Home
ಸುದ್ದಿಜಾಲ

ಟೈಪ್‌ ಮಾಡುವ ಸೌಂಡ್‌ನಿಂದಲೇ ನಿಮ್ಮ ಖಾತೆಗೆ ಕನ್ನ... ಪಾಸ್‌ವರ್ಡ್‌ ಎಂಟ್ರಿ ಮಾಡೋ ಮುನ್ನ ಎಚ್ಚರ!

ಸ್ಕ್ಯಾಮರ್‌ಗಳು (Scammer) ನೀವು ಊಹಿಸಲು ಅಸಾಧ್ಯವಾದ ಮಾರ್ಗಗಳ ಮೂಲಕ ನಿಮ್ಮನ್ನು ಮೋಸ ಮಾಡುವ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಮೋಸ ಹೋದ ಮೇಲೆ ನಿಮಗೆ ಗೊತ್ತಾಗುತ್ತೆ ಅಯ್ಯೋ.. ನಾನು ಈ ರೀತಿಯೂ ಮೋಸ ಹೋದೆನಾ ಎಂದು ಅಷ್ಟರ ಮಟ್ಟಿಗೆ ಸ್ಕ್ಯಾಮರ್‌ಗಳು ತಮ್ಮ ಕೌಶಲ್ಯ ತೋರಿಸುತ್ತಿದ್ದಾರೆ. ಈ ನಡುವೆ ಈಗ ಸೌಂಡ್‌(Sound) ಮೂಲಕವೇ ನಿಮ್ಮನ್ನು ವಂಚಿಸಲು ಮುಂದಾಗಿದ್ದಾರೆ.

ಹೌದು, ಯಾವುದೇ ಖಾತೆಗಳು ಅಥವಾ ಬ್ಯಾಂಕ್‌ ಮಾಹಿತಿ ಪಡೆದುಕೊಳ್ಳಲು ನೀವು ಲ್ಯಾಪ್‌ಟಾಪ್‌ ಅಥವಾ ಇತರೆ ಡಿವೈಸ್‌ ಬಳಕೆ ಮಾಡಿಕೊಳ್ಳಬಹುದು. ಈ ವೇಳೆ ನೀವು ಕೀಬೋರ್ಡ್‌ನಲ್ಲಿ ಟೈಪ್‌ ಮಾಡುವ ಸೌಂಡ್‌ ಮೂಲಕವೇ ನಿಮ್ಮನ್ನು ವಂಚನೆಗೊಳಿಸುವ ಸ್ಕ್ಯಾಮರ್‌ಗಳ ಗ್ರೂಪ್‌ ತಲೆ ಎತ್ತಿದೆ. ಈ ಮೂಲಕ ಸಾರ್ವಜನಿಕವಾಗಿ ಬಳಕೆಯಾಗುವ ಲ್ಯಾಪ್‌ಟಾಪ್‌ಗಳು ಅಥವಾ ಸಿಸ್ಟಂಗಳಲ್ಲಿ ನಿಮ್ಮ ಪಾಸ್‌ವರ್ಡ್‌ ಅನ್ನು ಎಂದಿಗೂ ಟೈಪ್‌ ಮಾಡಬೇಡಿ ಎಂದು ಸಲಹೆ ನೀಡಲಾಗಿದೆ. ಹಾಗಿದ್ರೆ, ಏನಿದು ಹೊಸ ಸ್ಕ್ಯಾಮ್ ಎಂಬ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ ನೋಡಿ.

ಟೈಪ್‌ ಮಾಡುವ ಸೌಂಡ್‌ನಿಂದಲೇ ನಿಮ್ಮ ಖಾತೆಗೆ ಕನ್ನ...

ಕೀಬೋರ್ಡ್ ಬಟನ್‌ ಸೌಂಡ್‌ಗಳೇ ಸ್ಕ್ಯಾಮರ್‌ಗಳಿಗೆ ಬ್ರಹ್ಮಾಸ್ತ್ರ: ನಿಮ್ಮ ಪಾಸ್‌ವರ್ಡ್‌ಗಳನ್ನು ನೀವು ಬಹಳ ರಕ್ಷಣೆಯೊಂದ ನೋಡಿಕೊಂಡಿದ್ದೇವೆ ಎಂದು ನಿಮಗೆ ಅನಿಸಿದೆಯೇ, ಅನಿಸಿದ್ರೆ ಆ ಅನಿಸಿಕೆ ಇನ್ಮುಂದೆ ತಪ್ಪಾಗಲಿದೆ. ನಿಮ್ಮ ಕಂಪ್ಯೂಟರ್ ಡಿಸ್‌ಪ್ಲೇಯನ್ನು ಅಥವಾ ಕೀಪ್ಯಾಡ್ ಅನ್ನು ಗೂಢಾಚಾರಿಕೆಯ ಕಣ್ಣುಗಳಿಂದ ರಕ್ಷಿಸುವ ಬಗ್ಗೆ ಮಾತ್ರ ನೀವು ಯೋಚಿಸಬಹುದು. ಆದರೆ, ನಿಮ್ಮ ಕೀಬೋರ್ಡ್ ಮಾಡುವ ಶಬ್ದಗಳು ಸಹ ನಿಮ್ಮ ಪಾಸ್‌ವರ್ಡ್‌ಗಳನ್ನು ಅಪಾಯಕ್ಕೆ ತಳ್ಳಬಹುದು ಎಂದು ನಿಮಗೆ ತಿಳಿದರೆ ಆತಂಕಕ್ಕೆ ಕಣ್ಣು ಅಗಲ ಮಾಡುತ್ತೀರಾ.

ಹೊಸ ಅಧ್ಯಯನವೊಂದು ಆಶ್ಚರ್ಯಕರ ಮಾಹಿತಿಯನ್ನು ಬಹಿರಂಗಪಡಿಸಿದೆ. ಅಂದರೆ ZDnet ವರದಿಯ ಪ್ರಕಾರ, ನೀವು ಟೈಪ್ ಮಾಡುವಾಗ ನಿಮ್ಮ ಕೀಬೋರ್ಡ್ ಮಾಡುವ ಶಾಂತ ಶಬ್ದಗಳನ್ನು ಆಲಿಸುವ ಮೂಲಕ ನಿಮ್ಮ ಪಾಸ್‌ವರ್ಡ್‌ಗಳನ್ನು ಕಂಡುಹಿಡಿಯಲು ಹ್ಯಾಕರ್‌ಗಳು ವಿಶೇಷ ತಂತ್ರಜ್ಞಾನವನ್ನು ಬಳಕೆ ಮಾಡಬಹುದು ಎಂದು ತಿಳಿಸಲಾಗಿದೆ. ಇದಕ್ಕಾಗಿ ಕೀಬೋರ್ಡ್ ಶಬ್ದಗಳನ್ನು ಸೆರೆಹಿಡಿಯಲು ಮತ್ತು ವಿಶ್ಲೇಷಿಸಲು ಮ್ಯಾಕ್‌ಬುಕ್ ಪ್ರೊ ಮತ್ತು ಐಫೋನ್ ಅನ್ನು ಬಳಕೆ ಮಾಡಿಕೊಂಡು ಸಂಶೋಧಕರು ಒಂದು ಪ್ರಯೋಗವನ್ನು ನಡೆಸಿದ್ದಾರೆ.

ಈ ವೇಳೆ ಎಐ ಚಾಲಿತ ಪ್ರೋಗ್ರಾಂ ಕೀಬೋರ್ಡ್‌ನಲ್ಲಿ ಒತ್ತಿದ ಯಾವುದೇ ಕೀಗಳನ್ನು ನಿಖರವಾಗಿ ನಿರ್ಧರಿಸುತ್ತದೆ ಎಂದು ಕಂಡುಕೊಳ್ಳಲಾಗಿದೆ. ಈ ಹೊಸ ಅಪಾಯವು ವಿಭಿನ್ನ ವಿಧಾನವನ್ನು ಹೊಂದಿದ್ದು, ಇದನ್ನು 'ಅಕೌಸ್ಟಿಕ್ ಸೈಡ್-ಚಾನೆಲ್ ಅಟ್ಯಾಕ್' (acoustic side-channel attack) ಎಂದು ಕರೆಯಲಾಗುತ್ತದೆ. ನೀವು ಟೈಪ್ ಮಾಡುವಾಗ ನಿಮ್ಮ ಕೀಬೋರ್ಡ್ ಮಾಡುವ ಶಬ್ದಗಳ ಮೇಲೆ ಇದು ಕೆಲಸ ಮಾಡುತ್ತದೆ.

ಈ ಬೆದರಿಕೆ ಎಷ್ಟು ಗಂಭೀರವಾಗಿದೆ ಎಂದು ಅರ್ಥ ಮಾಡಿಕೊಳ್ಳುವ ಉದ್ದೇಶದಿಂದಲೇ ತಜ್ಞರ ತಂಡವು ಅದ್ಭುತ ಪ್ರಯೋಗವನ್ನು ನಡೆಸಿದೆ. ತಜ್ಞರು ಪ್ರಬಲವಾಗಿರುವ ಮ್ಯಾಕ್‌ಬುಕ್ ಪ್ರೊ 16 ಅನ್ನು ಬಳಕೆ ಮಾಡಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೆ ಕೀಬೋರ್ಡ್‌ನ ಶಬ್ದಗಳನ್ನು ಸೆರೆಹಿಡಿಯಲು ಮೃದುವಾದ ಬಟ್ಟೆಯ ಮೇಲೆ ಕೇವಲ 17cm ದೂರದಲ್ಲಿ ಐಫೋನ್‌13 ಮಿನಿ ಅನ್ನು ಇರಿಸಿದ್ದರು. ಅವರು ಶಬ್ದವನ್ನು ಸೆರೆಹಿಡಿಯಲು ಲ್ಯಾಪ್‌ಟಾಪ್‌ನ ಸ್ವಂತ ರೆಕಾರ್ಡಿಂಗ್ ಕಾರ್ಯವನ್ನು ಸಹ ಆನ್‌ ಮಾಡಿದ್ದರು.

ಈ ಎಲ್ಲಾ ರೆಕಾರ್ಡ್ ಮಾಡಲಾದ ಡೇಟಾವನ್ನು ಎಐ ನಿಂದ ಚಾಲಿತವಾದ ಸ್ಮಾರ್ಟ್ ಕಂಪ್ಯೂಟರ್ ಪ್ರೋಗ್ರಾಂ ಗೆ ಫೀಡ್‌ ಮಾಡಲಾಯಿತು. ಟೈಪಿಂಗ್ ಶಬ್ದಗಳನ್ನು ಅರ್ಥಮಾಡಿಕೊಳ್ಳಲು ಅದಕ್ಕೆ ತಿಳಿಸಲಾಯಿತು. ಈ ಎಐ ಐಫೋನ್‌ನಲ್ಲಿ ಆದ ರೆಕಾರ್ಡಿಂಗ್‌ನಿಂದ 95 ಪ್ರತಿಶತದಷ್ಟು ಮತ್ತು ಲ್ಯಾಪ್‌ಟಾಪ್‌ನ ರೆಕಾರ್ಡಿಂಗ್‌ನಿಂದ ಆದ 93 ಪ್ರತಿಶತದಷ್ಟು ರಿಸಲ್ಟ್‌ ಅನ್ನು ನೀಡುವ ಮೂಲಕ ತಜ್ಞರೇ ತಲೆತಿರುಗುವಂತೆ ಮಾಡಿದೆ. ಈ ಮೂಲಕ ಈ ಪ್ರಯೋಗ ಯಶಸ್ವಿಯಾಗಿದೆ.

ಟೈಪ್‌ ಮಾಡುವ ಸೌಂಡ್‌ನಿಂದಲೇ ನಿಮ್ಮ ಖಾತೆಗೆ ಕನ್ನ...

ಹಾಗಿದ್ರೆ ಜನರ ಕಥೆ ಏನು?: ಯಾವುದೇ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇರುತ್ತದೆ. ಅದರಂತೆ ಈ ಸ್ನೀಕಿ ಟ್ರಿಕ್ ಅನ್ನು ಮೀರಿಸಲು ಹಲವು ಮಾರ್ಗಗಳಿವೆ. ನಿಮ್ಮ ಪಾಸ್‌ವರ್ಡ್‌ಗಳನ್ನು ರಕ್ಷಿಸಲು ಸಂಶೋಧಕರು ಕೆಲವು ಉಪಯುಕ್ತ ಸಲಹೆಗಳನ್ನು ಸಹ ತಿಳಿಸಿದ್ದಾರೆ. ಅಂದರೆ ಈ ವೇಳೆ ನೀವು ಟೈಪ್ ಮಾಡುವ ವಿಧಾನವನ್ನು ನೀವು ಮಿಶ್ರಣ ಮಾಡಬಹುದು,ಇದು ಎಐಗೆ ಪತ್ತೆ ಮಾಡಲು ಕಷ್ಟವಾಗುತ್ತದೆ.

ದೊಡ್ಡ ಮತ್ತು ಸಣ್ಣ ಅಕ್ಷರಗಳ ಮಿಶ್ರಣದೊಂದಿಗೆ ಪಾಸ್‌ವರ್ಡ್‌ಗಳನ್ನು ರಚಿಸಿ ಮತ್ತು ಹೆಚ್ಚುವರಿ ರಕ್ಷಣೆಯ ಲೇಯರ್‌ಗಳನ್ನ ಸೇರಿಸಲು ಶಿಫ್ಟ್ ಕೀಯನ್ನು ಬಳಕೆ ಮಾಡಿ. ಜೊತೆಗೆ ನೀವು ವಿಡಿಯೋ ಕರೆಯಲ್ಲಿದ್ದರೆ ಯಾವುದೇ ಸಂಭಾವ್ಯ ಕದ್ದಾಲಿಕೆಗಳನ್ನು ಗೊಂದಲಗೊಳಿಸಲು ನಿಮ್ಮ ಮೈಕ್ರೊಫೋನ್ ಬಳಿ ಕೆಲವು ಹಿನ್ನೆಲೆ ಶಬ್ದವನ್ನು ಕೇಳುವಂತೆ ಮಾಡಿ. ಇದರಿಂದ ಯಾರೂ ಸಹ ನಿಮ್ಮ ಪಾಸ್‌ವರ್ಡ್‌ ಕದಿಯಲು ಹಾಗೂ ಆ ಸೌಂಡ್‌ ರೆಕಾರ್ಡ್‌ ಮಾಡಿಕೊಳ್ಳಲು ಸಾಧ್ಯವಿಲ್ಲ.

ಇದೀಗ ನಾವು ಈ ರೀತಿಯ ಬೆದರಿಕೆಗಳಿಗಿಂತ ಒಂದು ಹೆಜ್ಜೆ ಮುಂದೆ ಇಡಬೇಕಾಗಿದೆ. ಈ ಆವಿಷ್ಕಾರವು ಆತಂಕಕಾರಿಯಾಗಿ ತೋರುತ್ತದೆಯಾದರೂ ನಮ್ಮ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ತಂತ್ರಜ್ಞಾನದೊಂದಿಗೆ ಒಟ್ಟಾಗಿ ಕೆಲಸ ಮಾಡುವ ಮಾರ್ಗಗಳನ್ನು ಕಂಡುಕೊಳ್ಳುವುದು ಅನಿವಾರ್ಯ. ಆದ್ದರಿಂದ ಮುಂದಿನ ಬಾರಿ ನೀವು ಪಾಸ್‌ವರ್ಡ್‌ ಟೈಪ್ ಮಾಡುತ್ತಿರುವಾಗ ಮೇಲೆ ತಿಳಿಸಿದ ಮಾರ್ಗಗಳನ್ನು ಅನುಸರಿಸಿ. ಈ ಮೂಲಕ ನಿಮ್ಮ ಬ್ಯಾಂಕ್‌ ಖಾತೆಯೂ ಸೇಫ್‌, ನೀವು ಸೇಫ್.

Best Mobiles in India

English summary
Scammers will find your password from the sound you type, and through this they will enter your bank account and social site.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+