Home
ಸುದ್ದಿಜಾಲ

Amazon sale: ಬಜೆಟ್‌ ಬೆಲೆಯ ಫೋನ್‌ ಬೇಕೆ? ಇಲ್ಲಿವೆ ನೋಡಿ ಹೆಚ್ಚು ಸೇಲ್‌ ಆಗುತ್ತಿರುವ ಫೋನ್‌ಗಳು!

ಅಮೆಜಾನ್‌ (Amazon) ಸದ್ಯಕ್ಕೆ ವಿಶೇಷ ಸೇಲ್‌ ಆಯೋಜನೆ ಮಾಡಿದ್ದು, ಸ್ಮಾರ್ಟ್‌ಫೋನ್‌ ಸೇರಿದಂತೆ ವಿವಿಧ ಸ್ಮಾರ್ಟ್‌ ಡಿವೈಸ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಅದರಂತೆ ಹಲವಾರು ಜನರು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು (budget smartphone) ಹೆಚ್ಚು ಹೆಚ್ಚಾಗಿ ಖರೀದಿ ಮಾಡಲು ಮುಂದಾಗಿದ್ದಾರೆ.

ಹೌದು, ಭಾರತದಲ್ಲಿ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ (Amazon Great Indian Festival Sale 2023) ಈ ಫೋನ್‌ಗಳಿಗೆ ಇನ್ನೂ ಹೆಚ್ಚಿನ ಆಫರ್‌ ನೀಡಲಾಗಿರುವುದರಿಂದ ಗ್ರಾಹಕರು ಕೈಗೆಟಕುವ ದರದಲ್ಲಿ ಈ ಫೋನ್‌ಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಈ ಫೋನ್‌ಗಳ ವಿಭಾಗದಲ್ಲಿ ಸ್ಯಾಮ್‌ಸಂಗ್‌, ರಿಯಲ್‌ಮಿ, ವಿವೋ, ರೆಡ್ಮಿ ಸೇರಿದಂತೆ ಅನೇಕ ಕಂಪೆನಿಯ ಫೋನ್‌ಗಳು ಸೇಲ್‌ ಆಗುತ್ತಿವೆ. ನೀವೇನಾದರೂ ಬಜೆಟ್‌ ಬೆಲೆಯಲ್ಲಿ ಫೋನ್‌ ಖರೀದಿ ಮಾಡಲು ಮುಂದಾಗಿದ್ರೆ ಯಾವ ಫೋನ್‌ ಬೆಸ್ಟ್‌ ಅನ್ನೋದನ್ನ ತಿಳಿಸಿಕೊಟ್ಟಿದ್ದೇವೆ ಓದಿರಿ.

ಬಜೆಟ್‌ ಬೆಲೆಯ ಫೋನ್‌ ಬೇಕೆ? ಇಲ್ಲಿವೆ ನೋಡಿ ಹೆಚ್ಚು ಸೇಲ್‌ ಆಗುತ್ತಿರುವ ಫೋನ್‌ಗಳು

ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳು: ಬಜೆಟ್‌ ಬೆಲೆಯ ಫೋನ್‌ಗಳೆಂದರೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಾಗಿವೆ. ಸಾಮಾನ್ಯವಾಗಿ ಈ ಫೋನ್‌ಗಳು 10 ಸಾವಿರದಿಂದ 15 ಸಾವಿರ ಅಥವಾ ಹೆಚ್ಚು ಅಂದರೆ 20 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಫೋನ್‌ಗಳಾಗಿವೆ. ಈ ಸ್ಮಾರ್ಟ್‌ಫೋನ್‌ಗಳು ಕೈಗೆಟುಕುವ ಬೆಲೆಯಿಂದಾಗಿ ಜನಪ್ರಿಯವಾಗಿವೆ. ಈ ನಡುವೆ ಹೊಸ ಫೋನ್‌ಗೆ ಅಪ್‌ಗ್ರೇಡ್‌ ಆಗುವವರು ತಮ್ಮ ಹಳೇ ಫೋನ್‌ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಭಾರಿ ಕಡಿಮೆ ಬೆಲೆಗೆ ಈ ಕೆಳಗೆ ನೀಡಲಾದ ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M34: ಈ ಫೋನ್‌ಗಂತೂ (Samsung Galaxy M34) ಅಮೆಜಾನ್‌ನಲ್ಲಿ ಭರ್ಜರಿ ಬೇಡಿಕೆ ಇದೆ. ಫ್ಲಿಪ್‌ಕಾರ್ಟ್‌ಗೆ ಹೋಲಿಕೆ ಮಾಡಿದರೆ ಅಮೆಜಾನ್‌ನಲ್ಲಿ ಇದಕ್ಕೆ ಹೆಚ್ಚಿನ ಆಫರ್‌ ನೀಡಲಾಗಿದೆ. ಈ ಫೋನ್ 6.5 ಇಂಚಿನ ಸೂಪರ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದ್ದು, 50MP ಪ್ರಾಥಮಿಕ ಕ್ಯಾಮೆರಾದೊಂದಿಗೆ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಇದು ಹೊಂದಿದೆ. ಸೆಲ್ಫಿಗಾಗಿ 13MP ಸೆನ್ಸರ್‌ ನೀಡಲಾಗಿದ್ದು, ಎಕ್ಸಿನೋಸ್ 1280 ಆಕ್ಟಾ-ಕೋರ್ ಪ್ರೊಸೆಸರ್‌ನ ಬಲ ಈ ಫೋನ್‌ ನ ಉತ್ತಮ ಕಾರ್ಯಕ್ಷಮತೆಗೆ ಕಾರಣವಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M14 5G: ಈ ಸ್ಮಾರ್ಟ್‌ಫೋನ್ (Samsung Galaxy M14 5G) ಅನ್ನು ಸಹ ನೀವು ಅಗ್ಗದ ದರದಲ್ಲಿ ಖರೀದಿ ಮಾಡಬಹುದು. ಇದು ಸೂಪರ್‌ಫಾಸ್ಟ್ 5G ಅನುಭವವನ್ನು ನೀಡಲಿದ್ದು, ಎಕ್ಸಿನೋಸ್‌ 1330 ಪ್ರೊಸೆಸರ್ ಬಲದೊಂದಿಗೆ ಅತ್ಯುತ್ತಮ ಕಾರ್ಯಕ್ಷಮತೆ ನೀಡಲಿದೆ. ಉಳಿದಂತೆ ಈ ಫೋನ್ 50 MP ಪ್ರಾಥಮಿಕ ಕ್ಯಾಮೆರಾದೊಂದಿಗೆ ಇತರೆ ಎರಡು ಸೆನ್ಸರ್‌ ಆಯ್ಕೆ ಹೊಂದಿದ್ದು, 13 MP ಸೆಲ್ಫಿ ಕ್ಯಾಮೆರಾ ಮೂಲಕ ವಿಶೇಷ ಎನಿಸಿದೆ.

ರಿಯಲ್‌ಮಿ ನಾರ್ಜೋ N53: ರಿಯಲ್‌ಮಿಯ ಈ ಫೋನ್ (Realme Nazro N53) ಅನ್ನು ಬಜೆಟ್‌ ಬೆಲೆಯಲ್ಲಿ ಲಭ್ಯ ಆಗುತ್ತಿರುವ ಜನಪ್ರಿಯ ಫೋನ್ ಆಗಿದೆ. ಇದು 33W ಚಾರ್ಜರ್‌ ಬೆಂಬಲದೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 50MP AI ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ ಹಲವಾರು ಆಕರ್ಷಕ ಸುಧಾರಿತ ಫೀಚರ್ಸ್‌ ಇದ್ದು, ಅಗ್ಗದ ದರದಲ್ಲಿ ಖರೀದಿ ಮಾಡಬಹುದು.

ರೆಡ್ಮಿ 12C : ಬಜೆಟ್‌ ಬೆಲೆಯಲ್ಲಿ ಲಭ್ಯವಾಗುತ್ತಿರುವ ಮತ್ತೊಂದು ಫೋನ್‌ ರೆಡ್ಮಿ 12C (Redmi 12C) ಈ ಫೋನ್ ಮೀಡಿಯಾಟೆಕ್‌ ಹಿಲಿಯೋ G85 ಪ್ರೊಸೆಸರ್‌ ಬಲ ಹೊಂದಿದ್ದು, 11 GB RAM (6 GB ಭೌತಿಕ, 5GB ವರ್ಚುವಲ್) ಕಾರಣದಿಂದ ನೀವು ಅತ್ಯುತ್ತಮ ಅನುಭವ ಪಡೆಯಬಹುದು. ಇದರೊಂದಿಗೆ ಸ್ಕ್ರಾಚ್-ರೆಸಿಸ್ಟೆಂಟ್ ಗ್ಲಾಸ್‌ನೊಂದಿಗೆ ಈ ಫೋನ್‌ ಕಾಣಿಸಿಕೊಂಡಿದ್ದು, ಕ್ಯಾಮೆರಾ ಪ್ರಿಯರಿಗಂತೂ ಇಷ್ಟವಾದ ಫೋನ್ ಆಗಿದೆ.

ರಿಯಲ್‌ಮಿ ನಾರ್ಜೋ 60X 5G: ಈ ಸ್ಮಾರ್ಟ್‌ಫೋನ್ (Realme Nazro 60X 5G) 6.7 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 680 ನಿಟ್ಸ್‌ ಬ್ರೈಟ್‌ನೆಸ್‌ನಿಂದಾಗಿ ಪ್ರಕಾಶಮಾನವಾದ ಬೆಳಕಿನಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಡಿಸ್‌ಪ್ಲೇನ ಅಂಚಿನಲ್ಲಿ ಫಿಂಗರ್‌ಪ್ರಿಂಟ್ ರೀಡರ್ ಆಯ್ಕೆ ನೀಡಲಾಗಿದ್ದು, ಈ ಮೂಲಕ ಪ್ರೀಮಿಯಂ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕೂ ಅಮೆಜಾನ್‌ನಲ್ಲಿ ಭಾರೀ ಡಿಸ್ಕೌಂಟ್‌ ನೀಡಲಾಗಿದೆ.

ಬಜೆಟ್‌ ಬೆಲೆಯ ಫೋನ್‌ ಬೇಕೆ? ಇಲ್ಲಿವೆ ನೋಡಿ ಹೆಚ್ಚು ಸೇಲ್‌ ಆಗುತ್ತಿರುವ ಫೋನ್‌ಗಳು

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13: ಸ್ಯಾಮ್‌ಸಂಗ್‌ನ ಮಗದೊಂದು ಫೋನ್‌ (Samsung Galaxy M13) ಸಹ ಅಮೆಜಾನ್‌ನಲ್ಲಿ ಹೆಚ್ಚು ಸೇಲ್‌ ಆಗುತ್ತಿದೆ. ಈ ಫೋನ್ 6000 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪ್ಯಾಕ್‌ ಆಗಿದ್ದು, ಆಕ್ಟಾ-ಕೋರ್ ಪ್ರೊಸೆಸರ್‌ ಮೂಲಕ ಉತ್ತಮ ಕಾರ್ಯಕ್ಷಮತೆ ನೀಡಲಿದೆ. ಉಳಿದಂತೆ ಈ ಫೋನ್ 1 TB ವರೆಗೆ ಸ್ಟೋರೇಜ್‌ ಅನ್ನು ವಿಸ್ತರಣೆ ಮಾಡಿಕೊಳ್ಳಲು ಅನುಮತಿಸುತ್ತದೆ. 50 MP, 5MP ಮತ್ತು 2MPಯ ಟ್ರಿಪಲ್‌ ರಿಯರ್‌ ಕ್ಯಾಮೆರಾ ಹಾಗೂ 8 MP ಸೆಲ್ಫಿ ಕ್ಯಾಮೆರಾ ಈ ಫೋನ್‌ನಲ್ಲಿದೆ.

Best Mobiles in India

English summary
Amazon sale : Budget smartphones are in high demand in India. Samsung Galaxy M34, Samsung Galaxy M14 5G, Realme N53, Redmi 12C, Realme 60X 5G, Samsung Galaxy M13 phones can be bought in Amazon Great Indian Festival Sale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+