vacuum cleaner: ಅಂಬ್ರೇನ್ ಮಿನಿವಾಕ್ 01 ಪೋರ್ಟಬಲ್ ಕಾರ್ಡ್‌ಲೆಸ್ ವ್ಯಾಕ್ಯೂಮ್ ಕ್ಲೀನರ್ ಲಾಂಚ್: ವಿಶೇಷತೆ ಏನು? ಬೆಲೆ ಎಷ್ಟು?
ಅಂಬ್ರೇನ್ (Ambrane) ಸ್ಥಳೀಯ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿದ್ದು, ಪವರ್ ಬ್ಯಾಂಕ್, ಬ್ಲೂಟೂತ್ ಸ್ಪೀಕರ್ ಸೇರಿದಂತೆ ವಿವಿಧ ಸ್ಮಾರ್ಟ್ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಲಾಂಚ್ ಮಾಡುವ ಮೂಲಕ ಭಾರತದಲ್ಲಿ ದೊಡ್ಡ ಗ್ರಾಹಕರನ್ನು ಪಡೆದುಕೊಂಡಿದೆ. ಈ ನಡುವೆ ಅಂಬ್ರೇನ್ ವಿಶೇಷವಾದ ವ್ಯಾಕ್ಯೂಮ್ ಕ್ಲೀನರ್ ಅನ್ನು ಲಾಂಚ್ ಮಾಡಿದೆ.
ಹೌದು, ಈಗಾಗಲೇ ಸಾಕಷ್ಟು ವ್ಯಾಕ್ಯೂಮ್ ಕ್ಲೀನರ್ ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದರೆ, ಅಂಬ್ರೇನ್ ವಿಶೇಷ ಫೀಚರ್ಸ್ ಆಯ್ಕೆಯೊಂದಿಗೆ ಅಂಬ್ರೇನ್ ಮಿನಿವಾಕ್ 01 ಪೋರ್ಟಬಲ್ ಕಾರ್ಡ್‌ಲೆಸ್ ವ್ಯಾಕ್ಯೂಮ್ ಕ್ಲೀನರ್ (Ambrane MiniVac 01 portable cordless vacuum cleaner) ಅನ್ನು ಲಾಂಚ್ ಮಾಡಿದೆ. ಈ ಡಿವೈಸ್ 4000 Pa ಹೀರಿಕೊಳ್ಳುವ ಸಾಮರ್ಥ್ಯದೊಂದಿಗೆ ಕಾಣಿಸಿಕೊಂಡಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಬೆಲೆ ಎಷ್ಟು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಅಂಬ್ರೇನ್ ಮಿನಿವಾಕ್ 01 ಪೋರ್ಟಬಲ್ ಕಾರ್ಡ್‌ಲೆಸ್ ವ್ಯಾಕ್ಯೂಮ್ ಕ್ಲೀನರ್: ಅಂಬ್ರೇನ್ ಇದೀಗ ಮಿನಿವಾಕ್ 01 ಪೋರ್ಟಬಲ್ ಕಾರ್ಡ್‌ಲೆಸ್ ವ್ಯಾಕ್ಯೂಮ್ ಕ್ಲೀನರ್ ಅನ್ನು ಭಾರತದಲ್ಲಿ ಅನಾವರಣ ಮಾಡಿದೆ. ಈ ಡಿವೈಸ್ 3200 RPM ವೇಗ ಮತ್ತು 4000 Pa ಹೀರಿಕೊಳ್ಳುವ ಸಾಮರ್ಥ್ಯದೊಂದಿಗೆ ಕಾಣಿಸಿಕೊಂಡಿದ್ದು, ಬಾಳಿಕೆ ಬರುವ ಲೋಹದ ಬ್ಲೇಡ್ ಅನ್ನು ಒಳಗೊಂಡಿದೆ. ಪರಿಣಾಮ ಯಾವುದೇ ಮೇಲ್ಮೈಯಿಂದ ಕೊಳಕು ಮತ್ತು ಕಸವನ್ನು ಸಲೀಸಾಗಿ ತೆಗೆದುಹಾಕುತ್ತದೆ.
ಇದನ್ನು ಉನ್ನತ ದರ್ಜೆಯ ABS ವಸ್ತುವಿನಿಂದ ನಿರ್ಮಾಣ ಮಾಡಲಾಗಿದ್ದು, ಈ ಮೂಲಕ ದೀರ್ಘ ಬಾಳಿಕೆಯ ಭರವಸೆಯನ್ನು ನೀಡಲಿದೆ. ಅಷ್ಟೇ ಅಲ್ಲದೆ ಇದು ತುಂಬಾ ಹಗುರವಾದ ವಿನ್ಯಾಸ ಪಡೆದಿದೆ. ಅಂದರೆ ಕೇವಲ 142g ತೂಕವನ್ನು ಪಡೆದಿದೆ. ಅಷ್ಟೇ ಅಲ್ಲದೆ 4 ವಿಭಿನ್ನ ಅಟ್ಯಾಚ್‌ಮೆಂಟ್ ಆಯ್ಕೆ ಪಡೆದಿದ್ದು, ಇದರೊಂದಿಗೆ ಸುಲಭವಾದ ಕಾರ್ಯಕ್ಕಾಗಿ ಹಿಂಭಾಗದಲ್ಲಿ ಪವರ್ ಬಟನ್ ಆಯ್ಕೆಯನ್ನು ಪಡೆದಿದೆ.

ಇದರಲ್ಲಿನ ಅಡ್ವಾನ್ಸಡ್ HEPA ಫಿಲ್ಟ್ರೇಶನ್ ಸಿಸ್ಟಮ್ ಅತ್ಯಂತ ಚಿಕ್ಕ ಕಣಗಳನ್ನೂ ಸಹ ಸೆರೆಹಿಡಿಯುವ ಮೂಲಕ ಶುದ್ಧ ಗಾಳಿಯು ನಿಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಇರುವಂತೆ ಮಾಡುತ್ತದೆ. ದೀರ್ಘಕಾಲೀನ ಬಳಕೆ ಮತ್ತು ಸುಲಭ ನಿರ್ವಹಣೆಗಾಗಿ ತೊಳೆಯಬಹುದಾದ ಫಿಲ್ಟರ್‌ನೊಂದಿಗೆ ಈ ಡಿವೈಸ್ ಕಾಣಿಸಿಕೊಂಡಿದ್ದು, ಈ ಮೂಲಕ ವ್ಯಾಕ್ಯೂಮ್ ಕ್ಲೀನರ್ (Vacuum cleaner) ತಡೆರಹಿತ ಶುಚಿಗೊಳಿಸುವ ಅನುಭವವನ್ನು ನೀಡುತ್ತದೆ.
ಈ ಅಂಬ್ರೇನ್ ಮಿನಿವಾಕ್ 01 ಪೋರ್ಟಬಲ್ ಕಾರ್ಡ್‌ಲೆಸ್ ವ್ಯಾಕ್ಯೂಮ್ ಕ್ಲೀನರ್ ಶಕ್ತಿಯುತ 70W ಮೋಟಾರ್ ಮತ್ತು 2000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪ್ಯಾಕ್ ಆಗಿದೆ. ಇದರಿಂದ ನೀವು 20 ನಿಮಿಷಗಳವರೆಗೆ ಯಾವುದೇ ಸಮಸ್ಯೆ ಇಲ್ಲದೆ ಶುಚಿಗೊಳಿಸುವ ಕೆಲಸ ಮಾಡಬಹುದು. ಕೇವಲ 3.5 ಗಂಟೆಗಳಲ್ಲಿ ಟೈಪ್-ಸಿ ಚಾರ್ಜಿಂಗ್ ಮೂಲಕ ಬ್ಯಾಟರಿ ಭರ್ತಿ ಮಾಡಬಹುದಾಗಿದೆ.
ಇದು ಯಾರಿಗೆಲ್ಲಾ ಅನುಕೂಲ?: ಈ ಡಿವೈಸ್ ಅನ್ನು ಎಲ್ಲಾ ರೀತಿಯಲ್ಲೂ ಬಳಕೆ ಮಾಡಬಹುದು. ಅಂದರೆ ಊಟದ ತಯಾರಿಯ ನಂತರ ಅಡುಗೆಮನೆಯನ್ನು ತ್ವರಿತವಾಗಿ ಸ್ವಚ್ಛಗೊಳಿಸಲು, ಪೀಠೋಪಕರಣಗಳು ಮತ್ತು ಕಾರ್ ಸೀಟ್‌ಗಳಿಂದ ಸಾಕುಪ್ರಾಣಿಗಳ ಕೂದಲನ್ನು ತೆಗೆದುಹಾಕಲು, ಮೆಟ್ಟಿಲುಗಳ ಮೇಲೆ ಸಣ್ಣ ಕಸ ತೆಗೆಯಲು, ಮತ್ತು ಕೋಣೆಯ ಮೂಲೆಗಳು ಮತ್ತು ಬಿರುಕುಗಳಂತಹ ಸ್ಥಳಗಳಿಂದ ಕಸವನ್ನು ತೆಗೆಯಲು ಉತ್ತಮವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಕಾರ್‌ಗಳು ಹಾಗೂ ಕಚೇರಿಗಳಲ್ಲಿ ಇದನ್ನು ಸುಲಭವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಅಂಬ್ರೇನ್ ಮಿನಿವಾಕ್ 01 ಪೋರ್ಟಬಲ್ ಕಾರ್ಡ್‌ಲೆಸ್ ವ್ಯಾಕ್ಯೂಮ್ ಕ್ಲೀನರ್ ಬೆಲೆ ಹಾಗೂ ಲಭ್ಯತೆ: ಈ ಡಿವೈಸ್ ಅನ್ನು ನೀವು ಕೇವಲ 1499 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದನ್ನು ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ ನಲ್ಲಿ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಅಂಬ್ರೇನ್ ಅಧಿಕೃತ ಸೈಟ್ ಮೂಲಕವೂ ಖರೀದಿ ಮಾಡಬಹುದು. ಇದು ಹಸಿರು ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ. ಜೊತೆಗೆ ಒಂದು ವರ್ಷದ ವಾರಂಟಿ ಲಭ್ಯ.


Click it and Unblock the Notifications








