Home
ಸುದ್ದಿಜಾಲ

Apple Watch: ದೆಹಲಿ ಮಹಿಳೆಯ ಜೀವ ಉಳಿಸಿದ ಆಪಲ್‌ ವಾಚ್! ಅದೇಗೆ ಸಾಧ್ಯ ಅಂತೀರಾ?...

ಈವರೆಗೆ ಸಾಕಷ್ಟು ಆಪಲ್‌ ವಾಚ್‌ (Apple Watch) ಸಂಬಂಧಿ ವರದಿಗಳು ವಿದೇಶದಿಂದಲೇ ವರದಿಯಾಗುತ್ತಿದ್ದವು. ಅಲ್ಲದೆ ಸಾಕಷ್ಟು ಜನರ ಜೀವ ಉಳಿಸುವ ಮೂಲಕ ಈ ವಾಚ್‌ಗಳು ಜನರ ನೆಚ್ಚಿನ ವಾಚ್‌ ಆಗಿ ಜನಪ್ರಿಯತೆ ಪಡೆದುಕೊಂಡಿವೆ. ಈ ನಡುವೆ ದೆಹಲಿ ಮಹಿಳೆಯ ಜೀವ ಉಳಿಸುವ ಮೂಲಕ ಆಪಲ್‌ ವಾಚ್‌ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಹೌದು, ಇತ್ತೀಚಿನ ದಿನಗಳಲ್ಲಿ ಭಾರತವೂ ಸೇರಿದಂತೆ ಸಾಕಷ್ಟು ಜನರು ಹೃದಯ ಸಂಬಂಧಿ ಸಮಸ್ಯೆಗಳಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ಈ ಮಹಿಳೆ ಈ ವಾಚ್‌ ಧರಿಸದಿದ್ರೆ ಇವರ ಜೀವವೂ ಹಾರಿ ಹೋಗುತ್ತಿತ್ತೇನೋ. ಅದೃಷ್ಟವಶಾತ್‌ ಆಕೆಯ ಜೀವ ಉಳಿಸಲು ಆಪಲ್‌ ವಾಚ್‌ ಸಹಾಯ ಮಾಡಿದೆ. ಹಾಗಿದ್ರೆ, ಏನಿದು ಘಟನೆ?, ಮಹಿಳೆಯನ್ನು ಆಪಲ್‌ ವಾಚ್ ಕಾಪಾಡಿದ್ದು ಹೇಗೆ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ದೆಹಲಿ ಮಹಿಳೆಯ ಜೀವ ಉಳಿಸಿದ ಆಪಲ್‌ ವಾಚ್! ಅದೇಗೆ ಸಾಧ್ಯ ಅಂತೀರಾ?...

ಮಹಿಳೆಯನ್ನು ಕಾಪಾಡಿದ ಆಪಲ್‌ ವಾಚ್‌: ಆಪಲ್ ವಾಚ್ ದುಬಾರಿ ಎನಿಸಿದರೂ ಸಹ ಇದರ ಫೀಚರ್ಸ್‌ಗೆ ಬೆಲೆ ಕಟ್ಟಲಾಗದು. ಜೀವ ಉಳಿಸುವ ಸಂದರ್ಭ ಬಂದಾಗ ಮೊದಲೇ ತಿಳಿಸಿದಂತೆ ವಿವಿಧ ರೀತಿಯಲ್ಲಿ ಆಪಲ್‌ ವಾಚ್‌ ಸಹಾಯ ಮಾಡಿದೆ. ಇತ್ತೀಚೆಗೆ, ದೆಹಲಿಯ ಮಹಿಳೆಯೊಬ್ಬರು ಈ ವಾಚ್‌ನ ಬಗ್ಗೆ ಭಾರೀ ಮೆಚ್ಚುಗೆಯನ್ನು ಶೇರ್‌ ಮಾಡಿಕೊಂಡಿದ್ದಾರೆ. ವಾಚ್‌ನಿಂದ ಈ ವಿಷಯ ತಿಳಿಯದೇ ಇದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು ಎನ್ನಲಾಗಿದೆ.

ಜೆಎನ್‌ಯುನಲ್ಲಿ ಪಿಎಚ್‌ಡಿ ಸಂಶೋಧಕರಾದ ಸ್ನೇಹಾ ಸಿನ್ಹಾ ಅವರ ಹೃದಯ ಬಡಿತ ನಿಮಿಷಕ್ಕೆ 250 ಕ್ಕೆ ಏರಿದೆ. ಈ ಸಂಬಂಧ ಟೈಮ್ಸ್ ನೌ ಟೆಕ್‌ಗೆ ಮಾಹಿತಿ ನೀಡಿದ್ದು, ನಾನು ಮನೆಗೆ ಹಿಂದಿರುಗಿದ ನಂತರ ಹೃದಯ ಬಡಿತ ಏರಿಕೆ ಆಯಿತು. ಇದೇ ವೇಳೆ ವಾಚ್‌ನ ಬ್ಯಾಟರಿ ಸಹ ಖಾಲಿಯಾಗಿತ್ತು. ವಾಚ್‌ ಆನ್ ಆದ ನಂತರ ಅದನ್ನು ಧರಿಸಿಕೊಂಡಾದ ತೀವ್ರವಾದ ಹೃದಯ ಬಡಿತ ವರದಿಯಾಗಿದೆ. ಇದು ಸಾಮಾನ್ಯ ಕೆಲವು ಸಮಯದ ನಂತರ ಸಹಜ ಸ್ಥಿತಿಗೆ ಹೋಗುತ್ತದೆ ಎಂದು ಭಾವಿಸಿ ನೋಟಿಫಿಕೇಶನ್‌ ಅನ್ನು ನಿರ್ಲಕ್ಷಿಸಿದ್ದೆ ಎಂದು ತಿಳಿಸಿದ್ದಾರೆ.

ದೆಹಲಿ ಮಹಿಳೆಯ ಜೀವ ಉಳಿಸಿದ ಆಪಲ್‌ ವಾಚ್! ಅದೇಗೆ ಸಾಧ್ಯ ಅಂತೀರಾ?...

ಇದೆಲ್ಲಾ ಆದ ಮೇಲೆ 1.5 ಗಂಟೆಗಳ ನಂತರ, ಹೃಯದ ಬಡಿತದ ತೀವ್ರತೆ ಇನ್ನಷ್ಟು ಹೆಚ್ಚಾಯಿತಂತೆ. ಈ ಸಂಬಂಧ ನಿರಂತರವಾಗಿ ವಾಚ್‌ ಎಚ್ಚರಿಕೆ ನೀಡುವ ಕೆಲಸ ಮಾಡಿದೆ. ಇದೆಲ್ಲಾ ಆದ ಮೇಲೆ ಗಂಭೀರ ಹೃದಯ ಸಮಸ್ಯೆಯಾಗಿದೆ ಎಂದು ಆಕೆ ಆತಂಕಗೊಂಡು ಆಸ್ಪತ್ರೆಗೆ ಕರೆದೊಯ್ಯಲು ತಮ್ಮ ಸ್ನೇಹಿತನಿಗೆ ಕರೆ ಮಾಡಿದ್ದಾರೆ. ಬಳಿಕ ಆಕೆಯ ಹೃದಯವು ತುಂಬಾ ವೇಗವಾಗಿ ಬಡಿಯುತ್ತಿದೆ ಎಂದು ವೈದ್ಯರು ಕಂಡುಕೊಂಡು, ಡಿಸಿ (ಡೈರೆಕ್ಟ್ ಕರೆಂಟ್ ಕಾರ್ಡಿಯೋವರ್ಷನ್) ಶಾಕ್ಸ್ ಚಿಕಿತ್ಸೆಯನ್ನು ನೀಡಿದ್ದಾರೆ. ಈ ಮೂಲಕ ತಮ್ಮ ಪ್ರಾಣವನ್ನು ಉಳಿಸಿದ ವಾಚ್‌ಗೆ ಈಕೆ ಧನ್ಯವಾದ ತಿಳಿಸಿದ್ದಾರೆ.

ಆಪಲ್‌ ವಾಚ್‌ಗಳಲ್ಲಿ ಜೀವ ಉಳಿಸುವ ಫೀಚರ್ಸ್: ಆಪಲ್‌ ವಾಚ್‌ಗಳಲ್ಲಿ ವಿಶೇಷವಾದ ಫೀಚರ್ಸ್‌ ಆಯ್ಕೆ ನೀಡಲಾಗಿದ್ದು, ಇವೇ ಬಳಕೆದಾರರಿಗೆ ನಿಖರವಾದ ಮಾಹಿತಿ ನೀಡುವ ಮೂಲಕ ಅವರ ಜೀವ ರಕ್ಷಕವಾಗಿ ಕೆಲಸ ಮಾಡುತ್ತಿವೆ. ಅವುಗಳಲ್ಲಿ ಪ್ರಮುಖವಾದುವು ಎಂದರೆ ಹೃದಯ ಬಡಿತ ಮತ್ತು ಅನಿಯಮಿತ ಬಡಿತದ ನೋಟಿಫಿಕೇಶನ್,‌ ಆಪ್ಟಿಕಲ್ ಹೃದಯ ಸೆನ್ಸರ್‌, AFib ಹಿಸ್ಟ್ರಿ ಆಪ್ಟಿಕಲ್ ಹಾರ್ಟ್‌ ಸೆನ್ಸರ್‌.

ಇಸಿಜಿ ಆಪ್‌ ಎಲೆಕ್ಟ್ರಿಕಲ್‌ ಹಾರ್ಟ್‌ ಸೆನ್ಸರ್‌, ಲೋ ಕಾರ್ಡಿಯೋ ಫಿಟ್‌ನೆಸ್‌ ನೋಟಿಫಿಕೇಶನ್ ಆಪ್ಟಿಕಲ್ ಹಾರ್ಟ್‌ ಸೆನ್ಸರ್‌ ಮತ್ತು ಜಿಪಿಎಸ್‌, ಬ್ಲಡ್‌ ಆಕ್ಸಿಜನ್ ಲೆವೆಲ್‌ ಆಪ್ಟಿಕಲ್ ಹಾರ್ಟ್‌ ಸೆನ್ಸರ್‌, ಫಾಲ್ ಡಿಟೆಕ್ಷನ್ ಅಕ್ಸೆಲೆರೊಮೀಟರ್ ಮತ್ತು ಗೈರೊಸ್ಕೋಪ್ ಸೇರಿದಂತೆ ವಿವಿಧ ಆಕರ್ಷಕ ಹಾಗೂ ಅಗತ್ಯ ಫೀಚರ್ಸ್‌ ಅನ್ನು ಈ ವಾಚ್‌ಗಳು ಪಡೆದುಕೊಂಡಿವೆ.

ದೆಹಲಿ ಮಹಿಳೆಯ ಜೀವ ಉಳಿಸಿದ ಆಪಲ್‌ ವಾಚ್! ಅದೇಗೆ ಸಾಧ್ಯ ಅಂತೀರಾ?...

ಈ ನಡುವೆ SOS ಫೀಚರ್ಸ್‌ ಬಹಳ ವಿಶೇಷವಾಗಿ ಕೆಲಸ ಮಾಡಲಿದ್ದು, ಬಳಕೆದಾರರು ಪ್ರಜ್ಞೆ ಕಳೆದುಕೊಳ್ಳುವ ಮೊದಲು ಎಚ್ಚರಿಸುವ ಕೆಲಸ ಮಾಡಲಿದೆ. ಅಂದರೆ ಈ ಫೀಚರ್ಸ್‌ನಲ್ಲಿ ವಾಚ್‌ ಆಟೋಮ್ಯಾಟಿಕ್‌ ಆಗಿ ತುರ್ತು ಕರೆಗೆ ಡಯಲ್ ಮಾಡುತ್ತದೆ ಮತ್ತು ತುರ್ತು ಸೇವೆಗಳನ್ನು ಎಚ್ಚರಿಸಲಿದೆ. ಈ ಸೇವೆಯನ್ನು ಈಗಾಗಲೇ ಜಾಗತಿಕವಾಗಿ ಸಾಕಷ್ಟು ಜನರು ಪಡೆದುಕೊಂಡು ತಮ್ಮ ಜೀವ ಉಳಿಸಿಕೊಂಡಿದ್ದಾರೆ.

Best Mobiles in India

English summary
Sneha Sinha, a PhD researcher at JNU, had a heart rate of 250 beats per minute. In this regard, Apple warned the woman and saved her life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+