Home
ಸುದ್ದಿಜಾಲ

ಟ್ವಿಟರ್ ಬ್ಲೂಟಿಕ್ ಕಳೆದುಕೊಂಡ ಶಾರುಕ್, ಅಮಿತಾಬ್ ಬಚ್ಚನ್, ವಿರಾಟ್ ಕೊಹ್ಲಿ...ಕಾರಣ?

ಟ್ವಿಟ್ಟರ್‌ನಲ್ಲಿ ಹಲವಾರು ಬೆಳವಣಿಗೆಗಳು ನಡೆಯುತ್ತಿದ್ದು ಎಲಾನ್ ಮಸ್ಕ್‌ ಅವರ ನಿರ್ಧಾರಗಳು ಭಾರೀ ಮುನ್ನೆಲೆಗೆ ಬರುತ್ತಿವೆ. ಯಾಕೆಂದರೆ ದೇಶದಲ್ಲಿ ಗಣ್ಯ ವ್ಯಕ್ತಿಗಳು ಬ್ಲೂಟಿಕ್‌ ಗೆ ನಿಗದಿ ಪಡಿಸಲಾಗಿದ್ದ ಮೊತ್ತವನ್ನು ಪಾವತಿಸದ ಹಿನ್ನೆಲೆ ಅವರ ಹೆಸರಿನ ಬಳಿ ಇದ್ದ ಬ್ಲೂಟಿಕ್‌ ಅನ್ನು ತೆಗೆದುಹಾಕಲಾಗಿದೆ. ಇದರಿಂದಾಗಿ ಅವರ ಅಭಿಮಾನಿಗಳಿಗೆ ಅಚ್ಚರಿಯಾಗಿದೆ.

ಹೌದು, ಸಿಇಒ ಎಲಾನ್‌ ಮಸ್ಕ್ ತಮ್ಮ ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟರ್‌ನ ಆದಾಯವನ್ನು ಹೆಚ್ಚಿಸುವ ಭಾಗವಾಗಿ ಈ ಎಲ್ಲಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದರಂತೆ ಟ್ವಿಟ್ಟರ್‌ ಬ್ಲೂಟಿಕ್‌ ಚಂದಾದಾರಿಕೆಗೆ ಬೆಲೆ ನಿಗದಿ ಮಾಡಲಾಗಿದ್ದು, ಯಾರೆಲ್ಲಾ ಹಣ ಪಾವತಿ ಮಾಡಿಲ್ಲವೋ ಅವರ ಖಾತೆ ಈಗ ಸಾಮಾನ್ಯ ಖಾತೆಯಂತೆ ಆಗಿದೆ. ಹಾಗಿದ್ರೆ, ಏನಿದು ಹೊಸ ಬೆಳವಣಿಗೆ ?, ಯಾರೆಲ್ಲಾ ಗಣ್ಯರು ಬ್ಲೂಟಿಕ್‌ ಕಳೆದುಕೊಂಡಿದ್ದಾರೆ? ಎಂಬ ಕುತೂಹಲಕಾರಿ ಮಾಹಿತಿಯನ್ನು ತಿಳಿದುಕೊಳ್ಳಿ.

ಟ್ವಿಟರ್ ಬ್ಲೂಟಿಕ್ ಕಳೆದುಕೊಂಡ ಶಾರುಕ್, ಅಮಿತಾಬ್ ಬಚ್ಚನ್, ವಿರಾಟ್ ಕೊಹ್ಲಿ...ಕಾರ

ಏನಿದು ಚಂದಾದಾರಿಕೆ ಕ್ರಮ?: ಸಾಮಾನ್ಯವಾಗಿ ಈ ವಿಷಯದ ಬಗ್ಗೆ ಬಹುಪಾಲು ಮಂದಿಗೆ ತಿಳಿದೇ ಇರುತ್ತದೆ. ಟ್ವಿಟ್ಟರ್‌ ಖಾತೆಯು ಅಧಿಕೃತ ಎಂದು ತಿಳಿಸಲು ಈ ಬ್ಲೂಟಿಕ್‌ ನೀಡಲಾಗುತ್ತಿದ್ದು, ಈವರೆಗೂ ಇದು ಗಣ್ಯಾತಿಗಣ್ಯರಿಗೆ ಉಚಿತವಾಗಿತ್ತು. ಆದರೆ, ಈಗ ಅದಕ್ಕೆ ಪಾವತಿ ಮಾಡಬೇಕಾಗಿದೆ. ಅಂದರೆ ವಬ್‌ ಬಳಕೆದಾರರು ಪ್ರತಿ ತಿಂಗಳು 657ರೂ.ಹಾಗೂ ಐಒಎಸ್ ಮತ್ತು ಆಂಡ್ರಾಯ್ಡ್‌ ಬಳಕೆದಾರರು 904ರೂ. ಗಳನ್ನು ಪಾವತಿ ಮಾಡಬೇಕಿದೆ.

ಇದೇನು ದಿಢೀರ್‌ ಬೆಳವಣಿಗೆ ಅಲ್ಲ: ಈ ಬಗ್ಗೆ ಮಸ್ಕ್‌ ಅವರು ವರ್ಷದಿಂದಲೂ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಹಾಗೆಯೇ ಏಪ್ರಿಲ್ 1ರ ನಂತರ ಬ್ಲೂಟಿಕ್ ಪಡೆಯಲು ಹಣ ಪಾವತಿ ಮಾಡುವುದು ಕಡ್ಡಾಯವಾಗಿದೆ ಎಂದು ಟ್ವಿಟ್ಟರ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಪರಿಣಾಮ ಏಪ್ರಿಲ್ 20 ರಿಂದ ಅಂದರೆ ನಿನ್ನೆಯಿಂದ ಅನೇಕ ಸೆಲೆಬ್ರಿಟಿಗಳ ವೈಯಕ್ತಿಕ ಖಾತೆಗಳಿಂದ ಬ್ಲೂಟಿಕ್ ಮಾರ್ಕ್ ಅನ್ನು ತೆಗೆದುಹಾಕಲಾಗಿದ್ದು, ಈ ಬಗ್ಗೆ ಅವರಿಗೆ ಹಣ ಪಾವತಿ ಮಾಡಬೇಕು ಎಂದು ಮಾಹಿತಿ ನೀಡಲಾಗಿದೆ.

ಟ್ವಿಟರ್ ಬ್ಲೂಟಿಕ್ ಕಳೆದುಕೊಂಡ ಶಾರುಕ್, ಅಮಿತಾಬ್ ಬಚ್ಚನ್, ವಿರಾಟ್ ಕೊಹ್ಲಿ...ಕಾರ

ಯಾರೆಲ್ಲಾ ಸೆಲೆಬ್ರಿಟಿಗಳು ಈ ಬ್ಲೂಟಿಕ್‌ ಕಳೆದುಕೊಂಡಿದ್ದಾರೆ?: ಇದರಲ್ಲಿ ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಆಲಿಯಾ ಭಟ್ ಮತ್ತು ಸಿಎಂ ಯೋಗಿ ಆದಿತ್ಯನಾಥ್, ರಾಹುಲ್ ಗಾಂಧಿ ಪ್ರಿಯಾಂಕಾ ಗಾಂಧಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೇರಿದಂತೆ ಮುಂತಾದ ಗಣ್ಯರು ಈ ಬ್ಲೂಟಿಕ್‌ ಮಾರ್ಕ್‌ ಅನ್ನು ಕಳೆದುಕೊಂಡಿದ್ದಾರೆ.

ಈ ಬ್ಲೂಟಿಕ್‌ ಎಂದಿನಿಂದ ಬಳಕೆಯಲ್ಲಿದೆ?: ಟ್ವಿಟರ್ ಮೊದಲ ಬಾರಿಗೆ 2009 ರಲ್ಲಿ ಬಳಕೆದಾರರಿಗೆ ನಕಲಿ ಖಾತೆಗಳನ್ನು ಸುಲಭವಾಗಿ ಪತ್ತೆ ಮಾಡುವ ಉದ್ದೇಶದಿಂದ ಈ ಬ್ಲೂ ಟಿಕ್ ಪರಿಚಯಿಸಿತ್ತು. ಆದರೆ, ಮಸ್ಕ್ ಟ್ವಿಟರ್ ಅನ್ನು ಖರೀದಿಸುವವರೆಗೂ ಇದಕ್ಕೆ ಯಾವುದೇ ಹಣ ನೀಡಬೇಕಾದ ಅವಶ್ಯಕತೆ ಇರಲಿಲ್ಲ. ಆದರೆ, ಹಣ ಗಳಿಸುವ ಆಸೆಯಿಂದಾಗಿ ಮಸ್ಕ್‌ ಈ ಎಲ್ಲಾ ನಿರ್ಧಾರಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.

ಯಾರೆಲ್ಲಾ ಬ್ಲೂಟಿಕ್‌ ಪಡೆದಿದ್ದರು?: ಈವರೆಗೂ ಬ್ಲೂಟಿಕ್‌ ಅನ್ನು ಪಡೆದವರಲ್ಲಿ ರಾಜಕಾರಣಿಗಳು, ಪತ್ರಕರ್ತರು, ಸಿನಿಮಾತಾರೆಯರು, ಪ್ರಮುಖ ಸ್ವಾಮೀಜಿಗಳು ಸಮಾಜದಲ್ಲಿ ಉತ್ತಮ ಸೇವೆಯಲ್ಲಿ ಇರುವವರು, ದೊಡ್ಡ ದೊಡ್ಡ ಸರ್ಕಾರಿ ಅಧಿಕಾರಿಗಳು, ಸರ್ಕಾರಿ ಇಲಾಖೆಗಳು ಸೇರಿದಂತೆ ಸಾಮಾಜಿಕ ಜೀವನದಲ್ಲಿ ಇರುವ ಹಲವರು ಈ ಬ್ಲೂಟಿಕ್ ಸೇವೆ ಪಡೆಯುತ್ತಿದ್ದರು. ಆದರೆ, ಇನ್ಮುಂದೆ ಯಾರೂ ಬೇಕಾದರೂ ಹಣ ನೀಡಿ ಈ ಬ್ಲೂಟಿಕ್‌ ಖರೀದಿ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಟ್ವಿಟರ್ ಬ್ಲೂಟಿಕ್ ಕಳೆದುಕೊಂಡ ಶಾರುಕ್, ಅಮಿತಾಬ್ ಬಚ್ಚನ್, ವಿರಾಟ್ ಕೊಹ್ಲಿ...ಕಾರ

ಮಸ್ಕ್‌ ಅವರ ಈ ನಿರ್ಧಾರದಿಂದ ಕೆಲವರಿಗೆ ಸಂತಸವಾದರೆ, ಇನ್ನೂ ಕೆಲವರು ಅದೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ಹೊರಹಾಕುತ್ತಿದ್ದಾರೆ. ಆದರೆ, ಇದನ್ನೆಲ್ಲಾ ಗಣನೆಗೆ ತೆಗೆದುಕೊಳ್ಳದ ಮಸ್ಕ್ ಅವರು ಆನೆ ನಡೆದದ್ದೇ ಹಾದಿ ಎಂಬಂತೆ ತಮಗೆ ಅನಿಸಿದ ನಿರ್ಧಾರಗಳನ್ನು ಜಾರಿಗೆ ತರುತ್ತಲೇ ಇದ್ದಾರೆ. ಕೆಲವು ಸಂದರ್ಭದಲ್ಲಿ ಜಾರಿಯಾದ ನಿರ್ಧಾರಗಳನ್ನು ಸಾರ್ವಜನಿಕರ ಆಕ್ರೋಶದ ಮೇರೆಗೆ ವಾಪಸ್‌ ಸಹ ತೆಗೆದುಕೊಂಡಿದ್ದಾರೆ.

Best Mobiles in India

English summary
As part of CEO Elon Musk's drive to increase revenue for his micro-blogging site, Twitter, blue tick has been removed from the account of anyone who hasn't paid for the Twitter blue tick.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+