Home
ಸುದ್ದಿಜಾಲ

ಅಮೆಜಾನ್‌ನಿಂದ ವಿದ್ಯಾರ್ಥಿಗಳಿಗೆ ಶಾಕಿಂಗ್‌ ನ್ಯೂಸ್‌; ಈ ಸೇವೆ ಸ್ಥಗಿತ

ಜಗತ್ತಿನಲ್ಲಿ ಮುಂದೆ ಉಂಟಾಗುವ ಆರ್ಥಿಕ ಕುಸಿತ ಈಗಾಗಲೇ ಹಲವರ ಉದ್ಯೋಗ ಕಸಿದುಕೊಂಡಿದೆ. ಅದರಂತೆ ಪ್ರಮುಖ ಐಟಿ ಕಂಪೆನಿಗಳು ತಮ್ಮ ಉದ್ಯೋಗಿಗಳನ್ನು ವಜಾ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿವೆ. ಇದರ ನಡುವೆ ಅಮೆಜಾನ್‌ ಸಹ ಉದ್ಯೋಗಿಗಳ ವಜಾ ಬಗ್ಗೆ ಮಾಹಿತಿ ನೀಡಿದ್ದು, ಇದರ ಭಾಗವಾಗಿಯೇ ವಿದ್ಯಾರ್ಥಿಗಳಿಗೆ ಅಮೆಜಾನ್ ಬ್ಯಾಡ್‌ ನ್ಯೂಸ್‌ ನೀಡಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಹಲವಾರು ಭಾರತೀಯ ಉದ್ಯೋಗಿಗಳನ್ನು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡುವಂತೆ ಕೇಳಿಕೊಂಡಿದೆ. ಈ ಶಾಕ್‌ನಿಂದ ಉದ್ಯೋಗಿಗಳು ಹೊರ ಬರುವ ಮುನ್ನವೇ ಅಮೆಜಾನ್‌ ತನ್ನ ಎಜುಕೇಶನ್‌-ಟೆಕ್ನಾಲಜಿ ಸೇವೆಯಾದ ಅಮೆಜಾನ್ ಅಕಾಡೆಮಿಯನ್ನು ಮುಚ್ಚಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಈ ವಿಷಯ ಹಲವಾರು ವಿದ್ಯಾರ್ಥಿಗಳು ಹಾಗೂ ಫೋಷಕರಿಗೆ ಶಾಕ್‌ ನೀಡಿದಂತಾಗಿದೆ.

ಶುಲ್ಕ ಮರುಪಾವತಿ

ಶುಲ್ಕ ಮರುಪಾವತಿ

ಅಮೆಜಾನ್ ಅಕಾಡೆಮಿಯು ಆಗಸ್ಟ್ 2023 ರಿಂದ ಭಾರತದಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿದೆ. ಹಾಗೆಯೇ ಪ್ರಸ್ತುತ ಶೈಕ್ಷಣಿಕ ಬ್ಯಾಚ್‌ಗೆ ದಾಖಲಾದ ವಿದ್ಯಾರ್ಥಿಗಳಿಗೆ ಸಂಪೂರ್ಣ ಶುಲ್ಕವನ್ನು ಪರುಪಾವತಿಸಲಾಗುತ್ತದೆ ಎಂದು ಅಮೆಜಾನ್‌ ಹೇಳಿಕೊಂಡಿದೆ.

ಏನಿದು ಅಮೆಜಾನ್ ಅಕಾಡೆಮಿ?

ಏನಿದು ಅಮೆಜಾನ್ ಅಕಾಡೆಮಿ?

ಅಮೆಜಾನ್‌ ಟೆಕ್‌ ಸೇವೆಯನ್ನು ನೀಡುವುದರ ಜತೆಗೆ ಶೈಕ್ಷಣಿಕವಾಗಿಯೂ ಸೇವೆ ನೀಡುತ್ತಾ ಬರುತ್ತಿತ್ತು. ಅಂದರೆ, ಜೆಇಇ ರೆಡಿ ಎಂಬ ಹೆಸರಿನಲ್ಲಿ ಅಮೆಜಾನ್‌ ಅಕಾಡೆಮಿಯನ್ನು 2021 ರ ಜನವರಿಯಲ್ಲಿ ಅಧಿಕೃತವಾಗಿ ಪ್ರಾರಂಭಿಸಲಾಗಿತ್ತು. ಈ ಸೇವೆಯ ಮೂಲಕ ಅಗತ್ಯವಿರುವ ಜಂಟಿ ಪ್ರವೇಶ ಪರೀಕ್ಷೆಗೆ (JEE) ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿತ್ತು.

 ಪರಿಣಿತರಿಂದ ಶಿಕ್ಷಣ

ಪರಿಣಿತರಿಂದ ಶಿಕ್ಷಣ

ಈ ಆನ್‌ಲೈನ್ ಶಿಕ್ಷಣ ಸೇವೆಯು JEE ಗೆ ಅಗತ್ಯವಿರುವ ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಕ್ಯುರೇಟೆಡ್ ಕಲಿಕಾ ಸಾಮಗ್ರಿಗಳು, ನೇರ ಉಪನ್ಯಾಸಗಳು ಮತ್ತು ಸಮಗ್ರ ಮೌಲ್ಯಮಾಪನಗಳನ್ನು ನೀಡಲಾಗುತ್ತಿತ್ತು. ಹಾಗೆಯೇ ಅಮೆಜಾನ್ ಅಕಾಡೆಮಿಯು ವಿದ್ಯಾರ್ಥಿಗಳಿಗೆ ಪರಿಣಿತ ಅಧ್ಯಾಪಕರೊಂದಿಗೆ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತಿತ್ತು. ಈ ಮೂಲಕ ವಿದ್ಯಾರ್ಥಿಗಳ ಯಾವುದೇ ಸಮಸ್ಯೆಗಳನ್ನು ನೈಜ ಸಮಯದಲ್ಲಿ ನಿವಾರಿಸಲು ಅನುಕೂಲವಾಗಿತ್ತು.

ಸ್ಥಗಿತ ಏಕೆ?

ಸ್ಥಗಿತ ಏಕೆ?

ಗ್ರಾಹಕರ ಮೌಲ್ಯದ ಆಧಾರ ಮೇಲೆ ಅಮೆಜಾನ್‌ ತನ್ನ ಉತ್ಪನ್ನಗಳು ಮತ್ತು ಸೇವೆಗಳ ಪ್ರಗತಿ ಹಾಗೂ ಸಾಮರ್ಥ್ಯವನ್ನು ನಿಯಮಿತವಾಗಿ ಮೌಲ್ಯಮಾಪನ ಮಾಡಲಾಗುತ್ತದೆ. ಕಂಪೆನಿಯು ನಡೆಸಿದ ಆ ಮೌಲ್ಯಮಾಪನಗಳ ಆಧಾರದ ಮೇಲೆಯೇ ಸೇವೆಗಳಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಂಡು ಬರಲಾಗುತ್ತದೆ ಎಂದು ವಕ್ತಾರರು ಹೇಳಿದ್ದಾರೆ. ಈ ಮೌಲ್ಯಮಾಪನದ ನಂತರವೇ ಅಮೆಜಾನ್ ಅಕಾಡೆಮಿ ಸೇವೆಯನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಹಾಗೆಯೇ ಈ ಸೇವೆ ಪಡೆಯುತ್ತಿರುವವರಿಗೆ ಯಾವುದೇ ಸಮಸ್ಯೆ ಆಗದಂತೆ ಹಂತಹಂತವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇತರೆ ಕಂಪೆನಿಗಳಿಂದಲೂ ಇದೇ ಕೆಲಸ

ಇತರೆ ಕಂಪೆನಿಗಳಿಂದಲೂ ಇದೇ ಕೆಲಸ

ಕೋವಿಡ್ ನಂತರದ ಲಾಕ್‌ಡೌನ್‌ಗಳು ಆದ ಮೇಲೆ ದೇಶಾದ್ಯಂತ ಶಾಲೆಗಳು ಮತ್ತು ಕೋಚಿಂಗ್ ಸೆಂಟರ್‌ಗಳು ತಲೆ ಎತ್ತಿದ್ದವು. ಆದರೆ ಇವೂ ಸಹ ಈಗ ಬಾಗಿಲು ಮುಚ್ಚಲು ಮುಂದಾಗಿವೆ. ಅದರಲ್ಲೂ ಪ್ರಮುಖವಾಗಿ ಬೈಜುಸ್‌ ಕಳೆದ ತಿಂಗಳು 2,500 ಉದ್ಯೋಗ ಕಡಿತದ ಬಗ್ಗೆ ಘೋಷಣೆ ಮಾಡಿದ್ದನ್ನು ಈ ವೇಳೆ ನೆನಪು ಮಾಡಿಕೊಳ್ಳಬಹುದು.ಬೈಜುಸ್‌ ರೀತಿಯಲ್ಲಿಯೇ ಟಾಪರ್‌, ವೈಟ್‌ಹ್ಯಾಟ್‌, ವೇದಾಂತೂ ಸೇರಿದಂತೆ ಇತರೆ ಕಂಪೆನಿಗಳೂ ಸಹ ಇದೇ ಮಾರ್ಗವನ್ನು ಅನುಸರಿಸಿದ್ದು, ಉದ್ಯೋಗ ಕಡಿತದ ಬಗ್ಗೆ ಘೋಷಣೆ ಮಾಡಿವೆ.

ಆಹಾರ ವಿತರಣಾ ಸೇವೆಯೂ ಸಹ ಸ್ಥಗಿತ

ಆಹಾರ ವಿತರಣಾ ಸೇವೆಯೂ ಸಹ ಸ್ಥಗಿತ

ಅಮೆಜಾನ್ 2020 ರಲ್ಲಿ ತನ್ನ ವಿತರಣಾ ಸೇವೆಯನ್ನು ಆರಂಭಿಸಿತ್ತು. ಈಗ ಇದನ್ನೂ ಸಹ ಸ್ಥಗಿತಗೊಳಿಸುತ್ತಿರುವುದಾಗಿ ಮಾಹಿತಿ ನೀಡಿದೆ. ಹಾಗೆಯೇ ತನ್ನ ಆಹಾರ ವಿತರಣಾ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಭಾರತದಲ್ಲಿನ ತನ್ನ ರೆಸ್ಟೋರೆಂಟ್ ಪಾಲುದಾರರಿಗೆ ಈಗಾಗಲೇ ಮಾಹಿತಿ ನೀಡಿದೆ. ಅದರಂತೆ ಜನವರಿ 31, 2023 ರ ವರೆಗೆ ಇದು ಕಾರ್ಯನಿರ್ವಹಿಸಲಿದ್ದು, ಅಲ್ಲಿವರೆಗೆ ಗ್ರಾಹಕರು ಈ ಸೇವೆ ಪಡೆದುಕೊಳ್ಳಬಹುದಾಗಿದೆ ಎಂದು ಅಮೆಜಾನ್‌ ಹೇಳಿದೆ.

Best Mobiles in India

English summary
Amazon to shut down online learning service in August 2023.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+