Home
ಸುದ್ದಿಜಾಲ

Amitabh Bachchan’s voice: ಅಮಿತಾಬ್ ಬಚ್ಚನ್ ಧ್ವನಿ ಇನ್ಮುಂದೆ ಮಾರಾಟಕ್ಕಿಲ್ಲ, ಶಾಕ್‌ ನೀಡಿದ ಅಮೆಜಾನ್!

ಅಮಿತಾಬ್ ಬಚ್ಚನ್ (Amitabh Bachchan) ಕೇವಲ ನಟರಾಗಿ ಮಾತ್ರವಲ್ಲದೆ ವಿವಿಧ ರೀತಿಯಲ್ಲಿ ಅವರು ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಅವರನ್ನು ಬಾಲಿವುಡ್‌ನ ಬಿಗ್‌ ಬಿ ಎಂದು ಕರೆಯಲಾಗುತ್ತದೆ. ಈ ನಡುವೆ ಅವರು ಸಿನಿಮಾಗಳಿಗಿಂತ ಹೆಚ್ಚು ಜಾಹೀರಾತುಗಳಲ್ಲೇ ಭಾರೀ ಜನಪ್ರಿಯತೆ ಗಳಿಸುತ್ತಿದ್ದಾರೆ. ಆದರೆ, ಇವರ ಧ್ವನಿಯನ್ನು ಇಷ್ಟಪಡುವ ಅದೆಷ್ಟೋ ಜನರಿಗೆ ಇನ್ಮುಂದೆ ಬೇಸರ ಆಗಲಿದೆ.

ಹೌದು,ಅಮೆಜಾನ್‌ ಸಹ ಕೇವಲ ಇ-ಕಾಮರ್ಸ್‌ ಸೈಟ್‌ ಆಗಿರದೆ ಹಲವಾರು ಸ್ಮಾರ್ಟ್‌ಡಿವೈಸ್‌ಗಳನ್ನೂ ಸಹ ಜನರಿಗೆ ಪರಿಚಯಿಸಿದೆ. ಇದರಲ್ಲಿ ಅಮೆಜಾನ್‌ ಅಲೆಕ್ಸಾದಲ್ಲಿ( Amazon Alexa) ಸೆಲೆಬ್ರಿಟಿ ವಾಯ್ಸ್ ಫೀಚರ್ಸ್‌ ಅನ್ನು ಸ್ಥಗಿತಗೊಳಿಸುತ್ತಿದೆ. ಅಂದರೆ ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ಅಮೇರಿಕನ್ ನಟ ಸ್ಯಾಮ್ಯುಯೆಲ್ ಎಲ್. ಜಾಕ್ಸನ್, ಅಮೇರಿಕನ್ ಮಾಜಿ ವೃತ್ತಿಪರ ಬಾಸ್ಕೆಟ್‌ಬಾಲ್ ಆಟಗಾರ ಶಾಕ್ವಿಲ್ಲೆ ಓನೀಲ್ ಸೇರಿದಂತೆ ಮುಂತಾದ ಪ್ರಮುಖ ಸೆಲೆಬ್ರಿಟಿಗಳ ಧ್ವನಿಗಳು ಇನ್ನು ಮುಂದೆ ಲಭ್ಯವಿರುವುದಿಲ್ಲ. ಹಾಗಿದ್ರೆ, ಏನಿದು ಅಮೆಜಾನ್‌ನ ಶಾಕಿಂಗ್‌ ನಿರ್ಧಾರ ತಿಳಿಯೋಣ ಬನ್ನಿ.

ಅಮಿತಾಬ್ ಬಚ್ಚನ್ ಧ್ವನಿ ಇನ್ಮುಂದೆ ಮಾರಾಟಕ್ಕಿಲ್ಲ, ಶಾಕ್‌ ನೀಡಿದ ಅಮೆಜಾನ್!

ಸೆಲೆಬ್ರಿಟಿ ವಾಯ್ಸ್ ಫಿಚರ್ಸ್‌ ಸ್ಥಗಿತ: ಅಮೆಜಾನ್ ಅಲೆಕ್ಸಾದಲ್ಲಿ ಸೆಲೆಬ್ರಿಟಿ ವಾಯ್ಸ್ ಫೀಚರ್ಸ್‌ ಸ್ಥಗಿತಗೊಳಿಸಿರುವುದನ್ನು ದೃಢಪಡಿಸಿದೆ. ಇದರಿಂದಾಗಿ ಜನರು ಜನರು ಇನ್ಮುಂದೆ ಅಮಿತಾಬ್ ಬಚ್ಚನ್, ಅಮೇರಿಕನ್ ನಟ ಸ್ಯಾಮ್ಯುಯೆಲ್ ಅವರ ವಾಯ್ಸ್ ಅನ್ನು ಕೇಳಲು ಸಾಧ್ಯವಾಗುವುದಿಲ್ಲ. ಇಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ಅಮೆಜಾನ್ ಅಲೆಕ್ಸಾ ಚಾಲಿತ ಡಿವೈಸ್‌ಗಳಲ್ಲಿ ಸೆಲೆಬ್ರಿಟಿಗಳ ಧ್ವನಿಗಳಿಗೆ ಬೆಂಬಲವನ್ನು ನಿಲ್ಲಿಸುತ್ತದೆ ಎಂದು ತಿಳಿದುಬಂದಿದೆ.

ಅಲೆಕ್ಸಾದಲ್ಲಿ ಬಚ್ಚನ್ ಅವರ ಧ್ವನಿಯನ್ನು ಖರೀದಿ ಮಾಡುವ ವಿಭಾಗದಲ್ಲಿ ಈ ಕೌಶಲ್ಯ ಇನ್ನು ಮುಂದೆ ಖರೀದಿಗೆ ಲಭ್ಯವಿಲ್ಲ. ಈ ಅನುಭವವನ್ನು ಹಿಂದೆ ಖರೀದಿಸಿದ ಗ್ರಾಹಕರು ಖರೀದಿಸಿದ ದಿನಾಂಕದಿಂದ ಒಂದು ವರ್ಷದವರೆಗೆ ಪ್ರವೇಶವನ್ನು ಹೊಂದಿರುತ್ತಾರೆ ಎಂದು ಉಲ್ಲೇಖಿಸಲಾಗಿದೆ. ಈ ಪ್ರಕಟಣೆಯಿಂದಾಗಿ ಅಮೆಜಾನ್ ಬಚ್ಚನ್ ಅವರ ವಾಯ್ಸ್‌ಅನ್ನು ತೆಗೆದುಹಾಕಲಾಗಿದೆ ಎಂದು ತಿಳಿಯುತ್ತದೆ.

ಅಮಿತಾಬ್ ಬಚ್ಚನ್ ಧ್ವನಿ ಇನ್ಮುಂದೆ ಮಾರಾಟಕ್ಕಿಲ್ಲ, ಶಾಕ್‌ ನೀಡಿದ ಅಮೆಜಾನ್!

ಇಷ್ಟು ಮಾತ್ರವಲ್ಲದೆ ಅಲೆಕ್ಸಾದಲ್ಲಿ ಜಾಕ್ಸನ್ ಅವರ ಧ್ವನಿಯನ್ನು ಖರೀದಿಸುವ ವಿಭಾಗದಲ್ಲಿಯೂ ಸಹ ಅಲೆಕ್ಸಾದ ಜಾಕ್ಸನ್ ಧ್ವನಿಯು ಇನ್ನು ಮುಂದೆ ಖರೀದಿಗೆ ಲಭ್ಯವಿಲ್ಲ ಎಂದು ಉಲ್ಲೇಖ ಮಾಡಲಾಗಿದೆ. ಈ ವಿಭಾಗದಲ್ಲಿ ಗ್ರಾಹಕರು ಹೇ ಸ್ಯಾಮ್ಯುಯೆಲ್ ಎಂದು ಹೇಳುವ ಮೂಲಕ ಏಪ್ರಿಲ್ 30,2023ರವರೆಗೆ ಇದನ್ನು ಬಳಕೆ ಮಾಡುತ್ತಿದ್ದರು.ಆದರೆ,ಇನ್ಮುಂದೆ ಈ ವಾಯ್ಸ್‌ಗಳೆಲ್ಲಾ ಕೇವಲ ನೆನಪಾಗಿ ಉಳಿಯಲಿವೆ .ಸೆಲೆಬ್ರಿಟಿ ವಾಯ್ಸ್ ಫೀಚರ್ಸ್‌ ಬಳಕೆದಾರರಿಗೆ ತಮ್ಮ ನೆಚ್ಚಿನ ಸೆಲೆಬ್ರಿಟಿಗಳ ಧ್ವನಿಯಲ್ಲಿ ಹಾಸ್ಯಗಳು,ಜೀವನ ಕಥೆಗಳು,ಸಾಮಾನ್ಯ ಕಥೆಗಳು ಇತ್ಯಾದಿಗಳನ್ನು ಕೇಳಲು ಅನುಮತಿಸುತ್ತಿತ್ತು.

2019 ರಲ್ಲಿ ಪ್ರಾರಂಭವಾದ ಈ ಪ್ರಸಿದ್ಧ ಧ್ವನಿಗಳು ಅಮೆಜಾನ್‌ನ ನ್ಯೂರಲ್ ಟೆಕ್ಸ್ಟ್-ಟು-ಸ್ಪೀಚ್ ಮಾದರಿಯನ್ನು ಬಳಕೆ ಮಾಡಿಕೊಂಡು ಕೆಲಸ ಮಾಡುತ್ತವೆ. ಹಾಗೆಯೇ ಇದು ಯಂತ್ರ ಕಲಿಕೆಯನ್ನು ಬಳಸಿಕೊಳ್ಳುತ್ತದೆ ಜೊತೆಗೆ ಹೆಚ್ಚು ಜೀವನಶೈಲಿಯನ್ನು ಧ್ವನಿಸುವ ಉದ್ದೇಶವನ್ನು ಇವು ಹೊಂದಿದ್ದರಿಂದಾಗಿ ಪೂರ್ವ-ದಾಖಲಿತ ಪ್ರತಿಕ್ರಿಯೆಗಳನ್ನು ಬಳಕೆ ಮಾಡುವುದಕ್ಕಿಂತ ಹೆಚ್ಚು ವಿಶೇಷವಾದ ಹೊಸ ಧ್ವನಿಗಳನ್ನೂ ಸಹ ಉತ್ಪಾದನೆ ಮಾಡಲಾಗುತ್ತಿತ್ತು. 2020 ರಲ್ಲಿ ಈ ಫೀಚರ್ಸ್‌ ಭಾರತಕ್ಕೆ ಪರಿಚಯಗೊಂಡಿದ್ದು, ಬಚ್ಚನ್ ಅವರ ಧ್ವನಿಯನ್ನು ಮೊದಲ ಬಾರಿಗೆ ಬಳಕೆ ಮಾಡಲಾಯಿತು.

ಅಮಿತಾಬ್ ಬಚ್ಚನ್ ಧ್ವನಿ ಇನ್ಮುಂದೆ ಮಾರಾಟಕ್ಕಿಲ್ಲ, ಶಾಕ್‌ ನೀಡಿದ ಅಮೆಜಾನ್!

ವಿಷಯಗಳನ್ನು ಹೆಚ್ಚು ಸಂವಾದಾತ್ಮಕವಾಗಿ ಮತ್ತು ಬಳಕೆದಾರರಿಗೆ ಆಸಕ್ತಿದಾಯಕವಾಗಿಸಲು ಅಮೆಜಾನ್ ಅಲೆಕ್ಸಾ ಡಿವೈಸ್‌ಗಳಲ್ಲಿ ಸೆಲೆಬ್ರಿಟಿ ವಾಯ್ಸ್ ಫೀಚರ್ಸ್‌ಅನ್ನು ಪರಿಚಯಿಸಿತ್ತು. ಈ ಧ್ವನಿಗಳನ್ನು ಖರೀದಿಗೆ ಮುಕ್ತ ಮಾಡಿತ್ತು. ಅದರಂತೆ ವಿವಿಧ ಪ್ರದೇಶಗಳಲ್ಲಿ ಆಯಾ ಸೆಲೆಬ್ರಿಟಿಗಳ ಧ್ವನಿಯನ್ನು ಬಳಕೆ ಮಾಡುವುದನ್ನು ಮುಂದುವರೆಸಿತ್ತು. ಅಂದರೆ ಅಲೆಕ್ಸಾ ಬಚ್ಚನ್ ಅವರ ಧ್ವನಿಯನ್ನು 299 ರೂ.ಗೆ ಖರೀದಿ ಮಾಡಬಹುದಿತ್ತು. ಅದೇ ರೀತಿ ಸ್ಯಾಮ್ಯುಯೆಲ್ ಎಲ್. ಜಾಕ್ಸನ್, ಶಾಕ್ವಿಲ್ಲೆ ಓ ನೀಲ್ ಮತ್ತು ಮೆಲಿಸ್ಸಾ ಮೆಕಾರ್ಥಿ ಅವರ ಧ್ವನಿಗೆ ಬೆಲೆಯನ್ನು $1 ರಿಂದ ನಿಗದಿ ಮಾಡಿತ್ತು.

Best Mobiles in India

English summary
Amazon is shutting down celebrity voice features on Alexa. That means megastar Amitabh Bachchan, American actor Samuel L. Jackson, the voices of prominent celebrities including American former professional basketball player Shaquille O'Neal are no longer available.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+