Home
ಸುದ್ದಿಜಾಲ

ಅಮೆಜಾನ್ ರಿಪಬ್ಲಿಕ್ ಡೇ ಸೇಲ್:ಈ 5G ಫೋನ್ ಗಳು 30,000ರೂ. ಒಳಗೆ ಲಭ್ಯ!

ಪ್ರಮುಖ ಇ-ಕಾಮರ್ಸ್‌ ತಾಣವಾಗಿರುವ ಅಮೆಜಾನ್‌ನಲ್ಲಿ ಕಾಲಕಾಲಕ್ಕೆ ಭರ್ಜರಿ ಡಿಸ್ಕೌಂಟ್‌ ನೀಡುವ ಮೂಲಕ ಹಲವಾರು ಸ್ಮಾರ್ಟ್‌ ಗ್ಯಾಜೆಟ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಇದರ ನಡುವೆ ಇಂದಿನಿಂದ ಅಮೆಜಾನ್ ರಿಪಬ್ಲಿಕ್ ಡೇ ಸೇಲ್ 2023 ಅನ್ನು ಘೋಷಣೆ ಮಾಡಲಾಗಿದ್ದು, ಪ್ರಮುಖ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್‌ಗಳು ಭಾರೀ ರಿಯಾಯಿತಿಯಲ್ಲಿ ಲಭ್ಯವಾಗುತ್ತಿವೆ.

ಶಿಯೋಮಿ

ಹೌದು, ಶಿಯೋಮಿ, ಎಲ್‌ಜಿ ಹಾಗೂ ಸ್ಯಾಮ್‌ಸಂಗ್‌ ಸೇರಿದಂತೆ ಇನ್ನಿತರೆ ಪ್ರಮುಖ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್‌ಗಳು ಆಕರ್ಷಕ ರಿಯಾಯಿತಿ ಪಡೆದುಕೊಂಡಿದ್ದು, ರಿಪಬ್ಲಿಕ್ ಡೇ ಸೇಲ್ ನೊಂದಿಗೆ ಸಂಕ್ರಾಂತಿ ಹಬ್ಬದ ಹಿನ್ನೆಲೆ ಕೈಗೆಟಕುವ ದರದಲ್ಲಿ ಸ್ಮಾರ್ಟ್‌ಫೋನ್‌ ಖರೀದಿ ಮಾಡಬೇಕು ಎಂದರೆ ಇದು ಒಳ್ಳೆಯ ಟೈಮ್‌. ಹಾಗಿದ್ರೆ, ಯಾವೆಲ್ಲಾ ಫೋನ್‌ಗಳಿಗೆ ಭರ್ಜರಿ ಆಫರ್‌?, ಏನೆಲ್ಲಾ ಇತರೆ ಡಿಸ್ಕೌಂಟ್‌ ಲಭ್ಯವಿದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಒನ್‌ಪ್ಲಸ್‌ 10R 5G

ಒನ್‌ಪ್ಲಸ್‌ 10R 5G

ಒನ್‌ಪ್ಲಸ್‌ 10R 5G ಅನ್ನು ನೀವು 18,050 ರೂ. ಗಳ ಆಫರ್‌ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಫೋನ್‌ ಸಾಮಾನ್ಯ ದರ 29,999 ರೂ.ಗಳಾಗಿದೆ. ಹಾಗೆಯೇ ಎಸ್‌ಬಿಐ ಕಾರ್ಡ್‌ ಬಳಕೆ ಮೂಲಕ ಖರೀದಿ ಮಾಡಿದರೆ 10% ಹೆಚ್ಚುವರಿ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಈ ಫೋನ್‌ಮೀಡಿಯಾ ಟೆಕ್‌ ಡೈಮೆನ್ಸಿಟಿ 8100 ಮ್ಯಾಕ್ಸ್‌ ನಿಂದ ಕಾರ್ಯನಿರ್ವಹಿಸಲಿದೆ.

ರೆಡ್ಮಿ ನೋಟ್‌ 12 5G

ರೆಡ್ಮಿ ನೋಟ್‌ 12 5G

ರೆಡ್ಮಿ ನೋಟ್‌ 12 5G ಅನ್ನು ಈ ಆಫರ್‌ನಲ್ಲಿ 16,499 ರೂ.ಗಳಿಗೆ ಖರೀದಿ ಮಾಡಬಹುದು. ಹಾಗೆಯೇ ಈ ಫೋನ್ ಸ್ನಾಪ್‌ಡ್ರಾಗನ್ 4 ಜೆನ್‌1 SoC ನಿಂದ ಕಾರ್ಯನಿರ್ವಹಿಸಲಿದೆ. 8MP ಅಲ್ಟ್ರಾ ವೈಡ್ ಸೆನ್ಸರ್‌ ಮತ್ತು 2MP ಮ್ಯಾಕ್ರೋ ಕ್ಯಾಮೆರಾದೊಂದಿಗೆ 48MP AI ಟ್ರಿಪಲ್ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಇದರೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯ ಪಡೆದುಕೊಂಡಿದೆ.

ಐಕ್ಯೂ Z6 ಲೈಟ್‌ 5G

ಐಕ್ಯೂ Z6 ಲೈಟ್‌ 5G

ಐಕ್ಯೂ Z6 ಲೈಟ್‌ 5G ಸ್ಮಾರ್ಟ್‌ಫೋನ್‌ಗೆ ಮೂಲ ದರದಲ್ಲಿ 10% ರಿಯಾಯಿತಿ ನೀಡಿದ್ದು, ನಂತರ 10,999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಈ ಫೋನ್‌ ಸ್ಯಾಪ್‌ಡ್ರಾಗನ್ 4 ಜನ್‌ 1 SoC ನಲ್ಲಿ ಕಾರ್ಯನಿರ್ವಹಿಸಲಿದ್ದು, 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ.

ಒನ್‌ಪ್ಲಸ್ ನಾರ್ಡ್‌ CE 2 ಲೈಟ್‌ 5G

ಒನ್‌ಪ್ಲಸ್ ನಾರ್ಡ್‌ CE 2 ಲೈಟ್‌ 5G

ಒನ್‌ಪ್ಲಸ್ ನಾರ್ಡ್‌ CE 2 ಲೈಟ್‌ 5G ಗೆ 10% ತ್ವರಿತ ಕ್ಯಾಶ್‌ಬ್ಯಾಕ್ ಲಭ್ಯವಾಗಲಿದ್ದು, ಈ ಮೂಲಕ ನೀವು 17,499ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಈ ಫೋನ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 695 5G SoC ನಲ್ಲಿ ಕಾರ್ಯನಿರ್ವಹಿಸಲಿದ್ದು, 5,000mAh ಸಾಮರ್ಥ್ಯದ ಬ್ಯಾಟರಿಯ ಶಕ್ತಿ ಪಡೆದಿಕೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ  S20 5G

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S20 5G

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S20 5G ಫೋನ್‌ ಅನ್ನು 28,749ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಈ ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865 SoC ನಲ್ಲಿ ಕಾರ್ಯನಿರ್ವಹಿಸಲಿದ್ದು, 12MP ಮುಖ್ಯ ಕ್ಯಾಮೆರಾ ಸೆನ್ಸರ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡದುಕೊಂಡಿದೆ.

ಐಕ್ಯೂ ನಿಯೋ 6 5G

ಐಕ್ಯೂ ನಿಯೋ 6 5G

ಐಕ್ಯೂ ನಿಯೋ 6 5G ಸ್ಮಾರ್ಟ್‌ಫೋನ್‌ಗೆ 24,999 ರೂ. ಗಳ ಆಫರ್‌ ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್‌ ಸ್ನಾಪ್‌ಡ್ರಾಗನ್ 870 5G SoC ನಲ್ಲಿ ಕಾರ್ಯನಿರ್ವಹಿಸಲಿದ್ದು, , 80W ಫಾಸ್ಟ್‌ ಚಾರ್ಜಿಂಗ್‌ ಬೆಂಬಲದೊಂದಿಗೆ 4,700mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ.

ರೆಡ್ಮಿ 11 ಪ್ರೈಮ್‌ 5G

ರೆಡ್ಮಿ 11 ಪ್ರೈಮ್‌ 5G

ರೆಡ್ಮಿ 11 ಪ್ರೈಮ್‌ 5G ಅನ್ನು ಆಫರ್‌ ಬೆಲೆ 10,999 ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇನ್ನುಳಿದಂತೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ನಲ್ಲಿ ಕಾರ್ಯನಿರ್ವಹಿಸಲಿದ್ದು, 18W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಪಡೆದುಕೊಂಡಿದೆ.

ಐಕ್ಯೂ 9 SE 5G

ಐಕ್ಯೂ 9 SE 5G

ಐಕ್ಯೂ 9 SE 5G ಸ್ಮಾರ್ಟ್‌ಫೋನ್‌ಗೆ ಅಮೆಜಾನ್‌ನಲ್ಲಿ ವಿಶೇಷ ಆಫರ್‌ ಘೊಷಣೆ ಮಾಡಲಾಗಿದೆ. ಈ ಮೂಲಕ ಈ ಫೋನ್‌ ಅನ್ನು ನೀವು 25,990 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಅದರಂತೆ ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 5G SoC ನಿಂದ ಕಾರ್ಯನಿರ್ವಹಿಸಲಿದ್ದು, 66W ಫ್ಲ್ಯಾಶ್ ಚಾರ್ಜಿಂಗ್ ಬೆಂಬಲದೊಂದಿಗೆ 4,500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದೆ.

ಒನ್‌ಪ್ಲಸ್‌ ನಾರ್ಡ್‌ 2T 5G

ಒನ್‌ಪ್ಲಸ್‌ ನಾರ್ಡ್‌ 2T 5G

ಒನ್‌ಪ್ಲಸ್‌ ನಾರ್ಡ್‌ 2T 5G ಸ್ಮಾರ್ಟ್‌ಫೋನ್‌ ಅನ್ನು 27,499ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಈ ಫೋನ್ ಮೀಡಿಯಾಟೆಕ್‌ ಡೈಮೆನ್ಸಿಟಿ 1300 SoC ಮತ್ತು 80W ಸೂಪರ್‌ವೂಕ್‌ ಬೆಂಬಲದ ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ.

ರಿಯಲ್‌ಮಿ ನಾರ್ಜೋ 50 ಪ್ರೊ 5G

ರಿಯಲ್‌ಮಿ ನಾರ್ಜೋ 50 ಪ್ರೊ 5G

ರಿಯಲ್‌ಮಿ ನಾರ್ಜೋ 50 ಪ್ರೊ 5G ಸ್ಮಾರ್ಟ್‌ಫೋನ್‌ ಅನ್ನು 14,999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಈ ಫೋನ್‌ ಮೀಡಿಯಾಟೆಕ್ ಡೈಮೆನ್ಸಿಟಿ 920 5 ಜಿ SoC ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪ್ಯಾಕ್‌ ಆಗಿದೆ.

Best Mobiles in India

English summary
Amazon Republic Day sale 2023: popular 5G smartphone get Huge discount
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+