ಬಜೆಟ್ ಬೆಲೆಯ ಈ ಎರಡು ಸ್ಯಾಮ್‌ಸಂಗ್ ಫೋನ್‌ಗಳಿಗೆ ಬಿಗ್ ಆಫರ್!
ದೈತ್ಯ ಇ ಕಾಮರ್ಸ್ ತಾಣವಾಗಿ ಗುರುತಿಸಿಕೊಂಡಿರುವ ಅಮೆಜಾನ್ ಏನಾದರೊಂದು ಮಾರಾಟ ಮೇಳ ಆಯೋಜಿಸುತ್ತಾ ಗ್ರಾಹಕರನ್ನು ಸೆಳೆಯುತ್ತದೆ. ಸದ್ಯ ಬಜೆಟ್ ಬೆಲೆಯಲ್ಲಿ ಲಭ್ಯ ಇರುವ ಕೆಲವು ಸ್ಯಾಮ್‌ಸಂಗ್ ಫೋನ್‌ಗಳು ಭರ್ಜರಿ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿವೆ.
ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ ಆಯ್ದ ಕೆಲವು ಸ್ಯಾಮ್‌ಸಂಗ್ ಫೋನ್‌ಗಳು ಸಖತ್ ರಿಯಾಯಿತಿ ಪಡೆದಿವೆ. ಮುಖ್ಯವಾಗಿ ಸ್ಯಾಮ್‌ಸಂಗ್ ಸಂಸ್ಥೆಯ ಗ್ಯಾಲಕ್ಸಿ M ಸರಣಿಯ ಫೋನ್‌ಗಳು ಗಮನಾರ್ಹ ರಿಯಾಯಿತಿ ಪಡೆದುಕೊಂಡಿದೆ. ಗ್ಯಾಲಕ್ಸಿ M15 5G ಹಾಗೂ ಗ್ಯಾಲಕ್ಸಿ M14 ಫೋನ್‌ಗಳು ಆಫರ್‌ನಲ್ಲಿ ಖರೀದಿಗೆ ಲಭ್ಯ. ಹಾಗಾದರೇ ಅಮೆಜಾನ್‌ನಲ್ಲಿ ಈ ಎರಡು ಫೋನ್‌ಗಳ ಆಫರ್ ಬಗ್ಗೆ ತಿಳಿಯೊಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M15 5G - ಫೀಚರ್ಸ್ ಹೀಗಿವೆ
ಇತ್ತೀಚಿನ ಗ್ಯಾಲಕ್ಸಿ M15 5G ಫೋನ್ 6.5 ಇಂಚಿನ ಸೂಪರ್ AMOLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು 1080 × 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪವರ್ ಅನ್ನು ಹೊಂದಿದ್ದು, ಇದರ ಜೊತೆಗೆ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಕೂಡಾ ಇದೆ.
ಹಾಗೆಯೇ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿ ಇದೆ. ಇನ್ನು ಸೆಲ್ಫಿ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿ ಇದೆ. ಹಾಗೆಯೇ ಇದು 6000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 25W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿದೆ.
ಇನ್ನು ಅಮೆಜಾನ್ ತಾಣದಲ್ಲಿ ಈ ಫೋನ್ ಶೇ, 25% ರಷ್ಟು ನೇರ ಆಫರ್ ಇದ್ದು, ಈ ಫೋನ್ 4GB RAM + 128GB ವೇರಿಯಂಟ್ ಅನ್ನು 11,999ರೂ. ಗಳಿಗೆ ಖರೀದಿಸಬಹುದು. ಹಾಗೆಯೇ ಲಭ್ಯ ಇರುವ ಇತರೆ ಕೊಡುಗೆ ಪಡೆದರೆ ಮತ್ತಷ್ಟು ಡಿಸ್ಕೌಂಟ್ ಸಿಗಲಿದೆ. ಈ ಫೋನ್ ಬ್ಲೂ ಟೋಪಾಜ್, ಸೆಲೆಸ್ಟಿಕ್ ಬ್ಲೂ ಹಾಗೂ ಸ್ಟೋನ್ ಗ್ರೇ ಕಲರ್ ಆಯ್ಕೆಗಳಲ್ಲಿ ಇದು ಲಭ್ಯ ಇದೆ.
ಸ್ಯಾಮ್‌ಸಂಗ್ ಕಂಪನಿಯ ಈ ಮೊಬೈಲ್ 6.6 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಹಾಗೆಯೇ ಈ ಫೋನಿನ ಡಿಸ್‌ಪ್ಲೇ 2408 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದರ ಜೊತೆಗೆ 90Hz ರಿಫ್ರೆಶ್ ರೇಟ್ ಅನ್ನು ಸಪೋರ್ಟ್ ಮಾಡುತ್ತದೆ, ಅಲ್ಲದೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಲೇಯರ್ ಪ್ರೊಟೆಕ್ಷನ್ ಅನ್ನು ಪಡೆದಿದೆ.
ಹಾಗೆಯೇ ಈ ಸ್ಮಾರ್ಟ್‌ಫೋನ್ ಎಕ್ಸಿನೋಸ್ 1330 ಆಕ್ಟಾ ಕೋರ್ SoC ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದು ಆಂಡ್ರಾಯ್ಡ್ 13 ಸಪೋರ್ಟ್ ಸೌಲಭ್ಯ ಪಡೆದಿದೆ. ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಮಾಲಿ G68 GPU ಸಪೊರ್ಟ್ ಅನ್ನು ಪಡೆದಿದೆ. ಹಾಗೆಯೇ 6 GB RAM ಮತ್ತು 128 GB ಸ್ಟೋರೇಜ್ ಪಡೆದಿದೆ.
ಇನ್ನು ಸ್ಯಾಮ್‌ಸಂಗ್‌ನ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಆಗಿದೆ. ಇದಲ್ಲದೆ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದಿದೆ. ಇದರ ಜೊತೆಗೆ ಈ ಮೊಬೈಲ್ 6000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಅಮೆಜಾನ್‌ನಲ್ಲಿ 41% ರಷ್ಟು ಆಫರ್ ಪಡೆದಿದ್ದು, 8,199ರೂ. ಗಳಿಗೆ ದೊರೆಯುತ್ತದೆ.


Click it and Unblock the Notifications