ಮತ್ತೆ ಬಂತು ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್: ಫೋನ್‌ಗಳಿಗೆ ಬಿಗ್ ಡಿಸ್ಕೌಂಟ್!
ಇ-ಕಾಮರ್ಸ್ ದೈತ್ಯ ಅಮೆಜಾನ್ ಇತ್ತೀಚಿಗಷ್ಟೆ ಅಮೆಜಾನ್ ಪ್ರೈಮ್ ಡೇ ಸೇಲ್ ಅನ್ನು ಮುಕ್ತಾಯ ಮಾಡಿದೆ. ಅದರ ಬೆನ್ನಲ್ಲೇ ಈಗ ಮತ್ತೊಂದು ವಿಶೇಷ ಸೇಲ್ ಆಯೋಜಿಸಿದೆ. ಅದುವೇ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್. ಐದು ದಿನಗಳ ಈ ವಿಶೇಷ ಸೇಲ್ ಇದೇ ಅಗಷ್ಟ 5ರಿಂದ ಈ ಸೇಲ್ ಆರಂಭವಾಗಲಿದ್ದು, ಅಗಷ್ಟ 9ರ ವರೆಗೂ ನಡೆಯಲಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ರಿಯಾಯಿತಿ ಲಭ್ಯವಾಗಲಿದೆ.

ಅಮೆಜಾನ್‌ನಲ್ಲಿ ಇತ್ತೀಚಿಗಷ್ಟೆ ನಡೆದ ಪ್ರೈಮ್ ಡೇ ಸೇಲ್ ಮಿಸ್ ಮಾಡಿಕೊಂಡ ಗ್ರಾಹಕರಿಗೆ ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ ಉತ್ತಮ ಎನಿಸಲಿದೆ. ಅಮೆಜಾನ್ ಈ ಸೇಲ್ ಮೂಲಕ ಸ್ಮಾರ್ಟ್ ಫೋನ್ ಮತ್ತು ಇತರೆ ಸ್ಮಾರ್ಟ್ ಗ್ಯಾಡ್ಜೆಟ್ಸ್‌ಗಳಿಗೆ ವಿಶೇಷ ಡಿಸ್ಕೌಂಟ್ ಲಭ್ಯ ಮಾಡಲಿದೆ. ಹಾಗೆಯೇ ಸೇಲ್ ಸಮಯದಲ್ಲಿ ಅಮೆಜಾನ್ ಘೋಷಿಸದ ಬ್ಯಾಂಕ್ ಕೊಡುಗೆಗಳು ಕೂಡ ಇವೆ. ಹಾಗಾದರೇ ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿ
ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಪರಿಕರಗಳ ಮೇಲೆ ಶೇಕಡಾ 40 ರಷ್ಟು ರಿಯಾಯಿತಿ ಇರುತ್ತದೆ. ಈ ಮಾರಾಟದಲ್ಲಿ ಇತ್ತೀಚಿಗೆ ಬಿಡುಗಡೆ ಆಗಿರುವ ಒನ್‌ಪ್ಲಸ್ ನಾರ್ಡ್ CE 5G, ರೆಡ್ಮಿ ನೋಟ್ 10T 5G, ರೆಡ್ಮಿ ನೋಟ್ 10s, ಮಿ 11x, ಸ್ಯಾಮ್‌ಸಂಗ್ ಗ್ಯಾಲಕ್ಸಿ M21 2021, ಗ್ಯಾಲಕ್ಸಿ M32, iQOO Z3 5G, iQOO 7 ಸೇರಿದಂತೆ ಇತರೆ ಕೆಲ ಹೊಸ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲಿವೆ.

ಕ್ಯಾಮೆರಾ ಮತ್ತು ಆಡಿಯೋ ಡಿವೈಸ್‌ಗಳಿಗೂ ಡಿಸ್ಕೌಂಟ್
ಅಮೆಜಾನ್ ಸೇಲ್‌ನಲ್ಲಿ ಕ್ಯಾಮೆರಾಗಳು, ಟ್ರೈಪಾಡ್‌ಗಳು, ರಿಂಗ್ ಲೈಟ್‌ಗಳು ಮತ್ತು ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮೆರಾಗಳ ಮೇಲೆ ಶೇಕಡಾ 60 ರಷ್ಟು ರಿಯಾಯಿತಿಯನ್ನು ಹೊಂದಿದೆ. ಹೆಡ್‌ಫೋನ್‌ಗಳು, ಸಂಗೀತ ಉಪಕರಣಗಳು, ವೃತ್ತಿಪರ ಆಡಿಯೋ ಉಪಕರಣಗಳು ಮತ್ತು ಸ್ಪೀಕರ್‌ಗಳು ಕೂಡ ಶೇಕಡಾ 60 ರಷ್ಟು ರಿಯಾಯಿತಿಯಲ್ಲಿ ಲಭ್ಯವಿರುತ್ತವೆ. ಅಮೆಜಾನ್ ಲ್ಯಾಪ್‌ಟಾಪ್‌ಗಳಿಗೆ ರೂ. 30,000 ರಿಯಾಯಿತಿ, ಪ್ರಿಂಟರ್‌ಗಳಿಗೆ ಶೇ .30 ರಿಯಾಯಿತಿ, ಗೇಮಿಂಗ್ ಆಕ್ಸೆಸರೀಸ್ ಮೇಲೆ ಶೇ 50 ರಿಯಾಯಿತಿ ಮತ್ತು ಹೈ-ಸ್ಪೀಡ್ ವೈ-ಫೈ ರೂಟರ್‌ಗಳಿಗೆ ಶೇ .60 ರಷ್ಟು ರಿಯಾಯಿತಿ ನೀಡುತ್ತದೆ. ಅಮೆಜಾನ್ ಮಾರಾಟದಲ್ಲಿ ಹೆಚ್ಚು ಮಾರಾಟವಾಗುವ ಟ್ಯಾಬ್ಲೆಟ್‌ಗಳ ಮೇಲೆ ಶೇಕಡಾ 45 ರಷ್ಟು ರಿಯಾಯಿತಿ ಇದೆ.
ಅಲ್ಲದೇ 40 ಇಂಚು ಮತ್ತು 43 ಇಂಚಿನ ಸ್ಕ್ರೀನ್ ಗಾತ್ರಗಳಿಗೆ 50 ಪ್ರತಿಶತದಷ್ಟು ರಿಯಾಯಿತಿ ಮಾಡಲಾಗುತ್ತದೆ. ದೊಡ್ಡ ಪರದೆಯ ಟಿವಿ ಮಾದರಿಗಳು 4 ಕೆ ರೆಸಲ್ಯೂಶನ್ ಹಾಗೂ ಪ್ರೊಜೆಕ್ಟರ್‌ಗಳು ಶೇಕಡಾ 60 ರಷ್ಟು ರಿಯಾಯಿತಿಯಲ್ಲಿ ಲಭ್ಯವಿರುತ್ತವೆ. ಅಮೆಜಾನ್ ಎಕೋ ಸ್ಮಾರ್ಟ್ ಸ್ಪೀಕರ್‌ಗಳು ಮತ್ತು ಸ್ಮಾರ್ಟ್ ಡಿಸ್‌ಪ್ಲೇಗಳು ಶೇಕಡಾ 45 ರಷ್ಟು ರಿಯಾಯಿತಿ ದರದಲ್ಲಿ ಲಭ್ಯವಿದ್ದು, ಫೈರ್ ಟಿವಿ ಸಾಧನಗಳು ಅವುಗಳ ಬೆಲೆಯಲ್ಲಿ 44 ಪ್ರತಿಶತದಷ್ಟು ರಿಯಾಯಿತಿ ಪಡೆಯುತ್ತವೆ. ಹವಾನಿಯಂತ್ರಣಗಳು, ರೆಫ್ರಿಜರೇಟರ್‌ಗಳು, ತೊಳೆಯುವ ಯಂತ್ರಗಳು, ಮೈಕ್ರೋವೇವ್‌ಗಳು ಮತ್ತು ಚಿಮಣಿಗಳು ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ. ಅಮೆಜಾನ್ ಪ್ರೈಮ್ ಸದಸ್ಯರು ಮೂರು ತಿಂಗಳ ಹೆಚ್ಚುವರಿ ನೋ-ಕಾಸ್ಟ್ EMI ನಂತಹ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತಾರೆ.


Click it and Unblock the Notifications