Home
ಸುದ್ದಿಜಾಲ

ಶಾಕಿಂಗ್... AK-47 ಗನ್ ಆರ್ಡರ್‌ ಮಾಡಿದ್ದ ಎಂಟು ವರ್ಷದ ಬಾಲಕ!

ಸ್ಮಾರ್ಟ್‌ಗ್ಯಾಜೆಟ್‌ಗಳನ್ನು(Smartgadget) ಮಕ್ಕಳಿಂದ ಹಿಡಿದು ಮುದುಕರವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಅದರಲ್ಲೂ ಮೊಬೈಲ್‌ ಇಲ್ಲದೆ ಊಟವನ್ನೇ ಮುಟ್ಟುವುದಿಲ್ಲ ಎನ್ನುವ ಮಕ್ಕಳ ನಡುವೆ ಇಲ್ಲೋರ್ವ ಎಂಟು ವರ್ಷದ ಬಾಲಕ AK-47 ಗನ್ ಅನ್ನೇ ಆರ್ಡರ್ ಮಾಡಿರುವ ರೋಚಕ ಘಟನೆ ಬಹಿರಂಗ ಆಗಿದೆ.

ಹೌದು, ನಿಮಗೆ ಈ ವಿಷಯ ಕೇಳಿ ಶಾಕ್‌ ಆಗಿರಬಹುದು. 8 ವರ್ಷದ ಬಾಲಕ AK-47 ಆರ್ಡರ್ ಮಾಡಿದ್ದಾನೆಂದು ಆತನ ತಾಯಿ ಮಾಹಿತಿ ನೀಡಿದ್ದಾರೆ. ಈ ಆಘಾತಕಾರಿ ಘಟನೆಯನ್ನು ಆಧಾರವಾಗಿ ಇರಿಸಿಕೊಂಡು ಡಿಜಿಟಲ್ ಜಗತ್ತಿನಲ್ಲಿ(Digital world) ಪೋಷಕರು ಹೇಗೆ ತಮ್ಮ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಲಾಗಿದೆ. ಹಾಗಿದ್ರೆ ಏನಿದು ಘಟನೆ?, ಎಂಟು ವರ್ಷದ ಯುವಕ ಅದೇಗೆ ಆನ್‌ಲೈನ್‌ನಲ್ಲಿ(Online) AK-47 ಗನ್‌ ಆರ್ಡರ್‌ ಮಾಡಿದ್ದಾನೆ ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.

ಶಾಕಿಂಗ್...  AK-47 ಗನ್ ಆರ್ಡರ್‌ ಮಾಡಿದ್ದ ಎಂಟು ವರ್ಷದ ಬಾಲಕ!

ಪೋಷಕರೇ ಎಚ್ಚರ..: ಸ್ಮಾರ್ಟ್‌ಫೋನ್‌ ಗೀಳು ಈಗ ಎಲ್ಲರಲ್ಲೂ ಆರಂಭವಾಗಿದೆ. ಮನೆಯಲ್ಲಿ ನಾಲ್ಕು ಮಂದಿ ಇದ್ದರೆ ಅವರೆಲ್ಲಾ ನಾಲ್ಕು ದಿಕ್ಕಿನಲ್ಲಿ ಕೂತು ಫೋನ್ ಫೋನ್‌ನಲ್ಲೇ ಸಂಭಾಷಣೆ ಮಾಡುವ ಮಟ್ಟಕ್ಕೆ ತಂತ್ರಜ್ಞಾನ ಬೆಳೆದಿದೆ. ಈ ನಡುವೆ ಮಕ್ಕಳನ್ನು ಅಂತರ್ಜಾಲದ ಜಗತ್ತಿಗೆ ಒಡ್ಡಿಕೊಳ್ಳುವಂತೆ ಮಾಡುವುದು ಅನೇಕ ಅಪಾಯಗಳಿವೆ ದಾರಿ ಮಾಡಿಕೊಟ್ಟಂತೆ. ಇದರ ಭಾಗವಾಗಿಯೇ ನೆದರ್ಲ್ಯಾಂಡ್ಸ್ ಮೂಲದ ಬಾರ್ಬರಾ ಜೆಮೆನ್ ತನ್ನದೇ ಆದ ರೋಚಕ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಅವರ 8 ವರ್ಷದ ಮಗ ಸೈಬರ್ ಕ್ರೈಮ್‌ನಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಬಾರ್ಬರಾ ಪ್ರಸ್ತುತ ಮಾನವ ಸಂಪನ್ಮೂಲ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದು, ಯುರೋ ನ್ಯೂಸ್‌ನಲ್ಲಿ ಇವರನ್ನು ಸಂದರ್ಶನ ಮಾಡಲಾಗಿದೆ. ಮಗ ಕಂಪ್ಯೂಟರ್‌ನಲ್ಲಿ (computer) ಸಾಕಷ್ಟು ಸಮಯ ಕಳೆಯುತ್ತಿದ್ದ. ಚಿಕ್ಕ ವಯಸ್ಸಿನಲ್ಲಿಯೇ ಹ್ಯಾಕಿಂಗ್(Hacking) ಮಾಡಲು ಪ್ರಾರಂಭಿಸಿದ್ದ ಎಂದು ಅಚ್ಚರಿ ಮಾಹಿತಿ ಹೊರಹಾಕಿದ್ದಾರೆ. ಇವರು ನೀಡಿದ ಮಾಹಿತಿಯಂತೆ, ಡಾರ್ಕ್ ವೆಬ್‌ನಿಂದ ತನ್ನ ಮಗ AK-47 ಸೇರಿದಂತೆ ಇನ್ನೂ ಹಲವಾರು ಅಪಾಯಕಾರಿ ವಸ್ತುಗಳನ್ನು ರಹಸ್ಯವಾಗಿ ಖರೀದಿ ಮಾಡಿದ್ದಾನಂತೆ.

ಇನ್ನು ತಮ್ಮ ಮಗ ಚಿಕ್ಕವಯಸ್ಸಿನಿಂದಲೂ ಹಣ ನೀಡದೆ ಆನ್‌ಲೈನ್‌ನಲ್ಲಿ ಬೇಕಾದದ್ದನ್ನು ಆರ್ಡರ್ ಮಾಡುತ್ತಲೇ ಬರುತ್ತಿದ್ದ. ಆರಂಭದಲ್ಲಿ ಇದು ತಿನಿಸುಗಳಿಗೆ ಸೀಮಿತವಾಗಿತ್ತು. ಆದರೆ ಕಾಲಾನಂತರದಲ್ಲಿ ಇದು ಗಂಭೀರವಾಗಿತ್ತು ಎಂದು ದುಃಖ ತೋಡಿಕೊಂಡಿದ್ದಾರೆ. ಆತ ಯಾವಾಗಲೂ ಕೋಡ್‌ಗಳನ್ನು ಬಳಕೆ ಮಾಡಿಕೊಂಡು ಸಂವಹನ ನಡೆಸುತ್ತಿದ್ದನಂತೆ. ಅದರಲ್ಲೂ ಆನ್‌ಲೈನ್ ಗೇಮಿಂಗ್‌ಗಳ ಮೂಲಕ ಕೆಟ್ಟ ಜನರೊಂದಿಗೆ ಸಂವಹನ ನಡೆಸುತ್ತಿದ್ದ. ಅಕ್ರಮ ಹಣದ ವಹಿವಾಟುಗಳಿಗೆ ಅವರಿಗೆ ಸಹಾಯ ಸಹ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ಒಂದು ದಿನ ಮನೆಗೆ AK-47 ಬಂದೂಕನ್ನು ತಲುಪಿಸಲಾಯಿತು. ಆವಾಗಲೇ ನಮಗೆ ಪರಿಸ್ಥಿತಿಯ ಗಂಭೀರತೆ ಅರಿವಾಯಿತು. ಮಗ ಬಂದೂಕನ್ನು ಆರ್ಡರ್ ಮಾಡುವಲ್ಲಿ ಯಶಸ್ವಿಯಾಗಿದ್ದರೂ ಸಹ ಅದನ್ನು ಪೊಲೀಸರು ಪತ್ತೆ ಮಾಡುವುದನ್ನು ತಪ್ಪಿಸಲು ಪೋಲೆಂಡ್‌ನಿಂದ ಬಲ್ಗೇರಿಯಾಕ್ಕೆ ರವಾನಿದ್ದ. ಆದರೆ ಈ ಸಂಬಂಧ ತಕ್ಷಣ ಕ್ರಮ ತೆಗೆದುಕೊಳ್ಳಲು ನಿರ್ಧಾರ ಮಾಡಿ ಬಂದೂಕನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಯಿತು.

ಇದಾದ ನಂತರದಲ್ಲಿ ಮಗನ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲಿಲ್ಲ. ಆದರೆ, ಅವನ ವರ್ತನೆಯಲ್ಲಿ ಹಲವಾರು ಬದಲಾವಣೆಗಳು ಕಂಡುಬಂದವು. ಆತ ಒತ್ತಡಕ್ಕೆ ಒಳಗಾಗುವುದರ ಜೊತೆಗೆ, ಹ್ಯಾಕರ್‌ಗಳ ಅಂತಾರಾಷ್ಟ್ರೀಯ ಗ್ರೂಪ್‌ನೊಂದಿಗೆ ಕೆಲಸ ಮಾಡಲು ಮುಂದುವರೆಸಿದ್ದ ಎನ್ನುವ ಅಚ್ಚರಿ ಮಾಹಿತಿ ಹೊರಹಾಕಿದ್ದಾರೆ. ಇದಾದ ಬಳಿಕ ಏನಾದರೂ ಆಗಲಿ ಮಗನನ್ನು ಸರಿ ದಾರಿಗೆ ತರಬೇಕು ಎಂದು ಬಾರ್ಬರಾ ಸ್ವತಃ ಸೈಬರ್ ಸುರಕ್ಷತೆಯ ಬಗ್ಗೆ ಕಲಿಯಲು ನಿರ್ಧರಿಸಿದ್ದು, ಇದೀಗ ಇದರಲ್ಲಿ ಪ್ರಾವೀಣ್ಯತೆ ಸಹ ಪಡೆದುಕೊಂಡಿದ್ದಾರೆ.

ಬಾರ್ಬರಾ ಸಲಹೆ ಏನು?: ಲ್ಯಾಪ್‌ಟಾಪ್‌ಗಳು ಮತ್ತು ಸ್ಮಾರ್ಟ್‌ ಫೋನ್‌ಗಳ ಸುಲಭ ಪ್ರವೇಶ ಮಕ್ಕಳು ಹ್ಯಾಕಿಂಗ್‌ನಲ್ಲಿ ತೊಡಗಿಸಿಕೊಳ್ಳಲು ಸರಳಗೊಳಿಸುತ್ತದೆ. ಯುವಜನರು ಸೈಬರ್ ಕ್ರೈಮ್‌ನಲ್ಲಿ ತೊಡಗುವುದನ್ನು ತಡೆಯುವುದು ಅತ್ಯಗತ್ಯ. ಏಕೆಂದರೆ ಅವರಿಗೆ ಸಾಮಾನ್ಯವಾಗಿ ಯಾವುದು ಕಾನೂನು ಮತ್ತು ಯಾವುದು ಕಾನೂನುಬಾಹಿರ ಎಂದು ತಿಳಿದಿರುವುದಿಲ್ಲ ಎಂದು ಸಲಹೆ ನೀಡಿದ್ದಾರೆ.

ಶಾಕಿಂಗ್...  AK-47 ಗನ್ ಆರ್ಡರ್‌ ಮಾಡಿದ್ದ ಎಂಟು ವರ್ಷದ ಬಾಲಕ!

ಇದು ಮಕ್ಕಳಿಗಾಗಿ ಆನ್‌ಲೈನ್ ಚಟುವಟಿಕೆಗಳ (Online activity) ಕುರಿತು ಪೋಷಕರ ಅರಿವು ಮತ್ತು ಶಿಕ್ಷಣದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವ ಒಂದು ಸ್ಟೋರಿಯಾಗಿದ್ದು, ಸೈಬರ್ ಸುರಕ್ಷತೆಯು ನಿಜಕ್ಕೂ ಒಂದು ಮಹತ್ವದ ಕಾಳಜಿಯಾಗಿದೆ. ಅದರಲ್ಲೂ ಈ ಡಿಜಿಟಲ್ ಜಗತ್ತಿನಲ್ಲಿ ಯುವಕರನ್ನು ಮಾರ್ಗದರ್ಶನ ಮಾಡುವ ಮತ್ತು ರಕ್ಷಿಸುವ ಪ್ರಯತ್ನಗಳು ನಿರ್ಣಾಯಕವಾಗಿವೆ. ಈ ಕಾರಣಕ್ಕೆ ನಿಮ್ಮ ಮಕ್ಕಳಿಗೆ ಸ್ಮಾರ್ಟ್‌ಡಿವೈಸ್‌ಗಳನ್ನು ನೀಡುವ ಮುನ್ನ ಎಚ್ಚರಿಕೆ ವಹಿಸಿ. ಜೊತೆಗೆ ಫೋನ್‌ ಅನ್ನು ಆಗಾಗ್ಗೆ ಪರಿಶೀಲನೆ ನಡೆಸಿ.

Best Mobiles in India

English summary
An 8-year-old boy has ordered an AK-47, his mother has informed. Based on this shocking incident, advice has been given on how parents should be careful about their children in the digital world.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+