Home
ಸುದ್ದಿಜಾಲ

Amazon Prime Video ವೀಕ್ಷಕರಿಗೆ ಕಾದಿದೆ ಬಿಗ್‌ ಶಾಕ್‌!..ಇನ್ನು ಎರಡೇ ತಿಂಗಳು ಬಾಕಿ!

ಪ್ರಮುಖ ಒಟಿಟಿ ತಾಣಗಳ ಪೈಕಿ ಅಮೆಜಾನ್‌ ಪ್ರೈಮ್‌ ವಿಡಿಯೋ (Amazon Prime Video) ಕೂಡಾ ಒಂದಾಗಿದೆ. ಈ ಒಟಿಟಿ ಪ್ಲಾಟ್‌ಫಾರ್ಮ್ ಹಲವು ಜನಪ್ರಿಯ ಕಾರ್ಯಕ್ರಮಗಳು, ಸಿನಿಮಾ, ವೆಬ್‌ಸೀರಿಸ್‌ ಮೂಲಕ ಹೆಚ್ಚಿನ ಗ್ರಾಹಕ ಬಳಗವನ್ನು (ಚಂದಾದಾರರನ್ನು) ಪಡೆದದಿದೆ. ವೀಕ್ಷಣೆಗೆ ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿ ಚಂದಾದಾರಿಕೆ ಯೋಜನೆಗಳ ಆಯ್ಕೆ ಸಹ ನೀಡಿದೆ. ಡಿಮ್ಯಾಂಡ್‌ನಲ್ಲಿ ಇರುವ ಅಮೆಜಾನ್‌ ಪ್ರೈಮ್‌ ಇದೀಗ ತನ್ನ ಚಂದಾದಾರರಿಗೆ ಬಿಗ್ ಶಾಕ್‌ ನೀಡಲು ಮುಂದಾಗಿದೆ.

ಹೌದು, ಅಮೆಜಾನ್ ಬರುವ 2025 ರಲ್ಲಿ ತನ್ನ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ (Amazon Prime Video) ಹೆಚ್ಚಿನ ಜಾಹೀರಾತುಗಳನ್ನು ಪರಿಚಯಿಸಲು ಸಜ್ಜಾಗಿದೆ. ಕಳೆದ ಎಂಟು ತಿಂಗಳುಗಳಲ್ಲಿ, ಅಮೆಜಾನ್ ಕಿರು ಜಾಹೀರಾತು ನಿಯೋಜನೆಗಳನ್ನು ಪರೀಕ್ಷಿಸುತ್ತಿದ್ದು, ಆಶ್ಚರ್ಯಕರ ಸಂಗತಿಯೆಂದರೆ ವೀಕ್ಷಕರ ಪ್ರತಿಕ್ರಿಯೆ ಧನಾತ್ಮಕವಾಗಿದೆ. ವೀಕ್ಷಕರು ತಮ್ಮ ನೆಚ್ಚಿನ ಕಾರ್ಯಕ್ರಮಗಳನ್ನು ಹೆಚ್ಚು ಗಡಿಬಿಡಿಯಿಲ್ಲದೆ ವೀಕ್ಷಿಸುತ್ತಿದ್ದಾರೆ. ಇದರಿಂದ ಪ್ರೇರಿತವಾಗಿರುವ ಅಮೆಜಾನ್ ಜಾಹೀರಾತು ಅನುಭವವನ್ನು ಹೆಚ್ಚಿಸುವ ಜೊತೆಗೆ ಜಾಹೀರಾತು ಲೋಡ್ ಅನ್ನು ಹೆಚ್ಚಿಸಲು ಯೋಜಿಸಿದೆ.

Amazon Prime Video ವೀಕ್ಷಕರಿಗೆ ಬಿಗ್‌ ಶಾಕ್‌!..ಇನ್ನು ಎರಡೇ ತಿಂಗಳು ಬಾಕಿ!

ಅಧಿಕ ಜಾಹೀರಾತುಗಳು ಏಕೆ?

ಸಹಜವಾಗಿ ಜಾಹೀರಾತುಗಳು ಅಧಿಕ ಹಣವನ್ನು ಪಡೆಯುತ್ತವೆ ಎಂಬುದನ್ನು ಅಮೆಜಾನ್‌ (Amazon) ಬಲ್ಲದು. ಇನ್ನು ನೆಟ್‌ಫ್ಲಿಕ್ಸ್, ಡಿಸ್ನಿ+ ಮತ್ತು ಮ್ಯಾಕ್ಸ್‌ನಂತಹ ಜನಪ್ರಿಯ ಒಟಿಟಿ ಸ್ಟ್ರೀಮಿಂಗ್ ತಾಣಗಳು ಈಗಾಗಲೇ ಜಾಹೀರಾತು-ಬೆಂಬಲಿತ ಬ್ಯಾಂಡ್‌ವ್ಯಾಗನ್‌ನಲ್ಲಿ ಮುನ್ನುಗ್ಗುತ್ತಿರುವಾಗ, ಅಮೆಜಾನ್‌ ಪ್ರೈಮ್‌ ಸಹ ಮುನ್ನುಗ್ಗಲು ಉತ್ಸುಕ ಆಗಿದೆ.

ಸ್ವಾರಸ್ಯವೆಂದರೆ, ಅಮೆಜಾನ್‌ ಅಧಿಕ ಜಾಹಿರಾತುಗಳನ್ನು ಕಾಣಿಸುವುದು ಒಂದೆಡೆಯಾದರೆ, ಆ ಜಾಹಿರಾತುಗಳಲ್ಲಿ ಕಾಣಿಸುವ ಉತ್ಪನ್ನಗಳನ್ನು ಖರೀದಿಸಲು ಸರಳ ಮಾರ್ಗ ರೂಪಿಸಲಿದೆ. ಅಂದರೆ, ಜಾಹಿರಾತುಗಳಲ್ಲಿ ಕಾಣಿಸಿದ ಉತ್ಪನ್ನಗಳನ್ನು ವೀಕ್ಷಕರು ನೇರವಾಗಿ ಅವರ ಅಮೆಜಾನ್ ಕಾರ್ಟ್‌ ಗೆ (Amazon Cart) ಸೇರಿಸಲು ಕ್ಲಿಕ್ ಮಾಡಬಹುದು. ಹಾಗೆಯೇ ಇದರಲ್ಲಿ ಶಾಪಿಂಗ್ ಮಾಡಬಹುದಾದ ಜಾಹೀರಾತುಗಳು ಕಾಣಿಸುತ್ತವೆ. ಅಮೆಜಾನ್‌ ಪ್ರೈಮ್‌ ಯೋಜನೆಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಅಮೆಜಾನ್ ಪ್ರೈಮ್ 299ರೂ. ಮಾಸಿಕ ಚಂದಾದಾರಿಕೆ ಪ್ಲ್ಯಾನ್‌

ಅಮೆಜಾನ್ ಪ್ರೈಮ್ 299ರೂ. ಮಾಸಿಕ ಚಂದಾದಾರಿಕೆ ಪ್ಲ್ಯಾನ್‌ ಇದು ಮಾಸಿಕ ಚಂದಾದಾರಿಕೆ ಆಗಿದ್ದು, ಬಳಕೆದಾರರು ಪ್ರತಿ ತಿಂಗಳು ಶುಲ್ಕವನ್ನು ಪಾವತಿಸಬಹುದು. ಉಚಿತ ಒಂದು ಅಥವಾ ಎರಡು ದಿನಗಳ ವಿತರಣೆಗಳು, Amazon Prime ವೀಡಿಯೊಗಳಿಗೆ ಪ್ರವೇಶ, ಪ್ರೈಮ್ ಮ್ಯೂಸಿಕ್, ವಿಶೇಷ ರಿಯಾಯಿತಿಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ Amazon Prime ನ ಎಲ್ಲಾ ಪ್ರಯೋಜನಗಳು ಲಭ್ಯ ಆಗಲಿವೆ.

ಅಮೆಜಾನ್ ಪ್ರೈಮ್ 599ರೂ. ತ್ರೈಮಾಸಿಕ ಚಂದಾದಾರಿಕೆ ಪ್ಲ್ಯಾನ್‌

ಅಮೆಜಾನ್ ಪ್ರೈಮ್ 599ರೂ. ತ್ರೈಮಾಸಿಕ ಚಂದಾದಾರಿಕೆ ಪ್ಲ್ಯಾನ್‌ ಮೂರು ತಿಂಗಳವರೆಗೆ ಮಾನ್ಯವಾಗಿರುತ್ತದೆ. ಚಂದಾದಾರಿಕೆ ಮಾದರಿಯು ಮೂರು ತಿಂಗಳಿಗೆ 459 ರೂಗಳಿಗೆ ಲಭ್ಯವಿದೆ. ಪ್ರೈಮ್ ಸದಸ್ಯತ್ವ ಯೋಜನೆಯು ಅಮೆಜಾನ್ ಪ್ರೈಮ್‌ನ ಎಲ್ಲಾ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ತರುತ್ತದೆ ಪ್ರೈಮ್ ಮ್ಯೂಸಿಕ್, ವಿಶೇಷ ರಿಯಾಯಿತಿಗಳು, ಆಯ್ದ ಉತ್ಪನ್ನಗಳ ಮೇಲೆ ಉಚಿತ ಒಂದು ಅಥವಾ ಎರಡು ದಿನಗಳ ವಿತರಣೆಗಳು ಲಭ್ಯ. ಪ್ರತಿ ತ್ರೈಮಾಸಿಕಕ್ಕೆ, ಮಾಸಿಕ ಯೋಜನೆಗೆ ಹೋಲಿಸಿದರೆ ಈ ಯೋಜನೆಯಲ್ಲಿ 78 ರೂ. ಉಳಿಸಬಹುದು.

ಅಮೆಜಾನ್ ಪ್ರೈಮ್ 1,499ರೂ ವಾರ್ಷಿಕ ಚಂದಾದಾರಿಕೆ ಪ್ಲ್ಯಾನ್‌

ಅಮೆಜಾನ್ ಪ್ರೈಮ್ 1,499ರೂ ವಾರ್ಷಿಕ ಚಂದಾದಾರಿಕೆ ಪ್ಲ್ಯಾನ್‌ ಅಮೆಜಾನ್‌ನಿಂದ ಪಡೆಯಬಹುದಾದ ಅತ್ಯುತ್ತಮ ಯೋಜನೆಯಾಗಿದೆ. ಚಂದಾದಾರಿಕೆಯ ಯೋಜನೆಯು ಒಂದು ಪೂರ್ಣ ವರ್ಷಕ್ಕೆ ವ್ಯಾಲಿಡಿಟಿ ಪಡೆದಿರುತ್ತದೆ ಹಾಗೂ ಅದರ ಗ್ರಾಹಕರಿಗೆ ಎಲ್ಲಾ ಪ್ರೈಮ್‌ ಪ್ರಯೋಜನಗಳನ್ನು ತರುತ್ತದೆ. ತ್ರೈಮಾಸಿಕ ಯೋಜನೆಗೆ ಹೋಲಿಸಿದರೆ, ವಾರ್ಷಿಕ ಯೋಜನೆಯು ಒಂದು ವರ್ಷದ ಅವಧಿಯಲ್ಲಿ 337 ರೂ. ಗಳ ಉಳಿತಾಯ ಸಾಧ್ಯ.

Best Mobiles in India

English summary
Amazon will roll out more ads on Prime Video in 2025. check out more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+