಇರುತ್ತದೆ ಎನ್ನಲಾಗಿದೆ.

ಅಮೆಜಾನ್ ತನ್ನ ಹೊಸ ವಿಭಾಗವಾದ ಅಮೆಜಾನ್‌ ಬಜಾರ್ ಮೂಲಕ ಕೆಲವು ಉತ್ಪನ್ನಗಳನ್ನು ಮಾರಾಟ ಮಾಡುವಾಗ ಮಾರಾಟಗಾರರಿಂದ ಶುಲ್ಕವನ್ನು ಪಡೆಯುವುದಿಲ್ಲ ಎಂದೂ ಸಹ ತಿಳಿದುಬಂದಿದೆ. ಕಡಿಮೆ ಬೆಲೆಯ ಉತ್ಪನ್ನಗಳಿಗೆ ಈ ನಿರ್ಧಾರ ಖಂಡಿತಾ ಅಗತ್ಯ ಎನಿಸಿದೆ. ಮೀಶೋ, ಇದೇ ರೀತಿಯ ಪ್ಲಾಟ್‌ಫಾರ್ಮ್ ಆಗಿದ್ದು, ಮಾರಾಟಗಾರರಿಗೆ ಇದೂ ಸಹ ಶುಲ್ಕ ವಿಧಿಸುವುದಿಲ್ಲ, ಬದಲಿಗೆ ಜಾಹೀರಾತುಗಳಿಂದ ಮತ್ತು ಮಾರಾಟಗಾರರಿಗೆ ಶಿಪ್ಪಿಂಗ್‌ಗೆ ಸಹಾಯ ಮಾಡುವ ಮೂಲಕ ಹಣವನ್ನು ಗಳಿಸುತ್ತಿದೆ.

ಅಮೆಜಾನ್‌ನಲ್ಲಿ ಇನ್ಮುಂದೆ ಭಾರೀ ಅಗ್ಗದ ಬೆಲೆಯಲ್ಲಿ ಇವೆಲ್ಲಾ ಲಭ್ಯ..

ಆದರೆ ಅಮೆಜಾನ್ ಮತ್ತು ಇತರ ದೊಡ್ಡ ಆನ್‌ಲೈನ್ ಸ್ಟೋರ್‌ಗಳಂತೆ, ಮೀಶೋ ತನ್ನದೇ ಆದ ಗೋದಾಮುಗಳು ಅಥವಾ ವಿತರಣಾ ವ್ಯವಸ್ಥೆಯನ್ನು ಹೊಂದಿಲ್ಲ. ಫ್ಯಾಷನ್ ಮತ್ತು ಗೃಹೋಪಯೋಗಿ ವಸ್ತುಗಳಂತಹ ಕೆಲವು ಕ್ಷೇತ್ರಗಳಲ್ಲಿ ಮೀಶೋ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿಯೇ ಕೆಲವು ಗ್ರಾಹಕರನ್ನು ಅಮೆಜಾನ್‌ನಿಂದ ದೂರವಿಡುತ್ತಿದೆ. ಇದೇ ಕಾರಣಕ್ಕೆ ಅಮೆಜಾನ್ ಇದೇ ರೀತಿಯ ಗ್ರಾಹಕರನ್ನು ಆಕರ್ಷಿಸಲು ಈ ಅಮೆಜಾನ್ ಬಜಾರ್ ಅನ್ನು ಪ್ರಾರಂಭಿಸುವಂತಹ ಕೆಲಸಕ್ಕೆ ಮುಂದಾಗಿದೆ.

Best Mobiles in India

English summary
Cheaper items will be sold on Amazon. For this, Amazon has proposed to introduce a page called Bazaar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+