Amazon: ಅಮೆಜಾನ್‌ನಿಂದ ವಿಶೇಷ ಸೇಲ್.. ಸ್ಯಾಮ್‌ಸಂಗ್, ರೆಡ್ಮಿ, ಐಕ್ಯೂ ಸೇರಿದಂತೆ ಅನೇಕ ಫೋನ್‌ಗಳಿಗೆ ಭರ್ಜರಿ ಆಫರ್
ಅಮೆಜಾನ್ (Amazon) ಈ ವರ್ಷದ ಆರಂಭದ ಸೇಲ್‌ನ ದಿನಾಂಕವನ್ನು ಇನ್ನೇನು ಕೆಲವೇ ದಿನಗಳಲ್ಲಿ ಘೋಷಣೆ ಮಾಡಲಿದೆ. ಈ ವಿಶೇಷ ಸೇಲ್‌ನಲ್ಲಿ ಪ್ರಮುಖ ಬ್ರ್ಯಾಂಡ್‌ನ ಫೋನ್‌ಗಳನ್ನು ಕಡಿಮೆ ದರದಲ್ಲಿ ಖರೀದಿ ಮಾಡಬಹುದಾಗಿದ್ದು, ಇದರೊಂದಿಗೆ ಬ್ಯಾಂಕ್ ಆಪರ್ ಅನ್ನೂ ಸಹ ಪಡೆಯಬಹುದಾಗಿದೆ.
ಹೌದು, ನೀವೇನಾದರೂ ಹೊಸ ಫೋನ್ ಖರೀದಿ ಮಾಡಲು ಮುಂದಾಗಿದ್ದರೆ ಕೆಲವೇ ದಿನಗಳ ವರೆಗೆ ಕಾಯುವುದು ಉತ್ತಮ ಯಾಕೆಂದರೆ. ಅಮೆಜಾನ್ ನಿಮಗಾಗಿ ಅಮೆಜಾನ್ ರಿಪಬ್ಲಿಕ್ ಡೇ ಸೇಲ್ 2024 (Amazon Republic Day Sale 2024) ಅನ್ನು ಆಯೋಜನೆ ಮಾಡಲಿದೆ. ಮೊದಲೇ ತಿಳಿಸಿದಂತೆ ಈ ವಿಶೇಷ ಸೇಲ್‌ನಲ್ಲಿ ಭರ್ಜರಿ ಆಫರ್ ಸಿಗಲಿದೆ. ಹಾಗಿದ್ರೆ, ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳು ಈ ಸೇಲ್‌ನಲ್ಲಿ ಆಫರ್ ಪಡೆಯಲಿವೆ? ಬ್ಯಾಂಕ್ ಆಪರ್ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024: ಅಮೆಜಾನ್ ತನ್ನ ಮುಂಬರುವ 'ಗ್ರೇಟ್ ರಿಪಬ್ಲಿಕ್ ಡೇ ಸೇಲ್' ಅನ್ನು ಅನ್ನು ಘೋಷಣೆ ಮಾಡಿದ್ದು, ಇದು ಶೀಘ್ರದಲ್ಲೇ ಭಾರತದಲ್ಲಿ ಲೈವ್ ಆಗಲಿದೆ. ಪ್ರೈಮ್ ಸದಸ್ಯರಿಗೆ (Prime members) ಮಾರಾಟವು ಆರಂಭಿಕ ಪ್ರವೇಶದಲ್ಲಿ ಲೈವ್ ಆಗಿರಲಿದೆ. ಜೊತೆಗೆ ಎಲ್ಲಾ ಖರೀದಿದಾರರು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮತ್ತು ಇಎಮ್‌ಐ ವ್ಯವಹಾರದ ಮೇಲೆ 10 ಪ್ರತಿಶತದಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಹೆಡ್‌ಫೋನ್‌ಗಳವರೆಗೆ ಎಲ್ಲಾ ರೀತಿಯ ಡಿವೈಸ್ ಲಭ್ಯ ಇರಲಿವೆ.
ಇನ್ನು ಈ ವಿಶೇಷ ಸೇಲ್‌ನಲ್ಲಿ ಕಂಪನಿಯು ಹೆಡ್‌ಫೋನ್‌ಗಳನ್ನು (Headphones) 179 ರೂ.ಗಳಿಗಿಂತ ಕಡಿಮೆ, ಸ್ಮಾರ್ಟ್‌ವಾಚ್‌ಗಳನ್ನು (Smartwatches) 799 ರೂ.ಗಳ ಆರಂಭಿಕ ಬೆಲೆಯಲ್ಲಿ ಹಾಗೂ ಪಿಸಿ ಆಕ್ಸೆಸರಿಗಳನ್ನು (PC Accessories) 149 ರೂ.ಗಳ ಆರಂಭಿಕ ಬೆಲೆಯಲ್ಲಿ ಸೇಲ್ ಮಾಡಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಬಜೆಟ್ ಸ್ಮಾರ್ಟ್‌ಫೋನ್‌ಗಳು 5,499 ರೂ.ಗಳಿಂದ ಪ್ರಾರಂಭವಾಗುತ್ತವೆ. ಗ್ರಾಹಕರು ಮಾರಾಟದ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ನೋಕಾಸ್ಟ್ ಇಎಮ್‌ಐ ಹಾಗೂ ವಿನಿಮಯ ಆಫರ್ ಪಡೆಯಬಹುದಾಗಿದೆ.

ಬಜೆಟ್ ಫೋನ್‌ಗಳ (Budget phone) ವಿಭಾಗದಲ್ಲಿ ರೆಡ್ಮಿ 12 5G, ಒನ್‌ಪ್ಲಸ್‌ನಾರ್ಡ್ CE 3 ಲೈಟ್ 5G, ಸ್ಯಾಮ್‌ಸಂಗ್ ಗ್ಯಾಲಕ್ಸಿ M14 5G, ರೆಡ್ಮಿ 13C, ಲಾವಾ ಸ್ಟ್ರೋಮ್ 5G, ರಿಯಲ್‌ಮಿ ನಾರ್ಜೋ N53, ರೆಡ್ಮಿ A2 ಸೇರಿದಂತೆ ಇನ್ನೂ ಹೆಚ್ಚಿನ ಫೋನ್‌ಗಳು ಲಭ್ಯ ಇರಲಿವೆ. ಜೊತೆಗೆ ಮಿಡ್‌ರೇಂಜ್ ಡಿವೈಸ್ (midrange device) ವಿಚಾರಕ್ಕೆ ಬಂದರೆ ರಿಯಲ್‌ಮಿ ನಾರ್ಜೋ 60X 5G, ರೆಡ್ಮಿ ನೋಟ್ 12 5G, ಐಕ್ಯೂ Z7 ಪ್ರೊ 5G, ಲಾವಾ ಅಗ್ನಿ 2 5G, ರೆಡ್ಮಿ ನೋಟ್ 13 5G, ಒನ್‌ಪ್ಲಸ್ ನಾರ್ಡ್ CE 3 5G, ರಿಯಲ್‌ಮಿ ನಾರ್ಜೋ 60 5G, ಐಕ್ಯೂ ಫೋನ್‌ಗಳು ಸೇರಿದಂತೆ ಇನ್ನೂ ಅನೇಕ ಫೋನ್‌ಗಳನ್ನು ಖರೀದಿ ಮಾಡಬಹುದು.

ಪ್ರೀಮಿಯಂ ಮಿಡ್‌ರೇಂಜ್ ಹ್ಯಾಂಡ್‌ಸೆಟ್‌ಗಳಿಗೆ (premium midrange handset) ಬಂದರೆ ಹಾನರ್ 90 5G, ಐಕ್ಯೂ ನಿಯೋ 7 Pro 5G, ಒನ್‌ಪ್ಲಸ್ 11R 5G, ಒನ್‌ಪ್ಲಸ್ ನಾರ್ಡ್ 3 5G, ಸ್ಯಾಮ್‌ಸಂಗ್ ಗ್ಯಾಲಕ್ಸಿ A54 5G ಸೇರಿದಂತೆ ಇನ್ನೂ ಹೆಚ್ಚಿನ ಫೋನ್‌ಗಳಿಗೆ ಆಫರ್ ಸಿಗಲಿದೆ. ಜೊತೆಗೆ ಫ್ಲ್ಯಾಗ್‌ಶಿಪ್‌ಗಳಿಗೆ (flagship handset) ಬರುವುದಾದರೆ, ಒನ್‌ಪ್ಲಸ್ 11 5G, ಮೊಟೊರೊಲಾ ರೇಜರ್ 40 ಸರಣಿಗಳು ಮತ್ತು ಐಕ್ಯೂ 12 5G ನಂತಹ ಪ್ರಮುಖ ಫೋನ್‌ಗಳು ಆಫರ್ ಬೆಲೆಗೆ ಲಭ್ಯ ಇರಲಿವೆ.


Click it and Unblock the Notifications








