Home
ಸುದ್ದಿಜಾಲ

ಅಮೆರಿಕಾಕ್ಕೆ ಮೋಸ ಮಾಡಿದ್ದಕ್ಕೆ ZTE ಸ್ಮಾರ್ಟ್‌ಫೋನ್‌ಗಳಿಗೆ ಸಿಗುವುದಿಲ್ಲ ಆಂಡ್ರಾಯ್ಡ್?!

ಅಮೆರಿಕಾಕ್ಕೆ ಮೋಸ ಮಾಡಿರುವ ಆರೋಪ ಹೊತ್ತಿರುವ ಚೀನಾದ ಮೊಬೈಲ್ ತಯಾರಿಕಾ ಕಂಪೆನಿ ಝಡ್‌ಟಿಇ ಕಾರ್ಪೊರೇಷನ್ ಇದೀಗ ಸಂಕಷ್ಟ ಎದುರಿಸುತ್ತಿದೆ.

By Bhaskar N J

ಅಮೆರಿಕಾಕ್ಕೆ ಮೋಸ ಮಾಡಿರುವ ಆರೋಪ ಹೊತ್ತಿರುವ ಚೀನಾದ ಮೊಬೈಲ್ ತಯಾರಿಕಾ ಕಂಪೆನಿ ಝಡ್‌ಟಿಇ ಕಾರ್ಪೊರೇಷನ್ ಇದೀಗ ಸಂಕಷ್ಟ ಎದುರಿಸುತ್ತಿದೆ. ಝಡ್‌ಟಿಇ ಕಂಪೆನಿ ತಯಾರಿಸಿರುವ ಸ್ಮಾರ್ಟ್‌ಫೋನ್‌ಗಳು ಇನ್ನು ಮುಂದೆ ಗೂಗಲ್‌ ಆಂಡ್ರಾಯ್ಡ್‌ನ ಆಪರೇಟಿಂಗ್‌ ಸಾಫ್ಟ್‌ವೇರ್‌ ಬಳಸುವಂತಿಲ್ಲ ಎಂದು ಹೇಳಲಾಗುತ್ತಿದೆ.

ಝಡ್‌ಇಟಿ ಕಂಪೆನಿ ಅಮೆರಿಕದ ವಾಣಿಜ್ಯ ಇಲಾಖೆ ಒಪ್ಪಂದಗಳನ್ನು ಉಲ್ಲಂಘಿಸಿ ಅಮೆರಿಕದ ವಸ್ತುಗಳನ್ನು ರಹಸ್ಯವಾಗಿ ಇರಾನ್‌ಗೆ ಮಾರಾಟ ಮಾಡುವಾಗ ಸಿಕ್ಕಿ ಬಿದ್ದಿದೆ. ಇದರ ಪರಿಣಾಮವಾಗಿ ಅಮೆರಿಕ ಝಡ್‌ಟಿಇಗೆ ನಿಷೇಧ ಹೇರಿದ್ದು, ಇದು ಝಡ್‌ಟಿಇ ಕಂಪೆನಿಗೆ ಮಾತ್ರವಲ್ಲದೇ, ಕಂಪೆನಿಯ ಸ್ಮಾರ್ಟ್‌ಫೋನ್ ಬಳಕೆದಾರರಿಗೂ ಸಂಕಷ್ಟ ಎದುರಾಗಲಿದೆ.

 ZTE ಸ್ಮಾರ್ಟ್‌ಫೋನ್‌ಗಳಿಗೆ ಸಿಗುವುದಿಲ್ಲ ಆಂಡ್ರಾಯ್ಡ್?!

ಅಮೆರಿಕದಲ್ಲಿನ ಉದ್ದೇಶಿತ ಹೊಸ ಕಾಯ್ದೆಯಿಂದಾಗಿ ಅಮೆರಿಕದ ಕಂಪನಿಗಳು ಮುಂದಿನ ಏಳು ವರ್ಷಗಳ ಕಾಲ ಯಾವುದೇ ಬಿಡಿ ಭಾಗ ಮತ್ತು ಸಾಫ್ಟ್‌ವೇರ್‌ ಅನ್ನು ಝಡ್‌ಟಿಇ ಕಂಪನಿಗೆ ಮಾರುವಂತಿಲ್ಲ ಎಂದು ಹೇಳಲಾಗಿದೆ. ಹಾಗಾಗಿ, ಅಮೆರಿಕಾದ ಪ್ರಖ್ಯಾತ ಸಂಸ್ಥೆ ಗೂಗಲ್ ಕೂಡ ಝಡ್‌ಟಿಇ ಕಂಪೆನಿಗೆ ಸೇವೆ ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.

ಅಮೆರಿಕ ರೂಪಿಸಿರುವ ನಿಯಮದಿಂದಾಗಿ ಅಮೆರಿಕಾದ ಪ್ರಮುಖ ಐಟಿ ದಿಗ್ಗಜ ಸಂಸ್ಥೆಯಾಗಿರುವ ಗೂಗಲ್, ತನ್ನ ಆಂಡ್ರಾಯ್ಡ್ ಸೇವೆಯನ್ನು ಝಡ್‌ಇಟಿ ಕಂಪೆನಿಗೆ ಪೂರೈಸಲು ಸಾಧ್ಯವಾಗುವುದಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಒಂದು ವೇಳೆ ಗೂಗಲ್ ತನ್ನ ಸೇವೆಗಳನ್ನು ಮುಂದುವರೆಸಿದರೇ ಅದು ಒಪ್ಪಂದಗಳ ಉಲ್ಲಂಘನೆಯಗಲಿದೆ.

 ZTE ಸ್ಮಾರ್ಟ್‌ಫೋನ್‌ಗಳಿಗೆ ಸಿಗುವುದಿಲ್ಲ ಆಂಡ್ರಾಯ್ಡ್?!

ಅಮೆರಿಕದಲ್ಲಿನ ಉದ್ದೇಶಿತ ಹೊಸ ಕಾಯ್ದೆ ಕಾನೂನು ಜಾರಿಯಾದರೆ, ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್‌ಫೋನ್‌ಗಳ ತಯಾರಿಕಾ ಕಂಪನಿಗಳ ಪಟ್ಟಿಯಲ್ಲಿ ವಿಶ್ವದಲ್ಲಿ ಏಳನೇ ಸ್ಥಾನದಲ್ಲಿರುವ ಝಡ್‌ಟಿಇಗೆ ಭಾರೀ ಹೊಡೆತ ಬೀಳಲಿದೆ. ಅಗ್ಗದ ಸ್ಮಾರ್ಟ್‌ ಫೋನ್‌ ತಯಾರಿಕೆಯಲ್ಲಿ ಮುಂಚೂಣಿಯಲ್ಲಿಯಲ್ಲಿರುವ ಕಂಪೆನಿ ವಹಿವಾಟು ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿದೆ.

How to Send a WhatsApp Message Without Saving the Contact in Your Phone - GIZBOT KANNADA

ಓದಿರಿ: ದೇಶವನ್ನೇ ಬೆಚ್ಚಿಬಿಳಿಸಿದ ಬಹುದೊಡ್ಡ 6 ಡೇಟಾ ಕಳವು ಪ್ರಕರಣಗಳಿವು!.ನಂಬಿದ ಕಂಪೆನಿಗಳೇ ಮೋಸ ಮಾಡಿದವು!!

Best Mobiles in India

English summary
america Has Banned Chinese Telecoms Firm ZTE From Buying American Tech for Seven Years. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+