ಅಮೆಜಾನ್ ಸಮ್ಮರ್ ಸೇಲ್: ಈ ಅತ್ಯುತ್ತಮ ಸ್ಮಾರ್ಟ್‌ಟಿವಿಗಳಿಗೆ 60% ವರೆಗೆ ಡಿಸ್ಕೌಂಟ್!
ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಈಗ ಲೈವ್ ಆಗಿದ್ದು, ಈ ಸೇಲ್ ಮೂಲಕ ನೀವು ಹೊಸ ಸ್ಮಾರ್ಟ್‌ಟಿವಿಯನ್ನು ಆಕರ್ಷಕ ಆಫರ್ ಮೂಲಕ ಖರೀದಿ ಮಾಡಬಹುದಾಗಿದೆ. ಇದರಲ್ಲಿ ಸೋನಿ, ಸ್ಯಾಮ್‌ಸಂಗ್, ಎಲ್‌ಜಿ, ಒನ್‌ಪ್ಲಸ್ ಸೇರಿದಂತೆ ಇನ್ನೂ ಹೆಚ್ಚಿನ ಪ್ರಮುಖ ಬ್ರಾಂಡ್‌ಗಳ ಸ್ಮಾರ್ಟ್ ಟಿವಿಗಳಿಗೆ ಬಿಗ್ ಡಿಸ್ಕೌಂಟ್ ನೀಡಲಾಗಿದೆ.
ಹೌದು, ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್ ತನ್ನ ಗ್ರೇಟ್ ಸಮ್ಮರ್ ಸೇಲ್ ಆರಂಭ ಮಾಡಿದ್ದು, ಇದು ಮೇ 8ರ ವರೆಗೆ ಇರಲಿದೆ. ಈ ಸೇಲ್‌ನಲ್ಲಿ ಪ್ರಮುಖ ಸ್ಮಾರ್ಟ್‌ಟಿವಿಗಳಿಗೆ ಬರೋಬ್ಬರಿ 60% ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಸ್ಮಾರ್ಟ್ ಡಿವೈಸ್‌ಗಳಿಗೆ ಎಷ್ಟು ಡಿಸ್ಕೌಂಟ್ ಇದೆ, ಟಿವಿಗಳ ಸಾಮಾನ್ಯ ಫೀಚರ್ಸ್ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ.

ಸೋನಿ X74K ಟಿವಿ: ಸೋನಿ X74K ಟಿವಿ 65 ಇಂಚಿನ 4K ಡಿಸ್‌ಪ್ಲೇ ಹೊಂದಿದ್ದು, ಗೂಗಲ್ ಟಿವಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಡಾಲ್ಬಿ ಆಡಿಯೊವನ್ನು ಬೆಂಬಲಿಸುವ 20W ಸ್ಪೀಕರ್ ರಚನೆಯನ್ನು ಪಡೆದುಕೊಂಡಿದ್ದು, ಈ ಮೂಲಕ ಅತ್ಯುತ್ತಮ ವೀಕ್ಷಣೆ ಅನುಭವವನ್ನು ಪಡೆದುಕೊಳ್ಳಬಹುದು. ಈ ಸ್ಮಾರ್ಟ್‌ಟಿವಿ 1,39,900ರೂ.ಗಳ ಸಾಮಾನ್ಯ ದರ ಹೊಂದಿದ್ದು, 49% ರಿಯಾಯಿತಿ ನೀಡಲಾಗಿರುವುದರಿಂದ 70,990ರೂ. ಗಳಿಗೆ ಖರೀದಿ ಮಾಡಬಹುದು. ಇದರೊಂದಿಗೆ ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಇನ್ನೂ ಹೆಚ್ಚಿನ ಆಫರ್ ಪಡೆದುಕೊಳ್ಳಬಹುದು.
ಸ್ಯಾಮ್‌ಸಂಗ್ ನಿಯೋ QLEDಟಿವಿ: ಈ ಸ್ಮಾರ್ಟ್‌ಟಿವಿ 55 ಇಂಚಿನ QLED ಪ್ಯಾನೆಲ್‌ನೊಂದಿಗೆ ಬರಲಿದ್ದು, 4Kರೆಸಲ್ಯೂಶನ್ ನೀಡಲಿದೆ. ಜೊತೆಗೆ 100Hzರಿಫ್ರೆಶ್ ರೇಟ್ ಆಯ್ಕೆ ಇದರಲ್ಲಿದೆ. ಇದರೊಂದಿಗೆ 60Wಸ್ಪೀಕರ್ ರಚನೆ ಪಡೆದುಕೊಂಡಿದ್ದು, ಡಾಲ್ಬಿ ಡಿಜಿಟಲ್ ಪ್ಲಸ್, ಸರೌಂಡ್ ಸೌಂಡ್, ಆಕ್ಟಿವ್ ವಾಯ್ಸ್ ಆಂಪ್ಲಿಫೈಯರ್ ಮತ್ತು ಅಡಾಪ್ಟಿವ್ ಸೌಂಡ್+ ಅನ್ನು ಬೆಂಬಲಿಸುತ್ತದೆ. ಹಾಗೆಯೇ ಗೇಮಿಂಗ್‌ಗಾಗಿ ಫ್ರೀಸಿಂಕ್ ಪ್ರೀಮಿಯಂ ಪ್ರೊಫೀಚರ್ಸ್ ಅನ್ನು ಪಡೆದುಕೊಂಡಿದೆ.ಇದರ ಸಾಮಾನ್ಯ ದರ 1,99,990ರೂ. ಆಗಿದ್ದು, ನೀವು 1,15,990ರೂ. ಗಳಿಗೆ ಖರೀದಿ ಮಾಡಬಹುದು.

ಎಲ್‌ಜಿ OLED ಟಿವಿ:ಎಲ್‌ಜಿ OLED ಟಿವಿ 55 ಇಂಚಿನ 4Kರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇ ಹೊಂದಿದ್ದು, 3ಯುಎಸ್‌ಬಿ ಪೋರ್ಟ್, 4ಹೆಚ್‌ಡಿಎಮ್‌ಐ ಪೋರ್ಟ್‌ಗಳನ್ನು ಹೊಂದಿದೆ. ಈ ಟಿವಿಯು 40Wಸ್ಪೀಕರ್ ರಚನೆ ಪಡೆದುಕೊಂಡಿದ್ದು, ಡಾಲ್ಬಿ ಅಟ್ಮಾಸ್ ಮತ್ತು OLED ಸರೌಂಡ್ ಅನ್ನು ಬೆಂಬಲಿಸುತ್ತದೆ. ಹಾಗೆಯೇ ವಾಯರ್‌ಲೆಸ್ ಸಂಪರ್ಕಕ್ಕಾಗಿ ಗೂಗಲ್ ಅಸಿಸ್ಟೆಂಟ್, ಅಲೆಕ್ಸಾ, ಆಪಲ್ ಏರ್‌ಪ್ಲೇ2 ಮತ್ತು ಹೋಮ್‌ಕಿಟ್‌ಗೆ ಬೆಂಬಲ ನೀಡುತ್ತದೆ. 57% ಡಿಸ್ಕೌಂಟ್‌ನೊಂದಿಗೆ 94,999ರೂ.ಗಳಿಗೆ ಖರೀದಿ ಮಾಡಬಹುದು. ಇದರ ಸಾಮಾನ್ಯ ದರ 2,19,990ರೂ.ಗಳು.
ಒನ್‌ಪ್ಲಸ್ ಟಿವಿ Y1 : ಈ ಸ್ಮಾರ್ಟ್‌ಟಿವಿ 32 ಇಂಚಿನ 720 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇ ಹೊಂದಿದ್ದು, 60Hz ರಿಫ್ರೆಶ್ ರೇಟ್ ನೀಡಲಿದೆ. ಜೊತೆಗೆ ಡಾಲ್ಬಿ ಆಡಿಯೊ ಬೆಂಬಲದೊಂದಿಗೆ 20W ಸ್ಪೀಕರ್ ರಚನೆ ಪಡೆದುಕೊಂಡಿದ್ದು, ಆಂಡ್ರಾಯ್ಡ್ ಟಿವಿ 9 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಗೂಗಲ್ ಅಸಿಸ್ಟೆಂಟ್ ಮತ್ತು ಅಲೆಕ್ಸಾ ಎರಡಕ್ಕೂ ಹೊಂದಿಕೊಳ್ಳುತ್ತದೆ. ಇದು 43% ಡಿಸ್ಕೌಂಟ್‌ನೊಂದಿಗೆ 11,499 ರೂ. ಗಳಿಗೆ ಲಭ್ಯವಾಗಲಿದೆ. ಇದರ ಸಾಮಾನ್ಯ ದರ 19,999ರೂ.ಗಳಾಗಿದೆ.

ಶಿಯೋಮಿ ಟಿವಿ 5A: ಶಿಯೋಮಿ ಟಿವಿ 5A ಟಿವಿ 32 ಇಂಚಿನ 5A ಸರಣಿಯ ಟಿವಿಯಾಗಿದ್ದು,720 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 60Hz ರಿಫ್ರೆಶ್ ರೇಟ್ ಹಾಗೂ 178ಡಿಗ್ರಿ ವೀಕ್ಷಣಾ ಕೋನವನ್ನು ಬೆಂಬಲಿಸುತ್ತದೆ. ಇನ್ನುಳಿದಂತೆ ಡಾಲ್ಬಿ ಆಡಿಯೋ, ಡಿಟಿಎಸ್ ವರ್ಚುವಲ್ ಎಕ್ಸ್ ಮತ್ತು ಡಿಟಿಎಸ್-ಹೆಚ್‌ಡಿ ಬೆಂಬಲದೊಂದಿಗೆ 20Wಆಡಿಯೊ ರಚನೆ ಪಡೆದುಕೊಂಡಿದೆ. ಈ ಟಿವಿ 52% ರಿಯಾಯಿತಿಯೊಂದಿಗೆ 11,999ರೂ. ಗಳಿಗೆ ಖರೀದಿ ಮಾಡಬಹುದು. ಇದರ ಸಾಮಾನ್ಯ ದರ 24,999ರೂ.ಗಳು.


Click it and Unblock the Notifications