Home
ಸುದ್ದಿಜಾಲ

ದಿನಕ್ಕೆ ಒಂದೇ ಗಂಟೆ ಕೆಲಸ, ವರ್ಷಕ್ಕೆ 1.2 ಕೋಟಿ ಗಳಿಕೆ... ಅದೆಲ್ಲಿ ಇಷ್ಟು ಸಂಬಳ ಸಿಗುತ್ತೆ ?

ಇಂದಿನ ದಿನಗಳಲ್ಲಿ ಉದ್ಯೋಗ ಪಡೆಯುವುದು ಅಷ್ಟು ಸುಲಭದ ಮಾತಲ್ಲ, ಉದ್ಯೋಗ ಪಡೆದುಕೊಂಡರು ಬೇಕು ಎನ್ನುವಷ್ಟು ಸಂಬಳ ಸಿಗೋದಿಲ್ಲ. ಅದರಲ್ಲೂ ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೆಲಸ ಮಾಡಲು ಮುಂದಾದ್ರೆ ಎಷ್ಟೇ ಸಂಬಳ ಕೊಟ್ರು ತಿಂಗಳ ಅಂತ್ಯದಲ್ಲಿ ಸಾಲ ಮಾಡುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಆದರೆ, ಈ ವಿಷಯ ತಿಳಿದುಕೊಂಡರೆ ನೀವು ಖಂಡಿತಾ ಅಚ್ಚರಿ ಆಗುತ್ತೀರಾ.

ಹೌದು, ಒಬ್ಬ ಸಾಮಾನ್ಯ ವ್ಯಕ್ತಿ ದಿನಕ್ಕೆ ಐದು ನೂರರಿಂದ ಸಾವಿರದ ವರೆಗೂ ಹಣ ದುಡಿಯಬಹುದು ಅಷ್ಟೇ ಏಕೆ ಕಷ್ಟ ಪಟ್ಟು ದಿನಪೂರ್ತಿ ದುಡಿದು ವರ್ಷಕ್ಕೆ ಲಕ್ಷಗಟ್ಟಲೆ ಹಣ ಸಂಪಾದನೆ ಮಾಡಬಹುದು. ಆದರೆ, ದಿನದಲ್ಲಿ ಒಂದು ಗಂಟೆ ಕೆಲಸ ಮಾತ್ರ ಮಾಡಿ ವರ್ಷಕ್ಕೆ 1.2 ಕೋಟಿ ಗಳಿಸುವ ಯಾರಾದರೂ ಇದ್ದಾರಾ ಎಂದು ನಿಮ್ಮನ್ನು ಕೇಳಿದರೆ ಖಂಡಿತಾ ಬೈದು ಕಳಿಸುತ್ತೀರಿ. ಹೇ.. ಅಷ್ಟೆಲ್ಲಾ ಹೇಗೆ ಸಾಧ್ಯ ಎಂದು. ಆದರೆ, ಇದು ನಿಜ. ಇಲ್ಲೋರ್ವ ಇಪ್ಪತ್ತರ ಹರೆಯದ ಉದ್ಯೋಗಿ ಟೆಕ್ ದೈತ್ಯ ಗೂಗಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಇಷ್ಟು ದೊಡ್ಡ ಪ್ರಮಾಣದಲ್ಲಿ ಸಂಪಾದನೆ ಮಾಡುತ್ತಿದ್ದಾರೆ.

ದಿನಕ್ಕೆ ಒಂದೇ ಗಂಟೆ ಕೆಲಸ, ವರ್ಷಕ್ಕೆ 1.2 ಕೋಟಿ ಗಳಿಕೆ... ಅದೆಲ್ಲಿ ಇಷ್ಟು ಸಂಬಳ?

1 ಕೋಟಿಗೂ ಹೆಚ್ಚು ಗಳಿಸುವ ಉದ್ಯೋಗಿ: ಈ ಸಂಬಂಧ ಫಾರ್ಚೂನ್ ನಿಯತಕಾಲಿಕೆ ಮಾಡಿದ್ದು, ಡೆವೊನ್ ಎಂಬ ಹೆಸರಿನಿಂದ ಕರೆಯಲ್ಪಡುವ ಉದ್ಯೋಗಿ ತನ್ನ ಇಪ್ಪತ್ತರ ವಯಸ್ಸಲ್ಲಿನಲ್ಲೇ ಇಷ್ಟೊಂದು ಹಣ ಸಂಪಾದನೆ ಮಾಡುತ್ತಿದ್ದಾರೆ. ಅಂದರೆ USD 150,000 ಡಾಲರ್‌ ಪಡೆಯುತ್ತಿದ್ದಾರೆ. ಭಾರತೀಯ ಲೆಕ್ಕದಲ್ಲಿ ಅಂದಾಜು 1.2 ಕೋಟಿ ರೂ.ಗಳು. ಅಷ್ಟೇ ಅಲ್ಲ ಈ ಯುವ ಉದ್ಯೋಗಿ ನಿತ್ಯ ಕೆಲಸ ಮಾಡುವುದು ಸರಿಸುಮಾರು ಒಂದು ಗಂಟೆ ಮಾತ್ರ.

ಇನ್ನು ಈ ಉದ್ಯೋಗಿ ಗೂಗಲ್‌ನ ಟೂಲ್ಸ್‌ ಮತ್ತು ಉತ್ಪನ್ನಗಳಿಗೆ ಕೋಡ್ ಬರೆಯುವ ಕೆಲಸ ಮಾಡುತ್ತಿದ್ದಾರೆ. ಗೂಗಲ್‌ನಲ್ಲಿನ ಅವರ ಕೆಲಸದ ಬಗ್ಗೆ ಕುರಿತು ವಿವರಿಸಿರುವ ಡೆವೊನ್, ಈ ಹಿಂದೆ ಟೆಕ್ ದೈತ್ಯರೊಂದಿಗೆ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದರಂತೆ. ಆ ವೇಳೆ ಅವರಿಗೆ ದಿನವಿಡೀ ಕೆಲಸ ಮಾಡುವ ಆಸಕ್ತಿ ಇರಲಿಲ್ಲವಂತೆ. ಈ ಕಾರಣಕ್ಕಾಗಿಯೇ ಇಂಟರ್ನ್‌ಶಿಪ್ ಮಾಡುವ ಟೈಮ್‌ನಲ್ಲಿಯೇ ತಮ್ಮ ಎಲ್ಲಾ ಕೋಡ್‌ಗಳನ್ನು ಮೊದಲೇ ಬರೆಯುತ್ತಿದ್ದರಂತೆ. ಈ ಮೂಲಕ ಉಳಿದ ಸಮಯದಲ್ಲಿ ಟ್ರಿಪ್‌ ಆಯೋಜಿಸುತ್ತಿದ್ದೆ ಎಂದು ಹೇಳಿದ್ದಾರೆ.

ನಾನೂ ಏನಾದರೂ ಹೆಚ್ಚು ಸಮಯ ಕೆಲಸ ಮಾಡಲು ಬಯಸಿದ್ರೆ ಸ್ಟಾರ್ಟ್‌ಅಪ್‌ನಲ್ಲಿ ಇರುತ್ತೇನೆ ಎಂದಿರುವ ಅವರು, ಹೆಚ್ಚಿನ ಜನರು ಕೆಲಸ ಹಾಗೂ ಜೀವನದ ಸಮತೋಲನ ಕಾಪಾಡಿಕೊಳ್ಳಲು ಜೊತೆಗೆ ಇತರೆ ಪ್ರಯೋಜನಗಳನ್ನು ಪಡೆಯುವ ಸಲುವಾಗಿ ಗೂಗಲ್‌ನಲ್ಲಿ ಕೆಲಸ ಪಡೆಯಲು ಮೊದಲ ಆದ್ಯತೆ ನೀಡುತ್ತಾರೆ ಎಂದು ಡೆವೊನ್ ತಿಳಿಸಿದ್ದಾರೆ. ಅಷ್ಟೇ ಅಲ್ಲ, ನೀವು ಆಪಲ್‌ನಲ್ಲಿ ಕೆಲಸ ಮಾಡಬಹುದು. ಆದರೆ, ಅಲ್ಲಿ ದೀರ್ಘಕಾಲ ಕೆಲಸ ಇರುತ್ತದೆ. ಆದರೆ ಗೂಗಲ್‌ನಲ್ಲಿ ಆ ರೀತಿ ಇಲ್ಲ ಎಂದು ಕೆಲಸ ಕೊಟ್ಟ ಸಂಸ್ಥೆಯನ್ನು ಹೊಗಳಿದ್ದಾರೆ.

ಹೆಚ್ಚು ಸಂಬಳ ನೀಡುವ ಗೂಗಲ್‌: ಇನ್ನು ಟೆಕ್‌ ದೈತ್ಯರಲ್ಲಿ ಹೆಚ್ಚು ಸಂಬಳ ನೀಡುವ ಕಂಪೆನಿಯಾಗಿ ಗೂಗಲ್‌ ಹೊರಹೊಮ್ಮಿದೆ. ಈ ವರ್ಷದ ಜನವರಿಯಲ್ಲಿ ಗೂಗಲ್ 12,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು. ಇದು ಜಗತ್ತಿನಾದ್ಯಂತ ಸಾವಿರಾರು ಜನರನ್ನು ಆಘಾತಕ್ಕೀಡು ಮಾಡಿದ್ದು, ಅವರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ ಎಂದರೆ ತಪ್ಪಾಗಲಾರದು.

ಅದಾಗ್ಯೂ ಕಂಪೆನಿಯು ತನ್ನ ಸವಲತ್ತುಗಳು ಮತ್ತು ಹೆಚ್ಚಿನ ಸಂಬಳಗಳಿಗೆ ಹೆಸರುವಾಸಿಯಾಗಿದ್ದರೂ ಸಹ ಈ ವಿಚಾರದಲ್ಲಿ ಮಾಜಿ ಉದ್ಯೋಗಿಗಳಿಂದ ಕೆಲವು ಟೀಕೆಗಳಿಗೆ ಗುರಿಯಾಗಿದೆ. ಹಲವಾರು ಉದ್ಯೋಗಿಗಳು ಸಿಇಒ ಸುಂದರ್ ಪಿಚೈ ಅವರಿಗೆ ಬಹಿರಂಗ ಪತ್ರ ಸಹ ಬರೆದಿದ್ದು, ದುಷ್ಟರಾಗಬೇಡಿ ಎಂದು ಉಲ್ಲೇಖಿಸಿದ್ದಾರೆ. ಇದರೊಂದಿಗೆ ಈ ರೀತಿಯ ವಿಷಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಂತೆ ಒತ್ತಾಯಿಸಿದ್ದಾರೆ.

ದಿನಕ್ಕೆ ಒಂದೇ ಗಂಟೆ ಕೆಲಸ, ವರ್ಷಕ್ಕೆ 1.2 ಕೋಟಿ ಗಳಿಕೆ... ಅದೆಲ್ಲಿ ಇಷ್ಟು ಸಂಬಳ?

ಈ ಎಲ್ಲಾ ಪ್ರಮುಖ ಬೆಳವಣಿಗೆ ನಡುವೆ ಗೂಗಲ್‌ನ ಮೂಲ ಕಂಪನಿ ಆಲ್ಫಾಬೆಟ್ 2022 ರಲ್ಲಿ ಹೆಚ್ಚು ಪಾವತಿಸುವ ಅಗ್ರ ಮೂರು ಕಂಪನಿಗಳ ಪಟ್ಟಿಯಲ್ಲಿದೆ. ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಆಲ್ಫಾಬೆಟ್ USD 280,000 ಸರಾಸರಿ ವೇತನದೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದು, ಈ ಕಾರಣಕ್ಕಾಗಿಯೋ ಏನೋ ಉದ್ಯೋಗಿಗಳು ಇಲ್ಲಿ ಕೆಲಸ ಮಾಡಲು ಸದಾ ಹಾತೊರೆಯುತ್ತಿರುತ್ತಾರೆ.

Best Mobiles in India

English summary
A common person can earn from five hundred to thousand per day. But, another young man is earning 1.2 crores per year by working only for one hour in Google.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+