AMDಯಿಂದ 3ನೇ ತಲೆಮಾರಿನ ಹೊಸ ಪ್ರೊಸೆಸರ್ ಅನಾವರಣ!.ವಿಶೇಷತೆ ಏನು?
ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್‌ಗಳು ಸಶಕ್ತವಾಗಿ ಕಾರ್ಯನಿರ್ವಹಿಸಲು ಪ್ರೊಸೆಸರ್ ಅಗತ್ಯವಾಗಿದ್ದು, ಹೀಗಾಗಿ ಪ್ರೊಸೆಸರ್ ಅನ್ನು ಕಂಪ್ಯೂಟರ್‌ನ ಹೃದಯ ಭಾಗವೆಂದೇ ಹೇಳಲಾಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಎಎಮ್‌ಡಿ'ಯ (AMD-Advanced Micro Devices) ರೈಸನ್ (Ryzen) ಸರಣಿಯ ಪ್ರೊಸೆಸರ್‌ಗಳು ಭಾರಿ ಜನಪ್ರಿಯತೆ ಹೊಂದಿದ್ದು, ಇದೀಗ ಕಂಪನಿ 3ನೇ ತಲೆಮಾರಿನ ಹೊಸ (3rd Gen) ಪ್ರೊಸೆಸರ್ ಪರಿಚಯಿಸಲಿದೆ.

ಹೌದು, ಎಎಮ್‌ಡಿಯು ತನ್ನ ಹೊಸ 'ರೈಸನ್ 9 3900X' ಪ್ರೊಸೆಸರ್ ಅನ್ನು ತೈವಾನ್‌ನಲ್ಲಿ ನಡೆಯುತ್ತಿರುವ 'ಕಂಪ್ಯೂಟಕ್ಸ್' 2019ರ ಮೇಳದಲ್ಲಿ ಅಧಿಕೃತವಾಗಿ ಘೋಷಿಸಿದ್ದು, ಈ ಪ್ರೊಸೆಸರ್ ಅನ್ನು ಇದೇ ಜುಲೈ 7 ರಂದು ಅಧಿಕೃತವಾಗಿ ಲಾಂಚ್ ಮಾಡಲಿದೆ. ಈ ನೂತನ ಪ್ರೊಸೆಸರ್ X570 ಚಿಪ್‌ಸೆಟ್ ಬಲವನ್ನು ಹೊಂದಿರಲಿದ್ದು, 4.6 GHz ವೇಗದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರಲಿದೆ.

ರೈಸನ್ 9 3900X' ಪ್ರೊಸೆಸರ್ ಕಂಪನಿಯ ಫ್ಲ್ಯಾಗ್‌ಶಿಪ್ ಮಾದರಿಯ ಪ್ರೊಸೆಸರ್ ಆಗಿದ್ದು, ಇದರೊಂದಿಗೆ ಹೊಸ ಸಿಪಿಯುಗಳನ್ನು ಪರಿಚಯಿಸಿದೆ. AMD 300 ಮತ್ತು 400 ಸಾಮರ್ಥ್ಯ ಮದರ್ ಬೋರ್ಡ್‌ಗಳಲ್ಲಿ ಬಳಸಬಹುದಾಗಿದೆ. ಹಾಗೆಯೇ ಇದರ ಬೆಲೆಯು Core i9-9920X ಪ್ರೊಸೆಸರ್‌ಗಿಂತ ಶೇ.50% ರಷ್ಟು ಕಡಿಮೆ ಎನ್ನಲಾಗಿದೆ. ಹಾಗಾದರೇ ಎಮ್‌ಡಿಯ ಹೊಸ ಸರಣಿಯ ಪ್ರೊಸೆಸರ್ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

7nm ವಿನ್ಯಾಸ(ಆರ್ಕಿಟೆಕ್ಚರ್)
ಎಎಮ್‌ಡಿ ವೆಗಾ VII ಜಿಪಿಯು ಮಾದರಿಯಂತೆ ರೈಸನ್ 9 3900X' ಪ್ರೊಸೆಸರ್ ಸಹ 7nm ವಿನ್ಯಾಸದ ರಚನೆಯನ್ನು ಹೊಂದಿದ್ದು, ಕಡಿಮೆ ಪವರ್ ಬಳಕೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ಪಡೆದಿದೆ. 12 ಕೋರ್‌ದಲ್ಲಿರುವ ಈ ಪ್ರೊಸೆಸರ್ 4.6 GHz ವೇಗದಲ್ಲಿ ಶಕ್ತಿ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ.

ರೈಸನ್ 9 3900X
* 12 ಕೋರ್ ಮತ್ತು 24 ಥ್ರೇಡ್
* 4.6 GHz ವೇಗದಲ್ಲಿ ಶಕ್ತಿ
* 70MB Cache
* 105W TDP
* ಬೆಲೆ -35,000ರೂ

ರೈಸನ್ 3800X
* 8 ಕೋರ್ ಮತ್ತು 16 ಥ್ರೇಡ್ಸ್
* 4.5 GHz ವೇಗದಲ್ಲಿ ಶಕ್ತಿ
* 32MB Cache
* 105W TDP
* 27,000ರೂ

ರೈಸನ್ 3700X
* 8 ಕೋರ್ ಮತ್ತು 16 ಥ್ರೇಡ್ಸ್
* 4.4 GHz ವೇಗದಲ್ಲಿ ಶಕ್ತಿ
* 36MB Cache
* 65W TDP
* 23,000ರೂ

ರೈಸನ್ 3600
* 6 ಕೋರ್ ಮತ್ತು 12 ಥ್ರೇಡ್ಸ್
* 4.4 GHz ವೇಗದಲ್ಲಿ ಶಕ್ತಿ
* 36MB Cache
* 65W TDP
* 14,000ರೂ


Click it and Unblock the Notifications