Ambrane Smartwatch: ಅಂಬ್ರೇನ್ ಫ್ಯ್ರೆ ಸ್ಮಾರ್ಟ್‌ವಾಚ್ ಲಾಂಚ್, 2.04 ಇಂಚಿನ ಡಿಸ್‌ಪ್ಲೇ, AI ವಾಯ್ಸ್ ಬೆಂಬಲ...ಅಗ್ಗದ ಬೆಲೆ
ಅಂಬ್ರೇನ್ (Ambrane) ಈಗಾಗಲೇ ಸಾಕಷ್ಟು ಧರಿಸಬಹುದಾದ ಸ್ಮಾರ್ಟ್ ಡಿವೈಸ್‌ಗಳನ್ನು ಅನಾವರಣ ಮಾಡುವ ಮೂಲಕ ಭಾರತದಲ್ಲಿ ತನ್ನದೇ ಆದ ಜನಪ್ರಿಯತೆ ಗಳಿಸಿಕೊಂಡಿದೆ. ಅದರಲ್ಲೂ ಈ ಕಂಪೆನಿಯ ಸ್ಮಾರ್ಟ್‌ವಾಚ್‌ಗಳು ಇತರೆ ದೊಡ್ಡ ದೊಡ್ಡ ಕಂಪೆನಿಗಳ ವಾಚ್‌ಗೆ ಪೈಪೋಟಿ ನೀಡಲಿವೆ. ಈ ನಡುವೆ ಅತ್ಯಂತ ದೊಡ್ಡ ಡಿಸ್‌ಪ್ಲೇ ಆಯ್ಕೆಯ ವಾಚ್ ಅನ್ನು ಲಾಂಚ್ ಮಾಡಿದೆ
ಹೌದು, ಅಂಬ್ರೇನ್ ತನ್ನ ಹೊಸ ಫ್ಯ್ರೆ ಸ್ಮಾರ್ಟ್‌ವಾಚ್ (Ambrane Fyre Smartwatch) ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ವಾಚ್ ಕೈಗೆಟುಕುವ ಸ್ಮಾರ್ಟ್‌ವಾಚ್ ಆಗಿದ್ದು, 2.04 ಇಂಚಿನ ದೊಡ್ಡ ಡಿಸ್‌ಪ್ಲೇಯೊಂದಿಗೆ ಕಾಣಿಸಿಕೊಂಡಿದೆ. ಜೊತೆಗೆ 800 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಸಹ ಇದ್ದು, ಎಂತಹ ಪ್ರಕಾಶಮಾನವಾದ ಬೆಳಕಿನಲ್ಲೂ ಸ್ಪಷ್ಟವಾಗಿ ಈ ವಾಚ್ ಅನ್ನು ನೋಡಬಹುದು. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ನ ಫೀಚರ್ಸ್ ಹಾಗೂ ಬೆಲೆ ವಿವರವನ್ನು ತಿಳಿಸಿಕೊಡಲಾಗಿದೆ ಓದಿರಿ.

ಅಂಬ್ರೇನ್ ಫ್ಯ್ರೆ ಸ್ಮಾರ್ಟ್‌ವಾಚ್ ಡಿಸ್‌ಪ್ಲೇ ವಿವರ: ಈ ವಿಶೇಷ ಸ್ಮಾರ್ಟ್‌ವಾಚ್ ಮೆಟಾಲಿಕ್ ಫಿನಿಶ್ ಹೊಂದಿದ್ದು, ತೆಳುವಾದ ಬೆಜೆಲ್‌ಗಳೊಂದಿಗೆ 2.04 ಇಂಚಿನ ಡಿಸ್ಪ್ಲೇಯನ್ನು ಪಡೆದಿದೆ. ಇದರೊಂದಿಗೆ ಅತಿದೊಡ್ಡ ಅಮೋಲೆಡ್ ಡಿಸ್‌ಪ್ಲೇ (AMOLED display) ಆಯ್ಕೆ ಇರುವ ವಾಚ್ ಎಂದು ಗುರುತಿಸಿಕೊಂಡಿದೆ. ಜೊತೆಗೆ 800 ನಿಟ್ಸ್ ಬ್ರೈಟ್‌ನೆಸ್, 60Hz ರಿಫ್ರೆಶ್ ರೇಟ್ ಮತ್ತು 368×448 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಈ ವಾಚ್‌ನಲ್ಲಿದ್ದು, ಎಲ್ಲಕ್ಕಿಂತ ಮುಖ್ಯವಾಗಿ 2.5D ಕರ್ವ್ಡ್ ಡಿಸ್‌ಪ್ಲೇ ಈ ವಾಚ್‌ಗೆ ಪ್ರೀಮಿಯಂ ನೋಟ ನೀಡಲಿದೆ.
ಅಂಬ್ರೇನ್ ಫ್ಯ್ರೆ ಸ್ಮಾರ್ಟ್‌ವಾಚ್ ಫೀಚರ್ಸ್: ಈ ವಾಚ್ ಇನ್‌ಬಿಲ್ಟ್ ಮೈಕ್ರೋಫೋನ್ ಮತ್ತು ಸ್ಪೀಕರ್ (microphone, speaker) ಮೂಲಕ ಬ್ಲೂಟೂತ್ ಕಾಲ್ ಫೀಚರ್ಸ್ ಪಡೆದಿದ್ದು, ವಾಚ್ ಯುನಿಪೇರ್ ತಂತ್ರಜ್ಞಾನವನ್ನು(Unipair technology) ಹೊಂದುವ ಮೂಲಕ ಬಳಕೆದಾರರಿಗೆ ವಿಶೇಷ ಅನುಭವ ನೀಡಲಿದೆ. ಇಷ್ಟೇ ಅಲ್ಲದೆ ಆರೋಗ್ಯ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ, ಹೃದಯ ಬಡಿತ ಸೆನ್ಸರ್, SpO2 ಸೆನ್ಸರ್, ನಿದ್ರೆ ಟ್ರ್ಯಾಕರ್ ಮತ್ತು ರಕ್ತದೊತ್ತಡ ಮಾನಿಟರ್ ಅನ್ನು ಸಹ ಮಾಡಲಿದೆ.
ಉಳಿದಂತೆ ಈ ಸ್ಮಾರ್ಟ್‌ವಾಚ್ ಮೂಲಕ ಬಳಕೆದಾರರು ಉಸಿರಾಟದ ಏರಿಳಿತದ ವಿಷಯ ಮತ್ತು ಹೃದಯ ಬಡಿತದ ಎಚ್ಚರಿಕೆಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ ಹಾಗೂ ವಿವಿಧ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು 100+ ಸ್ಪೋರ್ಟ್ಸ್ ಮೋಡ್ ಆಯ್ಕೆ ನೀಡಲಾಗಿದ್ದು ಈ ಮೂಲಕ ನಿಮ್ಮ ನಿತ್ಯದ ಎಲ್ಲಾ ಚಟುವಟಿಕೆಯನ್ನು ಟ್ರ್ಯಾಕ್ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಉಳಿದಂತೆ ಈ ಸ್ಮಾರ್ಟ್‌ವಾಚ್ ಆಪಲ್ ಹೆಲ್ತ್ ಮತ್ತು ಗೂಗಲ್ ಫಿಟ್‌ನೊಂದಿಗೂ ಸಹ ಹೊಂದಿಕೊಳ್ಳುತ್ತದೆ.
ಈ ಸ್ಮಾರ್ಟ್‌ವಾಚ್ ರಿಮೋಟ್ ಮ್ಯೂಸಿಕ್, ಕ್ಯಾಮೆರಾ ಕಂಟ್ರೋಲ್‌ಗಳು, ಹವಾಮಾನ ಮುನ್ಸೂಚನೆಗಳು, ಅಲಾರಾಂ ಗಡಿಯಾರ, ಸ್ಟಾಪ್‌ವಾಚ್, ಟೈಮರ್, ಕ್ಯಾಲ್ಕುಲೇಟರ್, ಡಿಎನ್‌ಡಿ ಮೋಡ್, ಫೈಂಡ್ ಫೋನ್ ವೈಶಿಷ್ಟ್ಯ, ವಾಟರ್ ರಿಮೈಂಡರ್‌ಗಳು ಸೇರಿದಂತೆ ಇನ್ನೂ ಹಲವಾರು ಉಪಯುಕ್ತ ಫೀಚರ್ಸ್ ಅನ್ನು ಹೊಂದಿದೆ. ಇವು ಎಲ್ಲಾ ಬಳಕೆದಾರರಿಗೂ ಅಗತ್ಯವಾದ ಸೌಲಭ್ಯ ನೀಡಲಿವೆ.
ಹೆಚ್ಚುವರಿಯಾಗಿ ಅಂಬ್ರೇನ್ ಫ್ಯ್ರೆ 100+ ವಾಚ್ ಫೇಸ್‌ಗಳು, ಸಿರಿ ಅಥವಾ ಗೂಗಲ್ ಅಸಿಸ್ಟೆಂಟ್ ಮೂಲಕ ಎಐ ವಾಯ್ಸ್ ಆಯ್ಕೆ ಪಡೆದಿದೆ. ಜೊತೆಗೆ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP67 ರೇಟಿಂಗ್ ಅನ್ನು ಹೊಂದಿದ್ದು, ನೀವು ಇದನ್ನು ಎಲ್ಲಾ ರೀತಿಯ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಬಳಕೆ ಮಾಡಬಹುದಾಗಿದೆ. ವಿಶೇಷವಾಗಿ ಈ ವಾಚ್ ಹಿಂದಿ ಭಾಷೆಗೂ ಸಹ ಬೆಂಬಲ ನೀಡಲಿದೆ. ಕೊನೆಯದಾಗಿ ಈ ವಾಚ್ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 5 ದಿನಗಳವರೆಗೆ ಬ್ಯಾಕಪ್ ನೀಡಲಿದೆ.

ಅಂಬ್ರೇನ್ ಫ್ಯ್ರೆ ಬೆಲೆ ಮತ್ತು ಲಭ್ಯತೆ: ಈ ವಾಚ್ 1,999 ಬೆಲೆಯೊಂದಿಗೆ ಕಾಣಿಸಿಕೊಂಡಿದೆ. ಆದರೆ ನೀವು ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ (Flipkart Big Billion Days Sale) ಆಫರ್ ಬೆಲೆಯಾಗಿ 1,599 ರೂ.ಗಳಲ್ಲಿ ಖರೀದಿ ಮಾಡಬಹುದು. ಹಾಗೆಯೇ ಇದನ್ನು ಕಂಪನಿಯ ವೆಬ್‌ಸೈಟ್ ಮೂಲಕವೂ ಖರೀದಿ ಮಾಡಬಹುದಾಗಿದೆ. ಇದು ಡೀಪ್ ವೈನ್, ಷಾಂಪೇನ್ ಗೋಲ್ಡ್, ಕಪ್ಪು ಮತ್ತು ಸಿಲ್ವರ್ ಬಣ್ಣಗಳಲ್ಲಿ ಲಭ್ಯ.


Click it and Unblock the Notifications








