Home
ಸುದ್ದಿಜಾಲ

Bluetooth Speakers : ಈ ಎಲ್ಲಾ ವಿಶೇಷ ಬ್ಲೂಟೂತ್ ಸ್ಪೀಕರ್‌ಗಳ ಮೇಲೆ ಅಮೆಜಾನ್‌ನಲ್ಲಿ 70% ವರೆಗೆ ರಿಯಾಯಿತಿ!

ಅಮೆಜಾನ್ ಈಗಾಗಲೇ ಸಾಕಷ್ಟು ವಿಶೇಷ ಸೇಲ್‌ಗಳನ್ನು ಆಯೋಜನೆ ಮಾಡುವ ಮೂಲಕ ಸ್ಮಾರ್ಟ್‌ ಡಿವೈಸ್‌ಗಳು ಅಗ್ಗದ ದರದಲ್ಲಿ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಿದೆ. ಈ ನಡುವೆ ಈಗ ಅಮೆಜಾನ್‌ ಸೇಲ್ 2023 (Amazon Sale 2023) ನಲ್ಲಿ ಬ್ಲೂಟೂತ್ ಸ್ಪೀಕರ್‌ಗಳ ಮೇಲೆ 70% ವರೆಗೆ ರಿಯಾಯಿತಿ ನೀಡುತ್ತಿದೆ.

ಹೌದು, ಇತ್ತೀಚಿನ ದಿನಗಳಲ್ಲಿ ಬ್ಲೂಟೂತ್ ಸ್ಪೀಕರ್‌ಗಳ (Bluetooth Speakers) ಮೇಲೆ ಕ್ರೇಜ್‌ ಹೆಚ್ಚಾಗುತ್ತಿದೆ. ಈ ಕಾರಣಕ್ಕೆ ಸ್ಮಾರ್ಟ್‌ ಡಿವೈಸ್‌ ತಯಾರಿಕಾ ಕಂಪೆನಿಗಳು ವಿವಿಧ ಫೀಚರ್ಸ್‌ ಆಯ್ಕೆಯೊಂದಿಗೆ ಹೊಸ ಹೊಸ ಡಿವೈಸ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿವೆ. ಅದರಂತೆ ನೀವೇನಾದರೂ ಈ ವೇಳೆ ಬ್ಲೂಟೂತ್ ಸ್ಪೀಕರ್‌ ಖರೀದಿ ಮಾಡಲು ಇಚ್ಚಿಸಿದರೆ ಅದೂ ಸಹ ಹೆಚ್ಚಿನ ಬೆಲೆಯ ಸ್ಪೀಕರ್‌ಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಲು ಮುಂದಾಗಿದ್ರೆ ಇಲ್ಲಿವೆ ನೋಡಿ ಅತ್ಯುತ್ತಮ ಡಿವೈಸ್‌ಗಳು. ಅದೂ ಸಹ 2,000 ಕ್ಕಿಂತ ಕಡಿಮೆ ಬೆಲೆಗೆ.

ಈ ಎಲ್ಲಾ ಬ್ಲೂಟೂತ್ ಸ್ಪೀಕರ್‌ಗಳ ಮೇಲೆ ಅಮೆಜಾನ್‌ನಲ್ಲಿ 70% ವರೆಗೆ ರಿಯಾಯಿತಿ!

ಇನ್ಫಿನಿಟಿ - ಜೆಬಿಎಲ್ ಕ್ಲಬ್ಜ್ ಮಿನಿ ವೈರ್‌ಲೆಸ್ ಅಲ್ಟ್ರಾ ಪೋರ್ಟಬಲ್ ಮಿನಿ ಸ್ಪೀಕರ್: ಈ ಡಿವೈಸ್ ಅನ್ನು ನೀವು 898ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು ವರ್ಧಿತ ಸೌಂಡ್‌ಗಾಗಿ ಡ್ಯುಯಲ್ ಈಕ್ವಲೈಜರ್ ಮೋಡ್‌ಗಳನ್ನು ಹೊಂದಿದ್ದು, 5 ಗಂಟೆಗಳ ಮ್ಯೂಸಿಕ್ ಪ್ಲೇಟೈಮ್ ಅನ್ನು ನೀಡಲಿದೆ. ಇದರೊಂದಿಗೆ ವಾಯ್ಸ್ ಅಸಿಸ್ಟೆಂಟ್‌ ಆಯ್ಕೆ ಸಹ ಇದ್ದು, ಈ ಮೂಲಕ ನೀವು ಡಿವೈಸ್‌ ಅನ್ನು ಸುಲಭವಾಗಿ ಕಂಟ್ರೋಲ್‌ ಮಾಡಬಹುದಾಗಿದೆ.

ಇನ್ಫಿನಿಟಿ - ಜೆಬಿಎಲ್‌ ಫ್ಯೂಜ್ 100 ವೈರ್‌ಲೆಸ್ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್: ಇದನ್ನು ನೀವು 1499 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು ಡ್ಯುಯಲ್ ಈಕ್ವಲೈಜರ್ ಮೋಡ್‌ ಆಯ್ಕೆ ಪಡೆದಿದ್ದು, ಡೀಪ್‌ ಬೇಸ್‌ ಔಟ್‌ಪುಟ್ ಅನ್ನೂ ಸಹ ಇದರಲ್ಲಿ ಆನಂದಿಸಬಹುದು. ಇದರೊಂದಿಗೆ ಎಲ್ಲಾ ರೀತಿಯ ಸಂಗೀತ ಪ್ರಕಾರಗಳಿಗೆ ಉತ್ತಮ ಬೆಂಬಲ ನೀಡಲಿದ್ದು, IPX7 ರೇಟಿಂಗ್‌, ಹ್ಯಾಂಡ್ಸ್-ಫ್ರೀ ಕರೆಗಾಗಿ ಇನ್‌ಬಿಲ್ಟ್‌ ಮೈಕ್ರೊಫೋನ್ ಸೇರಿದಂತೆ ವಿಶೇಷ ಫೀಚರ್ಸ್‌ ಈ ಡಿವೈಸ್‌ನಲ್ಲಿದೆ.

ಈ ಎಲ್ಲಾ ಬ್ಲೂಟೂತ್ ಸ್ಪೀಕರ್‌ಗಳ ಮೇಲೆ ಅಮೆಜಾನ್‌ನಲ್ಲಿ 70% ವರೆಗೆ ರಿಯಾಯಿತಿ!

ಝೆಬ್ರಾನಿಕ್ಸ್ ಝೆಬ್ ಕೌಂಟಿ 3W ವೈರ್‌ಲೆಸ್ ಬ್ಲೂಟೂತ್ ಪೋರ್ಟಬಲ್ ಸ್ಪೀಕರ್: ಈ ಡಿವೈಸ್‌ ಅನ್ನು ಕೇವಲ 499ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದು ಬ್ಲೂಟೂತ್, ಯುಎಸ್‌ಬಿ, ಮೈಕ್ರೋ ಎಸ್‌ಡಿ, ಮತ್ತು ಆಕ್ಸ್‌ ಸೇರಿದಂತೆ ಬಹು ಸಂಪರ್ಕ ಆಯ್ಕೆಗಳೊಂದಿಗೆ ಪ್ಯಾಕ್‌ ಆಗಿದೆ. ಇದರೊಂದಿಗೆ ಇನ್‌ಬಿಲ್ಟ್ ಎಫ್‌ಎಮ್‌ ರೇಡಿಯೊವನ್ನು ಸಹ ಹೊಂದಿದ್ದು, 10 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡಲಿದೆ.

ಬೋಟ್ ಸ್ಟೋನ್ 180 5W ಬ್ಲೂಟೂತ್ ಸ್ಪೀಕರ್: ಈ ಸ್ಪೀಕರ್ ನಿಮಗೆ 999ರೂ.ಗಳಲ್ಲಿ ಖರೀದಿಗೆ ಲಭ್ಯ ಇದೆ. ಇದು 1.75 ಇಂಚಿನ ಡೈನಾಮಿಕ್ ಡ್ರೈವರ್‌ಗಳೊಂದಿಗೆ ಶಕ್ತಿಯುತ ಮತ್ತು ತಲ್ಲೀನಗೊಳಿಸುವ ಧ್ವನಿ ಅನುಭವವನ್ನು ನೀಡಲಿದ್ದು, 800mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪ್ಯಾಕ್‌ ಆಗಿದೆ. ಈ ಮೂಲಕ ನೀವು 10 ಗಂಟೆಗಳವರೆಗೆ ಪ್ಲೇಬ್ಯಾಕ್ ಸಮಯವನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ IPX7 ರೇಟಿಂಗ್ ಇದ್ದು, ಬೆವರು ಮತ್ತು ನೀರಿನ ವಿರುದ್ಧ ರಕ್ಷಿಸುತ್ತದೆ.

ಈ ಎಲ್ಲಾ ಬ್ಲೂಟೂತ್ ಸ್ಪೀಕರ್‌ಗಳ ಮೇಲೆ ಅಮೆಜಾನ್‌ನಲ್ಲಿ 70% ವರೆಗೆ ರಿಯಾಯಿತಿ!

pTron ಮೈಸಿಕ್‌ಬಾಟ್‌ ಪಾರ್ಟಿಬಾಕ್ಸ್ ಬ್ಲೂಟೂತ್ ಸ್ಪೀಕರ್: ಈ ಸ್ಪೀಕರ್ ಅನ್ನು ನೀವು 599ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು 10W ಪಂಚ್ ಸೌಂಡ್ ಮತ್ತು 8 ಗಂಟೆಗಳ ಪ್ಲೇಟೈಮ್‌ನೊಂದಿಗೆ, ಆರ್‌ಜಿಬಿ ಲೈಟ್‌ ಮೂಲಕ ಉತ್ತಮವಾದ ಸ್ಪೀಕರ್ ಎನಿಸಿಕೊಂಡಿದೆ. ಈ ಬ್ಲೂಟೂತ್ ಸ್ಪೀಕರ್ ಬ್ಲೂಟೂತ್, ಯುಎಸ್‌ಬಿ ಮತ್ತು ಟಿಎಫ್ ಕಾರ್ಡ್ ಸೇರಿದಂತೆ ಬಹು ಪ್ಲೇಬ್ಯಾಕ್ ಆಯ್ಕೆಗಳನ್ನು ನೀಡುತ್ತದೆ. ಜೊತೆಗೆ, ಸರೌಂಡ್ ಸೌಂಡ್ ಅನುಭವಕ್ಕಾಗಿ ವೈರ್‌ಲೆಸ್ ಸ್ಟಿರಿಯೊ (TWS) ಅನ್ನು ಬೆಂಬಲಿಸುತ್ತದೆ.

ಜೆಬಿಎಲ್‌ ಗೋ 2 ವೈರ್‌ಲೆಸ್ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್: ಇದನ್ನು ಅಮೆಜಾನ್‌ನಲ್ಲಿ ನೀವು 1599ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಡಿವೈಸ್ ಅತ್ಯುತ್ತಮ ಆಡಿಯೊ ಸೆಟ್ಟಿಂಗ್‌ ಹೊಂದಿದ್ದು, ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 5 ಗಂಟೆಗಳವರೆಗೆ ಪ್ಲೇಟೈಮ್ ನೀಡಲಿದೆ. ಜೊತೆಗೆ IPX7 ರೇಟಿಂಗ್‌ ಮೂಲಕ ಜಲನಿರೋಧಕ ಡಿವೈಸ್‌ ಆಗಿದ್ದು, ಎಲ್ಲಿ ಬೇಕಾದರೂ ಇದನ್ನು ಕೊಂಡೊಯ್ಯಬಹುದಾಗಿದೆ.

ಈ ಎಲ್ಲಾ ಬ್ಲೂಟೂತ್ ಸ್ಪೀಕರ್‌ಗಳ ಮೇಲೆ ಅಮೆಜಾನ್‌ನಲ್ಲಿ 70% ವರೆಗೆ ರಿಯಾಯಿತಿ!

ಬೋಟ್ ಸ್ಟೋನ್ 352 ಬ್ಲೂಟೂತ್ ಸ್ಪೀಕರ್: ಈ ಸ್ಪೀಕರ್ ನಿಮಗೆ 1499 ರೂ.ಗಳಿಗೆ ಲಭ್ಯ ಇರಲಿದೆ. ಇದು 10W RMS ಸ್ಟಿರಿಯೊ ಸೌಂಡ್‌ ಅನ್ನು ನೀಡಲಿದ್ದು, IPX7 ರೇಟ್ ಆಯ್ಕೆ ಹೊಂದಿರುವುದರಿಂದ ಎಲ್ಲಿ ಬೇಕೆಂದರಲ್ಲಿ ಬಳಕೆ ಮಾಡಲು ಅನುಮತಿಸುತ್ತದೆ ಉಳಿದಂತೆ 60% ವಾಲ್ಯೂಮ್‌ನಲ್ಲಿ 12 ಗಂಟೆಗಳ ಪ್ಲೇಟೈಮ್‌ನೊಂದಿಗೆ ಉತ್ತಮ ಅನುಭವ ನೀಡಲಿದ್ದು, ಬಹು ಕನೆಕ್ಟಿವಿಟಿ ಮೋಡ್‌ಗಳು ಮತ್ತು ಸುಲಭವಾದ ಕಂಟ್ರೋಲ್‌ ಆಯ್ಕೆಯನ್ನು ಈ ಸ್ಪೀಕರ್ ಹೊಂದಿದೆ.

Best Mobiles in India

English summary
Amazon Sale 2023 offers best deals. In particular, discounts of up to 70% are being offered on Bluetooth speakers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+