Home
ಸುದ್ದಿಜಾಲ

ಅಮೆಜಾನ್‌ ರಿಪಬ್ಲಿಕ್ ಡೇ ಸೇಲ್; ಸ್ಮಾರ್ಟ್‌ ಹೋಮ್‌ ಡಿವೈಸ್‌ಗಳಿಗೆ ಬೊಂಬಾಟ್‌ ಡಿಸ್ಕೌಂಟ್‌!

ಇ-ಕಾಮರ್ಸ್‌ ತಾಣಗಳಲ್ಲಿ ಒಂದಾಗಿರುವ ಅಮೆಜಾನ್‌ ತನ್ನದೇ ಆದ ರಿಯಾಯಿತಿಗಳನ್ನು ಗ್ರಾಹಕರಿಗೆ ನೀಡುತ್ತಾ ಬರುತ್ತಿದೆ. ಇದರ ನಡುವೆ ಭಾರತೀಯರ ಹಬ್ಬ ಹರಿದಿನಗಳಿಗೆ ಜೊತೆಯಾಗುವ ಅಮೆಜಾನ್‌ ಆಕರ್ಷಕ ರಿಯಾಯಿತಿ ನೀಡಿ ಗ್ಯಾಜೆಟ್‌ಗಳನ್ನು ಮಾರಾಟ ಮಾಡುತ್ತಾ ಬರುತ್ತಿದೆ. ಅದರಂತೆ ಈಗ ಅಗ್ಗದ ದರದಲ್ಲಿ ಸ್ಮಾರ್ಟ್‌ಹೋಮ್‌ ಡಿವೈಸ್‌ಗಳನ್ನು ಮಾರಾಟ ಮಾಡಲು ಮುಂದಾಗಿದೆ.

ಅಮೆಜಾನ್

ಹೌದು, ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಲೈವ್‌ ಆಗಿದ್ದು, ಇದು 2023 ರ ವರ್ಷದ ಮೊದಲ ದೊಡ್ಡ ಅಮೆಜಾನ್ ಸೇಲ್‌ ಆಗಿದೆ. ಗಣರಾಜ್ಯೋತ್ಸವದ ಮಾರಾಟವು ಜನವರಿ 20 ರವರೆಗೆ ನಡೆಯಲಿದ್ದು, ಕಿಂಡಲ್, ಎಕೋ ಇಯರ್‌ಬಡ್ಸ್, ಸ್ಪೀಕರ್‌ಗಳು, ಸ್ಮಾರ್ಟ್ ಗಡಿಯಾರ, ಫೈರ್ ಟಿವಿ ಸ್ಟಿಕ್ ಮತ್ತು ಸ್ಮಾರ್ಟ್ ಪ್ಲಗ್‌ಗಳು ಸೇರಿದಂತೆ ವಿವಿದ ಸ್ಮಾರ್ಟ್‌ಹೋಮ್‌ ಡಿವೈಸ್‌ಗಳನ್ನು 10,000 ರೂ. ಗಳ ಒಳಗೆ ಖರೀದಿ ಮಾಡಬೇಕು ಎಂದುಕೊಂಡರೆ ಇದು ಒಳ್ಳೆಯ ಸಮಯ. ಹಾಗಿದ್ರೆ, ಯಾವೆಲ್ಲಾ ಡಿವೈಸ್‌ಗಳು ಹೆಚ್ಚಿನ ಆಫರ್‌ ಪಡೆದುಕೊಂಡಿವೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಎಕೋ (4ನೇ ಜನ್)

ಎಕೋ (4ನೇ ಜನ್)

ಎಕೋ (4ನೇ ಜನ್) ಸ್ಮಾರ್ಟ್‌ಡಿವೈಸ್‌ 1,499 ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 8,499 ರೂ. ಗಳಲ್ಲಿ ಖರೀದಿ ಮಾಡಬಹುದಾಗಿದೆ. ಈ ಡಿವೈಸ್‌ ಡಾಲ್ಬಿ ಫಿಚರ್ಸ್‌ ಹೊಂದಿದ್ದು, ಡೀಪ್‌ ಬೇಸ್‌ ಸಂಗೀತ ಅನುಭವ ನೀಡಲಿದೆ. ಹಾಗೆಯೇ ಹ್ಯಾಂಡ್ಸ್-ಫ್ರೀ ಮ್ಯೂಸಿಕ್‌ ಕಂಟ್ರೋಲ್‌ ಅನ್ನು ನೀಡಲಿದೆ. ಇದರೊಂದಿಗೆ ಬಳಕೆದಾರರು ಅಮೆಜಾನ್ ಪ್ರೈಮ್‌ ಮ್ಯೂಸಿಕ್‌, ಸ್ಪಾಟಿಫೈ, ಜಿಯೋಸಾವನ್, ಗಾನ ಅಥವಾ ಆಪಲ್‌ ಮ್ಯೂಸಿಕ್‌ ಮೂಲಕ ನೆಚ್ಚಿನ ಭಾಷೆಯಲ್ಲಿ ಸಂಗೀತ ಆಲಿಸಬಹುದು.

ಎಕೋ ಬಡ್ಸ್ 2ನೇ ಜನ್‌ TWS

ಎಕೋ ಬಡ್ಸ್ 2ನೇ ಜನ್‌ TWS

ಎಕೋ ಬಡ್ಸ್ 2ನೇ ಜನ್‌ TWS 6,000 ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 5,999 ರೂ. ಗಳಲ್ಲಿ ಲಭ್ಯವಿದೆ. ಎಕೋ ಬಡ್ಸ್ TWS ಇಯರ್‌ಬಡ್‌ಗಳು 5.7mm ಆಡಿಯೊ ಡ್ರೈವರ್ ಯೂನಿಟ್ ಮತ್ತು ಮೂರು ಮೈಕ್ರೊಫೋನ್‌ಗಳನ್ನು ಹೊಂದಿದ್ದು, ಶಬ್ದ ರದ್ದತಿಯೊಂದಿಗೆ ಪ್ಯಾಕ್‌ ಆಗಿದೆ.

ಎಕೋ ಡಾಟ್ 3rd ಜನ್‌ ವಿಥ್ ಅಮೆಜಾನ್ ಸ್ಮಾರ್ಟ್ ಪ್ಲಗ್

ಎಕೋ ಡಾಟ್ 3rd ಜನ್‌ ವಿಥ್ ಅಮೆಜಾನ್ ಸ್ಮಾರ್ಟ್ ಪ್ಲಗ್

ಎಕೋ ಡಾಟ್ 3rd ಜನ್‌ ವಿಥ್ ಅಮೆಜಾನ್ ಸ್ಮಾರ್ಟ್ ಪ್ಲಗ್ 1,650 ರೂ.ಗಳ ರಿಯಾಯಿತಿ ಪಡೆದುಕೊಂಡಿದ್ದು, 4,848 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಅಂತೆಯೇ ಈ ಡಿವೈಸ್‌ ಅಮೆಜಾನ್ ಸ್ಮಾರ್ಟ್ ಪ್ಲಗ್ ಅನ್ನು ಒಳಗೊಂಡಿದ್ದು, ಬಳಕೆದಾರರು ಈ ಪ್ಲಗ್‌ನೊಂದಿಗೆ ತಮ್ಮ ಉಪಕರಣಗಳಿಗೆ ವಾಯ್ಸ್‌ ಕಂಟ್ರೋಲ್‌ ಅನ್ನು ಸೇರಿಸಬಹುದಾಗಿದೆ.

ಎಕೋ ಡಾಟ್ 4th ಜನ್‌ವಿಥ್ ಕ್ಲಾಕ್

ಎಕೋ ಡಾಟ್ 4th ಜನ್‌ವಿಥ್ ಕ್ಲಾಕ್

ಎಕೋ ಡಾಟ್ 4th ಜನ್‌ವಿಥ್ ಕ್ಲಾಕ್‌ಗೆ 494 ರೂ. ಗಳ ರಿಯಾಯಿತಿ ನೀಡಲಾಗಿದ್ದು, ಈ ಮೂಲಕ 4,999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಹೊಸ ಗೋಳಾಕಾರದ ವಿನ್ಯಾಸ ಮತ್ತು ಸುಧಾರಿತ ಕಾರ್ಯಕ್ಷಮತೆಯನ್ನು ಇದು ಹೊಂದಿದೆ. ಹಾಗೆಯೇ ದೂರದಿಂದಲೂ ವಾಯ್ಸ್‌ ಮೂಲಕ ಕಾರ್ಯ ನಿರ್ವಹಿಸಬಹುದಾಗಿದ್ದು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಅಲೆಕ್ಸಾ ಬೆಂಬಲಿಸಲಿದೆ.

ಎಕೋ ಡಾಟ್ 3rd ಜನ್‌

ಎಕೋ ಡಾಟ್ 3rd ಜನ್‌

ಎಕೋ ಡಾಟ್ 3rd ಜನ್‌ಗೆ 9,895 ರೂ. ಗಳ ರಿಯಾಯಿತಿ ನೀಡಲಾಗಿದ್ದು, 3,499ರೂ.ಗಳಲ್ಲಿ ಖರೀದಿಗೆ ಲಭ್ಯವಿದೆ. ಹಾಗೆಯೇ ಈ ಸ್ಮಾರ್ಟ್ ಸ್ಪೀಕರ್‌ಗಳನ್ನು ಅಲೆಕ್ಸಾ ಮೂಲಕ ಕಂಟ್ರೋಲ್‌ ಮಾಡಬಹುದಾಗಿದೆ. ಇದು ಹೋಮ್‌ ಸ್ಮಾರ್ಟ್‌ ಡಿವೈಸ್‌ಗಳನ್ನು ಕಂಟ್ರೋಲ್‌ ಮಾಡಲು ಸಹಕಾರಿಯಾಗಲಿದೆ.

ಎಕೋ ಶೋ 5 2nd ಜನ್‌

ಎಕೋ ಶೋ 5 2nd ಜನ್‌

ಎಕೋ ಶೋ 5 2nd ಜನ್‌ ಗೆ 3,959 ರೂ. ಗಳ ರಿಯಾಯಿತಿ ನೀಡಲಾಗಿದ್ದು, 4,999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಅಂತೆಯೇ 5.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಅಲೆಕ್ಸಾ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಇದರೊಂದಿಗೆ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್‌ ಮೂಲಕ ನಿಮ್ಮ ಮೆಚ್ಚಿನ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.

ಫೈರ್‌ ಟಿವಿ ಸ್ಟಿಕ್‌ 4K

ಫೈರ್‌ ಟಿವಿ ಸ್ಟಿಕ್‌ 4K

ಫೈರ್‌ ಟಿವಿ ಸ್ಟಿಕ್‌ 4K ಅನ್ನು ನೀವು 2,797 ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 3,699 ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಹಾಗೆಯೇ ಈ ಡಿವೈಸ್‌ ಅಮೆಜಾನ್‌ ಫೈರ್‌ ಟಿವಿ ಸ್ಟಿಕ್‌ ಡಾಲ್ಬಿ ವಿಶನ್, ಹೆಚ್‌ಡಿಆರ್‌ ಹಾಗೂ HDR10+ ಬೆಂಬಲದೊಂದಿಗೆ 4K ಅಲ್ಟ್ರಾ HD ವಿಡಿಯೋ ವೀಕ್ಷಣ ಮಾಡಬಹುದು.

ಕಿಂಡಲ್ 2022

ಕಿಂಡಲ್ 2022

ಕಿಂಡಲ್ 2022 ಸ್ಮಾರ್ಟ್‌ ಗ್ಯಾಜೆಟ್‌ 1,499 ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 8,499 ರೂ. ಗಳಲ್ಲಿ ಇದನ್ನು ಖರೀದಿ ಮಾಡಬಹುದಾಗಿದೆ. ಅಂತೆಯೇ ಲೈಟ್‌ ಮತ್ತು ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿರುವ ಇದು ಇದು ತೀಕ್ಷ್ಣವಾದ ಪಠ್ಯ ಮತ್ತು ಚಿತ್ರಗಳಿಗಾಗಿ 300 ppi ಗ್ಲೇರ್-ಫ್ರೀ ಫೀಚರ್ಸ್‌ ಅನ್ನು ಪಡೆದುಕೊಂಡಿದೆ.

ಅಮೆಜಾನ್ ಸ್ಮಾರ್ಟ್ ಪ್ಲಗ್

ಅಮೆಜಾನ್ ಸ್ಮಾರ್ಟ್ ಪ್ಲಗ್

ಅಮೆಜಾನ್ ಸ್ಮಾರ್ಟ್ ಪ್ಲಗ್‌ನ ಈ ಸ್ಮಾರ್ಟ್‌ ಡಿವೈಸ್‌ 100 ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 1,899 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಪ್ಲಗ್‌ ಯಾವುದೇ ಗೃಹೋಪಯೋಗಿ ಉಪಕರಣಗಳಿಗೆ ವಾಯ್ಸ್‌ ಕಂಟ್ರೋಲ್‌ ಫೀಚರ್ಸ್‌ ನೀಡಲಿದೆ. ಯಾವುದೇ ಸಾಕೆಟ್‌ಗೆ ವಾಯ್ಸ್‌ ಕಂಟ್ರೋಲ್‌ ಆಡ್‌ ಮಾಡಲು ಇದು ಅಲೆಕ್ಸಾದೊಂದಿಗೆ ಕಾರ್ಯನಿರ್ವಹಿಸುತ್ತದೆ.

Best Mobiles in India

English summary
Amazon Republic Day sale live: Alexa speakers, Fire TV stick under Rs 10,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+